Saturday, July 27, 2024
HomeTrending Newsಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಯಾವ ದಾಖಲೆಗಳು ಬೇಕು ಎಲ್ಲಾ ಮಹಿಳೆಯರು ತಿಳಿದುಕೊಳ್ಳಿ

ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಯಾವ ದಾಖಲೆಗಳು ಬೇಕು ಎಲ್ಲಾ ಮಹಿಳೆಯರು ತಿಳಿದುಕೊಳ್ಳಿ

ಗೃಹಲಕ್ಷ್ಮಿ ಯೋಜನೆ 2023 ಈ ಯೋಜನೆಯ ಲಾಭ ಪಡೆಯಬೇಕಾದರೆ ನಾವು ಯಾವ ದಾಖಲೆಗಳನ್ನು ಹೊಂದಬೇಕು ಹಾಗೂ ಯಾರ ಅಕೌಂಟಿಗೆ ಹಣ ಜಮೆ ಆಗುತ್ತದೆ ಎಂಬುದನ್ನು ತಿಳಿಯಬೇಕು ಹಾಗೂ ಈ ಹಣ ಅತ್ತೆಯ ಅಕೌಂಟಿಗೆ ಹೋಗುತ್ತಾ ಅಥವಾ ಮನೆಯ ಸೊಸೆಯ ಅಕೌಂಟಿಗೆ ಹೋಗುತ್ತಾ ಎಂಬುದ ಕುರಿತು ಸಂಪೂರ್ಣ ಮಾಹಿತಿ ಬೇಕಾದರೆ ಈ ಲೇಖನವನ್ನು ಕೊನೆಯವರೆಗೂ ಓದಿ ನಿಮಗೆ ಮಾಹಿತಿ ದೊರೆಯಲಿದೆ

GRUHALKSHI YOJANE
Join WhatsApp Group Join Telegram Group

ನಮಸ್ತೆ ಕರ್ನಾಟಕ ಜನತೆಗೆ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಅನೇಕ ಯೋಜನೆಗಳ ಕಾರ್ಯದಲ್ಲಿ ತೊಡಗಿಕೊಂಡಿದೆ ಅದರಲ್ಲಿ ಹೆಚ್ಚು ಜನಪ್ರಿಯ ಹಾಗೂ ಜನರು ಎದುರು ನೋಡುತ್ತಿರುವ ಯೋಜನೆಯೇ ಗೃಹಲಕ್ಷ್ಮಿ ಯೋಜನೆ ಹಾಗಾಗಿ ಸರ್ಕಾರ ಅಂದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕಿಂತ ಹಿಂದೆ ಬರವಸೆ ನೀಡಿದ

ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ 2000 ಹಣ ನೀಡುವುದಾಗಿ ತಿಳಿಸಿತ್ತು ಈಗ ಈ ಯೋಜನೆ ಪ್ರಕ್ರಿಯೆ ಆರಂಭವಾಗುತ್ತಿದ್ದು ಜೂನ್ ತಿಂಗಳಲ್ಲಿ ಪ್ರಾರಂಭವಾಗುವುದು ಯಾವ ಮಹಿಳೆಯರಿಗೆ 2000 ಹಣ ದೊರೆಯಲಿದೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ತಿಳಿದು ಬರುತ್ತಿದೆ

ಯಾರ ಖಾತೆಗೆ ಹಣವನ್ನು ಜಮಾ ಮಾಡಲಾಗುವುದು

ಸರ್ಕಾರವು ಇದರ ಬಗ್ಗೆ ಚಿಂತನೆ ನಡೆಸಿದ್ದು ಬಹುತೇಕ ಮಾಹಿತಿಗಳ ಪ್ರಕಾರ ಮನೆಯ ಒಡತಿ ಅಂದರೆ ಅತ್ತೆಯ ಅಕೌಂಟಿಗೆ 2,000 ಹಣ ಜಮಾ ಮಾಡಲಾಗುವುದು ಎಂಬುದು ತಿಳಿದು ಬರುತ್ತದೆ ಹಾಗೂ ಎಲ್ಲಾ ಮಹಿಳೆಯರಿಗೂ ಸಹ ಹಣವನ್ನು ನೀಡಲಾಗುವುದಿಲ್ಲ ಮನೆಯ ಒಡತಿಗೆ ಮಾತ್ರ ಹಣ ಹಾಕಲಾಗುವುದು ಅಂದರೆ ಕುಟುಂಬ ಅತ್ತೆ ಮತ್ತು ಸೊಸೆ ಇದ್ದರೆ ಈ ಇಬ್ಬರಲ್ಲಿ ಪ್ರತಿ ತಿಂಗಳು ಅತ್ತೆ ಅಕೌಂಟಿಗೆ 2000 ಹಣ ವರ್ಗಾವಣೆ ಆಗಲಿದೆ ,

ಹಾಗಿದ್ದರೆ ಸೊಸೆಯ ಅಕೌಂಟಿಗೆ ಜಮಾ ಮಾಡಲಾಗುವುದಿಲ್ಲವೇ..? ಖಂಡಿತವಾಗಿಯೂ ಇಲ್ಲ ಹಾಗಂತ ಸರ್ಕಾರ ಹೇಳಿಲ್ಲ ಕುಟುಂಬದವರ ತೀರ್ಮಾನದಂತೆ ಯಾರ ಅಕೌಂಟಿಗೆ ಹಣ ಹಾಕಬೇಕು ಎಂಬುದರ ಕುರಿತು ಮಾಹಿತಿ ನೀಡಿದರೆ ಅವರ ಅಕೌಂಟಿಗೆ ಹಾಕಲಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಸಚಿವೆ ಹಾಗೂ ಸತೀಶ್ ಜಾರಕಿಹೊಳೆ ಅವರು ಮಾಧ್ಯಮಗಳೊಂದಿಗೆ ಪ್ರೆಸ್ ಮೀಟ್ ಮಾಡುವ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ

ದಾಖಲಾತಿಗಳು ಗೃಹಲಕ್ಷ್ಮಿ ಯೋಜನೆಗಳಿಗೆ ಅಗತ್ಯ

ಗೃಹಲಕ್ಷ್ಮಿ ಯೋಜನೆ ಉಪಯೋಗ ಪಡೆದುಕೊಳ್ಳುವ ಕುಟುಂಬದವರ ಬಳಿ ನಿಮ್ಮ ಕುಟುಂಬದ ಒಡತಿಯ ಆಧಾರ ಕಾರ್ಡ್ ಇರಬೇಕು ಹಾಗೂ ಕುಟುಂಬಕ್ಕೆ ಪಡಿತರ ಚೀಟಿ ಇರಬೇಕು ಅಂದರೆ ಬಿಪಿಎಲ್ ಕಾರ್ಡ್ ಇದು ಯೋಜನೆಯ ಫಲಾನುಭವಿ ಹೆಸರು ಇದ್ದರೆ ಅವರಿಗೆ ಸರ್ಕಾರ 2000 ಹಣವನ್ನು ತಮ್ಮ ಯೋಜನೆ ಯಾದ ಗೃಹಲಕ್ಷ್ಮಿ ಯೋಜನೆಯಡಿ ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಿದ್ದಾರೆ ,

ಈ ವರ್ಗಾವಣೆಗೆ ಮುಖ್ಯವಾದ ಅಂಶವೇನೆಂದರೆ ನಿಮ್ಮ ಆಧಾರ್ ಕಾರ್ಡ್ ಜೊತೆಗೆ ನಿಮ್ಮ ಬ್ಯಾಂಕ್ ಖಾತೆ ಲಿಂಕ್ ಆಗಿರುವುದು ಮುಖ್ಯವಾಗಿರುತ್ತದೆ ಲಿಂಕ್ ಆಗದೇ ಇದ್ದಲ್ಲಿ ಬೇಗ ಲಿಂಕ್ ಮಾಡಿಸಿ ಇಲ್ಲವಾದರೆ ನೀವು ಗೃಹಲಕ್ಷ್ಮಿ ಯೋಜನೆಯ ಉಪಯೋಗ ಪಡೆದುಕೊಳ್ಳುವುದು ಸಾಧ್ಯವಾಗುವುದಿಲ್ಲ ಹಿಂದೆ ಲಿಂಕ್ ಮಾಡಿಸಿ

ಅರ್ಜಿ ಸಲ್ಲಿಸುವುದು ಹೇಗೆ

ಸರ್ಕಾರವು ಗೃಹಲಕ್ಷ್ಮಿ ಯೋಜನೆ ಕುರಿತು ಕೆಲವೊಂದು ಶರತ್ತುಗಳನ್ನು ಮಾತ್ರ ರಾಜ್ಯದ ಜನರಿಗೆ ಬಿಡುಗಡೆ ಮಾಡಿದೆ ಯಾವುದೇ ರೀತಿಯಲ್ಲೂ ಸಹ ಯೋಜನೆಗೆ ಸಂಬಂಧಿಸಿ ದಂತಹ ಅರ್ಜಿ ಸಲ್ಲಿಸಲು ಸರ್ಕಾರದ ಅಧಿಕೃತ ವೆಬ್ಸೈಟ್ ಅನ್ನು ನೀಡಿಲ್ಲ ಮುಂದಿನ ದಿನಗಳಲ್ಲಿ ನೀಡಬಹುದು ಹಾಗಾಗಿ ಮಹಿಳೆಯರು ಈ ಯೋಜನೆಯ ಲಾಭ ಪಡೆಯಲು ಬೇಕಾಗಿರುವ ದಾಖಲೆಗಳನ್ನು ತಮ್ಮಲ್ಲಿ ಇಟ್ಟುಕೊಂಡಿರಿ

ಈ ಯೋಜನೆಗೆ ಯಾವೆಲ್ಲ ದಾಖಲೆಗಳು ಬೇಕು

  • Important Documents
  • ಮೊದಲನೆಯದಾಗಿ ನಿಮ್ಮ ಹತ್ತಿರ ಬ್ಯಾಂಕ್ ಖಾತೆ ಇರಬೇಕು ಅದಕ್ಕೆ ಆಧಾರ ಕಾರ್ಡ್ ಲಿಂಕ್ ಅನ್ನು ಮಾಡಿಸಿರಿ
  • ನಂತರದಲ್ಲಿ ಆಧಾರ್ ಕಾರ್ಡ್ ಕಡ್ಡಾಯ ಈ ಆಧಾರ್ ಕಾರ್ಡ್ ನಲ್ಲಿ ಚಾಲ್ತಿಯಲ್ಲಿರುವ ನಂಬರನ್ನು ಲಿಂಕ್ ಮಾಡಿಸಿರಿ ಏಕೆಂದರೆ ಹಣ ವರ್ಗಾವಣೆಯಾದರೆ ನಿಮಗೆ ಮಾಹಿತಿ ದೊರೆಯಲಿದೆ
  • ಮುಖ್ಯವಾದ ದಾಖಲೆ ಬಿಪಿಎಲ್ ಕಾರ್ಡ್ ಪಡಿತರ ಚೀಟಿ ಹೊಂದಿರಬೇಕಾಗುತ್ತದೆ ಹಾಗೂ ಇದರಲ್ಲಿ ಕುಟುಂಬದ ಒಡತಿಯ ಹೆಸರು ನಮೂದಾಗಿರಬೇಕು

ಈ ಮೇಲಿನ ಲೇಖನದ ಎಲ್ಲಾ ಸಂಪೂರ್ಣ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ವಾಟ್ಸಪ್ಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ ಇದೇ ರೀತಿಯಾದ ಸರ್ಕಾರದ ಯೋಜನೆಯ ಬಗ್ಗೆ ನಿಮಗೆ ಮಾಹಿತಿ ಬೇಗ ದೊರೆಯಲಿದೆ ಹಾಗೂ ಪ್ರತಿದಿನ ಯಾವುದೇ ಪ್ರಮುಖ ವಿಚಾರ ಬಂದರೂ ಸಹ ನಿಮಗೆ ಮಾಹಿತಿ ನಿಮ್ಮ whatsapp ಹಾಗೂ ಟೆಲಿಗ್ರಾಂ ಗ್ರೂಪ್ಗೆ ಬೇಗನೆ ತೊರೆಯಲಿದೆ ಅಂಗೈಯಲ್ಲಿ ಎಲ್ಲಾ ಸರ್ಕಾರದ ಮಾಹಿತಿ ಪಡೆದುಕೊಳ್ಳಬಹುದು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments