Thursday, July 25, 2024
HomeNewsಗೃಹಲಕ್ಷ್ಮಿ ಹೊಸ ಕಂಡೀಶನ್ ಪಾಲಿಸಿದ್ರೆ ಮಾತ್ರ ಹಣ: ತಕ್ಷಣ ತಿಳಿದುಕೊಳ್ಳಿ

ಗೃಹಲಕ್ಷ್ಮಿ ಹೊಸ ಕಂಡೀಶನ್ ಪಾಲಿಸಿದ್ರೆ ಮಾತ್ರ ಹಣ: ತಕ್ಷಣ ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ಮುಖ್ಯವಾದ ವಿಷಯ ಏನೆಂದರೆ ಗೃಹಲಕ್ಷ್ಮಿ ಯೋಜನೆಗೆ ಕಂಡಿಷನ್ಗಳನ್ನು ಹಾಕಲಾಗಿದ್ದು ಆ ಕಂಡೀಶನ್ ಗಳನ್ನು ಪಾಲಿಸಿದರೆ ಮಾತ್ರ ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣವು ಮಹಿಳೆಯರ ಖಾತೆಗೆ ಬರಲಿದೆ. ಹಾಗಾದರೆ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಆ ಕಂಡೀಶನ್ಗಳು ಯಾವುವು ಎಂಬುದರ ಬಗ್ಗೆ ನಿಮಗೆ ತಿಳಿಸಲಾಗುತ್ತದೆ.

gruhalkshmi-new-condition
gruhalkshmi-new-condition
Join WhatsApp Group Join Telegram Group

ಹಣ ವರ್ಗಾವಣೆ :

ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 30ರಂದು ಹಣ ಬಿಡುಗಡೆ ಮಾಡಿದ್ದು ಆ ದಿನದಿಂದಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದಂತಹ ಅರ್ಹ ಮಹಿಳೆಯರಿಗೆ ಹಂತ ಹಂತವಾಗಿ ಆರ್‌ಬಿಐನ ನಿಯಮ ಅನುಸಾರವಾಗಿ ಡಿ ಬಿ ಟಿ ಮೂಲಕ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ. ಫಲಾನುಭವಿಗಳ ಖಾತೆಗೆ ಡಿಪಿಟಿ ಮೂಲಕ ಹಣ ವರ್ಗಾವಣೆ ಯಾಗುತ್ತಿರುವುದರಿಂದ ನೇರವಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ವರ್ಗಾವಣೆಯ ಮಾಡಲಾಗುತ್ತಿದ್ದು ಮತ್ತು ಒಂದು ದಿನಕ್ಕೆ ಈ ರೀತಿ ಹಣ ವರ್ಗಾವಣೆ ಮಾಡಲು ಇಂತಿಷ್ಟು ಖಾತೆಗಳು ಎನ್ನುವ ಮಿತಿ ಇರುವುದರಿಂದ ಎಲ್ಲಾ ಫಲಾನುಭವಿಗಳ ಖಾತೆಗೂ ಅವುಗಳನ್ನು ಪರಿಶೀಲಿಸಿ ಹಣ ತಲುಪಿಸಲು ಸಮಯ ಹಿಡಿಯುತ್ತಿದೆ. ಹಾಗಾಗಿ ಇನ್ನೂ ಹಣ ತಲುಪದಂತಹ ಮಹಿಳೆಯರು ಸಾಕಷ್ಟು ಗೊಂದಲದಲ್ಲಿ ಇದ್ದು ಅವರಿಗೆಲ್ಲ ಈಗ ಒಂದು ಪ್ರಮುಖವಾದ ಸುದ್ದಿಯನ್ನು ತಿಳಿಸಲಾಗುತ್ತಿದೆ ಇದರ ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಹ ಈ ವಿಷಯದ ಬಗ್ಗೆ ಸ್ಪಷ್ಟತೆಯನ್ನು ನೀಡಿದ್ದಾರೆ.

ಹಣ ವರ್ಗಾವಣೆ ಆಗಿಲ್ಲದ ಮಹಿಳೆಯರಿಗೆ ಮಾಹಿತಿ :

ಇನ್ನು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಆರರಿಂದ ಏಳು ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳು ಆಧಾರ್ ಲಿಂಕ್ ಮತ್ತು ಎನ್ಪಿಸಿಐ ಮ್ಯಾಪಿಂಗ್ ಆಗಿಲ್ಲದ ಜೊತೆಗೆ ಆಧಾರ್ ಲಿಂಕ್ ಆಗಿದ್ದರು ಸಹ ಖಾತೆಗಳು ವಹಿವಾಟು ನಡೆಸದೇ ಇರುವುದರಿಂದ ಹೊರತುಪಡಿಸಿ ಉಳಿದೆಲ್ಲ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲಿದ್ದಾರೆ ಎಂದು ಸ್ಪಷ್ಟನೆಯನ್ನು ಅಧಿಕಾರಿಗಳು ನೀಡಿದ್ದಾರೆ. ಅಲ್ಲದೆ ಈ ರೀತಿಯಾದಂತಹ ಸಮಸ್ಯೆಗಳು ಆಗಿರುವಂತಹ ಮಹಿಳೆಯರು ಅದನ್ನು ಸರಿಪಡಿಸಿಕೊಂಡ ನಂತರ ಅವರ ಬ್ಯಾಂಕ್ ಖಾತೆಗೂ ಸಹ ಹಣ ವರ್ಗಾವಣೆ ಯಾಗುತ್ತದೆ ಎಂದು ತಿಳಿಸಿದ್ದಾರೆ. ಆದರೆ ಶೇಕಡ 25 ರಷ್ಟು ಫಲಾನುಭವಿಗಳು ಎಲ್ಲಾ ಮಾಹಿತಿ ಸರಿ ಇದ್ದರೂ ಸಹ ಇನ್ನು ಏಕೆ ಹಣ ತಲುಪಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ ಹಾಗಾಗಿ ಅವರು ತಮ್ಮ ರೇಷನ್ ಕಾರ್ಡ್ ಸಕ್ರಿಯವಾಗಿದೆಯೇ ಇಲ್ಲವೇ ಎಂಬುದನ್ನು ತಪ್ಪದೇ ಪರಿಶೀಲನೆ ಮಾಡಿಸಿಕೊಳ್ಳಬೇಕು.

ರೇಷನ್ ಕಾರ್ಡ್ ಸಕ್ರಿಯ ಆಗಿರಬೇಕು :

ಎಲ್ಲ ಮಾಹಿತಿ ಸರಿಯಿದ್ದರೂ ಸಹ ಶೇಕಡ 25ರಷ್ಟು ಫಲಾನುಭವಿಗಳಿಗೆ ಹಣ ತಲುಪಿಲ್ಲ ಅದಕ್ಕೆ ಮುಖ್ಯ ಕಾರಣ ಅವರ ರೇಷನ್ ಕಾರ್ಡ್ ಸಕ್ರಿಯವಾಗಿ ಇದ್ದವೇ ಇಲ್ಲವೇ ಎಂಬುದನ್ನು ಅವರು ಮೊದಲು ಪರಿಶೀಲಿಸಿಕೊಳ್ಳಬೇಕು. ಏಕೆಂದರೆ ರೇಷನ್ ಕಾರ್ಡ್ ಸಕ್ರಿಯೆ ಎನ್ನುವ ಸ್ಟೇಟಸ್ ಹೊಂದದೆ ಇದ್ದರೆ ಅವರಿಗೂ ಸಹ ಗೃಹಲಕ್ಷ್ಮಿ ಯೋಜನೆಯ ಹಣ ತಲುಪುವುದಿಲ್ಲ. ಹಾಗಾಗಿ ನಿಮಗೆ ಈ ಲೇಖನದಲ್ಲಿ ರೇಷನ್ ಕಾರ್ಡ್ ಅನ್ನು ಸಕ್ರಿಯ ಆಗಿದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಲು ಕೆಲವೊಂದು ಹಂತಗಳನ್ನು ತಿಳಿಸಲಾಗುತ್ತದೆ ಆ ಹಂತಗಳನ್ನು ಪೂರ್ಣಗೊಳಿಸುವುದರ ಮೂಲಕ ಪರಿಶೀಲಿಸಿಕೊಳ್ಳಿ.

ಇದನ್ನು ಓದಿ : ಸಮುದ್ರ ಯಾನದ ಕಡೆ ಭಾರತದ ನಡೆ : ಅಧ್ಯಯನ ಹೇಗಿರಲಿದೆ ಗೊತ್ತಾ ?

ರೇಷನ್ ಕಾರ್ಡ್ ಸಕ್ರಿಯ ಆಗಿದೆಯೋ ಇಲ್ಲವೇ ಎಂಬುದನ್ನು ಚೆಕ್ ಮಾಡುವ ವಿಧಾನ :

ರೇಷನ್ ಕಾರ್ಡ್ ಸ್ಟೇಟಸ್ ಅನ್ನು ಚೆಕ್ ಮಾಡಬೇಕಾದರೆ ಮೊದಲು ನೀವು ತಾಲೂಕು ಗ್ರಾಮ ಪಂಚಾಯಿತಿ ಗ್ರಾಮ ಪ್ರದೇಶ ಕಾರಣ ನ್ಯಾಯ ಬೆಲೆ ಅಂಗಡಿ ಹೆಸರು ಮತ್ತು ರೇಷನ್ ಕಾರ್ಡ್ ಸ್ಥಿತಿ ಕೂಡ ಪೇಜ್ ಮೇಲೆ ಅಂದರೆ ಸರ್ಕಾರದ ಅಧಿಕೃತ ವೆಬ್ಸೈಟ್ ನಲ್ಲಿ ಕಾಣಸಿಗುತ್ತದೆ ಹಾಗೆ ನೀವು ಅದರಲ್ಲಿ ನಿಮ್ಮ ಕುಟುಂಬದಲ್ಲಿರುವ ಎಲ್ಲಾ ಸದಸ್ಯರ ಸಂಖ್ಯೆಯನ್ನು ಜೊತೆಗೆ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಹೆಸರನ್ನು ಸಹ ತಿಳಿದುಕೊಳ್ಳುವುದರ ಮೂಲಕ ನಿಮ್ಮ ರೇಷನ್ ಕಾರ್ಡ್ ಸ್ಥಿತಿ ಇಂದು ಇರುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ರೇಷನ್ ಕಾರ್ಡ್ ಸಕ್ರಿಯೆ ಎಂದು ಇದೆಯೇ ಇಲ್ಲವೇ ಎಂಬುದನ್ನು ದೃಢಪಡಿಸಿಕೊಳ್ಳಬೇಕು. ಇಲ್ಲ ಎಂದು ನಿಮಗೆ ತಿಳಿದು ಬಂದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪುವುದಿಲ್ಲ. ಹಾಗಾಗಿ ತಕ್ಷಣವೇ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಸಮಸ್ಯೆಯನ್ನು ಇಲಾಖೆ ಗೆ ಮನವಿ ಸಲ್ಲಿಸುವುದರ ಮೂಲಕ ಸರಿಪಡಿಸಿಕೊಳ್ಳಬಹುದಾಗಿದೆ.

ಹೀಗೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಸಾಕಷ್ಟು ಕಂಡೀಶನ್ಗಳು ಅಪ್ಲೈ ಆಗುತ್ತಿದ್ದು ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡುವ ಮೂಲಕ ಗೃಹಲಕ್ಷ್ಮಿ ಯೋಜನೆಯ ಎಲ್ಲ ಮಾಹಿತಿಗಳು ಸರಿ ಇದೆಯೇ ಇಲ್ಲವೇ ಎಂಬುದನ್ನು ಅವರಿಗೆ ಚೆಕ್ ಮಾಡಲು ತಿಳಿಸಿ. ಹೀಗೆ ಗೃಹಲಕ್ಷ್ಮಿ ಯೋಜನೆಯ ಹಣ ಯಾರಿಗೆಲ್ಲ ಬಂದಿಲ್ಲವೋ ಅವರಿಗೆ ಇದು ಒಂದು ಉಪಯುಕ್ತ ಮಾಹಿತಿ ಎಂದು ನಾವು ಆಶಿಸುತ್ತೇವೆ. ಧನ್ಯವಾದಗಳು.

ಇತರೆ ವಿಷಯಗಳು :

ಈ ವ್ಯಕ್ತಿಗೆ ವಿಕಿಪೀಡಿಯ ಎಂದು ಯಾಕೆ ಕರೆಯುತ್ತಾರೆ..? ನಾನು ನಂದಿನಿ ಸಾಂಗ್ ಕರ್ತೃ

ಸಮುದ್ರ ಯಾನದ ಕಡೆ ಭಾರತದ ನಡೆ : ಅಧ್ಯಯನ ಹೇಗಿರಲಿದೆ ಗೊತ್ತಾ ?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments