Thursday, June 20, 2024
HomeNewsಸಮುದ್ರ ಯಾನದ ಕಡೆ ಭಾರತದ ನಡೆ : ಅಧ್ಯಯನ ಹೇಗಿರಲಿದೆ ಗೊತ್ತಾ ?

ಸಮುದ್ರ ಯಾನದ ಕಡೆ ಭಾರತದ ನಡೆ : ಅಧ್ಯಯನ ಹೇಗಿರಲಿದೆ ಗೊತ್ತಾ ?

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ಮತ್ಸ್ಯ 6000 ಮಿಷನ್ ನಮ್ಮ ದೇಶದಲ್ಲಿ ಮುಂದೆ ಲಾಂಚ್ ಅಗಲಿರುವ ಯೋಜನೆಯ ಬಗ್ಗೆ. ಇದೀಗ ಭಾರತ ದೇಶವು ಆದಿತ್ಯ ಎಲ್ಒನ್ ಮಿಷನ್ ಉಡಾವಣೆಯ ನಂತರ ಸಮುದ್ರಯಾನವನ್ನು ಸಹ ಲಾಂಚ್ ಮಾಡುವುದಾಗಿ ಭಾರತ ಸರ್ಕಾರ ರಾಜ್ಯದ ಜನತೆಗೆ ತಿಳಿಸಿದೆ. ಸಮುದ್ರದ ಆಳದಲ್ಲಿ ಈ ಮಿಷನ್ ನಿಂದ ಇರುವ ಖನಿಜ ಲವಣ ಅಂಶಗಳನ್ನು ಕಂಡುಹಿಡಿಯುವ ಉದ್ದೇಶವನ್ನು ಈ ಮಿಷನ್ ಇಟ್ಟುಕೊಂಡಿದೆ ಎಂದು ಹೇಳಲಾಗಿದೆ ಹಾಗಾದರೆ ಈ ಮಿಷನ್ ಯಾವಾಗ ಉಡಾವಣೆಯಾಗಲಿದೆ ಹಾಗೂ ಈ ಮಿಷನನ್ನ ಮುಖ್ಯ ಉದ್ದೇಶವೇನು ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

india's-move-towards-seafaring
india’s-move-towards-seafaring
Join WhatsApp Group Join Telegram Group

ಚಂದ್ರಯಾನದ ಯಶಸ್ಸು :

ಭಾರತೀಯ ವಿಜ್ಞಾನಿಗಳು ಚಂದ್ರಯಾನದ ಯಶಸ್ಸಿನ ಹಿನ್ನೆಲೆಯಲ್ಲಿ ಮತ್ತೊಂದು ದಿಟ್ಟ ಹೆಜ್ಜೆ ಹಾಗೂ ಪ್ರಯತ್ನಕ್ಕೆ ಸಜ್ಜಾಗಿದ್ದಾರೆ ಎಂದು ಹೇಳಬಹುದಾಗಿದೆ. ಆ ಪ್ರಯತ್ನವೇನೆಂದರೆ ಸಮುದ್ರಯಾನ ಯೋಜನೆ. ಮಾನವ ಸಹಿತ ಡೀಪ್ ಓಷನ್ ಮಿಷನ್ ಸಮುದ್ರಯಾನ ತ್ರಿ ಮಾನವರನ್ನು ಸಮುದ್ರದ ಮೇಲ್ಮೈ ಕೆಳಗೆ 6000 ಮೀಟರ್ ಆಳದಲ್ಲಿ ಮುಳುಗಿಸಲು ಭಾರತದ ಮೊದಲ ಯೋಜನೆಯಾಗಿದೆ ಹಾಗೂ ಈ ಯೋಜನೆಯ ಮುಖ್ಯ ಉದ್ದೇಶ ಏನೆಂದರೆ ಸಮುದ್ರದ ಸಂಪನ್ಮೂಲಗಳಾದ ಅಮೂಲ್ಯವಾದ ಲೋಹಗಳು ಮತ್ತು ಖನಿಜಗಳು ಸೇರಿದಂತೆ ಎಲ್ಲ ಸಂಪನ್ಮೂಲಗಳ ಅಧ್ಯಯನ ಮಾಡುವ ಮುಖ್ಯ ಉದ್ದೇಶವನ್ನು ಈ ಮಿಷನ್ ಹೊಂದಿದೆ.

ಭಾರತದ ಮೊದಲ ಮಾನವ ಸಹಿತ ಡೀಪ್ ಓಷನ್ ಮಿಷನ್ :

ಈ ಮಿಷನ್ ಭಾರತದ ಮೊದಲ ಮಾನವ ಸಹಿತ ಡಿಪೋಶನ್ ಮಿಷನ್ ಎಂದು ಹೇಳಲಾಗಿದ್ದು ಸಮುದ್ರಯಾನದ ಮುಖ್ಯ ಉದ್ದೇಶ ಅಮೂಲ್ಯವಾದ ಲೋಹಗಳು ಮತ್ತು ಖನಿಜಗಳು ಅದರಲ್ಲಿಯೂ ವಿಶೇಷವಾಗಿ ಕೋಬಾಲ್ಟ್ ನಿಕ್ಕಲ್ ಮತ್ತು ಮ್ಯಾಂಗನೀಸ್ ಮತ್ತು ಜೀವವೈವಿಧ್ಯ ಮೌಲ್ಯಮಾಪನ ಸೇರಿದಂತೆ ಆಳವಾದ ಸಮುದ್ರದ ಸಂಪನ್ಮೂಲಗಳನ್ನು ಅಧ್ಯಯನ ಮಾಡಲು ಸಮುದ್ರದ ಕೆಳಗೆ 6,000 ಮೀಟರ್ ಗಟ್ಟಲೆ ಸ್ವದೇಶಿ ಸಬ್ಮರ್ಸಿಬಲ್ನಲ್ಲಿ ಅವರನ್ನು ಮುಳುಗಿಸುವ ಯೋಜನೆಯನ್ನು ಪ್ರಾರಂಭಿಸಿದೆ. 6,000 ಬಜೆಟ್ : ಕೇಂದ್ರ ಸರ್ಕಾರವು ಸಮುದ್ರಯಾನ ಮತ್ಸ್ಯ 6,000 ಬಜೆಟ್ ನೊಂದಿಗೆ ಈ ಯೋಜನೆಯನ್ನು ಕೈಗೊಂಡಿದೆ ಎಂದು ಹೇಳಬಹುದಾಗಿದೆ.

ಈ ಯೋಜನೆಯ ಟೈಮ್ ಲೈನ್ 2020-2021 ರಿಂದ 2025-2026 ವರೆಗೆ ಅಂದರೆ ಐದು ವರ್ಷಗಳವರೆಗೆ ವ್ಯಾಪಿಸಿದೆ ಎಂದು ಹೇಳಬಹುದಾಗಿದೆ. ಮಿಷನ್ ಅವಧಿಯ2021-2026 ರಾ ಅವಧಿಯಲ್ಲಿ ಎರಡು ಹಂತಗಳಲ್ಲಿ 4077 ಕೋಟಿ ರೂಪಾಯಿಗಳ ಒಟ್ಟಾರೆ ಅಂದಾಜು ವೆಚ್ಚದೊಂದಿಗೆ ಕ್ಯಾಬಿನೆಟ್ ಡಿಪ್ ಓಷನ್ ಮಿಷನ್ ಅನ್ನು ಅನುಮೋದಿಸಿದೆ ಎಂದು ಭೂ ವಿಜ್ಞಾನ ಸಚಿವಾಲಯವು ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಲಾಗಿದೆ. ಸಾವು 400 ಕೋಟಿ ರೂಪಾಯಿಗಳನ್ನು ಈವರೆಗೆ ಈ ಮಿಷನ್ಗೆ ನಿಗದಿಪಡಿಸಲಾಗಿದ್ದು ಅದರಲ್ಲಿ ಈಗಾಗಲೇ 405.92 ಕೋಟಿ ರೂಪಾಯಿಗಳನ್ನು ವಿತರಿಸಲಾಗಿದೆ.

ಈ ಸಮುದ್ರಯಾನ ಹೇಗಿದೆ ? :

ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಸಮುದ್ರಯಾನ ಮಿಷನ್ ಚೆನ್ನೈನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ ಅಭಿವೃದ್ಧಿಪಡಿಸುತ್ತಿದೆ. ಚೆನ್ನೈನಲ್ಲಿರುವ ಎನ್ ಐ ಓ ಟಿ ಗೆ ಸೋಮವಾರ ರಿಜಿಜು ಅವರು ಭೇಟಿ ನೀಡಿದರು. ಸಬ್ಮರ್ಸಿಬಲ್ ಅನ್ನು ಭೇಟಿ ನೀಡಿದ ನಂತರ ಅವರು ಪರಿಶೀಲಿಸಿ ಮತ್ತು ಇದು ಭಾರತದ ಮೊದಲ ಮಾನವ ಸಹಿತ ಆಳವಾದ ಸಾಗರ ಕಾರ್ಯಾಚರಣೆಯ ಕುರಿತು ನವೀಕರಣಗಳನ್ನು ನೀಡಿದರು. ಮುಂದೆ ಸಮುದ್ರಯಾನ ಎಂದು ಎಕ್ಸ್ಗೆ ಅಂದರೆ ಹಿಂದೆ ಟ್ವಿಟರ್ ಗೆ ತೆಗೆದುಕೊಂಡು ಬರೆದಿದ್ದಾರೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮತ್ಸ್ಯ 6000 ಸಬ್ಮರ್ಸಿಬಲ್ ಚೆನ್ನೈನಲ್ಲಿದೆ ಎಂದು ಹೇಳಿದರು.

ಇದನ್ನು ಓದಿ : ಗೃಹಲಕ್ಷ್ಮಿ 2,000 ಹಣ ಬರದಿದ್ದವರಿಗೆ ಡಬಲ್ ಧಮಾಕ! ಹಣ ಬರದೆ ಇರುವವರು ತಪ್ಪದೇ ಈ ಸುದ್ದಿ ನೋಡಿ

ಈ ಯೋಜನೆಯ ಕೆಲವು ವಿವರಗಳು :

ಸಮುದ್ರಯಾನ ಮೂರು ಮನುಷ್ಯರನ್ನು ಆರೋಗ್ಯದ ಆಳದಲ್ಲಿ ಭಾರತದ ಮೊದಲ ಮಾನವ ಸಹಿತ ಡೀಪ್ ಓಷನ್ ಮಿಷನ್ ಅಡಿಯಲ್ಲಿ ಸಬ್ಮರ್ಸಿಬಲ್ ನಲ್ಲಿ ಆಳ ಸಮುದ್ರದ ಸಂಪನ್ಮೂಲಗಳು ಮತ್ತು ಜೀವ ವೈವಿಧ್ಯ ಮೌಲ್ಯಮಾಪನವನ್ನು ಅಧ್ಯಯನ ಮಾಡಲು ಈ ಯೋಜನೆಯನ್ನು ಕೈಗೊಂಡಿದೆ. ಸಾಗರ ಪರಿಸರ ವ್ಯವಸ್ಥೆಯನ್ನು ಈ ಯೋಜನೆಯ ಅಡ್ಡಿಪಡಿಸುವುದಿಲ್ಲ ಎಂದು ಒತ್ತಿ ಹೇಳುತ್ತಾ ಡಿಪೋಶನ್ ಮಿಷನ್ ಪ್ರಧಾನಿ ನರೇಂದ್ರ ಮೋದಿಜಿ ಅವರ ನೀಲಿ ಆರ್ಥಿಕತೆ ದೃಷ್ಟಿಕೋನವನ್ನು ಬೆಂಬಲಿಸುತ್ತದೆ ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ಸಾಗರ ಸಂಪನ್ಮೂಲಗಳ ಸುಸ್ಥಿರ ಬಳಕೆಯನ್ನು ಊಹಿಸುತ್ತದೆ ಎಂದು ರಿಜಿಸ್ಟರ್ ಅವರು ಬರೆದಿದ್ದಾರೆ. ಈ ಯೋಜನೆಯಡಿಯಲ್ಲಿ ಜೀವನೋಪಾಯ ಮತ್ತು ಉದ್ಯೋಗಗಳನ್ನು ಸುಧಾರಿಸುತ್ತದೆ ಹಾಗೂ ಸಾಗರ ಪರಿಸರ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡಿ ಎಂಬ ಅಂಶವನ್ನು ಕಾಣಬಹುದಾಗಿದೆ ಎಂದು ಹೇಳಲಾಗಿದೆ. ಭೂ ವಿಜ್ಞಾನ ಸಚಿವಾಲಯ ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ ಅಡಿಯಲ್ಲಿನ ಎಲ್ಲಾ ಸಂಸ್ಥೆಗಳು ಮತ್ತು ಕೇಂದ್ರಗಳು ಪ್ರಧಾನಮಂತ್ರಿ ಅವರು ವೈಜ್ಞಾನಿಕ ಡುಮಂಗಳಲ್ಲಿ ಹೊಂದಿಸಿರುವ #atmanirbharbharat ಅನ್ನು ಸಾಧಿಸಲು ದಾಖಲೆಗಳನ್ನು ಸಿದ್ಧಪಡಿಸಿವೆ ಎಂದು ರಿಜೀಜು ಅವರು ಹೇಳಿದರು.

ಒಟ್ಟಾರೆಯಾಗಿ ಲೇಖನದಲ್ಲಿ ನಮಗೆ ತಿಳಿಯುತ್ತಿರುವ ಮುಖ್ಯ ಮಾಹಿತಿ ಏನೆಂದರೆ ಭಾರತ ದೇಶವು ಎಲ್ಲಾ ಕಡೆಗಳಲ್ಲೂ ತಮ್ಮ ಗುರುತನ್ನು ಉಳಿಸಲು ಹಾಗೂ ಎಲ್ಲಾ ಕಡೆಗಳನ್ನು ತಮ್ಮ ಸಂಶೋಧನೆಯನ್ನು ಕೈಗೊಂಡು ಯಾವ ರೀತಿಯ ಅಂಶಗಳು ಎಲ್ಲೆಲ್ಲಿ ಇದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿವೆ ಹಾಗೂ ಇದೊಂದು ರೀತಿಯಲ್ಲಿ ಚಂದ್ರಯಾನದ ನಂತರ ಸಮುದ್ರಯಾನವು ಯಶಸ್ವಿಯಾಗಿ ಇಡಲಿರುವ ಹೆಜ್ಜೆ ಆಗಿದೆ ಎಂದು ಹೇಳಬಹುದಾಗಿದೆ. ಈ ಮಾಹಿತಿಯನ್ನು ಎಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ನಮ್ಮ ಭಾರತವು ಚಂದ್ರಯಾನದ ನಂತರ ಸೂರ್ಯನತ್ತ ಹೋಗಿ ನಂತರ ಸಮುದ್ರಯಾನವನ್ನು ಅಧ್ಯಯನ ಮಾಡುತ್ತಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

ದುಬೈ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವವರ ಸಂಬಳ ಎಷ್ಟು ಗೊತ್ತಾ?

ನಮ್ಮ ಸಾವಿನ ನಂತರ ಬ್ಯಾಂಕ್‌ನಲ್ಲಿ ಹಣ ಯಾರಿಗೆ ಸಿಗುತ್ತೆ ..?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments