Saturday, June 15, 2024
HomeTrending Newsಭಾಗ್ಯ ತಂದ ಬಜೆಟ್! ಪ್ರತಿ ಮನೆಗೂ 4 ರಿಂದ 5 ಸಾವಿರ ಹಣ, ಗ್ಯಾರಂಟಿ ಲೆಕ್ಕಾಚಾರ...

ಭಾಗ್ಯ ತಂದ ಬಜೆಟ್! ಪ್ರತಿ ಮನೆಗೂ 4 ರಿಂದ 5 ಸಾವಿರ ಹಣ, ಗ್ಯಾರಂಟಿ ಲೆಕ್ಕಾಚಾರ ಹೇಗಿದೆ ಗೊತ್ತಾ?

ನಮಸ್ಕಾರ ಸ್ನೇಹಿತರೆ ಕರ್ನಾಟಕದ ನೂತನ ಸಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು 14ನೇ ಬಜೆಟ್ ಅನ್ನು ಬೆಂಗಳೂರಿನ ವಿಧಾನಸೌಧದಲ್ಲಿ ಮಂಡಿಸಲು ಆರಂಭಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಚುನಾವಣಾ ಭರವಸೆಗಳಿಗೆ ನಿಧಿ ಹಂಚಿಕೆ, 100% ರಷ್ಟು ಎಲೆಕ್ಟ್ರಿಕ್ ವಾಹನಗಳಿಗೆ ರಸ್ತೆ ತೆರಿಗೆ ವಿನಾಯಿತಿಯನ್ನು ಕೈಬಿಡುವುದು ಮತ್ತು ಮದ್ಯದ ಮೇಲೆ ಸುಂಕ ಹೀಗೆ ಕೆಲವೊಂದು ಅನಿರೀಕ್ಷಿತ ಘೋಷಣೆಗಳು ಕರ್ನಾಟಕದ ಬಜೆಟ್ ನಲ್ಲಿದೆ. ಅದರಂತೆ ಈ ವರ್ಷದ ಕರ್ನಾಟಕದ ಬಜೆಟ್ 3,35,000 ಕೋಟಿ ಇರುವ ಸಾಧ್ಯತೆ ಇದೆ. ಹೀಗೆ ಕರ್ನಾಟಕದ ಬಜೆಟ್ ನಲ್ಲಿ ಏನೆಲ್ಲಾ ಮಾಹಿತಿಗಳಿವೆ ಹಾಗೂ ಯಾವ ಯಾವ ಕ್ಷೇತ್ರಕ್ಕೆ ಎಷ್ಟು ಎಷ್ಟು ಹಣವನ್ನು ಬಿಡುಗಡೆ ಮಾಡಲಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇದರಲ್ಲಿ ನೀವು ನೋಡಬಹುದು.

Highlights of Karnataka Budget
Highlights of Karnataka Budget
Join WhatsApp Group Join Telegram Group

ಸಿದ್ದರಾಮಯ್ಯ ಅವರ 14ನೇ ಬಜೆಟ್ :

ಬೆಂಗಳೂರಿನ ವಿಧಾನಸೌಧದಲ್ಲಿ ಕರ್ನಾಟಕದ ಮಂತ್ರಿಯಾದ ಸಿದ್ದರಾಮಯ್ಯನವರು ತಮ್ಮ 14ನೇ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಈ ತಿಂಗಳ ಅಂತ್ಯದವರೆಗೆ ಮಾತ್ರ ಚಾಲ್ತಿಯಲ್ಲಿ ಇರುವುದರಿಂದ ಹೊಸದಾದ ಬಜೆಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲು ಆರಂಭಿಸಿದ್ದಾರೆ. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಚುನಾವಣಾ ಖಾತೆಗಳ ಅನುಷ್ಠಾನಕ್ಕಾಗಿ ಕ್ರಮಗಳನ್ನು ಪ್ರಕಟಿಸುವಂತಹ ನಿರೀಕ್ಷೆ ಇದೆ. ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಯಾಗಿ ಇದು 7ನೇ ಬಜೆಟ್ ಆಗಿದೆ. ಅಲ್ಲದೆ ಇದುವರೆಗೆ ರಾಜ್ಯದಲ್ಲಿ ಯಾವುದೇ ಮುಖ್ಯಮಂತ್ರಿ ಅಥವಾ ಹಣಕಾಸು ಸಚಿವರು ಮಂಡಿಸಿದ ಅತಿ ಹೆಚ್ಚು ಬಜೆಟ್ಗಳಲ್ಲಿ ಸಿದ್ದರಾಮಯ್ಯ ಅವರ ಬಜೆಟ್ ಆಗಿದೆ. ಹಿಂದಿನ ಬಜೆಟ್ 25,000 ಕೋಟಿಗಳಷ್ಟು ಹೆಚ್ಚಿನ ಬಜೆಟ್ ಆಗಿದ್ದು, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ಬಜೆಟ್ ನ ಗಾತ್ರ 3,35,000 ಕೋಟಿ ಆಗಲಿದೆ. ಹಿಂದಿನ ಬಿಜೆಪಿ ಸರ್ಕಾರವು ಮಂಡಿಸಿದಂತಹ ಬಜೆಟ್ ಗಾತ್ರ 3.08 ಲಕ್ಷ ಕೋಟಿಯಾಗಿತ್ತು.

ಕರ್ನಾಟಕದ ಬಜೆಟ್ ನ ಮುಖ್ಯಾಂಶಗಳು :

ಇಡೀ ಕರ್ನಾಟಕಕ್ಕೆ ಬ್ರೈನ್ ಹೆಲ್ತ್ ಇನಿಶಿಯೇಟಿವ್ ಕಾರ್ಯಕ್ರಮವನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದ್ದು, ಬ್ರೈನ್ ಹೆಲ್ತ್ ಇನಿಶಿಯೇಟಿವ್ ಕಾರ್ಯಕ್ರಮವನ್ನು ನಿಮಾನ್ಸ್ ಸಹಯೋಗದೊಂದಿಗೆ ಕರ್ನಾಟಕ ಸರ್ಕಾರವು ಈಗ ರಾಜ್ಯದ ಎಲ್ಲಾ ಭಾಗಗಳಿಗೆ ವಿಸ್ತರಿಸಲಾಗುತ್ತದೆ ಎಂದು ತಿಳಿಸಿದೆ. ಈ ಮೊದಲು ಬೆಂಗಳೂರಿನಲ್ಲಿ ಜನರ ಮಾನಸಿಕ ಆರೋಗ್ಯಕ್ಕಾಗಿ ಪ್ರಾರಂಭಿಸಲಾದ ಈ ಪ್ರಾಯೋಗಿಕ ಯೋಜನೆಯು ಕೇವಲ ಕೋಲಾರ ಮತ್ತು ಸಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಕರ್ನಾಟಕದ ಎಲ್ಲಾ ಭಾಗಗಳಿಗೂ ಈ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ರಾಜ್ಯದ ಬೊಕ್ಕಸದಿಂದ 25,000 ಕೋಟಿ ಮೀಸಲಿಡಲಾಗಿದೆ.

ಟ್ರಾಮಾ ಕೇರ್ ಕೇಂದ್ರಗಳು :

ಮೈಸೂರು ಮತ್ತು ಕಲಬುರ್ಗಿಯಲ್ಲಿ 30 ಕೋಟಿ ರೂಪಾಯಿಗಳಲ್ಲಿ ಡ್ರಾಮಾ ಸೆಂಟರ್ ಅನ್ನು ಸ್ಥಾಪಿಸಲು ಹಾಗೂ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ 5 ಕೋಟಿ ರೂಪಾಯಿಗಳನ್ನು ಸ್ವಯಂ ಚಾಲಿತ ಮತ್ತು ಸಂಪೂರ್ಣ ಕೇಂದ್ರೀಕೃತ ರಕ್ತ ನಿಧಿಯನ್ನು ಸ್ಥಾಪಿಸಲು ಕರ್ನಾಟಕ ಸರ್ಕಾರವು ಮುಂದಾಗಿದೆ. ಅದರಂತೆ ಟ್ರಾಮಾ ಕೇರ್ ಕೇಂದ್ರಗಳನ್ನು ಮೈಸೂರು ಮತ್ತು ಕಲಬುರ್ಗಿಯಲ್ಲಿ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಧಾರ್ಮಿಕ ಸ್ಥಳಗಳ ಅಭಿವೃದ್ಧಿ :

ಕರ್ನಾಟಕ ಸರ್ಕಾರವು ಪ್ರಸಿದ್ಧ ಹಲಸೂರು ಗುತದ್ವಾರಕ್ಕಾಗಿ ಹಾಗೂ ಇತರ ಧಾರ್ಮಿಕ ಸ್ಥಳಗಳಿಗೆ 25 ಕೋಟಿ ರೂಪಾಯಿ ಬಜೆಟ್ ಅನ್ನು ವಿಸ್ತರಿಸಿದೆ. ಹಾಗೆಯೇ ನೂರು ಕೋಟಿ ರೂಪಾಯಿಗಳನ್ನು ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮಕ್ಕೆ ಹಾಗೂ ಇತರ 50 ಕೋಟಿ ಗಳನ್ನು 40,000ಕ್ಕೂ ಹೆಚ್ಚು ವಕ್ಫ್ ಆಸ್ತಿಗಳನ್ನು ರಕ್ಷಿಸಲು ಹಾಗೂ ಅಭಿವೃದ್ಧಿಪಡಿಸಲು ಕರ್ನಾಟಕ ರಾಜ್ಯದ ಬಜೆಟ್ ದಾಖಲೆಗಳಲ್ಲಿ ಈ ವಿಷಯವನ್ನು ಸೇರಿಸಲಾಗಿದೆ.

ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ :

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಣ್ಯ ಹಕ್ಕು ಕಾಯ್ದೆಗೆ ಸಂಬಂಧಿಸಿದಂತೆ ಕೆಲವು ತಿದ್ದುಪಡಿಗಳನ್ನು ಪ್ರಸ್ತಾಪಿಸಲಿದ್ದು, ಅರಣ್ಯದಲ್ಲಿ ವಾಸಿಸುತ್ತಿರುವಂತಹ ಅರಣ್ಯವಾಸಿಗಳಿಗೆ ಮನೆಯನ್ನು ಒದಗಿಸಲು ಕರ್ನಾಟಕ ಸರ್ಕಾರ ಬದದ್ಧವಾಗಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಆದ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಅರಣ್ಯವಾಸಿಗಳಿಗೆ ಮನೆ ಮಂಜೂರು ಮಾಡಲು ಅರಣ್ಯ ಹಕ್ಕು ಕಾಯ್ದೆಯು ಉದ್ದೇಶದಿಂದ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದೊಂದಿಗೆ ಸಭೆ ನಡೆಸಿ ಕಾಯ್ದೆಗಳಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲು ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದರು.

ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿ :

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 8409 ಕೋಟಿ ರೂಪಾಯಿಗಳನ್ನು ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಮೀಸಲಿಡಲು ಸಜ್ಜಾಗಿದೆ.

ಮಹಿಳೆಯರಿಗೆ 800 ವಾರ್ಷಿಕ ಪಿಂಚಣಿ :

ರಾಜ್ಯ ಸರ್ಕಾರವು ವಿವಾಹಿತ ಅಲ್ಪಸಂಖ್ಯಾತರು ಹಾಗೂ ವಿಚ್ಛೇದಿತ ಮಹಿಳೆಯರಿಗಾಗಿ ಜೊತೆಯಲ್ಲಿ ಲಿಂಗ ಅಲ್ಪಸಂಖ್ಯಾತರಿಗಾಗಿ ಪ್ರತಿ ತಿಂಗಳು 600ಗಳನ್ನು ಪಿಂಚಣಿ ನೀಡಲಾಗುತ್ತಿತ್ತು ಆದರೆ ಇದೀಗ ಕಾಂಗ್ರೆಸ್ ಸರ್ಕಾರವು 6,800 ಗಳಿಗೆ ಈ ಪಿಂಚಣಿ ಹಣವನ್ನು ಹೆಚ್ಚಿಸಿದೆ. ಈ ಪಿಂಚಣಿಯ ಪ್ರಯೋಜನವನ್ನು 1.32 ಲಕ್ಷ ಫಲಾನುಭವಿಗಳು ಪಡೆಯಲಿದ್ದಾರೆ.

ಬೆಂಗಳೂರಿನಲ್ಲಿ ಮೆಗಾ ಜ್ಯುವೆಲರಿ ಪಾರ್ಕ್ :

ಬೆಂಗಳೂರಿನಲ್ಲಿರುವ 10,000 ಜನರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಹೊಸ ಮೆಗಾ ಜ್ಯುವೆಲರಿ ಪಾರ್ಕನ್ನು ಸ್ಥಾಪಿಸಲಿದೆ. ಇದು ಹತ್ತು ಸಾವಿರ ಹೊಸ ಉದ್ಯೋಗವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ದಾಖಲೆಯಲ್ಲಿ ಬಹಿರಂಗಪಡಿಸಿದ್ದಾರೆ. ಜೊತೆಗೆ ಹೂಡಿಕೆದಾರರನ್ನು ಆಭರಣ ವಲಯದಲ್ಲಿ ಆಕರ್ಷಿಸುವಂತೆ ಪ್ರಯತ್ನಿಸುತ್ತದೆ.

ಎಪಿಎಂಸಿ ಕಾಯ್ದೆ ತಿದ್ದುಪಡಿ ರದ್ದು :

ಎಪಿಎಂಸಿ ಕಾಯ್ದೆಗಳನ್ನು ಹಿಂದಿನ ಬಿಜೆಪಿ ಆಡಳಿತದಲ್ಲಿ ಮಾಡಿದಂತಹ ತಿದ್ದುಪಡಿಗಳನ್ನು ರದ್ದುಪಡಿಸಲು ಕರ್ನಾಟಕ ಸರ್ಕಾರವು ಸಜ್ಜಾಗಿದೆ. ಅದರಂತೆ ಕೆಲವೊಂದು ತಿದ್ದುಪಡಿ ಮಾಡಲಾದ ನಿಬಂಧನೆಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಸರ್ಕಾರವು ಹಳೆಯ ಎಪಿಎಂಸಿ ಕಾಯ್ದೆಯ ಆವೃತ್ತಿಯನ್ನು ಮರಳಿ ತರುವ ಸಾಧ್ಯತೆ ಇದೆ.

ಇದನ್ನು ಓದಿ : ಸರ್ಕಾರದಿಂದ ಸ್ವಂತ ಮನೆ ಇಲ್ಲದವರಿಗೆ ಮನೆ ಸೌಲಭ್ಯ ಕನಸನ್ನು ನನಸಾಗಿಸಿಕೊಳ್ಳಲು ಅರ್ಜಿ ಸಲ್ಲಿಸಿ

ಪ್ರತಿ ಮನೆಗೆ ಆರ್ಥಿಕ ನೆರವು :

ರಾಜ್ಯ ಸರ್ಕಾರವು ಪ್ರತಿಮನೆಗೆ ರೂ.4,000 ದಿಂದ 5000 ಹೆಚ್ಚುವರಿ ಹಣವನ್ನು ಹಾರ್ದಿಕ ನೆರವಾಗಿ ನೀಡಲು ಮುಂದಾಗಿದೆ. ಅದರಂತೆ ಶುಕ್ರವಾರ ಕರ್ನಾಟಕ ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್ ಭಾಷಣದಲ್ಲಿ 5 ಚುನಾವಣಾ ಖಾತರಿಗಳ ಮೂಲಕ ಕಾಂಗ್ರೆಸ್ ಸರ್ಕಾರವು ಪ್ರತಿಮನೆಗೆ ನಾಲ್ಕು ಸಾವಿರದಿಂದ ಐದು ಸಾವಿರದವರೆಗೆ ಹೆಚ್ಚುವರಿ ಆರ್ಥಿಕ ನೆರವನ್ನು ನೀಡಲು ಮುಂದಾಗುತ್ತಿದೆ ಎಂದು ತಿಳಿಸಿದ್ದಾರೆ. ಇದರಿಂದ ಬಡ ರೈತರು ಕಾರ್ಮಿಕರು ಹಾಗೂ ಬಡಗುವರು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ತಿಳಿಸಿದ್ದಾರೆ.

ಹೀಗೆ ಕರ್ನಾಟಕದ ಮುಖ್ಯಮಂತ್ರಿ ಆದ ಸಿದ್ದರಾಮಯ್ಯ ಅವರು ನಿನ್ನೆ ಶುಕ್ರವಾರ ಮಂಡಿಸಿದಂತಹ ಬಜೆಟ್ ನಲ್ಲಿ ಎಲ್ಲಾ ಕ್ಷೇತ್ರಗಳಿಗೂ ತಮ್ಮ ಬಜೆಟ್ ಅನ್ನು ವಿಸ್ತರಿಸಿದ್ದು, ರೈತರಿಗೆ ಹೆಚ್ಚು ಅನುಕೂಲವಾಗುವಂತೆ ಮಂಡಿಸಲಾಗಿದೆ. ಹೀಗೆ ಕರ್ನಾಟಕದ ಬಜೆಟ್ ನಲ್ಲಿ ಶಿಕ್ಷಣಕ್ಕಾಗಿ, ಆರೋಗ್ಯಕ್ಕಾಗಿ, ನಮ್ಮ ಮೆಟ್ರೋ ಗಾಗಿ, ಇಂದಿರಾ ಕ್ಯಾಂಟೀನ್ಗಾಗಿ, ಅಬಕಾರಿ ಸುಂಕಕ್ಕಾಗಿ, ರೈತರ ಕೃಷಿ ಉಪಕರಣಗಳಿಗಾಗಿ ಹೀಗೆ ಹಲವಾರು ಕ್ಷೇತ್ರಗಳಿಗೆ ಕರ್ನಾಟಕದ ಬಜೆಟ್ಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಸ್ತರಿಸಿದ್ದಾರೆ.

ಜೊತೆಗೆ ಚುನಾವಣೆ ಮುಂಚೆ ಘೋಷಿಸಿದಂತಹ ಕಾಂಗ್ರೆಸ್ ಪಕ್ಷದ ಇದು ಗ್ಯಾರಂಟಿ ಯೋಜನೆಗಳಿಗಾಗಿಯೂ ಸಹ ಬಜೆಟ್ ನಲ್ಲಿ ಹಣವನ್ನು ಮೀಸಲಿಟ್ಟಿದ್ದು, ಎಲ್ಲಾ ಕ್ಷೇತ್ರಗಳಿಗೂ ತಮ್ಮ ಬಜೆಟ್ ಅನ್ನು ವಿಸ್ತರಿಸಿದ್ದು, ಆಗಸ್ಟ್ ಒಂದರಿಂದ ಮಂಡಿಸಿರುವ ಈ ಬಜೆಟ್ ಪರಿಣಾಮಕಾರಿಯಾಗಿ ಜಾರಿಯಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿರುವುದನ್ನು ನಾವು ನೋಡಬಹುದು. ಹೀಗೆ ಕರ್ನಾಟಕದ ಬಜೆಟ್ ನ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡಿ ಧನ್ಯವಾದಗಳು.

ಪ್ರತಿ ಮನೆಗೆ ಎಷ್ಟು ಹೆಚ್ಚುವರಿ ಹಣ ಮೀಸಲು ?

ರೂ.4,000 ದಿಂದ 5000 ಹೆಚ್ಚುವರಿ ಹಣ

ಪಿಂಚಣಿ ಹಣ ಎಷ್ಟು ಹೆಚ್ಚಿಗೆ ನೀಡಲಾಗಿದೆ ?

800 ಹೆಚ್ಚಿಗೆ

ಬೆಂಗಳೂರು ನಗರ ಅಭಿವೃದ್ಧಿಗೆ ಎಷ್ಟು ಹಣ ಮೀಸಲು ?

8409 ಕೋಟಿ ರೂಪಾಯಿಗಳನ್ನು ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಮೀಸಲು

ಇದನ್ನು ಓದಿ : 14ನೇ ಬಜೆಟ್ ಅನ್ನು ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿದ್ದರಾಮಯ್ಯ ಅವರ ದಾಖಲೆಯ ಬಜೆಟ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments