Saturday, July 27, 2024
HomeTrending News14ನೇ ಬಜೆಟ್ ಅನ್ನು ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿದ್ದರಾಮಯ್ಯ ಅವರ ದಾಖಲೆಯ ಬಜೆಟ್

14ನೇ ಬಜೆಟ್ ಅನ್ನು ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿದ್ದರಾಮಯ್ಯ ಅವರ ದಾಖಲೆಯ ಬಜೆಟ್

ನಮಸ್ಕಾರ ಸ್ನೇಹಿತರೆ ಕರ್ನಾಟಕ ಸರ್ಕಾರವು ಬಜೆಟ್ ಅನ್ನು ಮಂಡಿಸಿದ್ದು ಈ ಬಜೆಟ್ ನಗಾತ್ರ 3,27,000 ಕೋಟಿ ರೂಪಾಯಿಗಳು ಆಗಿದೆ ಎಂದು ತಿಳಿಸಲಾಗಿದೆ. ಅದರಂತೆ ಈ ಬಜೆಟ್ಗೆ ಸಂಬಂಧಿಸಿದ ಕೆಲವು ಮುಖ್ಯ ಅಂಶಗಳನ್ನು ನೀವು ನೋಡಬಹುದು.

Karnataka budget presentation
Karnataka budget presentation
Join WhatsApp Group Join Telegram Group

ಆಹಾರ ಇಲಾಖೆ :

ಕರ್ನಾಟಕ ಸರ್ಕಾರವು 10,000 ಕೋಟಿ ಅನುದಾನವನ್ನು ಆಹಾರ ಇಲಾಖೆಗೆ ನೀಡುವುದರ ಮೂಲಕ ನೂರು ರೈತ ಉತ್ಪಾದನಾ ಕಂಪನಿಗಳಿಗೆ ಶೇಕಡ ನಾಲ್ಕರಷ್ಟು ಬಡ್ಡಿ ದರದಲ್ಲಿ ಸಹಾಯಧನವನ್ನು ನೀಡಲು ಮುಂದಾಗಿದೆ.

ಸಮಾಜ ಕಲ್ಯಾಣ ಇಲಾಖೆ :

ಹನ್ನೊಂದು ಸಾವಿರ ಕೋಟಿ ರೂಪಾಯಿಗಳನ್ನು ಕರ್ನಾಟಕ ಸರ್ಕಾರವು ಸಮಾಜ ಕಲ್ಯಾಣ ಇಲಾಖೆಗೆ ನೀಡಿದೆ.

ಟ್ರಾಮಾ ಸೆಂಟರ್ ಹಾಗೂ ವೈದ್ಯಕೀಯ ಕಾಲೇಜು :

ಕಲಬುರ್ಗಿ ಹಾಗೂ ಮೈಸೂರಿನಲ್ಲಿ ಡ್ರಾಮಾ ಸೆಂಟರ್ ಸ್ಥಾಪನೆಗಾಗಿ ಹಾಗೂ ಚಿತ್ರದುರ್ಗದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಜೊತೆಗೆ ನಮ್ಮ ಮೆಟ್ರೋಗೆ ಕರ್ನಾಟಕ ಸರ್ಕಾರವು 30000 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ.

ನಂದಿನಿ ಕಂಪನಿ :

10 ಕೋಟಿ ರೂಪಾಯಿಗಳನ್ನು ನಂದಿನಿ ಮಾದರಿಯ ಏಕೀಕೃತ ಬ್ರಾಂಡ್ ಗೆ ಅನುದಾನ ನೀಡಿದೆ.

ಗ್ಯಾರೆಂಟಿ ಯೋಜನೆಗಳು :

ಕರ್ನಾಟಕ ಸರ್ಕಾರವು ಘೋಷಿಸಿದಂತಹ 5 ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಸುಮಾರು 52,000 ಕೋಟಿ ರೂಪಾಯಿಗಳನ್ನು ಒಂದು ವರ್ಷದಲ್ಲಿ ಅಂದಾಜಿಸಿದ್ದು 1.30 ಕೋಟಿ ಕುಟುಂಬಗಳಿಗೆ ಈ ಗ್ಯಾರಂಟಿ ಯೋಜನೆಗಳನ್ನು ತಲುಪಿಸುವ ಗುರಿಯನ್ನು ಹೊಂದಿದೆ. ರೂ. 4000 ದಿಂದ 5,000ಗಳಷ್ಟು ಪ್ರತಿ ಕುಟುಂಬಕ್ಕೆ ಮಾಸಿಕ ಅಂದರೆ ವಾರ್ಷಿಕವಾಗಿ ಸರಾಸರಿ ಪ್ರತಿ ಕುಟುಂಬಗಳಿಗೆ 4860,000 ಅಷ್ಟು ಹೆಚ್ಚುವರಿ ಆರ್ಥಿಕ ನೆರವನ್ನು ನೀಡಲು ಕರ್ನಾಟಕ ಸರ್ಕಾರವು ಮುಂದಾಗಿದೆ. ದೇಶದಲ್ಲಿಯೇ ಪ್ರಥಮ ಬಾರಿಗೆ ಸಾರ್ವತ್ರಿಕ ಮೂಲ ಆದಾಯ ಎಂಬ ಪರಿಕಲ್ಪನೆ ಯೊಂದಿಗೆ ಅನುಷ್ಠಾನಗೊಳಿಸುವುದರ ಮೂಲಕ ಅಭಿವೃದ್ಧಿಯ ಹೊಸ ಮಾದರಿಯನ್ನು ರೂಪಿಸುವ ಉದ್ದೇಶವನ್ನು ಕರ್ನಾಟಕ ಸರ್ಕಾರ ಹೊಂದಿದೆ.

ಬಡವರ ಕೈಗೆ ಹೆಚ್ಚಿನ ಹಣ :

ಕರ್ನಾಟಕ ಸರ್ಕಾರವು ಬಡವರಿಗಾಗಿ ಆರ್ಥಿಕ ನೆರವನ್ನು ಒದಗಿಸುವ ಉದ್ದೇಶದಿಂದ ಬಡವರ ಕೈಗೆ ಹೆಚ್ಚಿನ ಹಣವನ್ನು ನೀಡಲು ಮುಂದಾಗಿದೆ. ಅದರಂತೆ ಹಿಂದಿರುವಂತಹ ಪ್ರಬಲ ಆರ್ಥಿಕ ತರ್ಕವನ್ನು ಸದನದ ಗೌರವಾನ್ವಿತ ಸದಸ್ಯರು ಗಮನಿಸಬಹುದಾಗಿದ್ದು ಸಮಾಜದ ತಳಹಂತದ ಶೇಕಡಾ 60 ರಷ್ಟು ಜನರಿಂದ ಜಿ ಎಸ್ ಟಿ ಯ ಬಹುಪಾಲು ಮತ್ತು ಸಂಗ್ರಹವಾಗುತ್ತಿದ್ದರು ಆರ್ಥಿಕ ವ್ಯವಸ್ಥೆಯ ಹೆಚ್ಚಿನ ಲಾಭವು ಸಮಾಜದ ಮೇಲ್ಪಟ್ಟ ಜನರ ಅಂದರೆ ಅಷ್ಟು ಜನರಿಗೆ ತಲುಪುತ್ತಿದೆ. ಹೀಗೆ ಬಡವರಿಗೆ ಸಂಪತ್ತನ್ನು ಮರು ಹಂಚಿಕೆ ಮಾಡುವ ನೀತಿಗಳನ್ನು ಜನಪ್ರ ಸರ್ಕಾರಗಳು ಅನುಸರಿಸಬೇಕೆಂದು ಕರ್ನಾಟಕ ಸರ್ಕಾರವು ನಮ್ಮ ಗ್ಯಾರಂಟಿ ಯೋಜನೆಗಳು ಈ ಕೆಲಸವನ್ನು ಮಾಡುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಇಲಾಖೆವಾರು ಬಜೆಟ್ ಹಂಚಿಕೆ :

ಕಾಂಗ್ರೆಸ್ ಸರ್ಕಾರ ಬಜೆಟ್ ಮಂಡನೆಯನ್ನು ಮಾಡಿದ್ದು ಯಾವ ಯಾವ ಇಲಾಖೆಗಳಿಗೆ ಎಷ್ಟು ಹಣವನ್ನು ವಿನಯೋಗಿಸಬೇಕೆಂಬುದರ ಬಗ್ಗೆ ತಿಳಿಸುತ್ತದೆ. ಅದರಂತೆ 37 ಸಾವಿರ ಕೋಟಿ ರೂಪಾಯಿಗಳನ್ನು ಶಿಕ್ಷಣ ಕ್ಷೇತ್ರಕ್ಕಾಗಿ, 24,000 ಕೋಟಿ ರೂಪಾಯಿಗಳನ್ನು ಮಹಿಳಾ ಮತ್ತು ಕಲ್ ಮಕ್ಕಳ ಕಲ್ಯಾಣ ಅಭಿವೃದ್ಧಿಗಾಗಿ, 22 ಸಾವಿರ ಕೋಟಿ ಇಂಧನ, 19,000 ಕೋಟಿ ನೀರಾವರಿಗಾಗಿ, 18 ಸಾವಿರ ಕೋಟಿ ಗ್ರಾಮೀಣ ಅಭಿವೃದ್ಧಿಗಾಗಿ, ರೂ.16,000 ಕೋಟಿ ಒಳ ಆಡಳಿತ ಮತ್ತು ಸಾರಿಗೆ, 16000 ಕೋಟಿ ಕಂದಾಯ, ಹದಿನಾಲ್ಕು ಸಾವಿರ ಕೋಟಿ ಆರೋಗ್ಯ ಇಲಾಖೆ, 11,000 ಕೋಟಿ ಸಮಾಜ ಕಲ್ಯಾಣ ಇಲಾಖೆ 10,000 ಕೋಟಿ ಲೋಕೋಪಯೋಗಿ ಇಲಾಖೆ, 5860 ಕೋಟಿ ಕೃಷಿ ಮತ್ತು ತೋಟಗಾರಿಕಾ ಇಲಾಖೆ, 3024 ಕೋಟಿ ಪಶುಸಂಗೋಪನೆ ಮತ್ತು ಮೀನುಗಾರಿಕೆಗಾಗಿ ಹಾಗೂ 1.09 ಲಕ್ಷ ಕೋಟಿ ಇತರೆ ವೆಚ್ಚಕ್ಕಾಗಿ ಕರ್ನಾಟಕ ಸರ್ಕಾರವು 2023-24ನೇ ಸಾಲಿನಲ್ಲಿ ತಿಳಿಸಿದೆ.

ಇದನ್ನು ಓದಿ : ಇನ್ಮುಂದೆ ಬರಲ್ಲ ಅನಗತ್ಯ ಕರೆಗಳು, ಈ ಒಂದು ಚಿಕ್ಕ ಕೆಲಸ ಮಾಡಿ ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರದ ಸ್ವಂತ ತೆರಿಗೆ ವಿವರ :

2023-24ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ಸ್ವಂತ ತೆರಿಗೆ ವಿವರವನ್ನು ನೀವು ಇದೀಗ ನೋಡಬಹುದು. ಅದರಂತೆ 1. 62 ಲಕ್ಷ ಕೋಟಿ ರೂಪಾಯಿಗಳು ಒಟ್ಟು ರಾಜಸ್ವ ಸಂಗ್ರಹ, ಒಂದು ಲಕ್ಷ ಕೋಟಿ ವಾಣಿಜ್ಯ ತೆರಿಗೆ, 38,000 ಕೋಟಿ ಅಬಕಾರಿ ತೆರಿಗೆ, 25,000 ಕೋಟಿ ನೋಂದಣಿ ಮತ್ತು ಮುದ್ರಾಂಕ , 11500 ಕೋಟಿ ಮೋಟಾರ್ ವಾಹನ,2153 ಕೋಟಿ ಇತರೆ.

ಹೀಗೆ ಕರ್ನಾಟಕ ಸರ್ಕಾರವು ಈ ವರ್ಷದ ಬಜೆಟ್ ಅನ್ನು ಮಂಡಿಸಿದ್ದು, ಯಾವ ಯಾವ ಇಲಾಖೆಗಳಿಗೆ ಎಷ್ಟು ಎಷ್ಟು ಹಣವನ್ನ ಖರ್ಚು ಮಾಡಲಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ವಿವರವನ್ನು ನೀಡಿದೆ. ಹೀಗೆ 2023 24ರಲ್ಲಿ ಮಂಡಿಸಿದ ಈ ಬಜೆಟ್ ಸಿದ್ದರಾಮಯ್ಯ ಅವರ 14 ಬಜೆಟ್ ಆಗಿದೆ ಎಂದು ಹೇಳಬಹುದಾಗಿದೆ. ಈ ಬಜೆಟ್ ನ ಬಗ್ಗೆ ನಿಮ್ಮ ಸ್ನೇಹಿತರಿಗೂ ಸಹ ತಿಳಿಸಿ ಧನ್ಯವಾದಗಳು.

ಎಷ್ಟನೇ ಬಜೆಟ್ ಆಗಿದೆ ?

14 ಬಜೆಟ್ ಆಗಿದೆ

ಬಜೆಟ್ ಯಾರು ಮಂಡಿಸಿದರು ?

cm ಸಿದ್ದರಾಮಯ್ಯ

ಸಮಾಜ ಕಲ್ಯಾಣ ಇಲಾಖೆ ಎಷ್ಟು ಹಣ ಮೀಸಲು ಇಡಲಾಗಿದೆ ?

ಹನ್ನೊಂದು ಸಾವಿರ ಕೋಟಿ

ಇದನ್ನು ಓದಿ : ಸರ್ಕಾರದಿಂದ ಸ್ವಂತ ಮನೆ ಇಲ್ಲದವರಿಗೆ ಮನೆ ಸೌಲಭ್ಯ ಕನಸನ್ನು ನನಸಾಗಿಸಿಕೊಳ್ಳಲು ಅರ್ಜಿ ಸಲ್ಲಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments