Friday, June 14, 2024
HomeTrending Newsಆಗಸ್ಟ್ 1 ರಿಂದ ಜನರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ! ಹೋಟೆಲ್ ಮೆನು ನೋಡಿದ್ರೆ ಖಂಡಿತ...

ಆಗಸ್ಟ್ 1 ರಿಂದ ಜನರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ! ಹೋಟೆಲ್ ಮೆನು ನೋಡಿದ್ರೆ ಖಂಡಿತ ಶಾಕ್ ಆಗ್ತೀರ…!

ನಮಸ್ಕಾರ ಸ್ನೇಹಿತರೆ ರಾಜ್ಯದ ಜನತೆಯು ಗ್ಯಾರಂಟಿ ಯೋಜನೆಗಳಿಂದ ಖುಷಿಯಾಗಿದ್ದು, ಜೊತೆಗೆ ಆಗಸ್ಟ್ ನಿಂದ ಎಲ್ಲಾ ಮಹಿಳೆಯರಿಗೆ 2000 ಹಣ ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ ಬರಲಿದೆ ಎಂದು ಕುತೂಹಲದಿಂದ ಕಾಯುತ್ತಿದ್ದಾರೆ. ಆದರೆ ಈಗ ಜನಸಾಮಾನ್ಯರಿಗೆ ಇದೇ ಸಮಯದಲ್ಲಿ ಬಿಗ್ ಶಾಕ್ ಬಂದಿದೆ. ಜನರು ದಿನದಿಂದ ದಿನಕ್ಕೆ ವಸ್ತುಗಳ ಬೆಲೆಯೂ ಹೆಚ್ಚುತ್ತಿರುವುದರಿಂದ ತತ್ತರಿಸಿದ್ದಾರೆ ಆದರೆ ಇದೀಗ ಹೋಟೆಲ್ ಮುಂದಿನ ದಿನಮಾನಗಳಲ್ಲಿ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಅದರಂತೆ ಹೋಟೆಲ್ ದರ ಎಷ್ಟು ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಹಾಗೂ ಯಾವೆಲ್ಲ ವಸ್ತುಗಳಿಗೆ ಈ ಪ್ರಮಾಣ ಹೆಚ್ಚಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.

Hotel rate increase
Hotel rate increase
Join WhatsApp Group Join Telegram Group

ಬೆಲೆ ಹೆಚ್ಚಳ :

ರಾಜ್ಯದಲ್ಲಿರುವ ಜನತೆಗೆ ಮೇಲಿಂದ ಮೇಲೆ ಶಾಕ್ ಹೊಡೆಯುತ್ತಿದೆ. ಏಕೆಂದರೆ ಸುಮಾರು ಒಂದು ತಿಂಗಳಿನಿಂದಲೂ ಕೆಂಪು ತರಕಾರಿಯಾದ ಟೊಮೊಟೊ ಕೈಗೆ ಸಿಗುತ್ತಿಲ್ಲ. ಟೊಮೊಟೊ ಬೆಲೆ ಗಗನಕೇರಿ ಇರುವುದನ್ನು ನಾವು ನೋಡಬಹುದಾಗಿದೆ. ಅದರಂತೆ ಈಗ ರಾಜ್ಯದ ಜನತೆಗೆ ದಿನನಿತ್ಯ ಬೆಳಗಾಗುವುದೇ ಹಾಲಿನಿಂದ ಅಂದರೆ ದಿನನಿತ್ಯವೂ ಜನತೆಯು ಹಾಲು ಕುಡಿಯುವುದು ಅಥವಾ ಟೀ ಕಾಫಿಯನ್ನು ಮಾಡಿಕೊಳ್ಳುವುದರ ಮೂಲಕ ತಮ್ಮ ದಿನನಿತ್ಯದ ಜೀವನವನ್ನು ಸ್ಟಾರ್ಟ್ ಮಾಡುತ್ತಾರೆ ಆದರೆ ಇದೀಗ ಆಗಸ್ಟ್ ಒಂದರಿಂದ ಮೂರು ರೂಪಾಯಿಗಳಷ್ಟು ನಂದಿನ ಹಾಲಿನ ಬೆಲೆಯೂ ಹೆಚ್ಚಳವಾಗಲಿದೆ. ಈ ಎಲ್ಲಾ ವಸ್ತುಗಳ ಬೆಲೆ ಏರಿಕೆಯಿಂದ ಜನರು ಹೊರ ಬರುತ್ತಿದ್ದಂತೆ ಮತ್ತೊಂದು ಶಾಕ್ ಜನರಿಗೆ ಸಿಗುತ್ತಿದೆ. ಈಗ ಈ ದುಬಾರಿ ದುನಿಯಾ ಶಾಲೆಗೆ ಇಂದು ಮತ್ತೊಂದು ವಸ್ತು ಸೇರ್ಪಡೆಯಾಗುತ್ತಿದೆ.

ಇದನ್ನು ಓದಿ : ಕೂಡಲೇ ರಿಜಿಸ್ಟರ್ ಮಾಡಿಕೊಳ್ಳಿ ಗೃಹಲಕ್ಷ್ಮಿ ಯೋಜನೆಗೆ ಹೊಸ ಲಿಂಕ್ ಬಿಡುಗಡೆ ಮಾಡಿದೆ

ಹೋಟೆಲ್ ದರ ಹೆಚ್ಚಳ :

ಟೊಮೆಟೊ ಬೆಲೆ ಹಾಗೂ ಹಾಲಿನ ಬೆಲೆಯಿಂದ ತತ್ತರಿಸಿದ್ದ ಜನರಿಗೆ ಇದೀಗ ವಿದ್ಯುತ್ ದರ , ಅಕ್ಕಿ, ತರಕಾರಿ ದರ ಸೇರಿದಂತೆ ದಿನಸಿ ದರವು ಸಹ ಹೆಚ್ಚಳವಾಗುತ್ತಿದ್ದಂತೆ, ಹೋಟೆಲ್ ಉದ್ಯಮದವರು ಸಹ ಈಗ ದರವನ್ನು ಹೆಚ್ಚಿಸಲು ಪ್ಲಾನ್ ಮಾಡಿದ್ದಾರೆ. ಅದರಂತೆ ಇವತ್ತು ಕನಕಪುರದ ಹೋಟೆಲ್ನಲ್ಲಿ ಹೋಟೆಲ್ ಅಸೋಸಿಯೇಷನ್ ರವರು ಸಭೆ ಸೇರಿರುವುದರ ಮೂಲಕ ಈ ಸಭೆಯಲ್ಲಿ 10 ರಷ್ಟು ಬೆಲೆಯನ್ನು ಆಗಸ್ಟ್ ಒಂದರಿಂದ ಏರಿಕೆ ಮಾಡಲು ತೀರ್ಮಾನ ಕೈಗೊಂಡಿದ್ದಾರೆ.

ಹೊಸದರಾಗುಸ್ ಒಂದರಿಂದಲೇ ನಿಗದಿಯಾಗಲಿದ್ದು, ಮೂರು ರೂಪಾಯಿಗಳ ಹೆಚ್ಚಳವನ್ನು ಕಾಫಿಗೆ, ರೂ.5 ಗಳ ಹೆಚ್ಚಳ ತಿಂಡಿಗೆ ,10 ರೂಪಾಯಿಗಳ ಹೆಚ್ಚಳ ಊಟಕ್ಕೆ ,ಹೇರಿರುವುದರ ಮೂಲಕ ಶೇಕಡ 10 ರಷ್ಟು ಬೆಲೆಯನ್ನು ಹೋಟೆಲ್ ಉದ್ಯಮವು ಹೆಚ್ಚಳ ಮಾಡಲಿದೆ. ಗ್ರಾಹಕರು ಈ ಬೆಲೆ ಏರಿಕೆಯಿಂದಾಗಿ ಆಕ್ರೋಶ ಹೊರ ಹಾಕಿದ್ದು ಜನಸಾಮಾನ್ಯರಿಗೆ ಇದು ದೊಡ್ಡ ಹೊರೆಯಾಗಿ ಪರಿಣಮಿಸಿದೆ ಈ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದು ಮತ್ತೊಮ್ಮೆ ಜನಸಾಮಾನ್ಯರ ಮೇಲೆ ಬರೆ ಬೀಳಲಿದೆ.

ಹೀಗೆ ದಿನೇ ದಿನೇ ಎಲ್ಲಾ ವಸ್ತುಗಳ ಮೇಲೆ ಬೆಲೆ ಏರಿಕೆ ಆಗುತ್ತಿದ್ದು ಜನಸಾಮಾನ್ಯರು ಈ ಬೆಲೆ ಏರಿಕೆಯಿಂದಾಗಿ ತಮ್ಮ ದಿನನಿತ್ಯದ ಜೀವನವನ್ನು ಸಾಗಿಸಲು ಕಷ್ಟಪಡುತ್ತಿದ್ದಾರೆ. ಈ ಬೆಲೆ ಏರಿಕೆಯು ಒಂದು ರೀತಿಯಲ್ಲಿ ತಮ್ಮ ದಿನನಿತ್ಯದ ಒಂದು ಹೊತ್ತು ಊಟಕ್ಕೂ ಸಹ ಕಲ್ಲು ಹಾಕಿದಂತಾಗುತ್ತಿದೆ ಎಂದು ಹೇಳಬಹುದಾಗಿದೆ. ಹೀಗೆ ಈ ಬೆಲೆ ಏರಿಕೆಯ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗು ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ರಾಜ್ಯಾದ್ಯಂತ ವರುಣನ ರೌದ್ರಾವತಾರ! ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಳೆ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಮಾನ್ಸೂನ್‌ನಲ್ಲಿ ರೈತರಿಗೆ ಬಂಫರ್‌ ಗಿಫ್ಟ್!‌ ಸರ್ಕಾರದಿಂದ ಈ ವರ್ಗದ ಜನರಿಗೆ ಉಚಿತವಾಗಿ ಕೊಳವೆಬಾವಿ ನಿರ್ಮಾಣ, ಯಾರಿಗೆಲ್ಲಾ ಈ ಅವಕಾಶ ಸಿಗುತ್ತೆ ಗೊತ್ತಾ?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments