Friday, July 26, 2024
HomeTrending Newsಚಿನ್ನ ಖರೀದಿಸುವವರಿಗೆ ಗೊತ್ತಿರಬೇಕಾದ 5 ಪ್ರಮುಖ ಅಂಶಗಳು ಎಚ್ಚರಿಕೆಯಿಂದ ಗಮನಿಸಿ ತೆಗೆದುಕೊಳ್ಳಿ

ಚಿನ್ನ ಖರೀದಿಸುವವರಿಗೆ ಗೊತ್ತಿರಬೇಕಾದ 5 ಪ್ರಮುಖ ಅಂಶಗಳು ಎಚ್ಚರಿಕೆಯಿಂದ ಗಮನಿಸಿ ತೆಗೆದುಕೊಳ್ಳಿ

ನಮಸ್ಕಾರ ಸ್ನೇಹಿತರೆ, ಸಾಮಾನ್ಯವಾಗಿ ಎಲ್ಲರೂ ಸಹ ಚಿನ್ನವನ್ನು ಖರೀದಿಸಲು ಹಾಗೂ ಧರಿಸಲು ಇಷ್ಟಪಡುತ್ತಾರೆ. ಅದರಲ್ಲಿಯೂ ಚಿನ್ನದ ಮೇಲೆ ಹೆಚ್ಚು ಹೊಲವನ್ನು ಮಹಿಳೆಯರು ಹೊಂದಿರುತ್ತಾರೆ. ಅದರಂತೆ ಈಗ ಜನರು ಹೆಚ್ಚಿನ ಎಚ್ಚರವನ್ನು ಚಿನ್ನ ಖರೀದಿಸುವ ವೇಳೆ ವಹಿಸಬೇಕಾಗುತ್ತದೆ. ಕೆಲವೊಮ್ಮೆ ಮಾರಾಟಗಾರರು ಖರೀದಿದಾರರಿಗೆ ಚಿನ್ನ ಖರೀದಿಯ ಸಂದರ್ಭದಲ್ಲಿ ಮೋಸ ಮಾಡಲು ಪ್ರಯತ್ನಿಸುತ್ತಾರೆ. ಹಾಗಾಗಿ ಹೀಗೆ ನೀವು ಮೋಸ ಹೋಗಬಾರದು ಎನ್ನುವ ಉದ್ದೇಶದಿಂದ ಈ ಲೇಖನದಲ್ಲಿ ನಿಮಗೆ ಈ ಐದು ಅಂಶಗಳನ್ನು ಚಿನ್ನವನ್ನು ಖರೀದಿ ಮಾಡುವಾಗ ನೋಡಬೇಕು ಎಂಬುದರ ಬಗ್ಗೆ ತಿಳಿಸಲಾಗುತ್ತದೆ. ಶುದ್ಧ ಚಿನ್ನ ಮತ್ತು ನಕಲಿ ಚಿನ್ನಗಳ ನಡುವಿನ ವ್ಯತ್ಯಾಸ : ಇಂದಿನ ಯುಗದಲ್ಲಿ ಎಲ್ಲರೂ ಸಹ ಚಿನ್ನವನ್ನು ಖರೀದಿ ಮಾಡಲು ಬಯಸುತ್ತಾರೆ, ಆದರೆ ಚಿನ್ನ ಖರೀದಿ ಮಾಡುವ ಸಂದರ್ಭದಲ್ಲಿ ಖರೀದಿದಾರರಿಗೆ ಮಾರಾಟಗಾರರು ಮೋಸ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಹಾಗಾಗಿ ಸಾಕಷ್ಟು ನಿಯಮವನ್ನು ಕೇಂದ್ರ ಸರ್ಕಾರವು ಚಿನ್ನ ಖರೀದಿದಾರರಿಗೆ ಹಾಗೂ ಮಾರಾಟಗಾರರಿಗೆ ನಕಲಿ ಚಿನ್ನ ಮತ್ತು ಶುದ್ಧ ಚಿನ್ನಗಳ ನಡುವಿನ ವ್ಯತ್ಯಾಸ ತಿಳಿಯಲಿ ಎನ್ನುವ ಕಾರಣದಿಂದಾಗಿ ಸಾಕಷ್ಟು ನಿಯಮಗಳನ್ನು ಜಾರಿಗೊಳಿಸಿದೆ. ಹಾಗಾದರೆ ಆ ನಿಯಮಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Important Points Gold Buyers Should Know
Important Points Gold Buyers Should Know
Join WhatsApp Group Join Telegram Group

ಹಾಲ್ಮಾರ್ಕ್ ಪರಿಶೀಲನೆ :

ಚಿನ್ನವನ್ನು ಖರೀದಿಸುವಾಗ ಚಿನ್ನ ಖರೀದಿ ಮಾಡುವವರು ಅದರ ಮೇಲಿನ ಮಾರ್ಕನ್ನು ಪರಿಶೀಲಿಸಬೇಕಾಗುತ್ತದೆ. ಚಿನ್ನದ ಮೇಲೆ ಹಾಲ್ ಮಾರ್ಕ್ ಪ್ರಾಮಾಣಿಕರಣವನ್ನು ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಅಂದರೆ ಬಿಐಎಸ್ ನೀಡುತ್ತದೆ. ಇದನ್ನು ಚಿನ್ನದ ಶುದ್ಧತೆಯ ಪುರಾವೆ ಎಂದು ಪರಿಗಣಿಸಲಾಗುತ್ತಿದ್ದು ಈ ಮಾರ್ಕ್ ಇದ್ದರೆ ಆ ಚಿನ್ನವು ಶುದ್ದ ಚಿನ್ನ ಎಂದು ಪರಿಗಣಿಸಲಾಗುತ್ತದೆ. ಡಿಐಎಸ್ ನೀಡಿದ ಹಾಲ್ ಮಾರ್ಕ್ ನಕಲಿ ಚಿನ್ನದ ಮೇಲೆ ಪ್ರಮಾಣಿಕರವನ್ನು ನೀಡಲಾಗುವುದಿಲ್ಲ.

ನೈಟ್ರಿಕ್ ಆಮ್ಲದ ಪರಿಶೀಲನೆ :

ನೀವು ಚಿನ್ನ ವಾಸಲಿ ಎಂದು ಪರಿಶೀಲಿಸಬೇಕಾದರೆ ಮತ್ತೊಂದು ಅಂಶ ಎಂದರೆ ಅದು ನೈಟ್ರಿಕ್ ಆಮ್ಲವನ್ನು ಬಳಸುವ ಮೂಲಕ ತಿಳಿದುಕೊಳ್ಳಬಹುದಾಗಿದೆ. ಲಘುವಾಗಿ ಚಿನ್ನವನ್ನು ಸ್ಕ್ರೆಚ್ ಮಾಡಿ ಅದರ ಮೇಲೆ ನೈಟ್ರಿಕ್ ಆಮ್ಲವನ್ನು ಹಾಕಿದ ನಂತರ ಆ ವೇಳೆ ಚಿನ್ನದ ಮೇಲೆ ಯಾವುದೇ ಪರಿಣಾಮವನ್ನು ನೈಟ್ರಿಕ್ ಆಮ್ಲವು ಬೀರುವುದಿಲ್ಲ ಆಗ ಅದು ಶುದ್ಧ ಚಿನ್ನ ಎಂದು ತಿಳಿದು ಬರುತ್ತದೆ. ನೈಟ್ರಿಕ್ ಆಮ್ಲವನ್ನು ನಕಲಿ ಚಿನ್ನದ ಮೇಲೆ ಹಾಕಿದಾಗ ಅದರ ಬಣ್ಣ ಹೋಗುತ್ತದೆ.

ಬಿಳಿ ವಿನೆಗರ್ ಬಳಸಬಹುದು :

ಚಿನ್ನದ ಶುದ್ಧತೆಯನ್ನು ಬಿಳಿ ವಿನೆಗರ್ ಸಹಾಯದಿಂದ ಪರೀಕ್ಷಿಸಬಹುದಾಗಿದೆ. ಕೆಲವು ಹನಿ ವಿನೆಗರ್ ಅನ್ನು ಚಿನ್ನದ ಲೋಹದ ಮೇಲೆ ಹಾಕಿದಾಗ ನಿಜವಾದ ಬಣ್ಣವನ್ನು ಚಿನ್ನ ಬಿಡುವುದಿಲ್ಲ.

ನೀರಿನ ಸಹಾಯ ಪಡೆಯಬಹುದು :

ನೀರನ್ನು ಬಳಸುವುದರ ಮೂಲಕವೂ ಸಹ ಚಿನ್ನದ ಶುದ್ಧತೆಯನ್ನು ತಿಳಿಯಬಹುದಾಗಿದೆ. ಚಿನ್ನವು ಭಾರವಾಗಿರುವುದರಿಂದ ನಿಜವಾದ ಚಿನ್ನವನ್ನು ನೀರಿನಲ್ಲಿ ಹಾಕಿದಾಗ ಅದು ಮುಳುಗುತ್ತದೆ ಆದರೆ ನಕಲಿ ಚಿನ್ನವನ್ನು ನೀರಿನಲ್ಲಿ ಹಾಕಿದಾಗ ಅದು ತೇಲುತ್ತದೆ.

ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆ ಫೈನಲ್ ಲಿಸ್ಟ್ ಮಾಡಿದ ಸರ್ಕಾರ : ಹೆಸರಿದ್ದವರಿಗೆ ಮಾತ್ರ ಹಣ ಕೂಡಲೇ ನೊಂದಾಯಿಸಿಕೊಳ್ಳಿ

ಮ್ಯಾಗ್ನೆಟ್ ಪರೀಕ್ಷೆ :

ಚಿನ್ನದ ಶುದ್ಧತೆಯನ್ನು ಮ್ಯಾಗ್ನೆಟ್ ಅನ್ನು ಬಳಸುವುದರ ಮೂಲಕ ಪರಿಶೀಲಿಸಬಹುದಾಗಿದೆ. ಕಾಂತಿಯ ಅಂಶವು ನಿಜವಾದ ಚಿನ್ನದಲ್ಲಿ ಇರುವುದಿಲ್ಲ ಇದರಿಂದ ನೀವು ಮ್ಯಾಗ್ನೆಟ್ ಅನ್ನು ಚಿನ್ನದ ಬೆಲೆ ಇಡುವುದರಿಂದ ಅದರ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ನಕಲಿ ಚಿನ್ನವು ಇದ್ದರೆ ಅದು ಆಯಸ್ಕಾಂತದ ಬಳಿ ಬಂದ ತಕ್ಷಣ ಮ್ಯಾಗ್ನೆಟ್ ಕಡೆಗೆ ಎಳೆಯುತ್ತದೆ.

ಹೀಗೆ ಚಿನ್ನವನ್ನು ಸುಲಭವಾಗಿ ಪರೀಕ್ಷಿಸಲು ಈ ಐದು ತಂತ್ರಗಳನ್ನು ನಿಮಗೆ ಈ ಲೇಖನದಲ್ಲಿ ತಿಳಿಸಲಾಗಿದ್ದು ಇದರ ಮೂಲಕ ನೀವು ಚಿನ್ನವನ್ನು ಖರೀದಿ ಮಾಡುವಾಗ ಅಸಲಿ ಚಿನ್ನವನ್ನು ಸುಲಭವಾಗಿ ತಿಳಿದುಕೊಳ್ಳುವ ಮೂಲಕ ಒಳ್ಳೆಯ ಶುದ್ಧ ಚಿನ್ನವನ್ನು ಪಡೆಯಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹೆಚ್ಚಾಗಿ ಚಿನ್ನವನ್ನು ಕಲಿಸುತ್ತಿದ್ದರೆ ಅವರಿಗೆ ಈ ಶುದ್ಧ ಚಿನ್ನದ ಮಾಹಿತಿಯ ಬಗ್ಗೆ ಶೇರ್ ಮಾಡಿ ಧನ್ಯವಾದಗಳು

ಇತರೆ ವಿಷಯಗಳು :

ಸೆಪ್ಟೆಂಬರ್ 10 ಕೊನೆಯ ಅವಕಾಶ: ಬಿಪಿಎಲ್ ಕಾರ್ಡ್ ದಾರರಿಗೆ ಸರ್ಕಾರದ ಆದೇಶ, ಈ ಕೆಲಸ ಕಡ್ಡಾಯವಾಗಿ ಮಾಡಲೇಬೇಕು

ವಿಮಾನದಲ್ಲಿ ಹಾರುವ ಕನಸು ನನಸಾಗುವ ಸಮಯ, ಪ್ರತಿ ಟಿಕೆಟ್‌ ಮೇಲೆ ಸಬ್ಸಿಡಿ ಲಭ್ಯ; ಎಂ.ಬಿ ಪಾಟೀಲ್‌ ಸ್ಪಷ್ಟನೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments