Wednesday, June 12, 2024
HomeTrending Newsಕಾಶಿಯಾತ್ರೆಗೆ ರಾಜ್ಯ ಸರ್ಕಾರದಿಂದ 7500 ರೂಗಳ ಸಹಾಯಧನ, ರಿಯಾಯಿತಿಯಲ್ಲಿ ಸಾಮಾನ್ಯ ಜನರೂ ಸಹ ಯಾತ್ರೆಯನ್ನು ಕೈಗೊಳ್ಳಲು...

ಕಾಶಿಯಾತ್ರೆಗೆ ರಾಜ್ಯ ಸರ್ಕಾರದಿಂದ 7500 ರೂಗಳ ಸಹಾಯಧನ, ರಿಯಾಯಿತಿಯಲ್ಲಿ ಸಾಮಾನ್ಯ ಜನರೂ ಸಹ ಯಾತ್ರೆಯನ್ನು ಕೈಗೊಳ್ಳಲು ಸಹಕಾರಿ

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಕಾಶಿಯಾತ್ರೆ ಮಾಡುವವರಿಗೆ ರಾಜ್ಯ ಸರ್ಕಾರದಿಂದ ಒಂದು ಸಿಹಿ ಸುದ್ದಿಯನ್ನು ನೀಡಲಾಗಿದೆ. ರಾಜ್ಯ ಸರ್ಕಾರವು ಈಗಾಗಲೇ ಕಾಶಿಯಾತ್ರೆ ಮಾಡುವಂತಹ ಯಾತ್ರಿಕರಿಗೆ 5000 ಸಹಾಯಧನವನ್ನು ನೀಡುತ್ತಿತ್ತು. ಅಂತ ಈಗ ಈ ಹಣವನ್ನು ಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.ಇದರಿಂದ ಕಾಶಿಯಾತ್ರೆಯನ್ನು ಸಾಮಾನ್ಯ ಜನರು ಸಹ ಮಾಡಲು ಅನುಕೂಲ ಕೊಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಹಾಗಾದರೆ ಕಾಶಿಯಾತ್ರೆಗೆ ಎಷ್ಟು ರೂಪಾಯಿಗಳ ಹಣವನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೀವು ನೋಡಬಹುದು.

increase in subsidy from Kashiyatra State Govt
increase in subsidy from Kashiyatra State Govt
Join WhatsApp Group Join Telegram Group

ಕಾಶಿಯಾತ್ರೆಗೆ ಸಹಾಯಧನ :

ರಾಜ್ಯ ಸರ್ಕಾರವು ಈಗಾಗಲೇ ಐದು ಸಾವಿರ ರೂಪಾಯಿಗಳ ಸಹಾಯ ಧನವನ್ನು ಕಾಶಿಯಾತ್ರೆ ಮಾಡುವ ಪ್ರಯಾಣಿಕರಿಗೆ ನೀಡುತ್ತಿತ್ತು. ಇದರಿಂದ ಸಾಮಾನ್ಯ ಭಕ್ತರು ಸಹ ಕಾಶಿಯಾತ್ರೆಯನ್ನು ಕೈಗೊಳ್ಳಲು ಸಹಾಯಕವಾಗುತ್ತಿತ್ತು. ರಾಜ್ಯ ಸರ್ಕಾರದ ಮುಖ್ಯ ಉದ್ದೇಶ ಸಾಮಾನ್ಯ ಜನರು ಸಹ ಕೂಡ ಕಾಶಿಯಾತ್ರೆಯನ್ನು ಕೈಗೊಳ್ಳುವಂತೆ ಅವಕಾಶ ಕಲ್ಪಿಸಲು ಸಹಾಯಧನವನ್ನು ಹೆಚ್ಚಳ ಮಾಡಲು ಈಗ ನಿರ್ಧರಿಸಿದೆ.

ಸಹಾಯಧನ ಹೆಚ್ಚಳ :

ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ ಎಂಬ ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಸಾಮಾನ್ಯ ಜನರು ಸಹ ಕಾಶಿಯಾತ್ರೆಯನ್ನು ಕೈಗೊಳ್ಳಲು ಸಹಕಾರಿಯಾಗಿತ್ತು. ಹೀಗೆ ಸಾಮಾನ್ಯ ಜನರು ಸಹ ಕಾಶಿಯಾತ್ರೆಯನ್ನು ಕೈಗೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರವು ಕಾಶಿಯಾತ್ರೆಗೆ 5,000 ದಿಂದ 7,500 ಗಳಿಗೆ ಸಹಾಯಧನವನ್ನು ಹೆಚ್ಚಿಸಲು ನಿರ್ಧರಿಸಿದೆ. ಅದರಂತೆ ಈಗ ರಾಜ್ಯ ಸರ್ಕಾರದಿಂದ ರಿಯಾಯಿತಿ ದರದಲ್ಲಿ ಕರ್ನಾಟಕ ಭಾರತ್ ಗೌರವ ಕಾಶಿದರ್ಶನ ಎಂಬ ಯೋಜನೆಯ ಅಡಿಯಲ್ಲಿ ಸುಮಾರು 450 ಪ್ರಯಾಣಿಕರನ್ನು ಬೆಂಗಳೂರಿನಿಂದ ವಿಶೇಷ ರೈಲು ನಗರದ ಯಶವಂತಪುರ ರೈಲ್ವೆ ನಿಲ್ದಾಣದಿಂದ ಶನಿವಾರದಿಂದ ಕಳುಹಿಸಲಾಗಿದೆ. ರಾಜ್ಯ ಮುಜರಾಯಿ ಸಚಿವರಾದ ಸುದ್ದಿಗೋಷ್ಠಿಯಲ್ಲಿ ರಾಯಲ್ ಚಾಲನೆ ನೀಡಿದ ನಂತರ ಮಾತನಾಡಿದಂತಹ ಅವರು, ಕಾಶಿಯಾತ್ರೆಗೆ ಸಂಬಂಧಿಸಿದಂತೆ ಸಹಾಯಧನವನ್ನು ಹೆಚ್ಚಿಸುವ ಸಂಬಂಧವಾಗಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುವುದರ ಮೂಲಕ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಮುಂದಿನ ಟ್ರಿಪ್ ಆಗಸ್ಟ್ 12ಕ್ಕೆ ಕಾಶಿಯಾತ್ರೆಗೆ ಹೊರಡಲಿದ್ದು, ಇದು ರಾಮೇಶ್ವರಂ ಗಯಾ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೂ ಸಹ ಭೇಟಿ ನೀಡಲು ಅನುವು ಮಾಡಿಕೊಡಲಾಗಿದೆ ಎಂದು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ತಿಳಿಸಿದ್ದಾರೆ.

ಇದನ್ನು ಓದಿ : ಅನ್ನಭಾಗ್ಯ ಯೋಜನೆಯ ಹಣವು ಇನ್ನೂ ಅಕೌಂಟ್ಗೆ ಬಂದಿಲ್ವಾ : ಸ್ಟೇಟಸ್ ನಲ್ಲಿ ದುಡ್ಡು ತೋರಿಸಿದರು ಸಹ ಅಕೌಂಟ್ಗೆ ಹಣ ಬರದೇ ಇರಲು ಅಸಲಿ ಕಾರಣವೇನು?

ಎಂಟು ದಿನಗಳ ಕಾಶಿ ಪ್ರವಾಸ :

ಒಟ್ಟು ಎಂಟು ದಿನಗಳ ಕಾಶಿ ಪ್ರವಾಸವು ಈ ಯೋಜನೆ ಯಾಗಿದ್ದು ಈ ಯೋಜನೆಯ ಅಡಿಯಲ್ಲಿ ಒಬ್ಬರಿಗೆ ಸುಮಾರು 20 ಸಾವಿರ ರೂಪಾಯಿಗಳು ವೆಚ್ಚವಾಗುತ್ತದೆ. ಈ ವೆಚ್ಚದಲ್ಲಿ ರಾಜ್ಯ ಸರ್ಕಾರವು 5000 ಸಹಾಯಧನವನ್ನು ನೀಡುತ್ತದೆ. ಈ ಯೋಜನೆಯ ಅಡಿಯಲ್ಲಿ ಪ್ರಯಾಣಿಕರಿಗೆ ಪ್ರಯಾಣ, ಊಟ, ವಸತಿ ವ್ಯವಸ್ಥೆ, ಧಾರ್ಮಿಕ ಕ್ಷೇತ್ರಗಳ ದರ್ಶನದ ವೆಚ್ಚವು ಸಹ ಈ ಪ್ಯಾಕೇಜ್ ನಲ್ಲಿ ಸೇರಿರುತ್ತದೆ. ನೂತನ ಭೋಗಿಗಳನ್ನು ತೀರ್ಥಕ್ಷೇತ್ರ ಯಾತ್ರೆಗೆ ೇ ರಾಜ್ಯ ಸರ್ಕಾರವು ಖರೀದಿಸಿದ್ದು, ಇದು ಎಲ್ಲಾ ರೀತಿಯ ಅನುಕೂಲವನ್ನು ಪ್ರಯಾಣಿಕರಿಗೆ ಒದಗಿಸಿದೆ ಎಂದು ಹೇಳಿದ್ದಾರೆ. ಒಟ್ಟು ಈ ಪ್ರಯಾಣವು ಎಂಟು ದಿನಗಳ ಯಾತ್ರೆಯಾಗಿದ್ದು, ಈ ಎಂಟು ದಿನಗಳ ಯಾತ್ರೆಯಲ್ಲಿ ಪ್ರಯಾಣಿಕರು ವಾರಣಾಸಿ ಅಯೋಧ್ಯ ಮತ್ತು ಪ್ರಯಾಗ್ ರಾಜ್ ಕ್ಷೇತ್ರಗಳಿಗೆ ತೆರಳಲು ಭಾರತೀಯ ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರವು ಐಆರ್ಸಿಟಿಸಿ ಸಹಯೋಗದೊಂದಿಗೆ 2022 23ನೇ ಸಾಲಿನಿಂದ ವಿಶೇಷ ರೈಲಿನ ಮೂಲಕ ಈ ಯೋಜನೆಯನ್ನು ಕೈಗೊಂಡಿದೆ. ಈ ಯೋಜನೆಯ ಅಡಿಯಲ್ಲಿ ಇದುವರೆಗೂ ಮೂರು ಟ್ರಿಪ್ ಆಗಿದ್ದು ಇದು ನಾಲ್ಕನೇ ಟ್ರಿಪ್ ನ ಯಾತ್ರೆಯಾಗಿದೆ. ಈ ವಿಶೇಷ ರೈಲಿನಲ್ಲಿ ಪ್ರಯಾಣಿಕರಿಗೆ ಅಡುಗೆ ಮನೆ ವೈದ್ಯರ ತಂಡ ಇರಲಿದ್ದು, ಸಿಸಿ ಕ್ಯಾಮೆರಾ ಗಳನ್ನು ಪ್ರತಿ ಭೋಗಿಯಲ್ಲಿಯೂ ಸಹ ಇರಿಸಲಾಗಿದೆ. ನಲ್ಲಿ ಸುಮಾರು 100 ಸಿಬ್ಬಂದಿಗಳು ಇದ್ದು ಇವರಿಗಾಗಿ ಪ್ರತ್ಯೇಕ ಬೋಗಿಯ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

ಹೀಗೆ ಕಾಶಿ ಯಾತ್ರೆಯನ್ನು ಮಾಡುವಂತಹ ಪ್ರಯಾಣಿಕರಿಗೆ ರಾಜ್ಯ ಸರ್ಕಾರವು ಹೊಸ ಯೋಜನೆಯನ್ನು ಪ್ರಾರಂಭಿಸಿದ್ದು ಈ ಯೋಜನೆಯಡಿಯಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಪ್ರಯಾಣಿಕರು ಕಾಶಿಯಾತ್ರೆ ಹಾಗೂ ವಿವಿಧ ಪುಣ್ಯಕ್ಷೇತ್ರಗಳನ್ನು ನೋಡಿ ಬರಬಹುದಾಗಿದೆ. ಸರ್ಕಾರದ ಪುಣ್ಯಕ್ಷೇತ್ರ ಯೋಜನೆಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಅನ್ನಭಾಗ್ಯ ಯೋಜನೆಯ ಹಣವು ಇನ್ನೂ ಅಕೌಂಟ್ಗೆ ಬಂದಿಲ್ವಾ : ಸ್ಟೇಟಸ್ ನಲ್ಲಿ ದುಡ್ಡು ತೋರಿಸಿದರು ಸಹ ಅಕೌಂಟ್ಗೆ ಹಣ ಬರದೇ ಇರಲು ಅಸಲಿ ಕಾರಣವೇನು?

ತಿರುಪತಿಯಲ್ಲಿ ಮುಡಿಕೊಡಲು ಕಾರಣವಾದ ವಿಚಾರ ಯಾವುದು? ತಿರುಪತಿಯಲ್ಲಿ ದುಡ್ಡನ್ನು ಹೇಗೆ ಎಣಿಸುತ್ತಾರೆ ?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments