Thursday, July 25, 2024
HomeTrending Newsನಿಮ್ಮ ಹಳೆಯ ಫೋಟೋಗಳು ಡಿಲೀಟ್ ಆಗಿದ್ಯಾ? ಹಾಗಿದ್ರೆ ಹೀಗೆ ಮಾಡಿ 2 ನಿಮಿಷದಲ್ಲಿ ಎಲ್ಲಾ ಫೋಟೋಸ್‌...

ನಿಮ್ಮ ಹಳೆಯ ಫೋಟೋಗಳು ಡಿಲೀಟ್ ಆಗಿದ್ಯಾ? ಹಾಗಿದ್ರೆ ಹೀಗೆ ಮಾಡಿ 2 ನಿಮಿಷದಲ್ಲಿ ಎಲ್ಲಾ ಫೋಟೋಸ್‌ ಮರಳಿ ಸಿಗುತ್ತೆ!

ನಮಸ್ಕಾರ ಸ್ನೇಹಿತರೆ ಈಗ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ನಿಮ್ಮ ಹಳೆಯ ಫೋಟೋ ಡಿಲೀಟ್ ಆಗಿದ್ದರೆ ಅದನ್ನು ಮರಳಿ ಹೇಗೆ ಪಡೆಯುವುದು ಎಂಬುದರ ಬಗ್ಗೆ. ಇಂದಿನ ಯುಗದಲ್ಲಿ ಎಲ್ಲರೂ ಸಹ ಸ್ಮಾರ್ಟ್ ಫೋನ್ ಅನ್ನು ಹೆಚ್ಚಾಗಿ ಬಳಸುತ್ತಿದ್ದು ಅದರಲ್ಲಿ ಫೋಟೋ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. ಅಲ್ಲದೆ ಸ್ಮಾರ್ಟ್ಫೋನ್ ಬಂದ ನಂತರ ಫೋಟೋ ತೆಗೆದುಕೊಳ್ಳುವುದು ಹೆಚ್ಚಾಯಿತು ಹಾಗೂ ಸರಳವಾದ ವಿಧಾನವು ಆಯಿತು. ಬರೀ ಮೆಮೊರಿಗಾಗಿ ಹಾಗೂ ಆಸಕ್ತಿ ಗಾಗಿ ಫೋಟೋಗಳನ್ನು ತೆಗೆಯುವುದು ಮಾತ್ರವಲ್ಲದೆ ಫೋಟೋವನ್ನು ಡಾಕ್ಯುಮೆಂಟ್ ಆಗಿಯೂ ಸಹ ತೆಗೆಯುತ್ತಾರೆ. ಆದರೆ ಈ ಫೋಟೋಗಳು ಮೆಮೊರಿ ಫುಲ್ ಆದಾಗ ಡಿಲೀಟ್ ಮಾಡಬೇಕಾಗುತ್ತದೆ ಹಾಗೆ ಈಗ ಡಿಲೀಟ್ ಆದ ಫೋಟೋಗಳನ್ನು ಹೇಗೆ ಪಡೆಯುವುದು ಎಂಬುದರ ಮಾಹಿತಿಯನ್ನು ನಿಮಗೆ ತಿಳಿಸಲಾಗುತ್ತದೆ.

Recover deleted photo
Recover deleted photo
Join WhatsApp Group Join Telegram Group

ಮೊಬೈಲ್ ಫೋನ್ನಲ್ಲಿ ಫೋಟೋ ತೆಗೆದುಕೊಳ್ಳುವುದು :

ಸ್ಮಾರ್ಟ್ ಫೋನ್ ಗಳು ಫೋಟೋವನ್ನು ತೆಗೆದುಕೊಳ್ಳಲು ಹೆಚ್ಚು ಅನುಕೂಲವಾಗಿರುವುದನ್ನು ನಾವು ಕಾಣಬಹುದಾಗಿದೆ. ಅದರಂತೆ ನಾವು ಸ್ಮಾರ್ಟ್ ಫೋನ್ನಲ್ಲಿ ಫೋಟೋ ತೆಗೆದುಕೊಂಡಾಗ ಮೆಮೊರಿ ಫುಲ್ ಆದ ಕಾರಣ ಆ ಫೋಟೋಗಳನ್ನು ಮಿಸ್ ಆಗಿ ಡಿಲೀಟ್ ಮಾಡಿರುತ್ತೇವೆ. ಆ ಫೋಟೋಗಳು ಡಿಲೀಟ್ ಆಗಿರುವುದರ ಬಗ್ಗೆ ನಮಗೆ ಸ್ವಲ್ಪ ದಿನಗಳ ನಂತರ ಬೇಕಾಗಿರುತ್ತದೆ ಎಂದು ಪಶ್ಚಾತಾಪ ಪಡುತ್ತೇವೆ. ಅಂತಹ ಸಮಯದಲ್ಲಿ ಮತ್ತೆ ಮರಳಿ ಆ ಫೋಟೋಗಳನ್ನು ಪಡೆಯಲು ಎಲ್ಲಾ ಮಾರ್ಗಗಳನ್ನು ಪ್ರಯತ್ನಿಸುತ್ತೇವೆ. ಅದರಂತೆ ಈಗ ಕೆಲವೊಂದು ಪ್ಲೇಸ್ಟೋರ್ ನಲ್ಲಿ ಫೋಟೋವನ್ನು ಮರಳಿ ಪಡೆಯಲು ಇರುವುದನ್ನು ನೋಡಬಹುದಾಗಿದೆ. ಅಂತಹ ಆಪ್ ಗಳ ಮೂಲಕ ನಾವು ಫೋಟೋವನ್ನು ವಾಪಸ್ ಪಡೆಯಬಹುದು ಎಂದು ಹಲವರು ಸಲಹೆ ನೀಡಿರುತ್ತಾರೆ.

ಫೋಟೋ ಡೌನ್ಲೋಡ್ ಆಪ್ :

ನಾವು ಆ ಫೋಟೋ ಡೌನ್ಲೋಡ್ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಂಡರೂ ಸಹ ಕೆಲವೊಂದು ಫೋಟೋಗಳನ್ನು ಮರಳಿ ಪಡೆಯಲು ಸಾಧ್ಯವಾಗುವುದಿಲ್ಲ ಅಥವಾ ಡೌನ್ಲೋಡ್ ಮಾಡಿದ ನಂತರ ಕೇವಲ ಡಿಲೀಟ್ ಆಗಿರುವಂತಹ ಫೋಟೋಗಳು ಮಾತ್ರ ವಾಪಸ್ ಪಡೆಯುವ ಅವಕಾಶ ಸಿಗುತ್ತದೆ. ಆದರೂ ಸಹ ನಮಗೆ ನಮ್ಮ ಹಳೆಯ ಫೋಟೋಗಳನ್ನು ಪಡೆಯಲು ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ನಮ್ಮ ಮೊಬೈಲ್ ನಲ್ಲಿ ಇರುವ ಸೆಟ್ಟಿಂಗ್ ಮೂಲಕ ನಮ್ಮ ಹಳೆಯ ಫೋಟೋಗಳನ್ನು ವಾಪಸ್ ಪಡೆಯಬಹುದು ಎಂಬುದರ ಮಾಹಿತಿ ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಹಾಗಾದರೆ ಹೇಗೆ ನಾವು ನಮ್ಮ ಸೆಟ್ಟಿಂಗ್ಸ್ ಮೂಲಕವೇ ಹಳೆಯ ಫೋಟೋಗಳನ್ನು ಡೌನ್ಲೋಡ್ ಮಾಡುವುದು ಎಂಬುದನ್ನು ಈ ಕೆಳಗಿನ ಹಂತಗಳ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಇದನ್ನು ಓದಿ : ತಿರುಪತಿಯಲ್ಲಿ ಮುಡಿಕೊಡಲು ಕಾರಣವಾದ ವಿಚಾರ ಯಾವುದು? ತಿರುಪತಿಯಲ್ಲಿ ದುಡ್ಡನ್ನು ಹೇಗೆ ಎಣಿಸುತ್ತಾರೆ ?

ಮೊಬೈಲ್ ಸೆಟ್ಟಿಂಗ್ ನ ಮೂಲಕ ನಮ್ಮ ಹಳೆಯ ಫೋಟೋಗಳನ್ನು ಮರಳಿ ಪಡೆಯಬಹುದಾಗಿದೆ. ಅದು ಹೇಗೆಂದರೆ :

ಪ್ರತಿಯೊಬ್ಬರ ಮೊಬೈಲ್ ನಲ್ಲಿಯೂ ಸಹ ಫೈಲ್ ಮ್ಯಾನೇಜರ್ ಅಥವಾ ಮೈ ಫೈಲ್ ಎನ್ನುವ ಆಪ್ಷನ್ ಇದ್ದೇ ಇರುತ್ತದೆ. ಆ ಡಿವೈಸ್ ಅನ್ನು ಸೆಲೆಕ್ಟ್ ಮಾಡಿದ ನಂತರ ಸೆಟ್ಟಿಂಗ್ಸ್ ಗೆ ಹೋಗಿ ಆಗ ಡಿಸ್ಪ್ಲೇ ಹಿಡನ್ ಫೈಲ್ಸ್ ಎನ್ನುವ ಆಪ್ಷನ್ ಕಾಣಿಸುತ್ತದೆ. ಆಗ ಆಪ್ಷನ್ ಅನ್ನು ಡಿಸೇಬಲ್ ಆಗಿದ್ದರೆ ಅನೇಬಲ್ ಮಾಡಿಕೊಳ್ಳಬೇಕಾಗುತ್ತದೆ ಅಂದರೆ ಆಫ್ ಆಗಿರುವುದನ್ನು ಆನ್ ಮಾಡಿ ಕೊಳ್ಳಬೇಕಾಗುತ್ತದೆ.

ಆನ್ ಮಾಡಿದ ನಂತರ ಬ್ಯಾಕ್ ಗೆ ಬಂದು ಡಿವೈಸ್ ಸ್ಟೋರೇಜ್ ಕ್ಲಿಕ್ ಮಾಡಿ ಸ್ಲಿಪ್ ಮಾಡುತ್ತಾ ಹೋದ ನಂತರ ಡಿಸಿಐಎಂ ಆಪ್ಶನ್ ಕಾಣಿಸಿತ್ತದೆ. ಈ ಆಕ್ಷನ್ ಎಲ್ಲಾ ಮೊಬೈಲಲ್ಲಿಯೂ ಸಹ ಇರುವುದನ್ನು ಕಾಣಬಹುದಾಗಿದೆ. ಈ ಡಿಸಿಐಎಂ ಟ್ಯಾಪ್ ಮಾಡಿದರೆ ಪಿಚ್ಚರ್ ಎನ್ನುವ ಫೋಲ್ಡರ್ ಕಾಣುವುದನ್ನು ನೋಡಬಹುದು. ಒಂದು ವೇಳೆ ಈ ಒಪ್ಶನ್ ಇಲ್ಲದಿದ್ದರೆ ಹಿಂದಿನ ಮೆನುಗೆ ಬಂದು ಮಾಡುತ್ತಾ ಹೋದ ನಂತರ ಡಿಸಿಐಎಂ ನಂತರ ಆಪ್ಷನ್ಗಳಲ್ಲಿ ಪಿಕ್ಚರ್ಸ್ ಫೋಲ್ಡರ್ ಎಂದು ಕಾಣಿಸುತ್ತದೆ. ಪಿಚ್ಚರ್ ಫೋಲ್ಡರ್ ಮೇಲೆ ಟ್ಯಾಪ್ ಮಾಡಿದ ನಂತರ ಮೂರನೆಯ ಆಯ್ಕೆಯಲ್ಲಿ ಡಾಟ್ ತಮ್ನೈನ್ಸ್ ಫೋಲ್ಡರ್ ಕಾಣ ಸಿಗುತ್ತದೆ. ಆ ಫೋಲ್ಡರ್ ನಲ್ಲಿ ನಮ್ಮ ಫೋನಿನಲ್ಲಿ ಡಿಲೀಟ್ ಆಗಿರುವಂತಹ ಎಲ್ಲಾ ಫೋಟೋಗಳು ಕಾಣಿಸಿತ್ತವೆ. ಅದಾದ ನಂತರ ನೀವು ಯಾವ ಫೋಟೋ ಬೇಕು ಎಂಬುದನ್ನು ಸೆಲೆಕ್ಟ್ ಮಾಡಿ ಮಾರ್ಕ್ ಆಪ್ಷನ್ ಮೇಲೆ ಸೆಲೆಕ್ಟ್ ಆದ ನಂತರ ಎಲ್ಲಾ ಫೋಟೋಗಳನ್ನು ಸೆಲೆಕ್ಟ್ ಮಾಡಿ ಶೇರ್ ಆಯ್ಕೆಯ ಮೂಲಕ ಬೇರೆಯವರಿಗೆ ಕಳುಹಿಸಬಹುದು ಅಥವಾ ಮೂ ಆಪ್ಷನ್ ಮೂಲಕ ಯಾವುದಾದರೂ ಫೋಲ್ಡರ್ ಗೆ ಕಳುಹಿಸಿಕೊಳ್ಳಬಹುದಾಗಿದೆ. ಹೀಗೆ ನಮ್ಮ ಹಳೆಯ ಫೋಟೋಗಳು ಡಿಲೀಟ್ ಆಗಿದ್ದರೆ ಅಂತಹ ಫೋಟೋಗಳನ್ನು ಮರಳಿ ಪಡೆಯಬಹುದಾಗಿದೆ.

ಹೀಗೆ ಇಂತಹ ಫೋಟೋಗಳನ್ನು ನಾವು ಹೆಚ್ಚಾಗಿ ಹುಡುಕುತ್ತೇವೆ ಹಾಗಾಗಿ ಈ ಹಳೆಯ ಫೋಟೋಗಳು ಡಿಲೀಟ್ ಆಗಿರುವುದನ್ನು ಹೇಗೆ ಮರಳಿ ಪಡೆಯುವುದು ಎಂಬ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗು ಸಂಬಂಧಿಕರಿಗೂ ಸಹ ಶೇರ್ ಮಾಡಿವುದರ ಮೂಲಕ ಅವರು ಸಹ ತಮ್ಮ ಹಳೆಯ ಫೋಟೋಗಳನ್ನು ಮರಳಿ ಪಡೆಯುವಂತೆ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ನಿಮ್ಮ ಹಳೆಯ 10 ರೂಪಾಯಿಯಿಂದ ಲಕ್ಷ ಲಕ್ಷ ಹಣ ಪಡೆಯಿರಿ : ಈಗ ಹಳೆಯ ಹತ್ತು ರೂಪಾಯಿಗೆ ಭಾರಿ ಡಿಮ್ಯಾಂಡ್

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಮತ್ತೊಂದು ಹೊಸ ನಿಯಮ! ಮನೆ ಯಜಮಾನಿ ಮೃತಪಟ್ಟಿದ್ದರೆ ಆ ಹಣ ಯಾರಿಗೆ ಸಿಗಲಿದೆ?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments