Saturday, July 27, 2024
HomeTrending Newsತಿರುಪತಿಯಲ್ಲಿ ಮುಡಿಕೊಡಲು ಕಾರಣವಾದ ವಿಚಾರ ಯಾವುದು? ತಿರುಪತಿಯಲ್ಲಿ ದುಡ್ಡನ್ನು ಹೇಗೆ ಎಣಿಸುತ್ತಾರೆ ?

ತಿರುಪತಿಯಲ್ಲಿ ಮುಡಿಕೊಡಲು ಕಾರಣವಾದ ವಿಚಾರ ಯಾವುದು? ತಿರುಪತಿಯಲ್ಲಿ ದುಡ್ಡನ್ನು ಹೇಗೆ ಎಣಿಸುತ್ತಾರೆ ?

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷ ಏನೆಂದರೆ, ಪ್ರಪಂಚದ ಅತಿ ದೊಡ್ಡ ದೇವಾಲಯಗಳಲ್ಲಿ ಒಂದಾಗಿರುವ ಶ್ರೀ ತಿರುಪತಿ ತಿರುಮಲ ದೇವಾಲಯದ ಬಗ್ಗೆ. ಶ್ರೀ ತಿರುಪತಿ ತಿರುಮಲ ದೇವಾಲಯವು ಪ್ರಪಂಚದಲ್ಲಿರುವ ಅತಿ ದೊಡ್ಡ ದೇವಾಲಯಗಳಲ್ಲಿ ಒಂದಾಗಿದ್ದು, ಇದು ಶ್ರೀ ಮಹಾವಿಷ್ಣು ಕಲಿಯುಗದಲ್ಲಿ ಪ್ರಜೆಗಳನ್ನು ಕಾಪಾಡಲೆಂದೆ ಎತ್ತಿದ ಅವತಾರವೇ ಶ್ರೀ ವೆಂಕಟೇಶ್ವರ ಸ್ವಾಮಿಯಾಗಿದೆ. ವೈಕುಂಠ ಎಂದು ತಿರುಪತಿಗೆ ಕಲಿಯುಗದಲ್ಲಿ ಕರೆಯುವುದರಲ್ಲಿ ಯಾವ ತಪ್ಪು ಸಹ ಇಲ್ಲ. ವೆಂಕಟೇಶ್ವರ ಸ್ವಾಮಿಯನ್ನು ತಿರುಪತಿಯಲ್ಲಿ ತುಂಬಾ ಹತ್ತಿರದಿಂದ ದರ್ಶನ ಪಡೆದುಕೊಂಡರೆ ಜೀವಂತವಾಗಿ ಸಾಕ್ಷಾತ್ ವೆಂಕಟೇಶ್ವರನೇ ನಿಂತಿರುವ ಹಾಗೆ ಭಾಸವಾಗುತ್ತದೆ. ಅದರಂತೆ ಈಗ ಶ್ರೀ ತಿರುಪತಿ ತಿರುಮಲ ದೇವಾಲಯಕ್ಕೆ ಸಂಬಂಧಿಸಿದಂತೆ ಕೆಲವೊಂದಿಷ್ಟು ನೈಜ ವಿಚಾರಗಳ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Interesting facts about Tirupati Temple
Interesting facts about Tirupati Temple
Join WhatsApp Group Join Telegram Group

ತಿರುಪತಿಯಲ್ಲಿ ಭಕ್ತರು ಮುಡಿಕೊಡಲು ನಿಜವಾದ ಕಾರಣ ಏನೆಂದರೆ :

ಶ್ರೀ ತಿರುಪತಿ ತಿರುಮಲ ದೇವಾಲಯದಲ್ಲಿ ವೆಂಕಟೇಶ್ವರ ಸ್ವಾಮಿಯ ವಿಗ್ರಹದ ತಲೆಯ ಮೇಲೆ ನಿಜವಾದ ಕೂದಲುಗಳು ಇವೆ. ಆದರೆ ಆ ಕೂದಲುಗಳು ತಲೆಯ ಮೇಲೆ ಇರುವ ಕಿರೀಟ ದ ಕಾರಣ ಆ ಕೂದಲು ಯಾರಿಗೂ ಸಹ ಕಾಣುವುದಿಲ್ಲ ಎಂದು ಹಲವಾರು ಜನರು ಈ ವಿಷಯವನ್ನು ಕೇಳಿರುತ್ತೀರಾ. ಆದರೆ ಶ್ರೀ ತಿರುಪತಿ ದೇವಾಲಯ ಸಂಸ್ಥೆಯ ಪ್ರಧಾನ ಅರ್ಚಕರು ಇದು ಶುದ್ಧ ಸುಳ್ಳು ಎಂದು ತಿಳಿಸಿದ್ದಾರೆ. ತಿರುಪತಿ ದೇವಸ್ಥಾನದಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿ ಒಂದು ರಹಸ್ಯಮಯವಾದ ಸ್ಥಳವಿದೆ. ಈ ಸ್ಥಳ ಯಾರಿಗೂ ತಿಳಿಯದೆ ಇರುವ ಒಂದು ಊರಿನಲ್ಲಿ ಇದೆ. ಈ ಊರಿನಲ್ಲಿ ಯಾರು ಸಹ ವಾಸ ಮಾಡುವುದಿಲ್ಲ ಕೇವಲ ಆ ಊರಿನಲ್ಲಿ ಬೆಳೆಯುವ ಹೂವುಗಳನ್ನು ಮಾತ್ರ ತೆಗೆದುಕೊಂಡು ಬಂದು ತಿರುಪತಿ ದೇವಾಲಯದ ಶ್ರೀ ವೆಂಕಟೇಶ್ವರನ ಅಲಂಕಾರಕ್ಕೆ ಬಳಸಲಾಗುತ್ತದೆ ಎನ್ನುವ ನಂಬಿಕೆಯೂ ಸಹ ತುಂಬಾ ಜನರಲ್ಲಿ ಇದೆ ಆದರೆ ಈ ವಿಚಾರವೂ ಸಹ ಶುದ್ಧ ಸುಳ್ಳು ಎಂದು ಹೇಳಲಾಗಿದೆ.

ತಿರುಪತಿ ದರ್ಶನವನ್ನು ಪಡೆಯಲು ಎಲ್ಲರೂ ತಿರುಪತಿಗೆ ಹೋದಾಗ ಸಾಮಾನ್ಯವಾಗಿ ತಪ್ಪದೆ ಮುಡಿಯನ್ನು ಕೊಟ್ಟು ಬರುತ್ತಾರೆ. ಎಲ್ಲರೂ ಭಕ್ತಿಯಿಂದ ಈ ರೀತಿ ತಮ್ಮ ತಲೆ ಕೂದಲನ್ನು ಕೊಟ್ಟು ಹರಕೆಯನ್ನು ತೀರಿಸಿ ಬರುವುದನ್ನು ಕಾಣಬಹುದಾಗಿದೆ. ಆದರೆ ಭಕ್ತರು ತಿರುಪತಿಗೆ ಹೋದಾಗ ಅಲ್ಲಿ ಮುಡಿಯನ್ನು ಕೊಡುವುದರ ಹಿಂದೆ ಒಂದು ಕಾರಣ ಇದೆ ಎಂದು ಹೇಳಲಾಗುತ್ತದೆ. ಆ ಕಾರಣವೇನೆಂದರೆ ಲಕ್ಷ್ಮಿ ದೇವಿಯು ವೆಂಕಟೇಶ್ವರ ಸ್ವಾಮಿಯನ್ನು ಬಿಟ್ಟು ಹೋದಾಗ ಲಕ್ಷ್ಮಿಯನ್ನು ಹುಡುಕುತ್ತಾ ಬಂದ ವೆಂಕಟೇಶ್ವರ ಸ್ವಾಮಿಯ ದಣಿದು ಒಂದು ಹುತ್ತದ ಒಳಗೆ ಕುಳಿತುಬಿಡುತ್ತಾರೆ. ಆಗ ಕಾಮಧೇನು ವೆಂಕಟೇಶ್ವರ ಆಯಸ್ಸು ಗೊಂಡಿರುವುದನ್ನು ಕಂಡು ವೆಂಕಟೇಶ್ವರ ಸ್ವಾಮಿಗೆ ಹಾಲನ್ನು ಕುಡಿಸುವಾಗ ಆ ದೃಶ್ಯವನ್ನು ಕಂಡ ಕಾಮಧೇನುವಿನ ಮಾಲೀಕ ಕುಪಿ ತಗೊಂಡು ಆ ಕಾಮಧೇನುವಿನ ತಲೆಗೆ ಕಡಿಯಲೆಂದು ಕೊಡಲಿಯಿಂದ ಬೀಸುತ್ತಾರೆ ಆಗ ಆ ಕೊಡಲಿಯೋ ವೆಂಕಟೇಶ್ವರನ ತಲೆಗೆ ಬಿದ್ದು ಗಾಯವಾದ ಕಾರಣ, ಸ್ವಾಮಿ ವೆಂಕಟೇಶ್ವರನು ತನ್ನ ತಲೆಯಲ್ಲಿ ಇದ್ದಂತಹ ಸಾಕಷ್ಟು ಕೂದಲನ್ನು ಕಳೆದುಕೊಳ್ಳುತ್ತಾರೆ. ಅಲ್ಲದೆ ವೆಂಕಟೇಶ್ವರ ಸ್ವಾಮಿಯು ತಿರುಪತಿ ಬೆಟ್ಟದ ಮೇಲೆ ಹಾಗೆಯೇ ಮಲಗಿರುತ್ತಾರೆ.

ಆಗ ವೆಂಕಟೇಶ್ವರ ಸ್ವಾಮಿ ಕೂದಲನ್ನು ಕಳೆದುಕೊಂಡು ಮಲಗಿರುವುದನ್ನು ಸಂದರ್ಭದಲ್ಲಿ ಯುವರಾಣಿಯಾದ ನೀಲದೇವಿ ನೋಡಿ ನೊಂದುಕೊಳ್ಳುತ್ತಾಳೆ. ವೆಂಕಟೇಶ್ವರ ಸ್ವಾಮಿಯ ಹತ್ತಿರ ಬಂದು ನೀಲಾದೇವಿಯು ತನ್ನ ತಲೆಯಲ್ಲಿದ್ದ ಒಂದು ಭಾಗದ ಕೂದಲನ್ನು ಕಿತ್ತು ತುಂಬಾ ವಿನಯದಿಂದ ವೆಂಕಟೇಶ್ವರ ಸ್ವಾಮಿಯ ಕೂದಲು ಕಿತ್ತುಹೋದ ಜಾಗದಲ್ಲಿ ಭಕ್ತಿ ಭಾವದಿಂದ ಇಡುತ್ತಾಳೆ.

ಈ ಎಲ್ಲ ಸಂದರ್ಭ ಮುಗಿದ ನಂತರ ಎಚ್ಚರಗೊಂಡ ವೆಂಕಟೇಶ್ವರ ಸ್ವಾಮಿಯು ಕಣ್ಣು ಬಿಟ್ಟು ಪಕ್ಕದಲ್ಲಿ ಇದ್ದಂತಹ ಒಂದು ನೀರಿನ ಕೊಳದಲ್ಲಿ ತನ್ನ ಮುಖದ ಪ್ರತಿಬಿಂಬವನ್ನು ನೋಡುತ್ತಾ, ವೆಂಕಟೇಶ್ವರ ಸ್ವಾಮಿಯು ತನ್ನ ತಲೆಯ ಕೂದಲು ಇಲ್ಲದೆ ಇರುವಂತಹ ಜಾಗದಲ್ಲಿ ಮತ್ತೆ ಕೂದಲು ಬಂದಿರುವುದನ್ನು ಕಂಡು ಅಲ್ಲದೆ ನೀಲಾ ದೇವಿಯ ತಲೆಯಲ್ಲಿ ರಕ್ತ ಬರುತ್ತಿರುವುದನ್ನು ಕಂಡು ನೀಲದೇವಿಗೆ ಅವಳ ಕೂದಲು ನೀಡಿರುವುದು ವೆಂಕಟೇಶ್ವರ ಸ್ವಾಮಿಗೆ ತಿಳಿಯುತ್ತದೆ. ಹೀಗೆ ನೀಲಾ ದೇವಿಯ ಭಕ್ತಿಗೆ ಮೆಚ್ಚಿದಂತಹ ವೆಂಕಟೇಶ್ವರ ಸ್ವಾಮಿಯು ನಿನ್ನ ಕೂದಲನ್ನು ಮರಳಿ ತೆಗೆದುಕೋ ಎಂದಾಗ ನಿನ್ನನ್ನು ನೋಡಲು ಬಂದಂತಹ ಭಕ್ತರು ಭಕ್ತಿಯಿಂದ ಅವರ ಮುಡಿಯನ್ನು ಅರ್ಪಿಸಿದರೆ ಸಾಕು ಅದೇ ನನಗೆ ನನ್ನ ಕೂದಲನ್ನು ಹಿಂದಿರುಗಿಸಿ ಕೊಟ್ಟಂತೆ ಎಂದು ನೀಲದೇವಿಯು ಹೇಳುತ್ತಾರೆ. ಆಗ ಶ್ರೀ ವೆಂಕಟೇಶ್ವರ ಸ್ವಾಮಿಯು ನಂದ ದರ್ಶನವನ್ನು ಪಡೆಯಲು ಬಂದಂತಹ ಎಲ್ಲಾ ಭಕ್ತರು ಅವರ ಮುಡಿಯನ್ನು ಕೊಟ್ಟರೆ ಅವರ ಕೋರಿಕೆಗಳೆಲ್ಲ ತಿರಿ ಅವರ ಪಾಪಕರ್ಮಗಳಿಂದ ಅವರು ಮುಕ್ತಿಗೊಳ್ಳುತ್ತಾರೆ ಎನ್ನುವ ಮಾತನ್ನು ಆ ಸಂದರ್ಭದಲ್ಲಿ ಹೇಳುತ್ತಾರೆ. ಹಾಗಾಗಿ ತಿರುಪತಿಗೆ ಬಂದಂತಹ ಎಲ್ಲಾ ಭಕ್ತರು ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳುವ ಸಲುವಾಗಿ ಹಾಗೂ ತಮ್ಮ ಪಾಪಕರ್ಮಗಳನ್ನು ನಿವಾರಿಸಿಕೊಳ್ಳುವ ಸಲುವಾಗಿ ಗುಡಿಯನ್ನು ಕೊಡುತ್ತಾರೆ.

ಇದನ್ನು ಓದಿ : ಇದೀಗ ಬಂದ ಸುದ್ದಿ: ಪುರುಷರಿಗೂ ಬಂಪರ್ ಗಿಫ್ಟ್ ನೀಡಿದ ಸರ್ಕಾರ! ಉಚಿತ ಬಸ್ ಪ್ರಯಾಣ ಪುರುಷರಿಗೂ ಲಭ್ಯ

ಮುಡಿಯಿಂದ ಬರುವ ಆದಾಯ :

ತಿರುಪತಿ ದೇವಸ್ಥಾನಕ್ಕೆ ಬಂದಂತಹ ಭಕ್ತಾದಿಗಳು ಕೊಡುವ ಕೂದಲಿನಿಂದ ವರ್ಷಕ್ಕೆ ಸುಮಾರು 120 ಕೋಟಿಗಿಂತ ಹೆಚ್ಚಿನ ಹಣವು ತಿರುಪತಿ ದೇವಸ್ಥಾನಕ್ಕೆ ಲಾಭವಾಗಿ ಬರುತ್ತಿದೆ. ಪ್ರತಿ ವರ್ಷವೂ ತಿರುಪತಿಗೆ ಸಾವಿರ ಕೋಟಿಗಿಂತ ಹೆಚ್ಚು ಹಣ ಬರುತ್ತಿದ್ದು ಭಕ್ತರು ಸಹ ಹುಂಡಿಯಲ್ಲಿ ಹಾಕುವಂತಹ ಹಣವು ಹೆಚ್ಚಾಗಿರುವ ಕಾರಣ ಈ ಹಣವನ್ನು ಎಣಿಕೆ ಮಾಡಲು ಸಾಕಷ್ಟು ದಿನಗಳು ಹಿಡಿಯುತ್ತದೆ ಎಂದು ಅಲ್ಲಿನ ಪ್ರಧಾನ ಅರ್ಚಕರು ಹೇಳುತ್ತಾರೆ.

ಹೀಗೆ ಪ್ರಪಂಚದ ಅತ್ಯಂತ ದೊಡ್ಡ ಹಾಗು ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಶ್ರೀ ತಿರುಪತಿ ತಿರುಮಲ ದೇವಾಲಯವು ಒಂದು ರೀತಿಯಲ್ಲಿ ಶ್ರೀಮಂತ ದೇವಾಲಯ ಎಂದು ಹೇಳಲಾಗಿದೆ. ಅಲ್ಲದೇ ಈ ದೇವಸ್ಥಾನಕ್ಕೆ ಕೋಟ್ಯಾಂತರ ಭಕ್ತರು ಪ್ರತಿ ವರ್ಷವೂ ಬರುವುದನ್ನು ಕಾಣಬಹುದಾಗಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ಶೇರ್ ಮಾಡಿ ಅಲ್ಲದೆ ನಿಮ್ಮ ಸ್ನೇಹಿತರಲ್ಲಿ ಅಥವಾ ಸಂಬಂಧಿಕರಲ್ಲಿ ಯಾರಾದರೂ ತಿರುಪತಿ ದೇವರ ದೊಡ್ಡ ಭಕ್ತರಾಗಿದ್ದರೆ ಅವರಿಗೂ ಸಹ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

BPL ಕಾರ್ಡ್‌ ಇದ್ದವರಿಗೆ ಮತ್ತೊಂದು ಹೊಸ ಕಾರ್ಡ್!‌ ಸರ್ಕಾರದಿಂದ ಹೊಸ ಯೋಜನೆ ಜಾರಿ

ಮೋದಿಯಿಂದ ದೇಶದ ರೈತರಿಗೆ ಬಿಗ್ ಶಾಕ್..! ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಇನ್ನಿಲ್ಲ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments