Friday, July 26, 2024
HomeNewsಸರ್ಕಾರದ ಗ್ಯಾರೆಂಟಿ ಯೋಜನೆ ಪ್ರತಿಪಕ್ಷಗಳಿಗೆ ಚಿಂತೆ, ಅಧಿವೇಶನದ ದಿನದಲ್ಲಿ ಬಿಜೆಪಿ ಸದಸ್ಯರ ಗಲಾಟೆ

ಸರ್ಕಾರದ ಗ್ಯಾರೆಂಟಿ ಯೋಜನೆ ಪ್ರತಿಪಕ್ಷಗಳಿಗೆ ಚಿಂತೆ, ಅಧಿವೇಶನದ ದಿನದಲ್ಲಿ ಬಿಜೆಪಿ ಸದಸ್ಯರ ಗಲಾಟೆ

ನಮಸ್ಕಾರ ಸ್ನೇಹಿತರೇ ಕರ್ನಾಟಕ ವಿಧಾನಸಭೆ ಅಧಿವೇಶನದ ಎರಡನೇ ದಿನದಂದು ಬಿಜೆಪಿ ಸದಸ್ಯರು ತೀವ್ರ ಗಲಾಟೆಯನ್ನು ಮಾಡಿದ್ದಾರೆ. ಅದರಂತೆ ಬಿಜೆಪಿ ಸದಸ್ಯರು ಕಲಾಪದಲ್ಲಿ ಜೋರಾಗಿ ಸೃಷ್ಟಿಸಿದ್ದಾರೆ. ಬಿಜೆಪಿ ಸದಸ್ಯರು ಮಾಡಿದಂತಹ ಗಲಾಟೆಯ ಸಂಪೂರ್ಣ ಮಾಹಿತಿಯನ್ನು ನೀವು ಇದೀಗ ನೋಡಬಹುದು.

Karnataka Assembly session
Karnataka Assembly session
Join WhatsApp Group Join Telegram Group

ಬಿಜೆಪಿ ಸದಸ್ಯರ ಗದ್ದಲ :

ಕರ್ನಾಟಕ ವಿಧಾನ ಸಭೆಯ ಎರಡನೇ ದಿನದ ಅಧಿವೇಶನದಲ್ಲಿ ಬಿಜೆಪಿ ಸದಸ್ಯರು ತೀವ್ರ ಗಲಾಟೆಯನ್ನು ಸೃಷ್ಟಿಸಿದ್ದು, ಇದು ಅಧಿವೇಶನದ ಮೇಲೆ ಹೆಚ್ಚು ಪ್ರಭಾವ ಬೀರಿದೆ. ನಿಳುವಳಿ ಸೂಚನೆಯ ಮೇಲೆ ಬಿಜೆಪಿ ನಾಯಕರು ಅವಕಾಶ ನೀಡುವಂತೆ ಪ್ರಸ್ತಾಪಿಸಿದರು. ಆದರೆ ಕರ್ನಾಟಕ ವಿಧಾನಸಭೆ ಸ್ಪೀಕರ್ ಆದ ಯು ಟಿ ಖಾದರ್ ರವರು ಇದಕ್ಕೆ ಅವಕಾಶ ನೀಡಲು ನಿರಕರಿಸಿದರು.

ಇದರಿಂದ ಬಿಜೆಪಿ ಸದಸ್ಯರು ಆಕ್ರೋಶಗೊಂಡು ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಕಲಾಪ ಆರಂಭವಾಗುತ್ತಿದ್ದಂತೆಯೇ ಇದಕ್ಕೂ ಮೊದಲ ವಿಧಾನ ಪರಿಷತ್ ಹಾಗೂ ವಿಧಾನಸಭೆಯಲ್ಲಿ ಬಾರಿ ಗದ್ದಲ ಹಾಗೂ ಗಲಾಟೆ ಶುರುವಾಗಿತ್ತು. ಅದರಂತೆ ವಿಪಕ್ಷ ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚಿಸಲು ನೀಡಬೇಕೆಂದು ಸದನದ ಬಾಗಿಲಿ ನಲ್ಲಿ ಪ್ರತಿಭಟನೆ ಮಾಡಿದರು.

5 ಗ್ಯಾರಂಟಿ ಜಾರಿ ಮಾಡಿ :

ಚುನಾವಣೆಗೂ ಮೊದಲು ಕಾಂಗ್ರೆಸ್ ಸರ್ಕಾರ ಘೋಷಿಸಿದ್ದಂತಹ 5 ಗ್ಯಾರಂಟಿಗಳ ಬಗ್ಗೆ ಬಿಜೆಪಿ ನಾಯಕರು ನ್ಯಾಯ ಕೊಡು ಎಂದು ಪ್ರತಿಭಟನೆ ನಡೆಸಿದರು. ಅಂದರೆ ಸದನದಲ್ಲಿ ಬಿಜೆಪಿ ಸದಸ್ಯರು ಕೋಲಾಹಲ ಎಬ್ಬಿಸಿ ಸರ್ಕಾರದ ಪರವಾಗಿ ಉತ್ತರ ನೀಡಲು ಬಿಜೆಪಿ ಸದಸ್ಯರು ಬಿಡದೆ ನ್ಯಾಯ ಕೊಡಿ ನ್ಯಾಯ ಕೊಡಿ ಎಂದು ಕೂಗಾಟ ನಡೆಸಿದರು. ಜೊತೆಗೆ ನೀವು ನೀಡಿದ ಭರವಸೆಗಳ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲೇಬೇಕೆಂದು ಗಲಾಟೆ ಮಾಡಿದರು.

ಇದನ್ನು ಓದಿ : ಚಿನ್ನದ ಬೆಲೆಯು ಜುಲೈನಲ್ಲಿ ಇಳಿಕೆ ಕಂಡಿದೆ, ಚಿನ್ನ ಖರೀದಿ ಮಾಡುವವರಿಗೆ ಇದು ಉತ್ತಮ ಸಮಯವಾಗಲಿದೆ

ಸ್ಪೀಕರ್ ಮಧ್ಯ ಪ್ರವೇಶ :

ಶಾಸಕ ಶಿವಲಿಂಗೇಗೌಡ ಮತ್ತು ಜೆಡಿಎಸ್ ಪಕ್ಷದ ಹೆಚ್ ಡಿ ಕುಮಾರಸ್ವಾಮಿ ಅವರ ನಡುವೆ ಸದನದಲ್ಲಿ ಮಾತಿನ ಸಮರ ನಡೆಯಿತು. ಶಿವಲಿಂಗೇಗೌಡರು ಬಿಜೆಪಿ ಪರವಾಗಿ ಮಾತನಾಡಿದ್ದಕ್ಕೆ ಹೆಚ್ ಡಿ ಕುಮಾರಸ್ವಾಮಿ ಅವರು ಗರಂ ಆದರು. ಇಬ್ಬರು ಶಾಸಕರು ಒಬ್ಬರಿಗೊಬ್ಬರು ಕೊಬ್ಬರಿ ಬೆಲೆ ವಿಚಾರವಾಗಿ ಏಟು ತಿರುಗೇಟು ನೀಡುವಲ್ಲಿ ಮಗ್ನರಾದರು.

ಇವರಿಬ್ಬರ ಮಾತಿನ ನಡುವೆ ಮಧ್ಯ ಪ್ರವೇಶಿಸಿ ಸ್ಪೀಕರ್ ಯುಟಿ ಖಾದರ್ ಅವರು ರೈತರ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದ್ದಿದ್ದರೆ ನೀವು ರೈತರ ಬಗ್ಗೆ ಮಾತನಾಡಲು ಅವಕಾಶ ಕೊಡಿ ಎಂದು ಪ್ರತಿಪಕ್ಷಗಳಿಗೆ ಸೂಚನೆ ನೀಡಿದರು.

ಹೀಗೆ ಕರ್ನಾಟಕ ವಿಧಾನಸಭೆ ಎರಡನೇ ಅಧಿವೇಶನದಲ್ಲಿ ಬಿಜೆಪಿ ಸದಸ್ಯರು ಹಾಗೂ ಜೆಡಿಎಸ್ ನ ಸದಸ್ಯರು ಗದ್ದಲ ಏರ್ಪಡಿಸಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡತೊಡಗಿದರು ಎಂದು ನೋಡಬಹುದಾಗಿದೆ. ಇದರ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಸಂಬಂಧಿಕರಿಗೂ ಶೇರ್ ಮಾಡಿ ಧನ್ಯವಾದಗಳು.

ಮಾತಿನ ಸಮರ ಯಾರ ನಡುವೆ ನಡೆಯಿತು ?

ಶಾಸಕ ಶಿವಲಿಂಗೇಗೌಡ ಮತ್ತು ಜೆಡಿಎಸ್ ಪಕ್ಷದ ಹೆಚ್ ಡಿ ಕುಮಾರಸ್ವಾಮಿ

ಸ್ಪೀಕರ್ ನ ಹೆಸರೇನು ?

ಸ್ಪೀಕರ್ ಯುಟಿ ಖಾದರ್

ಗಲಾಟಿ ಮಾಡಿದವರು ಯಾರು ?

ಬಿಜೆಪಿ ನಾಯಕರು ಹೆಚ್ಚು ಗಲಾಟೆ ಮಾಡಿದರು

ಇದನ್ನು ಓದಿ : ಗೂಗಲ್ ಪೇ ಫೋನ್ ಪೇ ಉಪಯೋಗವಿಸುವ ತುಂಬಾ ಜನರಿಗೆ ಈ ಹೊಸ ಟ್ರಿಕ್ಸ್ ಗೊತ್ತಿಲ್ಲ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments