Saturday, July 27, 2024
HomeUpdatesನಿಮ್ಮ ಹಣವನ್ನು ಬೇರೆಯವರ ಖಾತೆಗೆ ತಪ್ಪಾಗಿ ಹಾಕಿದ್ದರೆ ಚಿಂತೆ ಬೇಡ: ವಾಪಸ್ ತೆಗೆದುಕೊಳ್ಳಬಹುದು

ನಿಮ್ಮ ಹಣವನ್ನು ಬೇರೆಯವರ ಖಾತೆಗೆ ತಪ್ಪಾಗಿ ಹಾಕಿದ್ದರೆ ಚಿಂತೆ ಬೇಡ: ವಾಪಸ್ ತೆಗೆದುಕೊಳ್ಳಬಹುದು

ನಮಸ್ಕಾರ ಸ್ನೇಹಿತರೆ ಈಗ ಆನ್ಲೈನ್ ಪಾವತಿಯಿಂದ ಕೆಲವೊಮ್ಮೆ ನಮ್ಮ ಹಣವನ್ನು ನಮ್ಮವರಿಗೆ ಕಳುಹಿಸುವ ಬದಲು ಬೇರೆಯವರ ಖಾತೆಗೆ ತಪ್ಪಾಗಿ ಹಣ ಹಾಕುತ್ತಿದ್ದೇವೆ. ಈ ಹಣವನ್ನು ಮತ್ತೆ ವಾಪಸ್ ಪಡೆಯುವುದು ಹೇಗೆ ಎಂಬ ಪ್ರಶ್ನೆಯು ಕಾಡುತ್ತಿತ್ತು. ಆದರೆ ಇದಕ್ಕೆ ಈಗ ತೆರೆ ಬಿದ್ದಿದೆ. ಬೇರೆಯವರ ಖಾತೆಗೆ ಹಣವನ್ನು ತಪ್ಪಾಗಿ ಹಾಕಿದರೆ ಚಿಂತೆ ಬೇಡ ಆ ಹಣವನ್ನು ವಾಪಸ್ ತೆಗೆದುಕೊಳ್ಳಬಹುದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಲಾಗುತ್ತದೆ.

Method of money transfer
Method of money transfer
Join WhatsApp Group Join Telegram Group

ಹಣ ವರ್ಗಾವಣೆಯ ವಿಧಾನ :

ಬೇರೆಯವರ ಖಾತೆಗೆ ತಪ್ಪಾಗಿ ಹಣ ವರ್ಗಾವಣೆ ಮಾಡಿದರೆ ಈ ವಿಧಾನದ ಮೂಲಕ ಹಣವನ್ನು ಮರಳಿ ಪಡೆಯಬಹುದು. ಯುಪಿಐ ಪೇಮೆಂಟ್ ಮಾಡುವಾಗ ಕೆಲವು ಬಾರಿ ಜನರು ಹಣವನ್ನು ಬೇರೆಯವರ ಖಾತೆಗೆ ವರ್ಗಾವಣೆ ಮಾಡಿರುವುದು ಸರ್ವೇಸಾಮಾನ್ಯ. ಆದರೆ ಈ ವರ್ಗಾವಣೆ ಮಾಡಿದ ಹಣವನ್ನು ಇನ್ನೊಬ್ಬರ ಖಾತೆಯಿಂದ ಮತ್ತೆ ವಾಪಸ್ ಪಡೆಯಲು ಸಾಧ್ಯವಾಗುವುದಿಲ್ಲ ಎಂಬುದು ಹಲವಾರು ಜನರ ನಂಬಿಕೆಯಾಗಿದೆ. ಆದರೆ ಈ ನಂಬಿಕೆಯನ್ನು ಸ್‌ಬಿಐ ಈಗ ಸುಳ್ಳು ಅನ್ನುವುದನ್ನು ಸ್ಪಷ್ಟಪಡಿಸಿದೆ. ಮಿಸ್ಸಾಗಿ ಇನ್ನೊಬ್ಬರ ಖಾತೆಗೆ ಒಮ್ಮೆ ಹಣ ವರ್ಗಾವಣೆ ಮಾಡಿದರೆ ಅದನ್ನು ತಿರುಗು ಪಡೆಯಬಹುದಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಎಸ್‌ಬಿಐ ನೀಡಿದೆ.

ಹಣ ವರ್ಗಾವಣೆಯಾದಾಗ ಏನು ಮಾಡಬೇಕು :

ಒಂದು ವೇಳೆ ನಾವು ತಪ್ಪಾಗಿ ಹಣವನ್ನು ಬೇರೆ ಬ್ಯಾಂಕ್ ಖಾತೆಗೆ ಕಳುಹಿಸಿದ್ದರೆ ಆಗ ನಿಮ್ಮ ಖಾತೆ ಇರುವ ಶಾಖೆಯ ಕಚೇರಿಯನ್ನು ಸಂಪರ್ಕಿಸಬೇಕು. ನಂತರ ನೀವು ಯಾವೂರ ಬ್ಯಾಂಕ್ ಖಾತೆಗೆ ಹಣವನ್ನು ಕಳುಹಿಸಿರಲಾಗುತ್ತದೆಯೋ ಅವರ ಖಾತೆಯ ಬ್ಯಾಂಕ್ ಅನ್ನು ಅದು ಸಂಪರ್ಕಿಸಿ ಸಮಸ್ಯೆಯನ್ನು ಬಗೆಹರಿಸುತ್ತದೆ.

ಇದನ್ನು ಓದಿ :ಆಭರಣ ಪ್ರಿಯರಿಗೆ ಬಂಪರ್ ಆಫರ್ : ಇದಕ್ಕಿಂತ ಉತ್ತಮ ಸಮಯ ಚಿನ್ನ ಪ್ರಿಯರಿಗೆ ಮತ್ತೊಂದಿಲ್ಲ

ಎಸ್ ಬಿ ಐ ನ , ಸಿ ಆರ್ ಸಿ ಎಫ್ ಪೋರ್ಟಲ್ :

ನಿಮ್ಮ ಹಣವನ್ನು ಬ್ಯಾಂಕ್ ಶಾಖೆಯಿಂದ ಮರಳಿ ಪಡೆಯಲು ಸಾಧ್ಯವಾಗದಿದ್ದರೆ ನೀವು ಎಸ್ಬಿಐನ ಒಂದು ಪೋರ್ಟಲ್ ಗೆ ದೂರು ಸಲ್ಲಿಸಬಹುದು. ಎಸ್ ಬಿ ಐ ನ ಪೋರ್ಟಲ್ ಎಂದರೆ ಸಿಆರ್ ಸಿಎಫ್ ಪೋರ್ಟಲ್. ಈ ಪೋರ್ಟಲ್ ನ ಮೂಲಕ ದುಡಿ ಸಲ್ಲಿಸಬೇಕು. crcf.sbi.co.in/ccf ಈ ವೆಬ್ಸೈಟ್ನ ಮೂಲಕ ಕಸ್ಟಮರ್ ಟೆಸ್ಟ್ ಕಂಪ್ಲೇಂಟ್ ಅಡಿಯಲ್ಲಿ ಇರುವ ರೈಸ್ ರಿಕ್ವೆಸ್ಟ್ ಕಂಪ್ಲೇಂಟ್ ಟೈಪ್ಸ್ನ ಆಯ್ಕೆಗಳಲ್ಲಿ ರೈಸ್ ಕಂಪ್ಲೀಟ್ ಅನ್ನು ಆಯ್ಕೆ ಮಾಡುವುದರ ಮೂಲಕ ಕೆಳಗೆ ಪರ್ಸನಲ್ ಸೆಗ್ಮೆಂಟ್ ಇಂಡಿವಿಜುಯಲ್ ಕಸ್ಟಮಂದಿರುವ ಮೊದಲ ಆಯ್ಕೆ ಆರಿಸಬೇಕು.

ನಂತರ ನಿಮ್ಮ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ನಮೂದಿಸಿ ಕ್ಯಾಪ್ಚಾ ಕೋಡ್ ಹಾಕುವುದರ ಮೂಲಕ ಸಂಡ್ ಒಟಿಪಿಯನ್ನು ಒತ್ತಬೇಕು. ನಂತರ ನಿಮ್ಮ ಖಾತೆಗೆ ಜೋಡಣೆಯಾದ ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿ ಬಂದ ನಂತರ ನೀವು ಅದರ ನಂತರ ಲಾಗಿನ್ ಆಗಿ ಇದರ ಮೂಲಕ ನೀವು ದೂರನ್ನು ನೀಡಬಹುದು. ಹೀಗೆ ಈ ಎಲ್ಲಾ ಪ್ರಕ್ರಿಯೆಗಳನ್ನು ಮಾಡುವುದರ ಮೂಲಕ ನಿಮ್ಮ ಹಣವನ್ನು ನೀವು ವಾಪಸ್ ಪಡೆಯಬಹುದು.

ಹೀಗೆ ಎಸ್‌ಬಿಐ ಒಂದು ಪೋರ್ಟಲ್ನಾ ಸಹಾಯದಿಂದ ಬೇರೆಯವರ ಖಾತೆಗೆ ತಪ್ಪಾಗಿ ಹಣ ಕಳುಹಿಸಿರುವುದನ್ನು ಮತ್ತೆ ವಾಪಸ್ ಪಡೆಯಲು ಈ ಯೋಜನೆ ಹಾಕಿರುವುದು ಒಂದು ರೀತಿಯಲ್ಲಿ ನಮಗೆ ಸಹಾಯಕವಾಗುತ್ತದೆ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ತಿಳಿಸಿಕೊಡಿ ಧನ್ಯವಾದಗಳು.

ಯಾವ ವೆಬ್ ಸೈಟ್ ಮೂಲಕ ಕಂಪ್ಲೇಂಟ್ ಮಾಡಬಹುದು ?

crcf.sbi.co.in/ccf ಈ ವೆಬ್ಸೈಟ್ನ ಮೂಲಕ

ಯಾವ ಬ್ಯಾಂಕಿನಲ್ಲಿ ಇದರ ಉಪಯೋಗ ದೊರೆಯಲಿದೆ ?

ಎಸ್ ಬಿ ಐ ಬ್ಯಾಂಕಿನಲ್ಲಿ ಉಪಯೋಗ ಸಿಗಲಿದೆ

ಇದನ್ನು ಓದಿ :ರಾಜ್ಯ ಸರ್ಕಾರದಿಂದ ಮೊಬೈಲ್ ವ್ಯಾನ್ ಅಭಿಯಾನ :ಮನೆ ಬಾಗಿಲಿಗೆ ಒಂದು ಕರೆಗೆ ವ್ಯಾನ್ ಬರಲಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments