Thursday, July 25, 2024
HomeTrending Newsಬಿಸಿ ಬಿಸಿ ಸುದ್ದಿ: ಕೊನೆಗು ಮಳೆಯ ಮುನ್ಸೂಚನೆ ಕೊಟ್ಟ ಹವಮಾನ ಇಲಾಖೆ.! ಇನ್ನು 5 ದಿನ...

ಬಿಸಿ ಬಿಸಿ ಸುದ್ದಿ: ಕೊನೆಗು ಮಳೆಯ ಮುನ್ಸೂಚನೆ ಕೊಟ್ಟ ಹವಮಾನ ಇಲಾಖೆ.! ಇನ್ನು 5 ದಿನ ಈ ಎಲ್ಲಾ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ.

ಹಲೋ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ಎಲ್ಲರಿಗು ಸ್ವಾಗತ, ಆಗಸ್ಟ್‌ನಲ್ಲಿ ವರುಣನ ಅವಕೃಪೆಯಿಂದ, ಕರುನಾಡಿನ ನೆಲ ಬಿಸಿ ಬಿಸಿ ಕೆಂಡದಂತಾಗಿದೆ. ಇನ್ನೊಂದು ಕಡೆಗೆ ರೈತರ ಬದುಕು ದುಸ್ತರವಾಗಿದೆ ಇದರ ಬೆನ್ನಲ್ಲೆ ಮುಂದೆ ಸೆಪ್ಟೆಂಬರ್‌ನ ಕಥೆ ಏನು? ಮಳೆಯಾಗುತ್ತಾ ಇಲ್ವಾ ಹವಮಾನ ಇಲಾಖೆ ಏನು ಹೇಳಿದೆ ಶೇಖಡ 74 ರಷ್ಟು ಮಳೆ ಕೊರತೆ ಆಗಸ್ಟ್‌ನಲ್ಲಿ ಆಗಿದ್ದ ಸ್ಥಿತಿನೇ ಸೆಪ್ಟೆಂಬರ್‌ನಲ್ಲು ಕೂಡ ಮುಂದುವರೆಯುತ್ತದೆಯಾ ಎನ್ನುವುದಕ್ಕೆ ಇಲ್ಲಿದೆ ಉತ್ತರ, ಎಲ್ಲಾ ಮಾಹಿತಿಯನ್ನು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

monsoon rain updates
Join WhatsApp Group Join Telegram Group

ಆಗಸ್ಟ್‌ನಲ್ಲಿ ಕರ್ನಾಟಕ ಡ್ರೈ ಸೆಪ್ಟೆಂಬರ್‌ ಗುಡ್‌ನ್ಯೂಸ್‌ ಕೊಡ್ತಾನ ವರುಣ ಅಗಸ್ಟ್‌ನಲ್ಲಿ ತೀವ್ರ ಮಳೆಯ ಕೊರತೆಯಾಗಿದೆ ಕರುನಾಡಿನಲ್ಲಿ ಬರದ ಬೀತಿ ಎದುರಾಗಿದೆ. ಸೆಪ್ಟೆಂಬರ್‌ನಲ್ಲಿ ಹೇಗಪ್ಪ ಈ ತಿಂಗಳಲ್ಲಾದರು ಎಂಟ್ರಿಯಾಗುತ್ತಾ ಮಳೆ ಎನ್ನುವ ಆತಂಕ ರೈತರಲ್ಲಿ ಮೂಡಿದೆ. ಸದ್ಯ ಸೆಪ್ಟೆಂಬರ್‌ನಲ್ಲಿಯು ಕೂಡ ತೀರ ಹೆಚ್ಚು ಎನ್ನುವ ಮಳೆಯಿಲ್ಲದಿದ್ದರು ವಾಡಿಕೆಯಷ್ಟು ಮಳೆಯ ಬಗ್ಗೆ ಮುನ್ಸೂಚನೆಯನ್ನು ಹವಮಾನ ಇಲಾಖೆ ಕೊಟ್ಟಿದೆ.

ರಾಜ್ಯದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ, ಸೆಪ್ಟೆಂಬರ್‌ 1-7 ಮೊದಲ ವಾರದಲ್ಲಿ ಉತ್ತರ ಒಳನಾಡಿನ ಅನೇಕ ಕಡೆ ವಾಡಿಕೆಯಷ್ಟು ಮಳೆ ಕರಾವಳಿಯ ಪಚ್ಚಿಮ ಘಟ್ಟದಲ್ಲಿ ಕಡಿಮೆ ಮಳೆಯಾಗಲಿದೆ ಉಳಿದ ದಕ್ಷಿಣ ಭಾಗದಲ್ಲಿ ಮಳೆಯ ಪ್ರಮಾಣ ವಾಡಿಕೆಯಷ್ಟು ಇರುತ್ತೆ. ಸೆಪ್ಟೆಂಬರ್‌ 8-15 ಕರಾವಳಿ ಉತ್ತರ ಒಳನಾಡಿನ ಜಿಲ್ಲೆಯಲ್ಲಿ ವಾಡಿಕೆಯ ಮಳೆ ದಕ್ಷಿಣ ಒಳನಾಡು ರಾಮನಗರ ಚಿಕ್ಕಬಳ್ಳಾಪುರ ಕೊಲಾರ ಭಾಗದಲ್ಲಿ ಮಳೆಯ ಕೊರತೆ. ಸೆಪ್ಟೆಂಬರ್‌ 15ರ ಬಳಿಕ ಕರಾವಳಿ ಭಾಗದಲ್ಲಿ ಹೆಚ್ಚು ಮಳೆ ಬರಲಿದೆ, ಉಳಿದ ಜಿಲ್ಲೆಯಲ್ಲಿ ಕಡಿಮೆ ಮಳೆಯಾಗುತ್ತದೆ. ಸೆಪ್ಟೆಂಬರ್‌ನಲ್ಲಿಯು ಕೂಡ ಕೆಲ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಲಿದೆ ಆದರೆ ಇನ್ನು ಹಲವೆಡೆ ಮಳೆಯ ಕೊರತೆ ಕಾಣುವ ಸಾಧ್ಯತೆ ಇದೆ. ಆದರೆ ಆಗಸ್ಟ್‌ನಂತೆ ಬರದ ಕಾರ್ಮೋಡ ಕವಿಯದೆ ಇರಲಿ ಎನ್ನುವುದೆ ಎಲ್ಲರ ಆಶಯವಾಗಿದೆ.

ಇದನ್ನೂ ಓದಿ: Breaking News: ಯುವನಿಧಿಗೆ ಹೊಸ ತಿರುವು.! 5 ನೇ ಗ್ಯಾರೆಂಟಿಗೆ ಮುಹೂರ್ತ ಫಿಕ್ಸ್: ಸಿಎಂ ಸ್ಪಷ್ಟನೆ

ಸಾಕಷ್ಟು ಜಿಲ್ಲೆಯಲ್ಲಿ ವರುಣನ ಆರ್ಭಟ, ನಿನ್ನೆ ಬೆಂಗಳೂರಿನಲ್ಲಿ ಗುಡುಗು ಸಹಿತ ಧಾರಾಕಾರ ಮಳೆ, ತಗ್ಗು ಪ್ರದೇಶಗಳು ಜಲಾವೃತ ವಾಹನ ಸವಾರರ ಪರದಾಟ, ಬೆಳಿಗ್ಗೆಯಿಂದ ದಗದಗ ಅಂತಿದ್ದ ಬೆಂಗಳೂರು ರಾತ್ರಿಯಾದ ಮೇಲೆ ದಿಢೀರ್‌ ಎಂಟ್ರಿ ಕೊಟ್ಟಿದ್ದ ಮಳೆ, ಭೂಮಿಯನ್ನು ಕೂಲ್‌ ಆಗಿಸಿದೆ. ಸಾಕಷ್ಟು ಕಡೆ ಧಾರಕಾರ ಮಳೆಯಾಗಿದೆ. ಕಚೇರಿಯಿಂದ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಪರದಾಡುವಂತಾಯಿತು. ತಗ್ಗು ಪ್ರದೇಶಕ್ಕೆ ಮಳೆ ನೀರು ಒಳ ನುಗ್ಗಿತ್ತು, ಮನೆಗಳಿಗೆ ನೀರು ಸಹ ನುಗ್ಗಿದೆ ಬಿಬಿಎಂಪಿ ಸಿಬ್ಬಂದಿ ಮತ್ತು ಮನೆ ಮಂದಿ ಸೇರಿ ಮೋರಿ ನಿರನ್ನು ಮನೆಯಿಂದ ಹೊರಹಾಕಲು ಹರಸಾಹಸ ಪಟ್ಟಿದ್ದಾರೆ. ಸ್ಮಾರ್ಟ್‌ ಸಿಟಿ ರಸ್ತೆಗಳು ಮಿನಿ ಕೆರೆಗಳಂತೆ ಮಾರ್ಪಟ್ಟಿದೆ. ಬೆಂಗಳೂರು ಮಾತ್ರವಲ್ಲದೆ ದೊಡ್ಡಬಳ್ಳಾಪುರ, ಮಂಡ್ಯ, ಕೊಲಾರ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣ ಕೃಪೆ ತೋರಿದ್ದಾನೆ.

ಇತರೆ ವಿಷಯಗಳು

ಕರ್ನಾಟಕದಲ್ಲಿ ಇನ್ಮುಂದೆ ಪ್ರತಿಯೊಬ್ಬರಿಗೂ ಉಚಿತ ವೈಫೈ ವ್ಯವಸ್ಥೆ, ಪ್ರತಿ ಸ್ಥಳದಲ್ಲೂ ಪಡೆಯಬಹುದು, ಪಾಸ್‌ವರ್ಡ್ ಏನು ಗೊತ್ತಾ?

ಭೂತಾನ್ ಅಡಿಕೆ ಭಾರತಕ್ಕೆ ಬಂದರೆ ನಮ್ಮ ಅಡಿಕೆ ಬೆಲೆ ಎಷ್ಟಾಗುತ್ತೆ…? ಪಾತಾಳಕ್ಕೆ ಕುಸಿಯುತ್ತಾ ಅಡಿಕೆ ರೇಟ್?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments