Saturday, July 27, 2024
HomeGovt Schemeಪಿಎಂ ಫಸಲ್ ಭೀಮಾ ಯೋಜನೆ ಅರ್ಜಿ ಸಲ್ಲಿಕೆ ಅವಧಿ ಮುಂದೂಡಿಕೆ! ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ

ಪಿಎಂ ಫಸಲ್ ಭೀಮಾ ಯೋಜನೆ ಅರ್ಜಿ ಸಲ್ಲಿಕೆ ಅವಧಿ ಮುಂದೂಡಿಕೆ! ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಅದರಂತೆ ಈಗ ಕೇಂದ್ರ ಸರ್ಕಾರವು ಅನೇಕ ರಾಜ್ಯಗಳ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ರೈತರಿಗೆ ಭದ್ರತೆಯ ರಕ್ಷಣೆಯಾಗಿ ಜಾರಿಗೊಳಿಸಲಾಗುತ್ತಿದೆ. ಮಂತ್ರಿ ಫಸಲ್ ಭೀಮಾ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ತಿಳಿಸಿದ್ದು ಈ ಕೂಡಲೇ ನಿಗದಿಪಡಿಸಿ ದಂತಹ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ. ಹಾಗಾದರೆ ಫಸಲ್ ಭೀಮಾ ಯೋಜನೆ ಎಂದರೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Pradhan Mantri Fasal Bhima Yojana
Pradhan Mantri Fasal Bhima Yojana
Join WhatsApp Group Join Telegram Group

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ :

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ರೈತರು ತಾವು ಬೆಳೆದ ಬೆಳೆಗೆ ವಿಮೆಯನ್ನು ಮಾಡಿಸಿಕೊಳ್ಳಲು ಕೊನೆಯ ದಿನಾಂಕ ಯಾವುದು ಎಂದು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಇದರಿಂದ ರೈತರು ತಮ್ಮ ಕಾರ್ಯಗಳನ್ನು ಸಮಯಕ್ಕೆ ವಿಮೆ ಮಾಡಬಹುದು ಹಾಗೂ ಬೆಳೆಗಳು ನಷ್ಟವನ್ನು ಅನುಭವಿಸಿದರೆ ಅದಕ್ಕೆ ಸರಿಯಾದ ಸಂದರ್ಭದಲ್ಲಿ ಪ್ರತಿಕೂಲ ಲಾಭವನ್ನು ಪಡೆಯಲು ಈ ಯೋಜನೆಯಿಂದ ಸಾಧ್ಯವಾಗುತ್ತದೆ. ಬೆಳೆ ವಿಮೆಯ ಕೊನೆಯ ದಿನಾಂಕವನ್ನು ಕೇಂದ್ರ ಸರ್ಕಾರವು ಇತರೆ ರಾಜ್ಯಗಳಿಗೂ ವಿಸ್ತರಿಸುವಂತೆ ಮನವಿ ಮಾಡಲಾಗಿದ್ದು ಅದರಂತೆ ಈಗ ಕೊನೆಯ ದಿನಾಂಕವನ್ನು ವಿಸ್ತರಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಪ್ರಧಾನಮಂತ್ರಿ ಬೆಳೆ ವಿಮೆಯ ಲಾಭವನ್ನು ಕೋಟ್ಯಾಂತರ ರೈತರು ಪಡೆಯಲು ಸಾಧ್ಯವಾಗುತ್ತದೆ.

ಫಸಲ್ ಭೀಮಾ ಯೋಜನೆಯ ಕೊನೆಯ ದಿನಾಂಕ ವಿಸ್ತಾರ :

ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ಖಾರಿಫ್ ಬೆಳೆಗಳಿಗೆ ಯುಪಿ ಹಾಗೂ ರಾಜಸ್ಥಾನದ ರೈತರು ಇನ್ನು ಸಹ ವಿಮೆಯನ್ನು ಪಡೆದಿಲ್ಲ ಆ ಹಿನ್ನೆಲೆಯಲ್ಲಿ ಆಗಸ್ಟ್ ಹತ್ತರವರೆಗೆ ಕೇಂದ್ರ ಸರ್ಕಾರವು ಬೆಳೆ ವಿಮೆ ಯೋಜನೆಯ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ರೈತರಿಗೆ ಫಸಲ್ ಭೀಮಾ ಯೋಜನೆಯ ಕೊನೆಯ ದಿನಾಂಕದ ವಿಸ್ತರಣೆಯಿಂದಾಗ ಬೆಳೆಗಳಿಗೆ ವಿಮೆಯನ್ನು ಪಡೆಯಲು ಸಾಕಷ್ಟು ಸಮಯ ಸಿಕ್ಕಿದಂತಾಗುತ್ತದೆ. ವಿಮಾ ದಿನಾಂಕವನ್ನು ಅದೇ ರೀತಿ ರಾಜಸ್ಥಾನದಲ್ಲಿಯೂ ಸಹ ವಿಸ್ತರಿಸಿರುವುದರಿಂದ, ಆಗಸ್ಟ್ ಐದರವರೆಗೆ ಸಾಲ ಪಡೆಯದ ರೈತರು ತಮ್ಮ ಬೆಳೆಗಳಿಗೆ ಮತ್ತು ಸಾಲ ಪಡೆದಂತಹ ರೈತರು ಆಗಸ್ಟ್ ಹತ್ತರವರೆಗೆ ತಮ್ಮ ಬೆಳೆಗಳಿಗೆ ವಿಮೆ ಮಾಡಿಸಬಹುದಾಗಿದೆ.

ಆಗಸ್ಟ್ 16 ರವರೆಗೆ ಛತ್ತೀಸ್ಗಡ ಮಧ್ಯಪ್ರದೇಶ ಹಾಗೂ ಮಣಿಪುರದ ರೈತರಿಗೆ ತಮ್ಮ ಬೆಳೆಗಳನ್ನು ವಿಮೆ ಮಾಡಲು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಈ ಮೊದಲು ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ಜುಲೈ 31 ಕೊನೆಯ ದಿನಾಂಕವಾಗಿದ್ದು ಬೆಳೆ ವಿಮೆ ಪಡೆಯಲು ಇದೀಗ ಆಗಸ್ಟ್ 16ರವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರ ತಿಳಿಸಿದೆ. ಒಂದು ರೂಪಾಯಿಗಳು ವಿಮೆಯನ್ನು ಮಹಾರಾಷ್ಟ್ರದಲ್ಲಿ ರೈತರ ಬೆಳೆಗಳಿಗೆ ಮಾಡಲಾಗುತ್ತಿದ್ದು, ಮಹಾರಾಷ್ಟ್ರದಲ್ಲಿ ಆಗಸ್ಟ್ ಮೂರನೇ ತಾರೀಕಿನವರೆಗೆ ಬೆಳೆವಿಮೆ ಮಾಡಿಸಲು ಅವಕಾಶವನ್ನು ನೀಡಲಾಗಿದೆ.

ಇದನ್ನು ಓದಿ : ಸರ್ಕಾರದ ಹೊಸ ಅಪ್‌ಡೇಟ್‌: ಎಷ್ಟೇ ಆದಾಯ ಇದ್ದರೂ ಸಿಗುತ್ತೆ ಸರ್ಕಾರದಿಂದ ಉಚಿತ ಮನೆ, ಯೋಜನೆಯ ಲಾಭಕ್ಕೆ ಈ ದಾಖಲೆಗಳು ಸಾಕು

ಫಸಲ್ ಭೀಮಾ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು :

ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಬೇಕಾದರೆ ರೈತರು ಧನ ಮಂತ್ರಿ ಫಸಲ್ ಭೀಮಾ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಧಿಕೃತ ವೆಬ್ಸೈಟ್ಗೆ ಬೇಡಿ ನೀಡುವುದಲ್ಲದೆ ಶಿಬಿರದಲ್ಲಿಯೂ ಸಹ ಬೆಳೆ ವಿಮೆಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳೆಂದರೆ , ಆಧಾರ್ ಕಾರ್ಡ್ , ಜಮಾಮಂದಿ ನಕಲು, ಬ್ಯಾಂಕ್ ಖಾತೆಯ ವಿವರಗಳು, ಬೆಳೆ ಬಿತ್ತನೆ ಪ್ರಮಾಣ ಪತ್ರ ,ಹಿಡುಳಿದಾರರ ಪ್ರಮಾಣ ಪತ್ರ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ರೈತರು ಫಸಲ್ ಭೀಮಾ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಹೊಂದಿರಬೇಕಾಗುತ್ತದೆ.

ಹೀಗೆ ಕೇಂದ್ರ ಸರ್ಕಾರವು ಫಸಲ್ ಭೀಮಾ ಯೋಜನೆಯಡಿಯಲ್ಲಿ ಬೆಳೆ ವಿಮೆ ಮಾಡಿಸಿಕೊಳ್ಳಲು ರೈತರಿಗೆ ಕೊನೆಯ ದಿನಾಂಕವನ್ನು ವಿಸ್ತರಿಸಿರುವುದರ ಮೂಲಕ ಹೆಚ್ಚಿನ ಅವಕಾಶವನ್ನು ಕಲ್ಪಿಸಲಾಗಿದೆ. ಹೀಗೆ ಈ ಯೋಜನೆಗೆ ಏನು ಸಹ ಅರ್ಜಿಯನ್ನು ಸಲ್ಲಿಸಿದಂತಹ ಅಭ್ಯರ್ಥಿಗಳಿಗೆ ಈ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ಈ ಕೂಡಲೇ ಕೊನೆಯ ದಿನಾಂಕ ಮುಗಿಯುವುದರಳಗಾಗಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ರೈತರಿಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Breaking News: ರಾಜ್ಯದಲ್ಲಿ ಇನ್ನು ಧಾರ್ಮಿಕ, ರಾಜಕೀಯ ಫ್ಲೆಕ್ಸ್‌ಗಳು, ಹೋರ್ಡಿಂಗ್‌, ಬ್ಯಾನರ್‌ಗಳು ನಿಷೇಧ: ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ! ಡಿಕೆ ಶಿವಕುಮಾರ್‌ ಆದೇಶ

LIC New Scheme: ಪ್ರತೀ ತಿಂಗಳು ಕುಳಿತಲ್ಲೇ ಪಡೆಯಿರಿ 10000! ಈ ಯೋಜನೆ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments