Friday, June 21, 2024
HomeGovt Schemeಶೇಕಡಾ 86 ರಷ್ಟು ಗೃಹಲಕ್ಷ್ಮಿ ಯೋಜನೆಗೆ ಯಜಮಾನಿಯರ ನೋಂದಣಿ : ಯೋಜನೆ ಕಾರ್ಯಕ್ರಮ ದಿನ ಹಣ...

ಶೇಕಡಾ 86 ರಷ್ಟು ಗೃಹಲಕ್ಷ್ಮಿ ಯೋಜನೆಗೆ ಯಜಮಾನಿಯರ ನೋಂದಣಿ : ಯೋಜನೆ ಕಾರ್ಯಕ್ರಮ ದಿನ ಹಣ ಬಿಡುಗಡೆ

ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಗೆ ಸುಮಾರು ಶೇಕಡ 86ರಷ್ಟು ಯಜಮಾನಿಯರು ನೋಂದಣಿಯನ್ನು ಮಾಡಿಸಿಕೊಂಡಿದ್ದಾರೆ. ಅದರಂತೆ ಈಗ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಮಹಿಳೆಯರ ಬ್ಯಾಂಕ್ ಖಾತೆಗೆ ಯಾವಾಗ ಹಣ ಬರುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Release of funds on plan program day
Release of funds on plan program day
Join WhatsApp Group Join Telegram Group

ಶೇಕಡ 86 ರಷ್ಟು ನೋಂದಣಿ :

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗಿದೆ. ಈವರೆಗೂ ನೊಂದಣಿಯನ್ನು 1.1 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಮಾಡಿಸಿಕೊಂಡಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ರಾಹುಲ್ ಗಾಂಧಿಯವರು ಆಗಸ್ಟ್ 30ರಂದು ಚಾಲನೆ ನೀಡುವ ಮೂಲಕ ಆ ದಿನವೇ 2000 ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ :

ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಗೆ ಮೈಸೂರಿನಲ್ಲಿ ಆಗಸ್ಟ್ 30ರಂದು ಚಾಲನೆ ಸಿಗುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಗೆ ಶೇಕಡ 86 ರಷ್ಟು ಫಲಾನುಭವಿಗಳು ತಮ್ಮ ಹೆಸರನ್ನು ಇದುವರೆಗೂ ನಂದನೆ ಮಾಡಿಸಿಕೊಂಡಿದ್ದಾರೆ ಎಂದು ಹೇಳಿದರು. ಆಗಸ್ಟ್ 30ರಂದು ನಡೆಯಲಿರುವ ಸಮಾರಂಭಕ್ಕೆ ಎಲ್ಲರೂ ಯಶಸ್ವಿಯಾಗುವುದಕ್ಕೋಸ್ಕರ ಕೈಜೋಡಿಸಬೇಕೆಂದು ಸಚಿವರು ಕರೆಕೊಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ : ಆಗಸ್ಟ್ 27ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನ ಪೂರೈಸುತ್ತಿದೆ. ಶನಿವಾರ ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ವಿತರಣಾ ಕಾರ್ಯಕ್ರಮದ ಪೂರ್ವ ಸಿದ್ಧತೆ ಕುರಿತು ಕಾರ್ಯಕರ್ತರನ್ನು ಉದ್ದೇಶಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿದರು.

ಬಸವಣ್ಣನ ತತ್ವ ಸಿದ್ಧಾಂತ :

ಬಸವಣ್ಣನ ತತ್ವ ಸಿದ್ಧಾಂತದ ಆಧಾರದ ಮೇಲೆ ಕಾಂಗ್ರೆಸ್ ಪಕ್ಷ ನಿಂತಿದೆ. 1.28 ಕೋಟಿ ಫಲಾನುಭವಿಗಳ ಪೈಕಿ ಈಗಾಗಲೇ 1.10 ಕೋಟಿ ಅಧಿಕ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಮನೆ ಯಜಮಾನಿಗೆ ಆಗಸ್ಟ್ ತಿಂಗಳಿನಿಂದಲೇ ಹಣ ಜಮಾ ಆಗಲಿದೆ ಎಂದು ಹೇಳಿದರು.

ಇದನ್ನು ಓದಿ : Breaking News: ರಾಜ್ಯದಲ್ಲಿ ರಕ್ಷಾಬಂಧನದ ಪ್ರಯುಕ್ತ ರಾಜ್ಯದ ಪ್ರತಿಯೊಬ್ಬರಿಗೂ 2 ದಿನ ಉಚಿತ ಬಸ್‌ ಪ್ರಯಾಣ.! ಆದೇಶ ಹೊರಡಿಸಿದ ಸಿಎಂ

ಕಾರ್ಯಕ್ರಮಕ್ಕೆ ಎರಡು ಸಾವಿರ ಬಸ್ ವ್ಯವಸ್ಥೆ :

ಆನ್ಲೈನ್ ಮೂಲಕ ರಾಜ್ಯಾದ್ಯಂತ ಏಕಕಾಲಕ್ಕೆ ಕಾರ್ಯಕ್ರಮಕ್ಕೆ ಚಾಲನೆ ಸಿಗುವುದರ ಮೂಲಕ ಸಂವಾದಕ್ಕೂ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮೈಸೂರು ಚಾಮರಾಜನಗರ ಮಂಡ್ಯ ಕೊಡಗು ಹಾಸನ ಜಿಲ್ಲೆಗಳ ಫಲಾನುಭವಿಗಳು ಭಾಗಿಯಾಗಲಿದ್ದು ಅವರಿಗಾಗಿ 2000 ಬಸ್ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 30ರಂದು ಚಾಲನೆ ದೊರೆಯುವುದರ ಮೂಲಕ ಆ ದಿನವೇ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಸರ್ಕಾರ ಜಮಾ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಹೀಗೆ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಜನಸಾಮಾನ್ಯರಿಗೆ ಸರ್ಕಾರದಿಂದ ಭರ್ಜರಿ ಕೊಡುಗೆ: ಪ್ರತಿಯೊಬ್ಬರ ಖಾತೆಗೆ ಬರಲಿದೆ ಉಚಿತ 10 ಸಾವಿರ ರೂ, ಕೂಡಲೇ ಇಲ್ಲಿಂದ ಅರ್ಜಿ ಸಲ್ಲಿಸಿ

ಬಡವರು ಈ ವಸ್ತುವನ್ನು ಎಸೆಯುತ್ತಾರೆ ಆದರೆ ಶ್ರೀಮಂತರು ತಮ್ಮ ಜೇಬಿನಲ್ಲಿ ಇಡುತ್ತಾರೆ? ಚಿಂತಿಸಬೇಡಿ ಉತ್ತರ ಇಲ್ಲಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments