Saturday, July 27, 2024
HomeNewsಆಧಾರ್ ಕಾರ್ಡ್ ಎಚ್ಚರ..! ಈ ತಪ್ಪು ಮಾಡಿದ್ರೆ ನಿಮ್ಮ ಖಾತೆಯಲ್ಲಿ ಹಣ ಖಾಲಿ, ಇಲ್ಲಿದೆ ಡಿಟೇಲ್ಸ್

ಆಧಾರ್ ಕಾರ್ಡ್ ಎಚ್ಚರ..! ಈ ತಪ್ಪು ಮಾಡಿದ್ರೆ ನಿಮ್ಮ ಖಾತೆಯಲ್ಲಿ ಹಣ ಖಾಲಿ, ಇಲ್ಲಿದೆ ಡಿಟೇಲ್ಸ್

ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಆಧಾರ್ ಕಾರ್ಡ್ ಅಪ್ಡೇಟ್ ಸಲುವಾಗಿ ವಂಚನೆ ಆಗುತ್ತಿರುವುದರ ಬಗ್ಗೆ. ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಸಲುವಾಗಿ ಯು ಐ ಡಿ ಎ ಐ ನಿಮಗೆ ಒಂದು ಪ್ರಮುಖ ಹಾಗೂ ಮಹತ್ವದ ಸುದ್ದಿಯನ್ನು ನೀಡುವ ಮೂಲಕ ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಎಚ್ಚರಿಕೆಯನ್ನು ನೀಡುತ್ತಿದೆ. ವಾಟ್ಸಪ್ ಮೂಲಕ ಅಥವಾ ಇಮೇಲ್ ಐಡಿ ಮೂಲಕ ನಿಮಗೆ ಯಾವುದಾದರು ಆಧಾರ್ ಕಾರ್ಡ್ ನ ಅಪ್ ಡೇಟ್ ಮೆಸೇಜ್ ಬಂದಿದ್ದರೆ ಆ ಮೆಸೇಜ್ ಗೆ ನೀವು ರಿಪ್ಲೈ ಮಾಡಲು ಹೋಗಬೇಡಿ. ಏಕೆಂದರೆ ವಂಚಕರು ಇಂತಹ ಸಂದೇಶಗಳನ್ನು ಕಳಿಸುವ ಮೂಲಕ ಹಣವನ್ನು ದೋಚುತಿದ್ದಾರೆ. ಇದು ವಂಚನೆಯ ಒಂದು ಹೊಸ ವಿಧಾನವಾಗಿದೆ ಎಂದು ಯುಐಡಿಎಐ ತಿಳಿಸಿದೆ. ಹಾಗಾದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀವು ತಿಳಿದುಕೊಳ್ಳಬೇಕಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಬೇಕು.

Update Aadhaar card for free
Update Aadhaar card for free
Join WhatsApp Group Join Telegram Group

ಪ್ರಮುಖ ದಾಖಲೆಯಾಗಿ ಆಧಾರ್ ಕಾರ್ಡ್ :

ಪ್ರಮುಖ ದಾಖಲೆಯಾಗಿ ಇಂದು ಭಾರತದಲ್ಲಿ ಆಧಾರ್ ಕಾರ್ಡ್ ಪಾತ್ರ ವಹಿಸುತ್ತಿದೆ. ಆಧಾರ್ ಕಾರ್ಡ್ ಎಲ್ಲಾ ಪರಿಸ್ಥಿತಿಯಲ್ಲಿಯೂ ಹಾಗೂ ಎಲ್ಲದಕ್ಕೂ ಅವಶ್ಯಕವಾದಂತಹ ಪ್ರಮುಖ ದಾಖಲೆಯಾಗಿದೆ ಎಂದು ಹೇಳಿದರು ತಪ್ಪಾಗಲಾರದು. ಇಂತಹ ಪರಿಸ್ಥಿತಿಯಲ್ಲಿಯೇ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯು ಐ ಡಿ ಎ ಐ) ಆಧಾರ ನೀಡುವ ಸಂಸ್ಥೆಯಾಗಿದ್ದು, ಇದು ಆಧಾರ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರಿಗೂ ಸಹ ಕೆಲವೊಂದಿಷ್ಟು ಸಮಯಗಳಲ್ಲಿ ಅಪ್ಡೇಟ್ ಮಾಡುವ ಬಗ್ಗೆ ಮಾಹಿತಿಯನ್ನು ನೀಡುತ್ತಿರುತ್ತದೆ. ಆಧಾರ್ ಕಾರ್ಡ್ ಅಪ್ಡೇಟ್ಗಾಗಿ ತುಂಬಾ ಜನ ಆಧಾರ್ ಉಪಯೋಗ ಮಾಡುವವರು ಈ ಮೇಲ್ ಅಥವಾ ವಾಟ್ಸಪ್ ನಲ್ಲಿ ಮೆಸೇಜ್ ಗಳನ್ನು ನೋಡುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಹೀಗೆ ಇಂತಹ ಹಲವಾರು ಮೆಸೇಜುಗಳನ್ನ ನೋಡಬೇಕಾದರೆ ನೀವು ಎಚ್ಚರವನ್ನು ವಹಿಸುವುದು ಅತ್ಯಂತ ಅವಶ್ಯಕವಾಗಿದೆ ಏಕೆಂದರೆ ಇದು ವಂಚನೆ ಮಾಡುವ ಹೊಸ ವಿಧಾನವಾಗಿದೆ ಎಂದು ಹೇಳಬಹುದು.

ಯು ಐ ಡಿ ಎ ಐ ಕಡೆಯಿಂದ ಆಧಾರ್ ಹೊಂದಿರುವವರಿಗೆ ಎಚ್ಚರಿಕೆ :

ಇಂದು ಭಾರತದಲ್ಲಿ ಕೋಟಿಗಟ್ಟಲೆ ಜನರು ಆಧಾರ್ ಕಾರ್ಡ್ ಅನ್ನು ಬಳಕೆ ಮಾಡುತ್ತಿದ್ದಾರೆ. ಇಂತಹ ಕೋಟಿಗಟ್ಟಲೆ ಆಧಾರ್ ಬಳಕೆದಾರರನ್ನ ಯುಐಡಿಎಐ ಎಚ್ಚರಿಸುತ್ತಾ ಬಂದಿದೆ. ಅದೇನೆಂದರೆ ಇಮೇಲ್ ಅಥವಾ ವಾಟ್ಸಪ್ ಮೂಲಕ ಯಾವುದೇ ದಾಖಲೆಗಳನ್ನು ಮೆಸೇಜ್ ಮಾಡುವ ಮೂಲಕ ಆಧಾರನ್ನು ಅಪ್ಡೇಟ್ ಮಾಡಲು ಯುಐಡಿಎಐ ಕೇಳುವುದಿಲ್ಲ ಎಂದು ಟ್ವಿಟರ್ ನಲ್ಲಿ ತಿಳಿಸಿದೆ. ಯಾವಾಗಲೂ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಲು ಆಧಾರ್ ಪೋರ್ಟಲ್ ಅನ್ನು ಅಂಥ ಸಂದರ್ಭದಲ್ಲಿ ಬಳಸಬೇಕು ಇಲ್ಲದಿದ್ದರೆ ಈ ಆಧಾರ್ ಸೇವೆಯನ್ನು ಆಫ್ಲೈನ್ ಸೌಲಭ್ಯದ ಮೂಲಕ ಬಳಸಬೇಕಾದರೆ ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕೆಂದು ಯುಐಡಿಎಐ ತಿಳಿಸಿದೆ.

ಹತ್ತು ವರ್ಷಗಳ ನಂತರ ಹಳೆಯ ಆಧಾರ್ ಅಪ್ಡೇಟ್ :

10 ವರ್ಷಗಳ ಹಳೆಯ ಆಧಾರ್ ಕಾರ್ಡನ್ನು ಕೆಲವು ಸಮಯದಿಂದ ಅಪ್ಡೇಟ್ ಮಾಡಲು ಯುಐಡಿಎಐ ತಿಳಿಸಿದೆ ಅಲ್ಲದೆ ಇದರ ಬಗ್ಗೆ ಮಾಹಿತಿಯನ್ನು ನೀಡುತ್ತಾ ಬಂದಿದೆ. ಇದರಲ್ಲಿ ಆಧಾರ್ ಕಾರ್ಡನ್ನು 10 ವರ್ಷಗಳಿಗಿಂತ ಹೆಚ್ಚು ಹಳೆಯದಾಗಿದ್ದರೆ ಅದನ್ನು ಅಪ್ಡೇಟ್ ಮಾಡಲು ತಿಳಿಸಿದೆ. ಜನರ ತಮ್ಮ ಜನಸಂಖ್ಯಾ ವಿವರಗಳಾದ ಗುರುತಿನ ಚೀಟಿ ಹಾಗೂ ವಿಳಾಸದ ಪುರಾವೆಯ ದಾಖಲೆಗಳನ್ನು ಆಧಾರ್ ಕಾರ್ಡ್ ನಲ್ಲಿ ನವೀಕರಿಸುವ ಮೂಲಕ ಆಧಾರ್ ಕಾರ್ಡ್ ಹತ್ತು ವರ್ಷಕ್ಕಿಂತ ಹೆಚ್ಚು ಹಳೆಯದಿರುವಂತಹ ಆಧಾರ್ ಕಾರ್ಡನ್ನು ನವೀಕರಿಸಲು ಯುಐಡಿಎಐ ತಿಳಿಸಿದೆ. ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವ ಸೌಲಭ್ಯವನ್ನು ಇದಕ್ಕಾಗಿ ಯುಐಡಿಎಐ ನೀಡಿದೆ. 2023 ಜೂನ್ 14ರವರೆಗೆ ಈ ಉಚಿತ ಸೇವೆಯು ಲಭ್ಯವಿತ್ತು ಆದರೆ ಇದೀಗ ಈ ಉಚಿತ ಸೇವೆಯನ್ನು 2023 ಸೆಪ್ಟೆಂಬರ್ 14ರ ವರೆಗೆ ವಿಸ್ತರಿಸಲಾಗಿದೆ.

ಇದನ್ನು ಓದಿ : ಹೆಣ್ಣು ಮಗು ಹುಟ್ಟಿದರೆ ಸಿಗುತ್ತೆ ₹50,000! ಈ ರೀತಿಯಾಗಿ ಅಪ್ಲೇ ಮಾಡಿದರೆ ಸಿಗಲಿದೆ ಸಂಪೂರ್ಣ ಲಾಭ

ಆಧಾರ್ ಕಾರ್ಡನ್ನು ಉಚಿತವಾಗಿ ಅಪ್ಡೇಟ್ ಮಾಡುವ ವಿಧಾನ :

ಉಚಿತವಾಗಿ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಬೇಕಾದರೆ ಆಧಾರ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಆಧಾರದ ಅಧಿಕೃತ ವೆಬ್ಸೈಟ್ ಎಂದರೆ https://myaadhaar.uidai.gov.in/ಈ ವೆಬ್ಸೈಟ್ನ ಮೂಲಕ ಆಧಾರ ಸಂಖ್ಯೆಯನ್ನು ನಮೂದಿಸಿ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಬಹುದಾಗಿದೆ.

ಹೀಗೆ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಅಪ್ಡೇಟ್ ಮಾಡುವ ಸಲುವಾಗಿ ವಂಚನೆಗಳು ನಡೆಯುತ್ತಿರುವುದರ ಬಗ್ಗೆ ತಿಳಿಸಿದ್ದು ಈ ಬಗ್ಗೆ ಎಚ್ಚರ ವಹಿಸಬೇಕೆಂದು ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಸಹ ತಿಳಿಸಿದೆ. ಹೀಗೆ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ಅವರು ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಸಲುವಾಗಿ ವಂಚನೆಗೆ ಒಳಗಾಗದಿರುವಂತೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ರೇಷನ್ ಕಾರ್ಡ್ ನಿಂದ ಕೆಲವಾರ ಹೆಸರು ಡಿಲೀಟ್ : ನಿಮ್ಮ ಹೆಸರು ಇದ್ದೀಯ ಚೆಕ್ ಮಾಡಿ , ಇಲ್ಲಿದೆ ಲಿಸ್ಟ್

ಕೆಲವೇ ಗಂಟೆಗಳಲ್ಲಿ ಭಾರಿ ಮಳೆಗೆ ತತ್ತರಿಸಲಿದೆ ರಾಜ್ಯ : ಸೆಪ್ಟೆಂಬರ್ 14 ರವರೆಗೆ ಮಳೆ ಆರ್ಭಟ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments