Saturday, June 15, 2024
HomeTrending News15,000 ಸಾವಿರ ರೂಪಾಯಿಗಳು ನೇರ ನಿಮ್ಮ ಖಾತೆಗೆ ಇಂದೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ

15,000 ಸಾವಿರ ರೂಪಾಯಿಗಳು ನೇರ ನಿಮ್ಮ ಖಾತೆಗೆ ಇಂದೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಲವೊಂದು ಯೋಜನೆಗಳನ್ನು ಕರ್ನಾಟಕ ಸರ್ಕಾರವು ನೀಡುತ್ತಿದೆ ಅದರಂತೆ ಈ ವಿದ್ಯಾಸಿರಿ ವಿದ್ಯಾರ್ಥಿ ವೇತನವು ಸಹ ಒಂದಾಗಿದೆ. ಈ ವಿದ್ಯಾಸಿರಿ ವಿದ್ಯಾರ್ಥಿ ವೇತನವು ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡುತ್ತಿರುವ ಒಂದು ಯೋಜನೆಯಾಗಿದೆ. ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ನೋಡಬಹುದು.

Vidyasiri Scholarship
Vidyasiri Scholarship
Join WhatsApp Group Join Telegram Group

ವಿದ್ಯಾಸಿರಿ ವಿದ್ಯಾರ್ಥಿ ವೇತನ :

ಕರ್ನಾಟಕ ಸರ್ಕಾರವು ಹಿಂದುಳಿದ ವರ್ಗಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನವನ್ನು ಆರಂಭಿಸಿದ್ದು, ಈ ವಿದ್ಯಾರ್ಥಿ ವೇತನವನ್ನು ಎಸ್ ಸಿ, ಎಸ್ ಟಿ, ಬಿಸಿ, ಓಬಿಸಿ ಮತ್ತು ಪಿ ಡಬ್ಲ್ಯೂ ಡಿ ವರ್ಗಗಳಿಗೆ ಸೇರಿದಂತಹ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ವಿದ್ಯಾಸಿರಿ ವಿದ್ಯಾರ್ಥಿ ವೇತನವನ್ನು ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಪ್ರಾರಂಭಿಸಿದ್ದು ಆಸಕ್ತ ಅಭ್ಯರ್ಥಿಗಳು ಎಸ್ ಎಸ್ ಬಿ ಪೋರ್ಟಲ್ ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಮಾನದಂಡಗಳು :

ವಾರ್ಷಿಕ ಐಎನ್ಆರ್ ಎರಡು ಲಕ್ಷ ರೂಪಾಯಿಗಳನ್ನು ಎಸ್ಸಿ, ಎಸ್ಟಿ ವಿದ್ಯಾರ್ಥಿಗಳ ಕುಟುಂಬದ ಆದಾಯವು ಮೀರಿರಬಾರದು. ಅದರಂತೆ ಬಿಸಿ ,ಒಬಿಸಿ ಹಾಗೂ ಅಂಗವಿಕಲ ವಿದ್ಯಾರ್ಥಿಗಳ ವಾರ್ಷಿಕ ಆದಾಯವು ಒಂದು ಲಕ್ಷ ಮೀರಿದ ಬಾರದು. ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವಂತಹ ಅಭ್ಯರ್ಥಿಗಳ ವಿಳಾಸ ಹಾಗೂ ಕಾಲೇಜು ನಡುವಿನ ಅಂತರವು 5 ಕಿ.ಮೀ ಗಿಂತ ಹೆಚ್ಚಿರ ಬೇಕು. ಪ್ರವರ್ಗ ಒಂದಕ್ಕೆ ಸೇರಿದ ಹೊಸ ಅಭ್ಯರ್ಥಿಗಳು ಕನಿಷ್ಠ 40% ಅಂಕಗಳನ್ನು ಪಡೆದಿರಬೇಕು 50 ಪರ್ಸೆಂಟ್ ಅಂಕಗಳನ್ನು ನವೀಕರಣ ಅರ್ಜಿದಾರರು ಹೊಂದಿರಬೇಕು. 2a, 3a ಮತ್ತು ತ್ರಿ ಬಿ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ಅಂಕವು ಶೇಕಡ 50ರಷ್ಟು ಇರಬೇಕು ಹಾಗೂ ಕನಿಷ್ಠ 60% ಅಂಕಗಳನ್ನು ನವೀಕರಣ ಅರ್ಜಿದಾರರು ಹೊಂದಿರಬೇಕು.

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಭಾರತೀಯ ನಾಗರೀಕರಾಗಿರಬೇಕು :

ಕರ್ನಾಟಕ ಸರ್ಕಾರ ಜಾರಿಗೆ ತಂದ ಈ ವಿದ್ಯಾರ್ಥಿ ವೇತನದ ವನ್ನು ಪಡೆಯಲು ಅಭ್ಯರ್ಥಿಗಳು ಭಾರತೀಯ ನಾಗರಿಕರಾಗಿರಬೇಕು. ಎಸ್ಸಿ ,ಎಸ್ಟಿ ,ಬಿಸಿ ,ಒಬಿಸಿ ,ಪಿಡಬ್ಲ್ಯೂಡಿ ಅಥವಾ ಅಲ್ಪಸಂಖ್ಯಾತ ವರ್ಗಕ್ಕೆ ಈ ಭಾರತೀಯ ನಾಗರಿಕರು ಸೇರಿದವರಾಗಿರಬೇಕು. ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಉತ್ತೀರ್ಣರಾಗಿರಬೇಕು. ಈ ಅಭ್ಯರ್ಥಿಗಳು ಸ್ಥಳೀಯ ಅಥವಾ ಅನುದಾನ ರಹಿತ ಸಂಸ್ಥೆಗಳಲ್ಲಿ ಮೆಟ್ರಿಕ್ ನಂತರದ ಕೋರ್ಸ್ ಗಳನ್ನು ಮಾಡುತ್ತಿರಬೇಕು.

ಇದನ್ನು ಓದಿ : ಇ ಶ್ರಮ್ ಕಾರ್ಡ್ ನಿಂದ ಹೊಸ ಸುದ್ದಿಇ ಶ್ರಮ್ ಕಾರ್ಡ್ ಮಾಡಿಸಲು ಕೊನೆಯ ದಿನಾಂಕ ನಿಗದಿಯಾಗಿದೆ

ವಿದ್ಯಾರ್ಥಿ ವೇತನಕ್ಕೆ ಬೇಕಾದ ಅಗತ್ಯ ದಾಖಲೆಗಳು :

ಕರ್ನಾಟಕ ಸರ್ಕಾರ ಆರಂಭಿಸಿದ ಈ ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಕೆ ದಾಖಲೆಗಳೆಂದರೆ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಹಿಂದಿನ ವರ್ಷದ ಅಂಕಪಟ್ಟಿ, 10ನೇ ತರಗತಿಯ ಅಂಕಪಟ್ಟಿ, ಮೊಬೈಲ್ ನಂಬರ್ , ವಿದ್ಯಾರ್ಥಿಯ ಪಾಸ್ಪೋರ್ಟ್ ಸೈಜ್ ಫೋಟೋ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುತ್ತದೆ. ಅರ್ಜಿ ಸಲ್ಲಿಸುವ ವಿಧಾನ : ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಕರ್ನಾಟಕ ಸರ್ಕಾರವು ಅಧಿಕೃತ ವೆಬ್ಸೈಟ್ ಅನ್ನು ನೀಡಿದ್ದು, ಅದು ಸೇವಾ ಸಿಂಧು ಪೋರ್ಟಲ್ಲಿ ಲಭ್ಯವಿದೆ. ಹೀಗೆ ಸೇವಾ ಸಿಂಧು ಪೋರ್ಟಲ್ ನಲ್ಲಿ ವಿದ್ಯಾಸಿರಿ, ವಿದ್ಯಾರ್ಥಿ ವೇತನಕ್ಕೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹೀಗೆ ಹಿಂದುಳಿದ ಹಾಗೂ ಬಡವರ್ಗದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವನ್ನು ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಈ ವಿದ್ಯಾರ್ಥಿ ವೇತನವನ್ನು ಆರಂಭಿಸಿದ್ದು, ಇದು ಹಿಂದುಳಿದ ಹಾಗೂ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯಲು ಸಹಾಯಕವಾಗಿದೆ ಎಂದು ಹೇಳಬಹುದು. ವಿದ್ಯಾರ್ಥಿ ವೇತನದ ಬಗ್ಗೆ ಯಾರಾದರೂ ಉನ್ನತ ಶಿಕ್ಷಣವನ್ನು ಪಡೆಯಲು ಹೆಚ್ಚಿಸಿದ್ದರೆ ಅವರಿಗೆ ಆರ್ಥಿಕ ನೆರವನ್ನು ಪಡೆಯುವ ಅವಕಾಶವನ್ನು ಕಲ್ಪಿಸಲು ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ವಿದ್ಯಾರ್ಥಿ ವೇತನದ ಒಟ್ಟು ಮೊತ್ತ ಎಷ್ಟು ?

ಹದಿನೈದು ಸಾವಿರ ರೂಪಾಯಿಗಳು

ವಿದ್ಯಾರ್ಥಿ ವೇತನದ ಯೋಜನೆಯ ಹೆಸರು ?

ವಿದ್ಯಾಸಿರಿ ವಿದ್ಯಾರ್ಥಿ ವೇತನ

ಇದನ್ನು ಓದಿ : Shimoga:ನಾಲ್ಕು ಹೊಸ ಮಾರ್ಗಗಳಲ್ಲಿ ಶಿವಮೊಗ್ಗದಿಂದ ವಿಮಾನ ಹಾರಾಟಕ್ಕೆ ಅನುಮತಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments