Saturday, July 27, 2024
HomeGovt Schemeಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದವರಿಗೂ ಹಾಗೂ ರಿಜೆಕ್ಟ್ ಆದವರಿಗೂ ರಾಜ್ಯ ಸರ್ಕಾರದಿಂದ ಹೊಸ ಸೂಚನೆ

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದವರಿಗೂ ಹಾಗೂ ರಿಜೆಕ್ಟ್ ಆದವರಿಗೂ ರಾಜ್ಯ ಸರ್ಕಾರದಿಂದ ಹೊಸ ಸೂಚನೆ

ನಮಸ್ಕಾರ ಸ್ನೇಹಿತರೇ, ಹಿಂದಿನ ಕಾಲದಲ್ಲಿ ಯಾವಾಗಲೂ ಮಹಿಳೆಯರು ಮನೆಯಲ್ಲಿಯೇ ಇರುತ್ತಿದ್ದರು , ಅಲ್ಲದೆ ಹೊರಗೆ ಹೋಗಲು ಮಹಿಳೆಯರು ಪುರುಷರ ಜೊತೆಯೇ ಹೋಗಬೇಕಿತ್ತು ಹಾಗೂ ಪರಪುರುಷರನ್ನು ಅವರು ನೋಡುವಂತು ಇರಲಿಲ್ಲ ಆದರೆ ಇದೀಗ ಕಾಲ ಬದಲಾಗಿದ್ದು ಸರ್ಕಾರವು ಈಗ ಮಹಿಳೆಯರ ಸರ್ವತೋಮುಖ ಬೆಳವಣಿಗೆಗೆ ವಿವಿಧವಾದ ಯೋಜನೆಗಳನ್ನು ಹಾಕುವ ಮೂಲಕ ಅವರ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನಿಸುತ್ತಿದೆ. ಹಾಗಾಗಿ ಕಾಂಗ್ರೆಸ್ ಸರ್ಕಾರವು ಈ ಬಾರಿ ಚುನಾವಣೆಯಲ್ಲಿ ಗೆದ್ದು ಬಂದ ನಂತರ ಎಲ್ಲಾ ಮಹಿಳಾ ಪರವಾದ ಅಭಿವೃದ್ಧಿಯನ್ನು ಒಂದು ಹೆಜ್ಜೆ ಮುಂದೆ ಬಂದು ಮಾಡುತ್ತಿದ್ದಾರೆ. ಹಾಗಾದರೆ ಮಹಿಳೆಯರಿಗೆ ನೀಡಲಾದ ಗೃಹಲಕ್ಷ್ಮಿ ಯೋಜನೆ ಹಾಗೂ ಶಕ್ತಿ ಯೋಜನೆಯಲ್ಲಿರುವ ಕೆಲವೊಂದು ಹೊಸ ಸೂಚನೆಗಳನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.

Women's Empowerment Scheme
Women’s Empowerment Scheme
Join WhatsApp Group Join Telegram Group

ಮಹಿಳೆಯರ ಸಬಲೀಕರಣ :

ಕಾಂಗ್ರೆಸ್ ಸರ್ಕಾರವು ಚುನಾವಣೆಗೂ ಪೂರ್ವದಲ್ಲಿ ಮಹಿಳೆಯರಿಗಾಗಿ ಕೆಲವೊಂದಿಷ್ಟು ಯೋಜನೆಗಳನ್ನು ಜಾರಿಗೆ ತಂದಿತ್ತು. ಅದರಲ್ಲಿ ಪ್ರಮುಖ ಯೋಜನೆಗಳೆಂದರೆ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆ ಯಾಗಿದೆ. ರಾಜ್ಯದ್ಯಂತ ಮಹಿಳೆಯರ ಮುಕ್ತ ಹೋರಾಟ ಶಕ್ತಿ ಯೋಜನೆಯ ಮೂಲಕ ಆರಂಭವಾಗಿದ್ದು ಇದನ್ನು ಹೊರತುಪಡಿಸಿ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಯನ್ನು ನೀಡಲು ಗೃಹಲಕ್ಷ್ಮಿ ಯೋಜನೆಯನ್ನು ಸಹ ಪ್ರಾರಂಭಿಸಲಾಗಿದೆ. ಪ್ರತಿ ತಿಂಗಳು 2000 ಗಳು ಮಹಿಳೆಯರ ಬ್ಯಾಂಕ್ ಖಾತೆಗೆ ಬರಲಿದ್ದು ಆ ಮೂಲಕ ಮಹಿಳೆಯರು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಬಹುದಾಗಿದೆ ಎಂದು ರಾಜ್ಯ ಸರ್ಕಾರವು ಈ ಯೋಜನೆಗಳನ್ನು ಹಮ್ಮಿಕೊಂಡಿದೆ.

ಗೃಹಲಕ್ಷ್ಮಿ ಯೋಜನೆ :

ಈ ನಡುವೆ ಹಣವೋ ಗೃಹಲಕ್ಷ್ಮಿ ಯೋಜನೆಯಲ್ಲಿನ ಫಲಾನುಭವಿಗಳಿಗೆ ಮಂಜೂರಾಗುತ್ತಿದ್ದು ಕೊನೆಯ ದಿನಾಂಕವನ್ನು ಅರ್ಜಿ ಸಲ್ಲಿಸಲು ಯಾವಾಗ ಎಂಬುದು ನೋಡಬೇಕಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದಂತಹ ಮಹಿಳೆಯರ ಪಡಿತರ ಚೀಟಿ ಸರಿಯಿಲ್ಲದವರಿಗೆ ಹಣವು ಸರಿಯಾಗಿ ಬಂದಿಲ್ಲದ ಕಾರಣ ಮನೆಯ ಜಮೀನಿಯ ಹೆಸರನ್ನು ರೇಷನ್ ಕಾರ್ಡಿನಲ್ಲಿ ನಮೂದಿಸಲು ರಾಜ್ಯ ಸರ್ಕಾರವು ಈಗಾಗಲೇ ತಿಳಿಸಿದೆ. ಹಾಗಾಗಿ ಸೆಪ್ಟೆಂಬರ್ 14ರವರೆಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಸಮಯವನ್ನು ರಾಜ್ಯ ಸರ್ಕಾರ ನಿಗದಿ ಮಾಡಿದೆ.

ಇದನ್ನು ಓದಿ : IAS ಪ್ರಶ್ನೆ: 2 ಬಾರಿ ಬಿಸಿ ಮಾಡಿ ತಿಂದರೆ ಯಾವ ಆಹಾರದ ವಸ್ತು ಅಪಾಯವಾಗುತ್ತದೆ?

ರೇಷನ್ ಕಾರ್ಡ್ ತಿದ್ದುಪಡಿಗೆ ಕೊನೆಯ ದಿನಾಂಕ :

ಸೆಪ್ಟೆಂಬರ್ 14ರ ಒಳಗಾಗಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ತಮ್ಮ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಲು ಬೆಂಗಳೂರು ಒನ್,ಅಟಲ್ ಜನ ಸ್ನೇಹಿ, ಬಾಪೂಜಿ ಸೇವಾ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಲು ಕೊನೆಯ ದಿನವಾಗಿ ರಾಜ್ಯ ಸರ್ಕಾರವು ತಿಳಿಸಿದೆ. ಹಾಗಾಗಿ ರೇಷನ್ ಕಾರ್ಡ್ ನಲ್ಲಿ ಮನೆ ಯಜಮಾನಿ ಎಂದು ಸ್ಥಾನ ಬದಲಾವಣೆ ಮಾಡುವುದು ಇಂದಿನ ಕಾಲದಲ್ಲಿ ತುಂಬಾ ಅಗತ್ಯವಾಗಿದ್ದು ಆ ಮೂಲಕ ರಾಜ್ಯ ಸರ್ಕಾರದ ಹಲವಾರು ಯೋಜನೆಗಳನ್ನು ಪಡೆಯಬಹುದಾಗಿದೆ. ಅಲ್ಲದೆ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಇದುವರೆಗೂ ಯಾವುದೇ ಕೊನೆಯ ದಿನಾಂಕವನ್ನು ನೋಂದಣಿ ಮಾಡಿಸಲು ನಿಗದಿ ಮಾಡಿರುವುದಿಲ್ಲ. 1902 ಸಹಾಯವಾಣಿಯನ್ನು ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಸಂಪರ್ಕಿಸಬಹುದಾಗಿದೆ.

ಒಟ್ಟಾರೆಯಾಗಿ ರಾಜ್ಯ ಸರ್ಕಾರದ ಮಹತ್ವದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ, ಉದ್ಘಾಟನೆಯು ಪ್ರಾರಂಭವಾಗಿದ್ದು ಅತ್ಯಂತ ವಿಜ್ರಂಭಣೆಯಿಂದ ಈ ಯೋಜನೆಗೆ ರಾಜ್ಯ ಸರ್ಕಾರವು ಚಾಲನೆ ನೀಡಿದೆ. ಮಹಾಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ ನಂತರ ಬಹುತೇಕರಿಗೆ ಈ ಯೋಜನೆ ಅಡಿಯಲ್ಲಿ ಹಣ ಬಂದಿದ್ದು ಇನ್ನೂ ಬಹುತೇಕರಿಗೆ ಹಣಬಾರದ ಹಿನ್ನೆಲೆಯಲ್ಲಿ ಅನೇಕ ಗೊಂದಲಗಳು ಅವರಲ್ಲಿ ಸೃಷ್ಟಿಯಾಗಿದೆ ಹಾಗಾಗಿ ಸರ್ಕಾರವು ಈ ಬಗ್ಗೆ ಸೂಕ್ತ ಸ್ಪಷ್ಟನೆಯನ್ನು ನೀಡುವುದು ಅಗತ್ಯವಾಗಿದೆ ಎಂದು ಹೇಳಬಹುದಾಗಿದೆ. ಹೀಗೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತಹ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಈ ಲೇಖನವನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಬೆಳೆ ಹಾನಿ ಪರಿಹಾರ ಹಣ ಬಿಡುಗಡೆ: ರೈತರಿಗೆ ಈ ದಿನಾಂಕದಂದು ನಿಮ್ಮ ಖಾತೆಗೆ ಪರಿಹಾರ ಹಣ

IAS ಪ್ರಶ್ನೆ: 2 ಬಾರಿ ಬಿಸಿ ಮಾಡಿ ತಿಂದರೆ ಯಾವ ಆಹಾರದ ವಸ್ತು ಅಪಾಯವಾಗುತ್ತದೆ?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments