Thursday, July 25, 2024
HomeTrending Newsಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದವರಿಗೆ ಮತ್ತೊಂದು ಹೊಸ ಬದಲಾವಣೆ! ಈ ಕೂಡಲೇ ಬ್ಯಾಂಕ್ ಖಾತೆಗೆ ಆಧಾರ್...

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದವರಿಗೆ ಮತ್ತೊಂದು ಹೊಸ ಬದಲಾವಣೆ! ಈ ಕೂಡಲೇ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆಯಾ ಚೆಕ್ ಮಾಡಿಕೊಳ್ಳಿ

ನಮಸ್ಕಾರ ಸ್ನೇಹಿತರೇ ಕರ್ನಾಟಕ ಸರ್ಕಾರ ಆರಂಭಿಸಿದಂತಹ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ರಾಜ್ಯ ಸರ್ಕಾರವು ಚಾಲನೆ ನೀಡಿದ್ದು ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಿರುವುದನ್ನು ನೋಡಬಹುದಾಗಿದೆ. ಗೃಹಲಕ್ಷ್ಮಿ ಯೋಜನೆಯ ಸಾವಿರ ರೂಪಾಯಿಗಳನ್ನು ಪಡೆಯಬೇಕಾದರೆ ಅರ್ಜಿಯನ್ನು ಸಲ್ಲಿಸಿದಂತಹ ಮಹಿಳೆಯರು ಅವರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿ ಇರುವುದು ಕಡ್ಡಾಯವಾಗಿದೆ. ಹಾಗಾದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂಬುದರ ಬಗ್ಗೆ ಈ ಕೂಡಲೇ ಚೆಕ್ ಮಾಡಿಕೊಳ್ಳಿ. ಆಧಾರ್ ಕಾರ್ಡ್ ಲಿಂಕ್ ಆಗಿರುವುದರ ಬಗ್ಗೆ ಹೇಗೆ ಚೆಕ್ ಮಾಡಿಕೊಳ್ಳಬೇಕು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Bank Pass Book Link with Aadhaar Card
Join WhatsApp Group Join Telegram Group

ಆಧಾರ್ ಕಾರ್ಡ್ ನೊಂದಿಗೆ ಬ್ಯಾಂಕ್ ಪಾಸ್ ಬುಕ್ ಲಿಂಕ್ :

ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಮುಖ್ಯವಾಗಿ ಅಭ್ಯರ್ಥಿಗಳು ಆಧಾರ್ ಕಾರ್ಡ್ ನೊಂದಿಗೆ ಬ್ಯಾಂಕ್ ಪಾಸ್ ಬುಕ್ ಅನ್ನು ಲಿಂಕ್ ಮಾಡಿರಬೇಕಾಗುತ್ತದೆ. ಆಗ ಮಾತ್ರ ನಿಮ್ಮ ಆಧಾರ್ ಕಾರ್ಡ್ ಮೂಲಕ ಬ್ಯಾಂಕ್ ಪಾಸ್ ಬುಕ್ ಲಿಂಕ್ ಆಗಿದ್ದರೆ ಅನ್ನಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

ಆಧಾರ್ ಕಾರ್ಡ್ ನೊಂದಿಗೆ ಡಿಬಿಟಿ ಲಿಂಕ್ :

ಆಧಾರ್ ಕಾರ್ಡ್ ನೊಂದಿಗೆ ಡಿಬಿಟಿ ಲಿಂಕ್ ಮಾಡಲು ರಾಜ್ಯ ಸರ್ಕಾರವು ಈಗಾಗಲೇ ಜನಸಾಮಾನ್ಯರಿಗೆ ತಿಳಿಸಿದೆ. ಡಿಬಿಟಿ ಮೂಲಕವೇ ಮಹಿಳೆಯರಿಗೆ ಅನ್ನಭಾಗ್ಯ ಯೋಜನೆಯ ಹಣ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಅವರ ಬ್ಯಾಂಕ್ ಖಾತೆಗೆ ನೀಡಲಾಗುತ್ತದೆ. ಡಿಬಿಟಿ ಎಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಎಂದರ್ಥ. ಇದರ ಮೂಲಕ ಆಧಾರ್ ಕಾರ್ಡಿಗೆ ಮಹಿಳೆಯರು ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ನಂಬರನ್ನು ನೀಡಿರಬೇಕು. ಆಗ ಮಾತ್ರ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಸಾವಿರ ರೂಪಾಯಿಗಳು ಹಾಗೂ ಅನ್ನಭಾಗ್ಯ ಯೋಜನೆಯ 170 ರೂಪಾಯಿಗಳು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಡಿ ವಿ ಟಿನ್ ಮೂಲಕ ಲಿಂಗ ಮಾಡಿದರೆ ನೇರವಾಗಿ ಸರ್ಕಾರದ ಎಲ್ಲಾ ಸೌಲಭ್ಯಗಳ ಹಣವನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಹಾಗಾಗಿ ಮಹಿಳೆಯರು ಅರ್ಜಿಯನ್ನು ಗೃಹಲಕ್ಷ್ಮಿ ಯೋಜನೆಗೆ ಸಲ್ಲಿಸುವ ಮುನ್ನ ಆಧಾರ್ ಕಾರ್ಡ್ ಗೆ ಡಿ ಬಿ ಟಿ ಲಿಂಕ್ ಆಗಿದೆಯೇ ಇಲ್ಲವೇ ಎಂಬುದನ್ನು ದೃಢಪಡಿಸಿಕೊಂಡ ನಂತರ ಅರ್ಜಿ ಸಲ್ಲಿಸಬೇಕು.

ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆ ಯಜಮಾನಿಯರ ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ! ನಿಮ್ಮ ಹೆಸರನ್ನು ಮೊಬೈಲ್ ಮೂಲಕ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ

ಆಧಾರ್ ಕಾರ್ಡ್ ಹಾಗೂ ಡಿ ಬಿ ಟಿ ಲಿಂಕ್ ಮಾಡುವ ವಿಧಾನ :

ಮಹಿಳೆಯರು ಆಧಾರ್ ಕಾರ್ಡ್ ಗೆ ಡಿಬಿಟಿಯನ್ನು ಲಿಂಕ್ ಮಾಡಲು ಆಧಾರ್ ಕಾರ್ಡ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ಲಿಂಕ್ ಮಾಡಲಾಗುತ್ತದೆ. ಆಧಾರ್ ಕಾರ್ಡ್ ನ ಅಧಿಕೃತ ವೆಬ್ಸೈಟ್ ಎಂದರೆ https://resident.uidai.gov.in/bank-mapper ಈ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ಅಭ್ಯರ್ಥಿಗಳು ಆಧಾರ್ ಕಾರ್ಡ್ ನೊಂದಣಿ ಮಾಡಿ ನಂತರ ಅದರ ಕ್ಯಾಪ್ಚರನ್ನು ಎಂಟರ್ ಮಾಡಬೇಕು. ಆಧಾರ್ ಕಾರ್ಡ್ ನ ನಂಬರ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಓಟಿಪಿಯನ್ನು ನೀಡಲಾಗುತ್ತದೆ. ಅದಾದ ನಂತರ ಓಟಿಪಿಯನ್ನು ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯನ್ನು ಗೆ ಲಿಂಕ್ ಆಗಿದ್ದರೆ ತೋರಿಸುತ್ತದೆ. ಒಂದು ವೇಳೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿ ಏನ್ ಪಿಸಿಐ ಮ್ಯಾಪಿಂಗ್ ಆಗಿದ್ದರೆ, ಆಗ ನಿಮಗೆ ಕಂಗ್ರಾಜುಲೇಷನ್ಸ್ ಯುವರಾಧಾರ್ ಬ್ಯಾಂಕ್ ಮ್ಯಾಪಿಂಗ್ ಹ್ಯಾಸ್ ಬೀನ್ ಡನ್ ಎಂದು ಸಂದೇಶ ಬರುತ್ತದೆ. ಇದಲ್ಲದೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಅನ್ನು ಎ ಟಿ ಎಂ ಮೂಲಕವೂ ಸಹ ಮಾಡಿಸಬಹುದಾಗಿದೆ.

ಹೀಗೆ ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಮೊದಲು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಇಲ್ಲವೇ ಎಂಬುದನ್ನು ತಿಳಿದುಕೊಂಡ ನಂತರ ಅರ್ಜಿ ಸಲ್ಲಿಸುವುದು ಉತ್ತಮ ಎಂದು ಹೇಳಲಾಗುತ್ತದೆ. ಆಧಾರ್ ಕಾರ್ಡ್ ಜೊತೆಗೆ ಬ್ಯಾಂಕ್ ಪಾಸ್ ಬುಕ್ ಲಿಂಕ್ ಆಗಿದೆ ಇಲ್ಲವೇ ಎಂಬುದರ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ಶೇರ್ ಮಾಡುವುದರ ಮೂಲಕ ಅವರು ಸಹ ಈ ಬಗ್ಗೆ ತಿಳಿದುಕೊಂಡಿ ಈ ಕೂಡಲೇ ಆಧಾರ್ ಕಾರ್ಡ್ ನೊಂದಿಗೆ ಬ್ಯಾಂಕ್ ಪಾಸ್ ಬುಕ್ ಅನ್ನು ಲಿಂಕ್ ಮಾಡಿಸಿಕೊಳ್ಳಲು ಸಹಾಯ ಮಾಡಿ ಧನ್ಯವಾದಗಳು

ಇತರೆ ವಿಷಯಗಳು :

ಟೊಮೊಟೊ ಬೆಲೆ ಏರಿಕೆಯಲ್ಲಿರುವ ಜನರಿಗೆ ಕಣ್ಣೀರು ತರಿಸಿದ ಈರುಳ್ಳಿ! ದಿಡೀರ್ ಈರುಳ್ಳಿ ಬೆಲೆಯಲ್ಲಿ ಭಾರೀ ಏರಿಕೆ

KSRTC ಯಿಂದ ಪುರುಷರಿಗೂ ಇದೆ ಹೊಸ ಯೋಜನೆಯ ಲಾಭ! ಹಾಗಾದ್ರೆ ಪುರುಷರು ಈಗಲೇ ಅರ್ಜಿ ಹಾಕಲು ರೆಡಿಯಾಗಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments