Saturday, June 22, 2024
HomeTrending Newsಭದ್ರಾವತಿ ವಿಐಎಸ್ಎಲ್ ಕಾರ್ಖಾನೆ ಪುನರ್ ಆರಂಭ: ಸರ್ಕಾರದಿಂದ ವಿಐಎಸ್ಎಲ್ ಪುನರಾರಂಭಕ್ಕೆ ಚಾಲನೆ

ಭದ್ರಾವತಿ ವಿಐಎಸ್ಎಲ್ ಕಾರ್ಖಾನೆ ಪುನರ್ ಆರಂಭ: ಸರ್ಕಾರದಿಂದ ವಿಐಎಸ್ಎಲ್ ಪುನರಾರಂಭಕ್ಕೆ ಚಾಲನೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ವಿಐಎಸ್ಎಲ್ ಕಾರ್ಖಾನೆ, ಪುನರಾರಂಭದ ಬಗ್ಗೆ. ವಿಐಎಸ್ಎಲ್ ಕಾರ್ಖಾನೆಯನ್ನು ಪುನರಾರಂಭಿಸಲು ಕೇಂದ್ರ ಸರ್ಕಾರವು ಆಗಸ್ಟ್ ಹತ್ತರಂದು ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾರವು ಈ ಕಾರ್ಖಾನೆ ಪುನರಾರಂಭ ಮಾಡಲು ಒಪ್ಪಿಗೆ ನೀಡಿದೆ ಎಂದು ಸಂಸದರಾದ ಶ್ರೀ ಬಿ ವೈ ರಾಘವೇಂದ್ರ ಅವರು ಹೇಳಿದರು. ಹಾಗಾದರೆ ವಿ ಐ ಎಸ್ ಎಲ್ ಕಾರ್ಖಾನೆ ಯಾವಾಗ ಪ್ರಾರಂಭವಾಗುತ್ತದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀವು ನೋಡಬಹುದು.

Bhadravati VISL Factory
Bhadravati VISL Factory
Join WhatsApp Group Join Telegram Group

ವಿ ಐ ಎಸ್ ಎಲ್ ಕಾರ್ಖಾನೆ ಪುನರ್ ಆರಂಭ :

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜಿ, ಕೇಂದ್ರ ಗೃಹ ಸಚಿವ ಸನ್ಮಾನ್ಯ ಶ್ರೀ ಅಮಿತ್ ಶಾ ಜಿ ಮತ್ತು ಕೇಂದ್ರದ ಉಕ್ಕು ಸಚಿವ ಸನ್ಮಾನ್ಯ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾಜೆ ಅವರುಗಳ ಚರ್ಚೆ ಹಾಗೂ ಸ್ಪಷ್ಟ ನಿರ್ದೇಶನದೊಂದಿಗೆ ಭದ್ರಾವತಿಯ ವಿಐಎಸ್ಎಲ್ ನಲ್ಲಿ ಉತ್ಪಾದನಾ ಚಟುವಟಿಕೆಗಳನ್ನು ಆಡಳಿತ ಮಂಡಳಿಯು ಪುನರ್ ಆರಂಭಿಸಲು ಅಂತಿಮವಾಗಿ ಒಪ್ಪಿಕೊಂಡಿದೆ. ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರುವ ಸಂಸದ ಶ್ರೀ ಬಿ ವೈ ರಾಘವೇಂದ್ರ ಅವರು ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಪುನರ್ ಆರಂಭಿಸಲು ಒಪ್ಪಿಗೆ ನೀಡಿರುವುದು ನನಗೆ ಅತ್ಯಂತ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.

ವಿಐಎಸ್ಎಲ್ ಕಾರ್ಖಾನೆ ಪುನರಾರಂಭ ದಿನಾಂಕ :

ಆಗಸ್ಟ್ 10 ರಿಂದ ವಿಐಎಸ್ಎಲ್ ಕಾರ್ಖಾನೆಯೂ ಪ್ರಾರಂಭವಾಗಲಿದ್ದು, ಎಸ್ ಎ ಎಲ್ ಆಡಳಿತ ಮಂಡಳಿಯ ಅನ್ವಯ ಬಾರ್ ಮಿಲ್ ಕಾರ್ಯಾಚರಣೆಗಳು ಪ್ರಾರಂಭವಾಗಲಿದೆ ಹಾಗೂ ಮುಂದಿನ ದಿನಗಳಲ್ಲಿ ಪ್ರಾಥಮಿಕ ಗಿರಣಿಯು ಸಹ ಪುನರ್ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ : ನಿಮ್ಮ ಫೋನ್‌ ಕಳೆದು ಹೋಗಿದ್ಯಾ? ಹಾಗಾದ್ರೆ 2 ನಿಮಿಷಗಳಲ್ಲಿ ಪತ್ತೆ ಹಚ್ಚಿ, ಸರ್ಕಾರದಿಂದ ಹೊಸ ಪ್ಲಾನ್‌ ಬಿಡುಗಡೆ

ವಿಐಎಸ್ಎಲ್ ಕಾರ್ಖಾನೆ :

ಉದ್ಯೋಗಿ ಸಮುದಾಯವು ವಿಐಎಸ್ ಅನ್ನು ನಂಬಿಕೊಂಡಿದ್ದು ಮತ್ತು ಭದ್ರಾವತಿಯ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ನೀಡಿರುವಂತಹ ವಿಐಎಸ್ಎಲ್ ಪುನರಾರಂಭದ ಈ ಒಂದು ಮಹತ್ವದ ನಿರ್ಧಾರವು ಒಂದು ಖುಷಿಯ ಸಂತೋಷವಾಗಿದೆ ಎಂದು ಭಾವಿಸುತ್ತೇನೆ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು. ಕೇಂದ್ರ ಸರ್ಕಾರದ ನಿರಂತರ ಪ್ರಯತ್ನದ ಫಲವಾಗಿ ಕೇಂದ್ರ ಸರ್ಕಾರವು ಇಂತಹ ಒಂದು ಮಹತ್ತರವಾದ ನಿರ್ಣಯವನ್ನು ಕೈಗೊಳ್ಳಲು ಸಹಕರಿಸಿದ್ದು, ಈ ಮಹತ್ವದ ಮೈಲಿಗಲ್ಲನ್ನು ಪಡೆಯಲು ದಣಿವರಿವಿಲ್ಲದೆ ಶ್ರಮಿಸಿದ್ದೇವೆ. ಕೇಂದ್ರ ಸರ್ಕಾರ ವಿಐಎಸ್ಎಲ್ ನ ಪುನರು ಜೀವನಕ್ಕೆ ನೀಡಿದಂತಹ ಭರವಸೆಗಳನ್ನು ಈಡೇರಿಸಿದ ಅವರ ಅಚಲ ಬದ್ಧತೆಗಾಗಿ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇನೆ.

ಮುಂದಿನ ದಿನಗಳಲ್ಲಿ ವಿಐಎಸ್ಎಲ್ ಶೀಘ್ರದಲ್ಲಿಯೇ ಉನ್ನತ ಯಶಸ್ಸನ್ನು ಕಾಣಲಿ ಹಾಗೂ ಸಮೃದ್ಧಿಯ ಹಾದಿಯಲ್ಲಿ ಸಾಗಿ ತನ್ನ ಗತವೈಭವವನ್ನು ಮರಳಿ ಪಡೆಯುವಂತೆ ಆಶಿಸುತ್ತೇನೆ ಅಲ್ಲದೆ ಪಡೆಯುತ್ತದೆ ಎಂಬ ವಿಶ್ವಾಸವು ಸಹ ನನಗೆ ಇದೆ ಎಂದು ಸಂಸದ ಬಿ ವೈ ರಾಘವೇಂದ್ರ ಅವರು ತಿಳಿಸಿದರು. ಇದರ ಜೊತೆಗೆ ಕೇಂದ್ರ ಸರ್ಕಾರದ ಇಂತಹ ಒಂದು ಮಹತ್ವದ ತೀರ್ಮಾನ ಬರುವವಲ್ಲಿ ತಾಳ್ಮೆಯಿಂದ ಸಹಕರಿಸಿದಂತಹ ವಿಐಎಸ್ಎಲ್ ನ ಎಲ್ಲಾ ನೌಕರ ಬಾಂಧವರಿಗೆ ಹಾಗೂ ಕಾರ್ಮಿಕ ಸಂಘಟನೆಯ ಮುಖಂಡರಿಗೆ ಜೊತೆಗೆ ಜನಪ್ರೀತಿ ನದಿಗಳಿಗೂ ಸಹ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ಬಿ ವೈ ರಾಘವೇಂದ್ರ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದರು.

ಹೀಗೆ ವಿಐಎಸ್ಎಲ್ ಅನ್ನು ಪುನರಾರಂಭಿಸಲು ಕೇಂದ್ರ ಸರ್ಕಾರವು ಒಪ್ಪಿಗೆಯನ್ನು ನೀಡಿದ್ದು ಆಗಸ್ಟ್ 10 ರಿಂದ ಅತ್ಯುನ್ನತ ಕಾರ್ಖಾನೆಯಾದ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯು ತನ್ನ ಕಾರ್ಯವನ್ನು ಪುನರ್ ಆರಂಭಿಸಿದ್ದು ಇದು ಭದ್ರಾವತಿ ಜನಸಾಮಾನ್ಯರ ಜೀವನ ಮಟ್ಟವನ್ನು ಸುಧಾರಿಸಲು ಸಹಕಾರಿಯಾಗುತ್ತದೆ ಎಂದು ಎಲ್ಲರ ಆಶಯವಾಗಿದೆ. ಈ ಒಂದು ಕಾರ್ಖಾನೆಯೂ ತನ್ನ ಗತವೈಭವದ ಇತಿಹಾಸವನ್ನು ಕಳೆದುಕೊಂಡಿರುವುದು ಒಂದು ಶೋಚನೀಯ ಸಂಗತಿ ಎನಿಸಿದರು ಇದು ಪುನರ್ ಆರಂಭವಾಗುತ್ತಿರುವುದು ಒಳ್ಳೆಯ ಸುದ್ದಿ ಎಂದು ತಿಳಿಯಬಹುದಾಗಿದೆ. ಹೀಗೆ ಭದ್ರಾವತಿಯ ಕಾರ್ಖಾನೆಯು ಪುನರಾರಂಭವಾಗುವುದರ ಬಗ್ಗೆ ನಿಮ್ಮ ಸ್ನೇಹಿತರು ಹಾಗು ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಕೇವಲ ಐದು ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲೇ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ, ಲಿಂಕ್‌ ಇಲ್ಲಿದೆ ನೋಡಿ

EMI ಹೊಸ ರೂಲ್ಸ್! EMI ಸಾಲ ತೆಗೆದುಕೊಂಡಿದ್ದರೆ ಈ ಕೂಡಲೇ ಈ ಮಾಹಿತಿಯನ್ನು ಓದಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments