Saturday, July 27, 2024
HomeInformationಇನ್ನೆರಡು ಬ್ಯಾಂಕುಗಳ ಲೈಸನ್ಸ್ ರದ್ದು : ಹಣವನ್ನು ತೆಗೆಯಲು ನಿರ್ಬಂಧ ಹೇರಲಾಗಿದೆ

ಇನ್ನೆರಡು ಬ್ಯಾಂಕುಗಳ ಲೈಸನ್ಸ್ ರದ್ದು : ಹಣವನ್ನು ತೆಗೆಯಲು ನಿರ್ಬಂಧ ಹೇರಲಾಗಿದೆ

ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತೆ ಇನ್ನ ಎರಡು ಬ್ಯಾಂಕುಗಳ ಲೈಸೆನ್ಸ್ ಅನ್ನು ರದ್ದು ಮಾಡಿರುವುದರ ಬಗ್ಗೆ. ನೀವೇನಾದರೂ ಈ ಬ್ಯಾಂಕುಗಳಲ್ಲಿ ಖಾತೆಯನ್ನು ಹೊಂದಿದ್ದರೆ ಈ ವಿಷಯವನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಆರ್ ಬಿ ಐ ಕಳೆದ ಕೆಲವು ವರ್ಷಗಳಿಂದ ಕೆಲವು ಬ್ಯಾಂಕುಗಳ ವ್ಯವಹಾರದ ಮೇಲೆ ಕಠಿಣವಾಗಿ ನಿರ್ಬಂಧ ಹೇರಿದೆ. ಈಗಾಗಲೇ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ಸಹಕಾರಿ ಬ್ಯಾಂಕುಗಳ ಲೈಸೆನ್ಸ್ ಅನ್ನು ಸಹ ರದ್ದುಪಡಿಸಿ ಬ್ಯಾಂಕುಗಳು ಕಾರ್ಯನಿರ್ವಹಿಸಿದಂತೆ ತಡೆಯೊಡ್ಡಿದೆ. ಈಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತೆ ಎರಡು ಬ್ಯಾಂಕುಗಳ ಲೈಸೆನ್ಸ್ ಅನ್ನು ರದ್ದು ಮಾಡಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದ್ದು ಯಾವ ಎರಡು ಬ್ಯಾಂಕುಗಳ ಲೈಸೆನ್ಸ್ ಅನ್ನು ರದ್ದು ಮಾಡಿದೆ ಎಂದು ನೋಡುವುದಾದರೆ.

cancellation-of-license-of-two-other-banks
cancellation-of-license-of-two-other-banks
Join WhatsApp Group Join Telegram Group

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮಗಳು :

ಈ ಹಿಂದೆ ಕೆಲವು ಸಹಕಾರಿ ಬ್ಯಾಂಕುಗಳ ಲೈಸೆನ್ಸ್ ಅನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರದ್ದು ಮಾಡಿದ್ದು ಅಷ್ಟೇ ಅಲ್ಲದೆ ಕೆಲವು ಬ್ಯಾಂಕುಗಳು ಭಾರಿ ಪ್ರಮಾಣದ ತಂಡವನ್ನು ಸಹ ಧರಿಸಿವೆ ಎಂದು ಹೇಳಬಹುದಾಗಿದೆ. ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತೆ ಕೆಲವು ಬ್ಯಾಂಕುಗಳ ವ್ಯವಹಾರದ ಮೇಲೆ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೊಳಿಸಿದೆ. ಯಾವ ಬ್ಯಾಂಕುಗಳು ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳನ್ನು ಪಾಲಿಸಿಲ್ಲವೋ ಅಂತಹ ಬ್ಯಾಂಕುಗಳ ವಿರುದ್ಧ ನಿರಂತರವಾಗಿ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುತ್ತಿದೆ. ತಿರುವನಂತಪುರಂನ ಅನಂತಶಯನಂ ಸಹಕಾರಿ ಬ್ಯಾಂಕ್ ಲಿಮಿಟೆಡ್ನ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸೆಪ್ಟೆಂಬರ್ 21ರಂದು ರದ್ದುಗೊಳಿಸಿತ್ತು. ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ಇನ್ನೆರಡು ಬ್ಯಾಂಕುಗಳ ಪರವಾನಗಿಯನ್ನು ರದ್ದುಗೊಳಿಸಲು ನಿರ್ಧರಿಸಿದ್ದು ಈಗಾಗಲೇ ರದ್ದುಗೊಳಿಸಿದೆ.

ಎರಡು ಬ್ಯಾಂಕುಗಳ ಪರವಾನಗಿ ರದ್ದು :

ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಹಲವಾರು ನಿಯಮಗಳನ್ನು ಜಾರಿಗೆ ತಂದಿದ್ದು ಆ ನಿಯಮಗಳನ್ನು ಪಾಲಿಸದೆ ಇರುವಂತಹ ಬ್ಯಾಂಕುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ನಿರಂತರವಾಗಿ ಕೈಗೊಳ್ಳುತ್ತಿದೆ. ಇದೀಗ ಮತ್ತೆ ಎರಡು ಬ್ಯಾಂಕುಗಳ ಪರವಾನಗಿಯನ್ನು ರದ್ದುಗೊಳಿಸಿದ್ದು, ಆ ಬ್ಯಾಂಕುಗಳು ಯಾವುದೇ ರೀತಿಯ ಬ್ಯಾಂಕಿಂಗ್ ವ್ಯವಹಾರವನ್ನು ಮಾಡದಂತೆ ರ್‌ಬಿಐ ನಿಷೇಧಿಸಿದೆ. ತಮ್ಮ ಬ್ಯಾಂಕಿಂಗ್ ವ್ಯವಹಾರಗಳನ್ನು ಬ್ಯಾಂಕುಗಳು ರ್‌ಬಿಐನ ಪ್ರಕಾರ ಮುಂದುವರೆಸಲು ಅನುಮತಿಸಿದರೆ ಅದು ಜನಸಾಮಾನ್ಯರ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದ್ದು ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ಎರಡು ಸಹಕಾರಿ ಬ್ಯಾಂಕುಗಳ ಪರವಾನಗಿಯನ್ನು ರದ್ದುಗೊಳಿಸಿದೆ ಅವುಗಳೆಂದರೆ, ಕರ್ನಾಟಕದ ಮಲ್ಲಿಕಾರ್ಜುನ ಪಟ್ಟಣ ಕೋ ಆಪರೇಟಿವ್ ಬ್ಯಾಂಕ್ ಹಾಗೂ ಯುಪಿಯ ಬ್ರಹ್ಮಚನ ನ್ಯಾಷನಲ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್. ಈ ಬ್ಯಾಂಕುಗಳ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ರದ್ದುಗೊಳಿಸಿದೆ ಇದರಿಂದ ಬ್ಯಾಂಕಿಂಗ್ ವ್ಯವಹಾರದ ಮೇಲೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿದೆ.

ಇದನ್ನು ಓದಿ : ನಮ್ಮ ಸಾವಿನ ನಂತರ ಬ್ಯಾಂಕ್‌ನಲ್ಲಿ ಹಣ ಯಾರಿಗೆ ಸಿಗುತ್ತೆ ..?

ಆರ್‌ಬಿಐ ರದ್ದುಗೊಳಿಸಲು ಮುಖ್ಯ ಕಾರಣ :

ಬಂಡವಾಳ ಮತ್ತು ಗಳಿಕೆಯ ಸಾಮರ್ಥ್ಯವನ್ನು ಈ ಎರಡು ಬ್ಯಾಂಕುಗಳು ಹೊಂದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದ್ದು ಬ್ಯಾಂಕಿಂಗ್ ರೆಗುಲೇಷನ್ ಆಕ್ಟ್ 1949 ರ ಸೆಕ್ಷನ್ 56ರ ಸೆಕ್ಷನ್ 11 (2) ಮತ್ತು ಸೆಕ್ಷನ್ 22 (3)(D) ನಿಬಂಧನೆಗಳನ್ನು ಈ ಎರಡು ಬ್ಯಾಂಕುಗಳು ಅನುಸರಿಸಲು ವಿಫಲವಾಗಿರುವ ಕಾರಣ ಈ ಬ್ಯಾಂಕುಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಅಲ್ಲದೆ ಆ ಬ್ಯಾಂಕುಗಳ ಆರ್ಥಿಕ ಸ್ಥಿತಿಯಿಂದಾಗಿ ಈ ಬ್ಯಾಂಕುಗಳು ಗ್ರಾಹಕರಿಗೆ ಪೂರ್ಣ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಇದರಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಬ್ಯಾಂಕುಗಳ ಸಾರ್ವಜನಿಕ ವ್ಯವಹಾರವನ್ನು ನಿಷೇಧಿಸಿದೆ ಎಂದು ಹೇಳಬಹುದಾಗಿದೆ.

ಹೀಗೆ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ಎರಡು ಬ್ಯಾಂಕುಗಳ ಪರವಾನಗಿಯನ್ನು ರದ್ದುಗೊಳಿಸುವುದರ ಮೂಲಕ ಬ್ಯಾಂಕಿಂಗ್ ವ್ಯವಹಾರಗಳನ್ನು ನಿಯಂತ್ರಿಸಿ ಜನಸಾಮಾನ್ಯರ ಹಣವನ್ನು ಉಳಿಸುತ್ತಿದೆ ಎಂದು ಹೇಳಬಹುದಾಗಿದೆ. ಹೀಗೆ ಆರ್‌ಬಿಐ ಎರಡು ಬ್ಯಾಂಕುಗಳ ಪರವಾನಗಿಯನ್ನು ರದ್ದು ಮಾಡಿರುವುದರ ಬಗ್ಗೆ ನಿಮ್ಮ ಬ್ಯಾಂಕಿಂಗ್ ಸ್ನೇಹಿತರು ಯಾರಾದರೂ ಇದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ದುಬೈ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುವವರ ಸಂಬಳ ಎಷ್ಟು ಗೊತ್ತಾ?

ಕೇವಲ 399 ರೂಪಾಯಿಗಳಿಂದ 10 ಲಕ್ಷ ಪಡೆಯಿರಿ : ಪೋಸ್ಟ್ ಆಫೀಸ್ನ ಈ ಯೋಜನೆ ಬಗ್ಗೆ ತಿಳಿದುಕೊಳ್ಳಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments