Friday, June 21, 2024
HomeTrending Newsಕುಟುಂಬದ ಮುಖ್ಯಸ್ಥರ ಹೆಸರು ಬದಲಾವಣೆಗೆ ಅವಕಾಶ! ಹೆಸರು ಬದಲಾವಣೆ ಹೇಗೆ ಮಾಡಿಕೊಳ್ಳುವುದು? ಇಲ್ಲಿದೆ ಸಂಪೂರ್ಣ ಮಾಹಿತಿ

ಕುಟುಂಬದ ಮುಖ್ಯಸ್ಥರ ಹೆಸರು ಬದಲಾವಣೆಗೆ ಅವಕಾಶ! ಹೆಸರು ಬದಲಾವಣೆ ಹೇಗೆ ಮಾಡಿಕೊಳ್ಳುವುದು? ಇಲ್ಲಿದೆ ಸಂಪೂರ್ಣ ಮಾಹಿತಿ

ನಮಸ್ಕಾರ ಸ್ನೇಹಿತರೇ ರಾಜ್ಯ ಸರ್ಕಾರವು ಪಡಿತರ ಚೀಟಿಯನ್ನು ನೀಡಿರುವುದರ ಮೂಲಕ ಬಡ ಕುಟುಂಬದ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಹಾಗೂ ತಮ್ಮ ದಿನನಿತ್ಯದ ಜೀವನವನ್ನು ನಡೆಸಲು ಈ ಪಡಿತರ ಚೀಟಿಯು ಸಹಾಯಕವಾಗಿದೆ. ಈ ಪಡಿತರ ಚೀಟಿಗೆ ಒಂದು ರೀತಿಯಲ್ಲಿ ಗುರುತಿನ ಚೀಟಿಯು ಸಹ ಆಗಿದೆ. ಅದರಂತೆ ಈಗ ಪಡಿತರ ಚೀಟಿಗೆ ಸಂಬಂಧಿಸಿದಂತೆ ಸರ್ಕಾರವು ಹಲವಾರು ಬದಲಾವಣೆಗಳನ್ನು ಮಾಡಿದ್ದು, ಈಗ ಕುಟುಂಬದ ಮುಖ್ಯಸ್ಥರ ಹೆಸರನ್ನು ಬದಲಾವಣೆಗೆ ಸರ್ಕಾರವು ಆದೇಶವನ್ನು ಹೊರಡಿಸಿದೆ. ರಾಜ ಆಹಾರ ಇಲಾಖೆಯು ಕುಟುಂಬದ ಸದಸ್ಯರ ಹೆಸರನ್ನು ಪಡಿತರ ಚೀಟಿಯಲ್ಲಿ ಬದಲಾವಣೆ ಮಾಡಲು ಅವಕಾಶ ಕೊಟ್ಟಿರುವುದರ ಮೂಲಕ ಪಡಿತರ ಚೀಟಿಯ ಮುಖ್ಯಸ್ಥರ ಹೆಸರನ್ನು ಬದಲಾಯಿಸಿಸಲು ಅಭ್ಯರ್ಥಿಗಳು ಆಹಾರ ಇಲಾಖೆ ಕಚೇರಿಗಳಿಗೆ ಹೋಗಿ ಹೆಸರನ್ನು ಬದಲಾಯಿಸಬಹುದಾಗಿದೆ. ಹೀಗೆ ಪಡಿತರ ಚೀಟಿಗೆ ಸಂಬಂಧಿಸಿದಂತೆ ಯಾವ ರೀತಿ ಹೆಸರನ್ನು ಬದಲಾಯಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುತ್ತದೆ.

Change of name in ration card
Change of name in ration card
Join WhatsApp Group Join Telegram Group

ಪಡಿತರ ಚೀಟಿಯಲ್ಲಿ ಹೆಸರು ಬದಲಾವಣೆ :

ರಾಜ್ಯ ಸರ್ಕಾರವು ಕುಟುಂಬದ ಮುಖ್ಯಸ್ಥರ ಹೆಸರನ್ನು ಬದಲಾವಣೆ ಮಾಡಲು ಅವಕಾಶವನ್ನು ಕಲ್ಪಿಸಿದ್ದು ರಾಮನಗರ ಜಿಲ್ಲೆಯ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಲ್ಲಿ ಕುಟುಂಬದ ಮುಖ್ಯಸ್ಥರನ್ನು ಪಡಿತರ ಚೀಟಿಗೆ ಸಂಬಂಧಿಸಿದಂತೆ ಪಡಿತರ ಚೀಟಿಯಲ್ಲಿ ಆಯ್ಕೆ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆಹಾರ ಇಲಾಖೆಯ ಉಪ ನಿರ್ದೇಶಕರಾದ ರಮ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅದರಂತೆ ತಮ್ಮ ಜಿಲ್ಲೆಗಳು ಇಲ್ಲಿಯೂ ಸಹ ಹಾಯಜಿಲ್ಲ ಆಹಾರ ಇಲಾಖೆ ಕಚೇರಿಗೆ ಭೇಟಿ ನೀಡುವುದರ ಮೂಲಕ ಪಡಿತರ ಚೀಟಿಯಲ್ಲಿ ಮುಖ್ಯಸ್ಥರ ಹೆಸರನ್ನು ಬದಲಾವಣೆ ಮಾಡಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ.

ಬದಲಾವಣೆಗೆ ಸಂಬಂಧಿಸಿದಂತೆ ನಿಯಮ :

ಪಡಿತರ ಚೀಟಿಯಲ್ಲಿ ಕೆಲವೊಮ್ಮೆ ಸರಿಯಿಲ್ಲದ ಮಾಹಿತಿಯನ್ನು ಅಭ್ಯರ್ಥಿಗಳು ಕೊಟ್ಟಿರುತ್ತಾರೆ ಹಾಗಾಗಿ ಅಂತಹ ಮಾಹಿತಿಗಳನ್ನು ಸರಿಪಡಿಸಲು ಹಾಗೂ ಸಂಬಂಧಗಳು ತಪ್ಪಾಗಿ ನಮೂದಿಸಿದ್ದಲ್ಲಿ ಜೊತೆಗೆ ಪುರುಷರು ಕುಟುಂಬದ ಮುಖ್ಯಸ್ಥರಾಗಿದ್ದಲ್ಲಿ, ಪಡಿತರ ಚೀಟಿಯಲ್ಲಿ ಅವರ ಹೆಸರನ್ನು ತೆಗೆದುಹಾಕಿ ಮಹಿಳೆಯರನ್ನು ಮುಖ್ಯಸ್ಥರನ್ನಾಗಿ ಮಾಡಲು ಅವಕಾಶವನ್ನು ಈ ಪಡಿತರ ಚೀಟಿಯಲ್ಲಿ ಈಗ ಕಲ್ಪಿಸಲಾಗಿದೆ. ಮುಖ್ಯಸ್ಥರ ಹೆಸರನ್ನು ಬದಲಾವಣೆ ಮಾಡುವುದರ ಜೊತೆಗೆ ಮರಣ ಹೊಂದಿರುವ ಸದಸ್ಯರ ಹೆಸರನ್ನು ತೆಗೆಯಲು ಪಡಿತರ ಚೀಟಿಯಲ್ಲಿ ನ್ಯಾಯಬೆಲೆ ಅಂಗಡಿ ಈಕೆ ವೈಸಿ ಮಾಡುವ ಮೂಲಕ ರಾಜ್ಯ ಸರ್ಕಾರ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಹೇಳಲಾಗಿದೆ. ಎಲ್ಲಾ ಪಡಿತರ ಚೀಟಿದಾರರು ತಮ್ಮ ನ್ಯಾಯಬೆಲೆ ಅಂಗಡಿಗೆ ಬದಲಾವಣೆಗೆ ಸಂಬಂಧಿಸಿದಂತೆ ಸಂಪರ್ಕಿಸಿ ನಿಮ್ಮ ವ್ಯಾಪ್ತಿಯಲ್ಲಿ ಬರುವಂತಹ ನ್ಯಾಯಬೆಲೆ ಅಂಗಡಿಯನ್ನು ಸಂಪರ್ಕಿಸುವುದರ ಮೂಲಕ ರಾಜ್ಯ ಸರ್ಕಾರ ಬದಲಾವಣೆ ಮಾಡಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ರಾಜ್ಯ ಸರ್ಕಾರ ಎಲ್ಲಾ ಪಡಿತರ ಚೀಟಿ ರವರಿಗೆ ತಿಳಿಸಿದೆ. ಆದರೆ ನ್ಯಾಯ ಬೆಲೆ ಅಂಗಡಿಯಲ್ಲಿ ಹೆಸರು ತಿದ್ದುಪಡಿ ಅಥವಾ ಹೆಸರನ್ನು ಸೇರ್ಪಡೆ ಮಾಡಲು ಅವಕಾಶ ಇರುವುದಿಲ್ಲ. ತಮ್ಮ ಪಡಿತರ ಚೀಟಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಕುಂದು ಕೊರತೆಗಳಿಗೆ ಆಯಾ ತಾಲೂಕಿನ ಆಹಾರ ಇಲಾಖೆಯನ್ನು ಸಂಪರ್ಕಿಸಲು ರಾಜ್ಯ ಸರ್ಕಾರ ತಿಳಿಸಿದೆ.

ತಿದ್ದುಪಡಿಗಾಗಿ ಮಹಿಳೆಯರ ಸರದಿ :

ರಾಜ್ಯ ಸರ್ಕಾರ ಈ ಆದೇಶವನ್ನು ಹೊರಡಿಸಿದ ಕೂಡಲೇ ಈ ಆದೇಶದ ಸದುಪಯೋಗವನ್ನು ಪಡಿಸಿಕೊಳ್ಳಲು ಪಡಿತರ ಚೀಟಿದಾರರು ಪಡಿತರ ಚೀಟಿಯ ತಿದ್ದುಪಡಿಗೆ ಕಾರವಾರ ನಗರದ ತಹಶೀಲ್ದಾರ್ ಕಚೇರಿಯ ಎದುರು ಜನರು ದಾಂಗುಡಿ ಇಟ್ಟಿದ್ದರು. ಮಳೆಯ ಮಧ್ಯಯೂ ಬುಧವಾರ ಮಹಿಳೆಯರು ಕೊಡೆಯನ್ನು ಹಿಡಿದು ಸರದಿಶಾಲಿನಲ್ಲಿ ನಿಂತ ದೃಶ್ಯಗಳು ಕಂಡು ಬಂದಿದೆ.

ಎಪಿಎಲ್ ಕಾರ್ಡುದಾರರು :

ಈ ಹಿಂದೆ ಬಿಪಿಎಲ್ ಪಡಿತರ ಚೀಟಿಯನ್ನು ಪಡೆಯದೆ ಇದ್ದಂತಹ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಜಾರಿಯಾಗುತ್ತಿದ್ದಂತೆ ಎಪಿಎಲ್ ಕಾರ್ಡ್ದಾರರು ಸಹ ಇದೀಗ ಎಚ್ಚೆತ್ತುಕೊಂಡಿದ್ದು, ಇದರ ಜೊತೆಗೆ ಪಡಿತರವನ್ನು ಜನರು ಪಡೆಯದ ಕಾರಣದಿಂದಾಗಿ ಆಧಾರ್ ಕಾರ್ಡ್ ನೊಂದಿಗೆ ರೇಷನ್ ಕಾರ್ಡ್ ಅನ್ನು ಸಹ ಲಿಂಕ್ ಮಾಡಿಸಿರಲಿಲ್ಲ ಆದರೆ ಇದೀಗ ರಾಜ್ಯಾದ್ಯಂತ ಸರ್ಕಾರ ಹೊರಡಿಸಿದ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದ ನಂತರ ಎಪಿಎಲ್ ಕಾರ್ಡ್ದಾರರು ಹಾಗೂ ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ನನ್ನು ಲಿಂಕ್ ಮಾಡಿಸಲು ಇದರ ಜೊತೆಗೆ ಹೆಸರನ್ನು ಬದಲಾವಣೆ ಮಾಡಿಸಲು ಸಹ ಮಹಿಳೆಯರು ಸರದಿ ಸಾಲಿನಲ್ಲಿ ನಿಂತಿರುವುದನ್ನು ಕಾಣಬಹುದಾಗಿದೆ. ಸದ್ಯ ತಿದ್ದುಪಡಿಗಾಗಿ ಯಾವುದೇ ತಾಂತ್ರಿಕ ತೊಡಕುಗಳು ಹಾಗೂ ಸರ್ವರ್ ಸಮಸ್ಯೆ ಸಂಭವಿಸಿಲ್ಲ ಹಾಗಾಗಿ ಈ ತಿದ್ದುಪಡಿ ವಿಧಾನ ಸುಲಭವಾಗಿ ಹಾಗೂ ಸರಾಗವಾಗಿ ನಡೆಯುತ್ತಿರುವುದನ್ನು ನೋಡಬಹುದಾಗಿದೆ ಅಲ್ಲದೆ ದಾಖಲೆಗಳೊಂದಿಗೆ ಆಗಮಿಸುತ್ತಿರುವವರ ಸಂಖ್ಯೆಯು ಸಹ ಹೆಚ್ಚಾಗುವುದನ್ನು ಕಾಣಬಹುದಾಗಿದೆ.

ಇದನ್ನು ಓದಿ :ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ 2 ಹೊಸ ರೂಲ್ಸ್: ಕಡ್ಡಾಯವಾಗಿ ಪಾಲಿಸಬೇಕು ಇಲ್ಲ ಅಂದ್ರೆ ಹಣ ಇಲ್ಲ

ತಿದ್ದುಪಡಿಗೆ ಟೋಕನ್ :

ರಾಜ್ಯ ಸರ್ಕಾರವು ಆದೇಶ ಹೊರಡಿಸಿದ ಆಗಿನಿಂದ ಕೆಲವರು ಪಡಿತರ ಚೀಟಿಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ಕೇಳಲು ಸಹ ಬರುತ್ತಿದ್ದಾರೆ. ತಿದ್ದುಪಡಿಗೆ ಸಂಬಂಧಿಸಿದಂತೆ ಮೊದಲನೇ ದಾಖಲೆಗಳನ್ನು ನೀಡಿದವರಿಗೆ ಕೂಡಲೇ ತಿದ್ದುಪಡಿ ಮಾಡಲಾಗುತ್ತದೆ ಹಾಗೂ ಹೊಸದಾಗಿ ದಾಖಲೆ ನೀಡಿದವರಿಗೆ ಮುಂದಿನ ದಿನಾಂಕವನ್ನು ಗುರುತುಪಡಿಸಿ ಟೋಕನ್ಗಳನ್ನು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮೊನ್ನೆ ಮಾಹಿತಿ ನೀಡಿದ್ದಾರೆ. ಹೀಟ್ ತಿದ್ದುಪಡಿಗಾಗಿ ಹೆಚ್ಚಾಗಿ ಎಪಿಎಲ್ ಕುಟುಂಬಸ್ಥರು ಆಗಮಿಸುತ್ತಿದ್ದಾರೆ ತಮ್ಮ ಕುಟುಂಬಸ್ಥರ ಹೆಸರನ್ನು ಬದಲಾವಣೆ ಮಾಡಿಸಿಕೊಳ್ಳುತ್ತಿದ್ದಾರೆ ಜೊತೆಗೆ ಆಧಾರ್ ಕಾರ್ಡ್ ನೊಂದಿಗೆ ರೇಷನ್ ಕಾರ್ಡ್ ಲಿಂಕ್ ಮಾಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ ಎಂದು ಉತ್ತರ ಕನ್ನಡ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ ರೇವಣ ಕರ್ ಮಾಹಿತಿ ನೀಡಿದ್ದಾರೆ.

ಹೀಗೆ ರಾಜ್ಯ ಸರ್ಕಾರವು ರೇಷನ್ ಕಾರ್ಡ್ ಗಾಗಿ ಹಲವಾರು ಬದಲಾವಣೆಗಳನ್ನು ಜಾರಿಗೆ ತಂದಿದ್ದು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಮಹಿಳೆಯರು ರೇಷನ್ ಕಾರ್ಡ್ ನಲ್ಲಿನ ತಿದ್ದುಪಡಿಯನ್ನು ಹೆಚ್ಚಾಗಿ ಮಾಡಿಸುತ್ತಿದ್ದಾರೆ. ಅಲ್ಲದೆ ರಾಜ್ಯ ಸರ್ಕಾರವು ಸಹ ಪಡಿತರ ಚೀಟಿಗೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಲು ಅವಕಾಶವನ್ನು ಕಲ್ಪಿಸಿರುವುದು ಒಂದು ಒಳ್ಳೆಯ ಸುದ್ದಿಯಾಗಿದೆ ಎಂದು ಹಲವರ ಅಭಿಪ್ರಾಯವಾಗಿದೆ ಎಂದು ಹೇಳಬಹುದಾಗಿದೆ. ಹೀಗೆ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರ ಹಾಗೂ ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಅಪ್ಪುವಿನ ಕೊನೆಯ ಆಸೆ ಮಣ್ಣುಪಾಲು! ನೆರವೇರದ ಈ ಆಸೆ ಯಾವುದು ಗೊತ್ತೇ? ಕೇಳಿದ್ರೆ ನೀವೂ ಕೂಡಾ ಶಾಕ್!

ಆನ್ಲೈನ್ ಮೂಲಕ ಹೊಸ ರೇಷನ್ ಕಾರ್ಡ್ ಪಡೆಯಿರಿ : ಕ್ಯೂಆರ್ ಕೋಡ್ ರೇಷನ್ ಕಾರ್ಡ್ ಪಡೆಯಲು ಇಂದೇ ಇಲ್ಲಿಂದ ಅರ್ಜಿ ಸಲ್ಲಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments