Saturday, July 27, 2024
HomeNewsಮನೆ ಇಲ್ಲದವರು ಅರ್ಜಿ ಸಲ್ಲಿಸುವುದರ ಮೂಲಕ ಮನೆ ಪಡೆಯಿರಿ : ಮುಖ್ಯಮಂತ್ರಿ ವಸತಿ ಯೋಜನೆ 2023

ಮನೆ ಇಲ್ಲದವರು ಅರ್ಜಿ ಸಲ್ಲಿಸುವುದರ ಮೂಲಕ ಮನೆ ಪಡೆಯಿರಿ : ಮುಖ್ಯಮಂತ್ರಿ ವಸತಿ ಯೋಜನೆ 2023

ನಮಸ್ಕಾರ ಸ್ನೇಹಿತರೆ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಜನರಿಗೆ ವಸತಿ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಕರ್ನಾಟಕ ಮುಖ್ಯಮಂತ್ರಿ ಒಂದು ಲಕ್ಷ ವಸತಿ ಯೋಜನೆ 2023 ಈ ಯೋಜನೆಯ ಅಡಿಯಲ್ಲಿ ಕರ್ನಾಟಕ ಸರ್ಕಾರವು ಪ್ರಸ್ತುತಪಡಿಸಿದೆ. ಸಂಪನ್ಮೂಲಗಳಿಲ್ಲದ ಜನರಿಗೆ ಹಾಗೂ ಬಾಡಿಗೆ ಮನೆಗಳಲ್ಲಿ ವಾಸಿಸುವ ಜನರಿಗೆ ಬಹು ಮಹಡಿ ಮನೆಗಳನ್ನು ಈಗ ಕರ್ನಾಟಕ ಸರ್ಕಾರವು ಒದಗಿಸಲಾಗುತ್ತಿದೆ. ಈ ಯೋಜನೆಯಿಂದಾಗಿ ಅವರು ತಮ್ಮ ಜೀವನಮಟ್ಟವನ್ನು ತಮ್ಮ ಸ್ವಂತ ಮನೆಯಲ್ಲಿ ಮುಂದುವರಿಸಬಹುದು. ಈ ಕರ್ನಾಟಕದ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗಿನಂತೆ ನೀವು ನೋಡಬಹುದು.

chief-minister-housing-scheme
chief-minister-housing-scheme
Join WhatsApp Group Join Telegram Group

ಮುಖ್ಯಮಂತ್ರಿ ವಸತಿ ಯೋಜನೆ 2023 :

ಕರ್ನಾಟಕ ಸರ್ಕಾರವು ಸ್ವಂತ ಮನೆಯನ್ನು ಜನರು ಹೊಂದುವ ಸಲುವಾಗಿ ಮುಖ್ಯಮಂತ್ರಿ ವಸತಿ ಯೋಜನೆ ಯನ್ನು ಪ್ರಾರಂಭಿಸಿದೆ. ಆನ್ಲೈನ್ನಲ್ಲಿ ಈ ಯೋಜನೆಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಹೀಗಾಗಿ ಹೆಚ್ಚಿನ ಜನರು ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಈ ಯೋಜನೆಯಿಂದಾಗಿ ಪ್ರತಿ ತಿಂಗಳು ಅವರು ಬಾಡಿಗೆ ಮನೆಗೆ ಪಾವತಿಸಬೇಕಾದ ಹಣದ ಬಗ್ಗೆ ಚಿಂತಿಸದೆ ದೊಡ್ಡ ಮನೆಗಳಲ್ಲಿ ವಾಸಿಸಬಹುದು. ಸಹಾಯಧನದ ರೂಪದಲ್ಲಿ ಮನೆಗಳಿಗೆ ಸಹಾಯಧನವನ್ನು ಕರ್ನಾಟಕ ಸರ್ಕಾರವು ನೀಡುತ್ತಿದೆ.

ಮುಖ್ಯಮಂತ್ರಿ ವಸತಿ ಯೋಜನೆ ಅರ್ಜಿ ಸಲ್ಲಿಸುವ ವಿಧಾನ :

ಕರ್ನಾಟಕ ಮುಖ್ಯಮಂತ್ರಿ ಒಂದು ಲಕ್ಷ ವಸತಿ ಯೋಜನೆಗೆ ಸರಳ ವಿಧಾನದ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಕರ್ನಾಟಕ ಸರ್ಕಾರವು ಈ ಯೋಜನೆಗಾಗಿ ಅಧಿಕೃತ ವೆಬ್ಸೈಟ್ ಅನ್ನು ನೀಡಿದ್ದು, ಈ ವೆಬ್ಸೈಟ್ನ ಮೂಲಕ ಪ್ರಜೆಗಳು ತಮ್ಮ ಸ್ವಂತ ಮನೆಗಾಗಿ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ಸಂಬಂಧಿಸಿದಂತೆ ಆದ್ಯತೆಯ ಪಾವತಿ ವಿಧಾನವನ್ನು ಬಳಸಿಕೊಳ್ಳುವುದರ ಮೂಲಕ ನೂರು ರೂಪಾಯಿಗಳ ನೋಂದಣಿ ಶುಲ್ಕವನ್ನು ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸಬೇಕಾಗುತ್ತದೆ.

ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಆಸಕ್ತ ಅಭ್ಯರ್ಥಿಗಳು ashray.kar.nic.in ಈ ವೆಬ್ಸೈಟ್ನ ಮೂಲಕ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅಗತ್ಯ ವಿವರಗಳನ್ನು ಹಾಗೂ ದಾಖಲಾತಿಗಳನ್ನು ಒದಗಿಸುವುದರ ಮೂಲಕ ತಮ್ಮ ಸ್ವಂತ ಮನೆಗಾಗಿ ಸಹಾಯಧನವನ್ನು ಸರ್ಕಾರದಿಂದ ಪಡೆಯಬಹುದಾಗಿದೆ.

ಕರ್ನಾಟಕ ಮುಖ್ಯಮಂತ್ರಿ ಒಂದು ಲಕ್ಷ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು :

ವಾರ್ಷಿಕ ಆದಾಯ 87 ಸಾವಿರ ರೂಪಾಯಿಗಳು ಮೀರದ ಕಡಿಮೆ ಆದಾಯದ ಗುಂಪಿಗೆ ಸೇರಿದ ಕರ್ನಾಟಕದಲ್ಲಿರುವ ಖಾಯಂ ನಿವಾಸಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕಳೆದ 5 ವರ್ಷಗಳಿಂದ ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವವರು ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ : ಕೇಂದ್ರ ಸರ್ಕಾರದಿಂದ 10,000 ದಿಂದ 50 ಸಾವಿರದವರೆಗೆ ಗ್ಯಾರಂಟಿ ಇಲ್ಲದೆ ಸಾಲ ಸೌಲಭ್ಯ

ಈ ಯೋಜನೆಯ ಪ್ರಯೋಜನಗಳು :

ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಗುಂಪುಗಳಿಗೆ ಒಂದು ಲಕ್ಷ ಬಹುಮಹಡಿ ಮನೆಗಳನ್ನು ನಿರ್ಮಿಸಿಕೊಳ್ಳುವುದಕ್ಕಾಗಿ ಈ ಯೋಜನೆಯು ಸಹಾಯಧನವನ್ನು ನೀಡುತ್ತಿದೆ. ಹೊಸ ಮನೆ ನಿರ್ಮಾಣ ಅಥವಾ ಮನೆಯನ್ನು ನವೀಕರಣಗೊಳಿಸುವುದಕ್ಕಾಗಿ ಸಹಾಯಧನ ಹಾಗೂ ಕೈಗೆಟಕುವ ವಸತಿಗಳ ಉತ್ತೇಜನಕ್ಕಾಗಿ ಸಹಾಯಧನ ನೀಡುತ್ತಿದೆ.

ಹೀಗೆ ಈ ಸರ್ಕಾರದ ಯೋಜನೆಯಿಂದಾಗಿ ಮನೆ ಇಲ್ಲದಂತಹ ಹಾಗೂ ಬಾಡಿಗೆ ಮನೆಯಲ್ಲಿ ಇರುವಂತಹ ಜನರು ತಮ್ಮ ಸ್ವಂತ ಮನೆಯನ್ನು ಹೊಂದಲು ಒಂದು ಅವಕಾಶವನ್ನು ನೀಡುತ್ತಿದೆ. ಈ ಯೋಜನೆಯ ಬಗ್ಗೆ ನಿಮ್ಮ ಸಂಬಂಧಿಕರಿಗೆ ತಿಳಿಸಿಕೊಡಿ. ಧನ್ಯವಾದಗಳು.

ಯಾವ ರಾಜ್ಯದವರಿಗೆ ಮನೆ ಸಿಗಲಿದೆ ?

ಕರ್ನಾಟಕ ರಾಜ್ಯದವರಿಗೆ ಸಿಗಲಿದೆ

ಎಷ್ಟು ಲಕ್ಷ ಮನೆ ನೀಡಲಾಗುವುದು ?

ಒಂದು ಲಕ್ಷ ಮನೆಗಳನ್ನು ನೀಡಲಾಗುವುದು

ಯಾವತರ ಮನೆ ನೀಡಲಾಗುವುದು ?

ಬಹು ಮಹಡಿ ಮನೆಗಳನ್ನು ನೀಡಲಾಗುವುದು

ಇದನ್ನು ಓದಿ : ಶಿಕ್ಷಣ ಸಾಲ ಯೋಜನೆ: ಈ ಶಿಕ್ಷಣ ಸಾಲ ಯೋಜನೆಯು ಕರ್ನಾಟಕದ ಅಲ್ಪಸಂಖ್ಯಾತರಿಗೆ 2% ಬಡ್ಡಿ ದರದಲ್ಲಿ ಸಹಾಯ ಮಾಡುವುದು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments