Friday, June 21, 2024
HomeTrending Newsಶಿಕ್ಷಣ ಸಾಲ ಯೋಜನೆ: ಈ ಶಿಕ್ಷಣ ಸಾಲ ಯೋಜನೆಯು ಕರ್ನಾಟಕದ ಅಲ್ಪಸಂಖ್ಯಾತರಿಗೆ 2% ಬಡ್ಡಿ ದರದಲ್ಲಿ...

ಶಿಕ್ಷಣ ಸಾಲ ಯೋಜನೆ: ಈ ಶಿಕ್ಷಣ ಸಾಲ ಯೋಜನೆಯು ಕರ್ನಾಟಕದ ಅಲ್ಪಸಂಖ್ಯಾತರಿಗೆ 2% ಬಡ್ಡಿ ದರದಲ್ಲಿ ಸಹಾಯ ಮಾಡುವುದು

ನಮಸ್ಕಾರ ಸ್ನೇಹಿತರೆ ನಿಮಗೆ ತಿಳಿಸುತ್ತಿರುವ ರಾಜ್ಯ ಸರ್ಕಾರದ ಯೋಜನೆಗಳಲ್ಲಿ ಕರ್ನಾಟಕ ಅರಿವು ಶಿಕ್ಷಣ ಸಾಲ ಯೋಜನೆಯು ಒಂದಾಗಿದೆ. ಯೋಜನೆಯು ಅಲ್ಪಸಂಖ್ಯಾತರಿಗೆ 2% ಬಡ್ಡಿದರದಲ್ಲಿ ಸಾಲವನ್ನು ನೀಡುವುದರ ಮೂಲಕ ಅವರ ಶಿಕ್ಷಣ ಪ್ರಗತಿಗೆ ಸಹಾಯ ಮಾಡುತ್ತಿದೆ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇದೀಗ ನೀವು ನೋಡಬಹುದು.

Education Loan Scheme
Education Loan Scheme
Join WhatsApp Group Join Telegram Group

ಕರ್ನಾಟಕ ಅರಿವು ಶಿಕ್ಷಣ ಸಾಲ ಯೋಜನೆ :

ರಾಜ್ಯದ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಅವರ ಶೈಕ್ಷಣಿಕ ಸುಧಾರಣೆಗಾಗಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಅಂದರೆ ಪ್ರಸ್ತುತ ಅರಿವು ಶಿಕ್ಷಣ ಸಾಲ ಯೋಜನೆಯು ಅವರಿಗೆ ಎರಡು ಪರ್ಸೆಂಟ್ ಬಡ್ಡಿ ದರದಲ್ಲಿ ಸಾಲವನ್ನು ನೀಡುವುದರ ಮೂಲಕ ಅವರ ಶೈಕ್ಷಣಿಕ ವಿದ್ಯಾಭ್ಯಾಸವನ್ನು ಮುಂದುವರಿಸಲು ರಾಜ್ಯ ಸರ್ಕಾರವು ಅವಕಾಶವನ್ನು ಒದಗಿಸುತ್ತಿದೆ.

ಅಲ್ಪಸಂಖ್ಯಾತ ಸಮುದಾಯಗಳು :

ಅಲ್ಪಸಂಖ್ಯಾತ ಸಮುದಾಯಗಳು ಎಂದರೆ ಕರ್ನಾಟಕದಲ್ಲಿ ನೆಲೆಸಿರುವ ಜೈನರು ,ಸಿಕ್ಕರು, ಕ್ರಿಶ್ಚಿಯನ್ನರು ,ಬೌದ್ಧರು, ಮುಸ್ಲಿಮರು ಹಾಗೂ ಪಾರ್ಸಿಗಳು ಸೇರಿದಂತೆ ಇತರ ಸಮುದಾಯಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಎಂಬಿಬಿಎಸ್ ಬಿಡಿಎಸ್ ಆಯುಷ್ ಬಿ ಆರ್ಚ್ ಬಿಎ ಮತ್ತು ಬಿ ಟೆಕ್ ನಂತಹ ಪ್ರೊ ಕೋರ್ಸ್ ಗಳಿಗೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅಂದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಆಯ್ಕೆಯಾದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯವನ್ನು ಪ್ರತ್ಯೇಕವಾಗಿ ನೀಡಲಾಗುತ್ತಿದೆ.

ಈ ಯೋಜನೆಗೆ ಸಂಬಂಧಿಸಿದಂತೆ ಅರ್ಹ ಕೋರ್ಸ್ ಗಳ ಪಟ್ಟಿ :

ಎಂಬಿಬಿಎಸ್, ಎಂಡಿ ,ಎಂ ಎಸ್, ಎಲ್ ಎಲ್ ಬಿ, ಎಂಸಿಎ, ಎಂಬಿಎ, ಎಂ ಎಸ್ ಸಿ ಹೀಗೆ ಮೊದಲಾದ ವೃತ್ತಿಪರ ಕೋರ್ಸ್ ಗಳಿಗಾಗಿ ಅರಿವು ಶಿಕ್ಷಣ ಸಾಲ ಯೋಜನೆಯು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯವನ್ನು ಒದಗಿಸುತ್ತಿದೆ.

ಕರ್ನಾಟಕ ಅರಿವು ಶಿಕ್ಷಣ ಯೋಜನೆಗೆ ಅಗತ್ಯವಿರುವ ದಾಖಲೆಗಳು :

ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಸಾಲ ಸೌಲಭ್ಯವನ್ನು ಪಡೆಯಬೇಕಾದರೆ ಕೆಲವೊಂದು ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಅಂತಹ ಕೆಲವು ದಾಖಲೆಗಳೆಂದರೆ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ,ಆಧಾರ್ ಕಾರ್ಡ್ , ಎರಡು ಪಾಸ್ಪೋರ್ಟ್ ಸೈಜ್ ಫೋಟೋ, ವಿದ್ಯಾರ್ಥಿಯು ಆನ್ಲೈನಲ್ಲಿ ಸಲ್ಲಿಸಿದ ಅರ್ಜಿ ನಮೂನೆ, ಸಿಇಟಿ ಪ್ರವೇಶ ಪತ್ರ, ನೀಟ್ ಪ್ರವೇಶ ಪತ್ರ, ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರ, ಡಿಪ್ಲೋಮೋ ಪ್ರಮಾಣ ಪತ್ರ ಮೊದಲಾದವು ಹೀಗೆ ಯಾವ ವೃತ್ತಿಪರ ಶಿಕ್ಷಣಕ್ಕೆ ನೀವು ಸಾಲ ಸೌಲಭ್ಯವನ್ನು ಕೇಳುತ್ತೇವೆ ಅವುಗಳ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ಇದನ್ನು ಓದಿ :ಆಭರಣ ಪ್ರಿಯರಿಗೆ ಬಂಪರ್ ಆಫರ್ : ಇದಕ್ಕಿಂತ ಉತ್ತಮ ಸಮಯ ಚಿನ್ನ ಪ್ರಿಯರಿಗೆ ಮತ್ತೊಂದಿಲ್ಲ

ಸಲ್ಲಿಸುವ ವಿಧಾನ :

ಕರ್ನಾಟಕ ಅರಿವು ಶಿಕ್ಷಣ ಸಾಲ ಸೌಲಭ್ಯ ಯೋಜನೆಗೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ರಾಜ್ಯ ಸರ್ಕಾರ ನೀಡಿದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವುದರ ಮೂಲಕ ಆ ವೆಬ್ ಸೈಟ್ ನಲ್ಲಿ ವೃತ್ತಿಪರ ಕೋರ್ಸ್ ಗಾಗಿ ಸಾಲವನ್ನು ಪಡೆಯಬಹುದು. ಅಧಿಕೃತ ವೆಬ್ಸೈಟ್ ಎಂದರೆ kmdconline.karnataka.gov.in ಈ ವೆಬ್ ಸೈಟ್ ಮೂಲಕ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಸಾಲ ಸೌಲಭ್ಯಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಅಜ್ಜಿಯನ್ನು ಸಲ್ಲಿಸಿದ ನಂತರ ಇದರ ಕಡತವನ್ನು ಕೆಎಂಡಿ ಕಚೇರಿಗೆ ವಿದ್ಯಾರ್ಥಿಗಳು ಸಲ್ಲಿಸಬೇಕು.

ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವೃತ್ತಿಪರ ಕೋರ್ಸ್ ಗಳಿಗಾಗಿ ನೀಡುತ್ತಿರುವ ಈ ಸಾಲ ಸೌಲಭ್ಯದ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರುಗಳಿಗೆ ತಿಳಿಸಿ. ಈ ಯೋಜನೆಯ ಪ್ರಯೋಜನವನ್ನು ನಿಮ್ಮ ಅಲ್ಪಸಂಖ್ಯಾತ ಸ್ನೇಹಿತರು ಸಹ ಪಡೆದುಕೊಳ್ಳಲಿ ಧನ್ಯವಾದಗಳು.

ಯಾವ ವಿದ್ಯಾರ್ಥಿಗಳಿಗೆ ನೀಡಲಾಗುವುದು ?

ಅಲ್ಪಸಂಖ್ಯಾತ ವಿದ್ಯಾರ್ಥಿ ನೀಡಲಾಗುವುದು

ಬಡ್ಡಿ ಎಷ್ಟು ಕಟಬೇಕು ?

2% ಕಟಬೇಕು

ವೆಬ್ಸೈಟ್ ಲಿಂಕ್ ಯಾವ್ದು ?

kmdconline.karnataka.gov.in ಇದೆ ವೆಬ್ಸೈಟ್

ಇದನ್ನು ಓದಿ : ಕಾರ್ಮಿಕ ಕಾರ್ಡ್ ಅರ್ಜಿ ಸಲ್ಲಿಕೆಗೆ ಪುನರಾರಂಭ, ಕೂಡಲೇ ಇಲ್ಲಿಂದ ಅರ್ಜಿ ಸಲ್ಲಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments