Saturday, July 27, 2024
HomeUpdatesಮೊಬೈಲ್ ನಲ್ಲಿಯೇ ನಮ್ಮ ಜಮೀನಿನ ಪಹಣಿ ಮತ್ತು ವರ್ಗಾವಣೆ ಸ್ಥಿತಿಯನ್ನು ಚೆಕ್ ಮಾಡಬಹುದು

ಮೊಬೈಲ್ ನಲ್ಲಿಯೇ ನಮ್ಮ ಜಮೀನಿನ ಪಹಣಿ ಮತ್ತು ವರ್ಗಾವಣೆ ಸ್ಥಿತಿಯನ್ನು ಚೆಕ್ ಮಾಡಬಹುದು

ನಮಸ್ಕಾರ ಸ್ನೇಹಿತರೇ, ನಿಮಗೆ ಈಗ ತಿಲಿಸುತ್ತಿರುವ ಮಾಹಿತಿ ಏನೆಂದರೆ ಮೊಬೈಲ್ ನಲ್ಲಿಯೇ ಈಗ ತಮ್ಮ ತಮ್ಮ ಹೆಸರಿಗೆ ಯಾವ ವರ್ಷದಿಂದ ನಿಮ್ಮ ಜಮೀನಿನ ಪಹಣಿ ವರ್ಗಾವಣೆ ಆಗಿದೆ ಹಾಗೂ ಮೊಬೈಲ್ ನಲ್ಲಿಯೇ ನಮ್ಮ ಜಮೀನಿನ ಪಹಣಿ ಅಥವಾ ಆರ್ ಟಿ ಸಿ ಉತಾರವನ್ನು ಹೇಗೆ ಚೆಕ್ ಮಾಡುವುದು ಎಂಬ ಸಂಪೂರ್ಣ ಮಾಹಿತಿಯನ್ನು ಇಂದು ನಿಮಗೆ ತಿಳಿಸಲಾಗುವುದು.

_ How to know the land information
How to know the land information
Join WhatsApp Group Join Telegram Group

ಈ ಒಂದು ವಿಧಾನ ರೈತರಿಗೆ ಸಂತಸದ ವಿಷಯವಾಗಿದೆ ಎಂದು ಹೇಳಬಹುದು ಇದರಿಂದ ರೈತರು ಪದೇ ಪದೇ ಕಚೇರಿಗೆ ಹೋಗುವ ಪ್ರಮೇಯವೇ ಬರುವುದಿಲ್ಲ ಅಲ್ಲದೆ ತಮ್ಮ ಜಮೀನಿನ ಪಹಣಿಯು ಯಾವ ವರ್ಷದಿಂದ ಅವರಿಗೆ ವರ್ಗಾವಣೆ ಆಗಿದೆ ಎಂಬ ಸಂಪೂರ್ಣ ಮಾಹಿತಿಯು ಅವರಿಗೆ ತಿಯುತ್ತದೆ.

ಆನ್ಲೈನ್ ಮೂಲಕ ಜಮೀನಿನ ಪಹಣಿಯ ಸಂಪೂರ್ಣ ಮಾಹಿತಿ :

ರೈತರಿಗೆ ಸಹಾಯ ಮಾಡುವ ಮೂಲಕ ಕರ್ನಾಟಕ ಸರ್ಕಾರವು ಒಂದು ಯೋಜನೆಯನ್ನು ಕೈಗೊಂಡಿದೆ. ಈ ಯೋಜನೆಯ ಮೂಲಕ ರೈತರು ಯಾವುದೇ ರೀತಿಯ ಓಡಾಟ ನಡೆಸದೆ ಹಾಗೂ ಕಚೇರಿಗಳಿಗೆ ಅಲಿಯದೇ ತಮ್ಮ ಜಮೀನಿನ ಸಂಪೂರ್ಣ ಮಾಹಿತಿಯನ್ನು ತಮ್ಮ ಮೊಬೈಲ್ ನಲ್ಲಿಯೇ ತಿಳಿದುಕೊಳ್ಳುವಂತೆ ಮಾಡಿದೆ. ಇಂತಹ ಭೂಮಿಯ ಮಾಹಿತಿಯನ್ನು ಪಡೆಯಲು ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವುದರ ಮೂಲಕ ಪ್ರತಿಯೊಬ್ಬ ರೈತರು ಸಹ ತಮ್ಮ ಜಮೀನಿನ ದಾಖಲೆಗಳಾದ ತಮ್ಮ ಜಮೀನಿನ ಮೋಜಿನಿ, ಆಕಾರ ಬಂದ್, ಪಹಣಿ ಮೊದಲಾದ ದಾಖಲೆಗಳನ್ನು ರೈತರು ತಮ್ಮ ಮೊಬೈಲ್ ನಲ್ಲಿಯೇ ಎಲ್ಲಾ ಮಾಹಿತಿಯನ್ನು ಚೆಕ್ ಮಾಡಬಹುದಾಗಿದೆ.

ಈ ಮೇಲೆ ಹೇಳಿದ ಮಾಹಿತಿಗಳನ್ನು ತಿಳಿದುಕೊಳ್ಳಲು ನಮಗೆ ಅಗತ್ಯ ಇರುವುದು ಕೇವಲ ಜಮೀನಿನ ಸರ್ವೇ ನಂಬರ್ ಮಾತ್ರ. ಈ ಸರ್ವೇ ನಂಬರ್ ಇಂದ ನಿಮ್ಮಲ್ಲಿರುವ ಭೂಮಿ ಯಾರಿಗೆ ಸೇರಿದ್ದು, ಈ ಭೂಮಿಯನ್ನು ನಿಜವಾಗಿಯೂ ಯಾರು ವ್ಯವಹರಿಸುತ್ತಿರುವುದು,

ಈ ಭೂಮಿಯು ಒಬ್ಬರಿಗೆ ಅಥವಾ ಇಬ್ಬರಿಗೆ ಸೇರಿದೆಯಾ, ಅಲ್ಲದೆ ಎಷ್ಟು ಎಕರೆ ಈ ಭೂಮಿ ಇದೆ ಎಂಬ ಮಾಹಿತಿಗಳು ಹಾಗೂ ನಿಮಗೆ ಯಾವ ರೀತಿಯ ಮಾಹಿತಿಗಳು ಅಗತ್ಯವಿದೆಯೋ ಆ ಎಲ್ಲ ಮಾಹಿತಿಗಳ ಸಂಪೂರ್ಣ ವಿವರವನ್ನು ನೀವು ನಿಮ್ಮ ಮೊಬೈಲ್ ನಲ್ಲಿಯೇ ಕ್ಷಣಾರ್ಧದಲ್ಲಿಯೆ ತಿಳಿದುಕೊಳ್ಳಲು ಸರ್ಕಾರ ನಿಮಗೆ ಈಗ ಸಹಾಯ ಮಾಡುತ್ತಿದೆ.

ಮೊಬೈಲ್ ನಲ್ಲಿಯೇ ಜಮೀನಿನ ಮಾಹಿತಿಯನ್ನು ಹೇಗೆ ತಿಳಿದುಕೊಳ್ಳುವುದು.

ಈಗ ಎಲ್ಲರೂ ಸಹ ಸ್ಮಾರ್ಟ್ಫೋನ್ ಗಳನ್ನು ಉಪಯೋಗಿಸುತ್ತಿದ್ದಾರೆ. ಈ ಸ್ಮಾರ್ಟ್ ಫೋನಿನ ಮೂಲಕ ನಮಗೆ ಎಲ್ಲಾ ರೀತಿಯ ಮಾಹಿತಿಗಳು ದೊರೆಯುವಂತೆ ಮಾಡಿದ್ದು, ಅದರಲ್ಲಿ ನಮ್ಮ ಜಮೀನಿನ ಪಹಣಿಯ ವಿವರವನ್ನು ನೋಡಬಹುದಾಗಿದೆ. ಅದಕ್ಕಾಗಿ ನಾವು ಮೊದಲು ಮೊಬೈಲ್ ನಲ್ಲಿ ಗೂಗಲ್ ಆ್ಯಪ್ ಅನ್ನು ಓಪನ್ ಮಾಡಿ ಅದರಲ್ಲಿ ಅಂದರೆ ಸರ್ಚ್ ಬಾರ್ನಲ್ಲಿ ಭೂಮಿ ಎಂದು ಟೈಪ್ ಮಾಡಬೇಕು.

ವೆಬ್ಸೈಟ್ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ ಮೆಟೇಶನ್ ಎಂಬ ಆಪ್ಷನ್ ದೊರೆಯುತ್ತದೆ. ಆ ಮೇಟೇಶನ್ ಮೇಲೆ ಕ್ಲಿಕ್ ಮಾಡಿದ ನಂತರ ಸರ್ವೇ ನಂಬರ್ ಅನ್ನು ಕೇಳುತ್ತದೆ. ಸರ್ವೇ ನಂಬರ್ ಅನ್ನು ಎಂಟರ್ ಮಾಡಬೇಕು. ನಂತರ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ ಹಾಗೂ ಹಳ್ಳಿಯ ಹೆಸರನ್ನು ಎಂಟರ್ ಮಾಡಬೇಕು. ಈ ಎಲ್ಲ ವಿವರಗಳನ್ನು ಎಂಟರ್ ಮಾಡಿದ ನಂತರ ನಿಮ್ಮ ಸರ್ವೇ ನಂಬರ್ ಅನ್ನು ಮ್ಯುಟಿಗೇಶನ್ ಗೋಸ್ಕರ ಎಂಟರ್ ಮಾಡಬೇಕು. ಸರ್ವೇ ನಂಬರ್ ಎಂಟರ್ ಮಾಡಿದ ನಂತರ ನಂಬರ್ ಅನ್ನು ಸೆಲೆಕ್ಟ್ ಮಾಡಿ ಫಿಚ್ ಡೀಟೇಲ್ಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಈ ಎಲ್ಲ ಮಾಹಿತಿಯನ್ನು ನೀಡಿದ ನಂತರ ನಿಮಗೆ ಅಮಿಟೇಷನ್ ಸ್ಥಿತಿ ದೊರೆಯುತ್ತದೆ.

ಇದನ್ನು ಓದಿ : ಮೋದಿ ಸ್ಕಾಲರ್ಶಿಪ್ [PMSS] ಗೆ ಅರ್ಜಿ ಆಹ್ವಾನ, ಎಲ್ಲಾ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು, ಇಲ್ಲಿದೆ ಸಂಪೂರ್ಣ ಮಾಹಿತಿ

ಉದಾಹರಣೆಗೆ ನಿಮ್ಮ ಜಮೀನಿನ ಮ್ಯುಟೇಶನ್ ನ ಯಾವುದೇ ಬಾಕಿ ಇರುವುದಿಲ್ಲ ಎಂದು ತೋರಿಸಿದರೆ ನೀವು ಮ್ಯುಟೇಶನ್ ಗೆ ಕಂಪ್ಯೂಟರ್ ಅಥವಾ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಿದರೆ ಯಾವ ಅಧಿಕಾರಿಯ ಬಳಿ ಸರ್ವೇ ನಂಬರ್ ಇರುತ್ತದೆಯೋ ಅದು ಯಾವ ಹಂತದಲ್ಲಿ ಇದೆ ಎಂಬ ಸಂಪೂರ್ಣ ಮಾಹಿತಿಯನ್ನು ನೀವು ತಿಳಿದುಕೊಳ್ಳಬಹುದು. ಅಲ್ಲದೆ ಮ್ಯುಟೇಶನ್ ನ ಸ್ಥಿತಿ ಯಾವ ಅಧಿಕಾರಿ ಅಂದರೆ ರೆವೆನ್ಯೂ ಡಿಪಾರ್ಟ್ಮೆಂಟ್ ಅಥವಾ ಕಂದಾಯ ಇಲಾಖೆ ಯ ಬಳಿ ಇದೆಯೋ ಎಂಬ ನಿಮ್ಮ ಜಮೀನಿನ ಸಂಪೂರ್ಣ ಮಾಹಿತಿಯ ಬಗ್ಗೆ ನೀವು ಕ್ರಾಸ್ ಚೆಕ್ ಮಾಡಬಹುದು. ಅಲ್ಲದೆ ಜಾಮೀನು ಯಾರ್ ಹೆಸರಲ್ಲಿ ಇದೆ,

ಈ ಜಮೀನಿನ ವರ್ಗಾವಣೆ ಯಾರ ಹೆಸರಿಗೆ ಆಗಿದೆ ಅಂದರೆ ಹಿರಿಯ ಮುಖ್ಯಸ್ಥ ನಿಂದ ಅವನ ಹೆಂಡತಿಗೆ ಅಥವಾ ಮಗನಿಗೆ ಈ ಜಾಮೀನು ವರ್ಗಾವಣೆ ಆಗಿದೆ, ಅಲ್ಲದೆ ಮಗನ ಹೆಸರಿಗೆ ಜಮೀನು ವರ್ಗಾವಣೆ ಆಗುವುದಕ್ಕೆ ಯಾವ ಅರ್ಜಿಯನ್ನು ಸಲ್ಲಿಸಬೇಕು ಹೇಗೆ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಕೂಡ ಈ ಭೂಮಿ ವೆಬ್ಸೈಟ್ ನಲ್ಲಿ ತಿಳಿದುಕೊಳ್ಳಲು ಸರ್ಕಾರವು ಅನುವು ಮಾಡಿದೆ.

ಇದರ ಜೊತೆಗೆ ಜಮೀನು ಖರೀದಿ ಮಾಡಿದ ನಂತರ ಮ್ಯೂಟೇಶನ್ ಗೆ ಅರ್ಜಿಯನ್ನು ಸಲ್ಲಿಸಿದಾಗ ಈ ಇದು ಯಾವ ಹಂತದಲ್ಲಿ ಈಗ ಕಾರ್ಯನಿರ್ವಹಿಸುತ್ತಿದೆ ಅಲ್ಲದೆ ಇದು ಯಾವಾಗ ಪೂರ್ಣ ವಾಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ನಮ್ಮ ಮೊಬೈಲ್ ನಲ್ಲಿಯೇ ನೋಡಬಹುದು.

ಒಟ್ಟಾರೆ ಈ ಮೇಲ್ಕಂಡ ಮಾಹಿತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ರೈತರ ಜಮೀನಿಗೆ ಒಂದು ಭರವಸೆಯನ್ನು ತಂದು ಕೊಟ್ಟಿದೆ. ಇದರಿಂದ ಯಾವುದೇ ರೀತಿಯ ಅವ್ಯವಹಾರಗಳು ನಡೆಯದಂತೆ ರೈತರ ಜಮೀನಿನ ಸ್ಥಿತಿ ಗತಿಯ ಬಗ್ಗೆ ಬಹಳ ಬೇಗನೆ ತಿಳಿದುಕೊಳ್ಳಲು ಅವಕಾಶ ಕಲ್ಪಿಸಿಕೊಡುವುದರ ಜೊತೆಗೆ ನಮ್ಮ ಜಮೀನಿನ ಬಗ್ಗೆ ಯಾವುದೇ ಗೊಂದಲಗಳಿಲ್ಲದೆ ನಾವಿರುವ ಸ್ಥಳದಲ್ಲಿಯೇ ನಮ್ಮ ಜಮೀನಿನ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗುತ್ತಿದೆ.

ಇದರಿಂದ ಅವಿದ್ಯಾವಂತ ರೈತರು ತಮ್ಮ ಮಕ್ಕಳ ಸಹಾಯದಿಂದ ಯಾವುದೇ ಕಚೇರಿಗಳಿಗೆ ಅಲಿಯದೆ ಹಾಗೂ ಹಣವನ್ನು ಖರ್ಚು ಮಾಡದೆ ತಮ್ಮ ಜಮೀನಿನ ಸಂಪೂರ್ಣ ಮಾಹಿತಿಯನ್ನು ಒದಗಿಸುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಹೇಳಬಹುದು.

ಮೊಬೈಲ್ ನಲ್ಲಿ ಹೇಗೆ ನೋಡುವುದು

ಭೂಮಿ ವೆಬ್ಸೈಟ್ ಗೆ ಭೇಟಿ ನೀಡಿ

RTC ಮೊಬೈಲ್ನಲ್ಲಿ ಪಡೆಯಬಹುದು

ಹೌದು ಪಡೆಯಬಹುದು

ಇದನ್ನು ಓದಿ : ರೈತರ ಸಾಲ ಮನ್ನಾ ರೈತರ ಪಟ್ಟಿ ಬಿಡುಗಡೆಯಾಗಿದೆ, ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ ಚೆಕ್‌ ಮಾಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments