Thursday, July 25, 2024
HomeUpdatesಸರ್ಕಾರವು ರೈತರಿಗೆ ಡ್ರೋನ್ ಖರೀದಿಸಲು 5 ಲಕ್ಷದವರೆಗೆ ಸಹಾಯಧನವನ್ನು ನೀಡುತ್ತಿದೆ, ಜೊತೆಗೆ ಉಚಿತ ತರಬೇತಿ ಲಭ್ಯ

ಸರ್ಕಾರವು ರೈತರಿಗೆ ಡ್ರೋನ್ ಖರೀದಿಸಲು 5 ಲಕ್ಷದವರೆಗೆ ಸಹಾಯಧನವನ್ನು ನೀಡುತ್ತಿದೆ, ಜೊತೆಗೆ ಉಚಿತ ತರಬೇತಿ ಲಭ್ಯ

ನಮಸ್ಕಾರ ಸ್ನೇಹಿತರೆ ಇಂದು ನಿಮಗೆ ತಿಳಿಸುತ್ತಿರುವ ವಿಷಯವೇನೆಂದರೆ ಸರ್ಕಾರವು ಕೃಷಿಕರಿಗೆ ಕೆಲವೊಂದು ಆಧುನಿಕ ತಂತ್ರಜ್ಞಾನ ಹಾಗೂ ಯಂತ್ರಗಳನ್ನು ಬಳಸಿಕೊಂಡು ಕೆಲಸವನ್ನು ಮಾಡಲು ಸಹಾಯ ಮಾಡುತ್ತಿದೆ. ಅದರಂತೆ ದೇಶದ ರೈತ ವರ್ಗಕ್ಕೆ ಆರ್ಥಿಕವಾಗಿ ನೆರವನ್ನು ನೀಡಲು ಹಲವಾರು ಯೋಜನೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ನಡೆಸುತ್ತಲೇ ಇದೆ.

Free drone training is provided.
Free drone training is provided.
Join WhatsApp Group Join Telegram Group

ಅಂತಹ ಯೋಜನೆಗಳಲ್ಲಿ ಕೃಷಿಕರಿಗೆ ಡ್ರೋನ್ ಖರೀದಿ ಮಾಡುವ ಹಾಗೂ ಅದನ್ನು ಹೇಗೆ ಬಳಸುವುದು ಎಂಬುದರ ಬಗ್ಗೆ ತರಬೇತಿಯನ್ನು ನೀಡುವ ಯೋಜನೆಯು ಒಂದಾಗಿದೆ. ಅದರ ಬಗ್ಗೆ ಈ ಕೆಳಗಿನಂತೆ ತಿಳಿಸಲಾಗಿದೆ.

ಕೃಷಿಕರಿಗೆ ಡ್ರೋನ್ ಯೋಜನೆ ಹಾಗೂ ತರಬೇತಿ :

ಸರ್ಕಾರದ ಅನೇಕ ಯೋಜನೆಗಳಲ್ಲಿ ಒಂದಾದ ಕಿಸಾನ್ ಪುಷ್ಕರ ಯೋಜನೆಯ ಮೂಲಕ 150 ರೋನ್ ಅಪ್ಲಿಕೇಶನ್ ಗಳನ್ನು ನೀಡಲಾಗಿದೆ. ಮತ್ತು ರೈತರು ಈ ಡ್ರೋನ್ ಗಳನ್ನು ಯಾವ ರೀತಿ ನಿರ್ವಹಿಸಬೇಕು ಎಂಬ ಮಾಹಿತಿಯನ್ನು ನೀಡಲಾಗುತ್ತಿದೆ. ರೈತರ ಕೆಲಸವು ಈ ಡ್ರೋನ್ ಬಳಕೆಯಿಂದ ಸುಲಭವಾಗಿ ನಡೆಯುತ್ತಿದೆ.

ಈ ಡ್ರೋನ್ ಮೂಲಕ ರೈತರು ಬೆಳೆ ಮೇಲ್ವಿಚಾರಣೆ ಮಾಡುವ ಕೆಲಸ ಹಾಗೂ ಬೆಳೆಗಳಿಗೆ ಕೀಟನಾಶಕಗಳನ್ನು ಸಿಂಪಡಿಸುವ ಕೆಲಸವನ್ನು ರೈತರು ಸುಲಭವಾಗಿ ಮಾಡಬಹುದಾಗಿದೆ. ಸರ್ಕಾರವು ಈ ಡ್ರೋನ್ ಬಳಕೆಯನ್ನು ಉತ್ತೇಜಿಸುತ್ತಿದ್ದು ಸುಮಾರು 5000 ಡ್ರೋನ್ ಗಳನ್ನು 2023 ರ ವೇಳೆಗೆ ಒದಗಿಸುವ ಗುರಿಯನ್ನು ಹೊಂದಿದೆ.

ಕಿಸಾನ್ ಪುಷ್ಕರ್ ಯೋಜನೆಗೆ ಸಂಬಂಧಿಸಿದ ಕೆಲವು ಮಾಹಿತಿಗಳು :

ರೈತರು ಕಡಿಮೆ ಸಮಯದಲ್ಲಿ ಡ್ರೋನ್ಗಳ ಸಹಾಯದಿಂದ ಹೆಚ್ಚಿನ ಕೃಷಿ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ ಈ ಮೂಲಕ ನೀರಾವರಿ ಮಾಡಲು ರೈತರು ಸಾಕಷ್ಟು ಸಮಯವನ್ನು ತೆಗೆದುಕೊಳ್ಳದೆ ಕಡಿಮೆ ಸಮಯದಲ್ಲಿ ತಮ್ಮ ಕೃಷಿ ನೀರಾವರಿಯನ್ನು ಮಾಡಬಹುದು. ಸರ್ಕಾರದಿಂದ ಈ ಡ್ರೋನ್ಗಳ ಸಬ್ಸಿಡಿಯನ್ನು ಸಾಲಕ್ಕಾಗಿ ರೈತರಿಗೆ ನೀಡಲು ಮುಂದಾಗುತ್ತಿದೆ. ಅದರಂತೆ ಸರ್ಕಾರವು ರೈತರಿಗೆ ಡ್ರೋನ್ ಖರೀದಿಸಲು 5 ಲಕ್ಷದವರೆಗೆ ಸಹಾಯಧನವನ್ನು ನೀಡುತ್ತಿದೆ. ಸರ್ಕಾರವು ಡ್ರೋನ್ ಅಪ್ಲಿಕೇಶನ್ ಗಳನ್ನು ಪುಷ್ಕರಿ ಯೋಜನೆಯ ಮೂಲಕ 150 ಕೃಷಿ ಡ್ರೋನ್ ಅಪ್ಲಿಕೇಶನ್ ಗಳನ್ನು ನೀಡಿದೆ.

ಅದರಂತೆ ಸುಮಾರು 150 ಯೂನಿಯನ್ ಬ್ಯಾಂಕ್ ನ ಡ್ರೋನ್ ಅರ್ಜಿಗಳಿಗೆ ಸರ್ಕಾರವು ಸಾಲವನ್ನು ನೀಡಿದೆ. ಈ ಡ್ರೋನ್ ಸಹಾಯದಿಂದ ಕೃಷಿಕರು ಸುಲಭವಾಗಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಬಹುದಾಗಿದೆ. ಇತ್ತೀಚಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಭಾರತದ ಡ್ರೋನ್ ಉತ್ಪಾದನಾ ಕಂಪನಿಯಾದ ಗರುಡ ಹೇರೋ ಸ್ಪೇಸ್ ತನ್ನ ಪಾಲುದಾರಿಕೆಯನ್ನು ಘೋಷಿಸಿದ್ದು,

ರೈತರಿಗೆ ಇದು ಸುಮಾರು 150 ಡ್ರೋನ್ಗಳ ಖರೀದಿಗೆ ಸಾಲದ ಅರ್ಜಿಗಳನ್ನು ಅನುಮೋದಿಸಲು ಅವಕಾಶ ಕಲ್ಪಿಸಿದೆ. ಗರುಡ ಏರೋ ಸ್ಪೇಸ್ ಮತ್ತು ಯೂನಿಯನ್ ಬ್ಯಾಂಕ್ ನಡುವಿನ ಪಾಲುದಾರಿಕೆಯು ರೈತರ ಲೀಡ್ ಜನರೇಶನ್, ಅಪ್ಲಿಕೇಶನ್ ಸೋರ್ಸಿಂಗ್, ಕ್ರೆಡಿಟ್ ನಿಯೋಜನೆಗಾಗಿ ಮತ್ತು ಗ್ರಾಹಕರ ಸ್ವಾಧೀನ ದಲ್ಲಿ ಹಾಗೂ ರೈತರ ಶ್ರದ್ಧೆಯಲ್ಲಿ ಪ್ರಯೋಜನಕಾರಿಯಾಗಿದೆ. ಈ ಡ್ರೋನ್ ಯೋಜನೆಯು ಕೃಷಿಗಾಗಿ ಸಾಲ ನೀಡಿದ ದೇಶದ ಮೊದಲ ಕೃಷಿ ಡ್ರೋನ್ ಆಗಿದೆ ಎಂದು ಹೇಳಬಹುದು.

ಈ ಗುರಿ ಈಡೇರಿಸುವುದಕ್ಕಾಗಿ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದ್ದು, ಅದರಲ್ಲಿ ರೈತರಿಗೆ ಕೃಷಿ ಡ್ರೋನ್ ಗಳನ್ನು ಖರೀದಿಸಲು ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಹಾಗೆಯೇ ಸರ್ಕಾರವು ಇದುವರೆಗೆ ತಂತ್ರಜ್ಞಾನದ ಅರಿವಿಲ್ಲದ ರೈತರನ್ನು ಸಹ ಈ ಆಧುನಿಕ ಕೃಷಿ ಪದ್ಧತಿಯೊಂದಿಗೆ ಸೇರಿಸಲು ಹಾಗೂ ಇದಕ್ಕಾಗಿ ಅನುದಾನ ಮತ್ತು ಹಲವು ಸವಲತ್ತುಗಳನ್ನು ನೀಡಲು ಸರ್ಕಾರ ಒತ್ತು ನೀಡುತ್ತಿದೆ.

ಇದನ್ನು ಓದಿ : ಮೋದಿ ಸ್ಕಾಲರ್ಶಿಪ್ [PMSS] ಗೆ ಅರ್ಜಿ ಆಹ್ವಾನ, ಎಲ್ಲಾ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು

ಕೃಷಿ ಡ್ರೋನ್ ಬಳಕೆಗೆ ಹಸಿರು ಸಿಗ್ನಲ್ ದೊರೆತಿದೆ :

ಅಗ್ನಿಶ್ವರ ಜಯಪ್ರಕಾಶ್ ಇವರು ಗರುಡ ಏರೋ ಸ್ಪೇಸ್ ಸ್ಟಾರ್ಟ್ ಅಪ್ ಸಂಸ್ಥಾಪಕ ಹಾಗೂ ಸಿ ಇ ಓ ಆದ ಇವರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿರುವುದಕ್ಕೆ, ಡ್ರೋನ್ಗಳ ಬಳಕೆಗೆ ಹಸಿರು ನಿಶಾನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ತೋರಿಸಿದ್ದಾರೆ. ಮುಂದಿನ ಆರು ತಿಂಗಳಲ್ಲಿ ನೂರು ದೇಶಗಳಿಗೆ 10000 ಡ್ರೋನ್ ಗಳನ್ನು ರಫ್ತು ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಗರುಡ ಏರೋ ಸ್ಪೇಸ್ನ ಸಿಇಒ ಹೇಳಿದ್ದಾರೆ.

ಹೀಗೆ ಕೃಷಿಗಳನ್ನು ರೈತರಿಗೆ ನೀಡುವುದರಿಂದ ರೈತರು ಸುಲಭವಾಗಿ ತಮ್ಮ ಕೃಷಿ ಕಾರ್ಯಗಳನ್ನು ನಡೆಸಲು ಸುಲಭವಾಗುತ್ತದೆ ಹಾಗೂ ತಂತ್ರಜ್ಞಾನದ ಜೊತೆಗೆ ಕೃಷಿಕರು ತಮ್ಮ ಕೆಲಸಗಳನ್ನು ಮಾಡಲು ಮುಂದಾಗುತ್ತಾರೆ.

ಅಲ್ಲದೆ ಗರುಡ ಏರೋ ಸ್ಪೇಸ್ ಕಂಪನಿಯು ಲಕ್ಷಾಂತರ ಯುವಕರಿಗೆ ಉದ್ಯೋಗವನ್ನು ನೀಡುವುದರ ಜೊತೆಗೆ ಕೃಷಿಯಲ್ಲಿ ಹೊಸ ತಂತ್ರಗಳನ್ನು ಹೇಗೆ ಬಳಸಿಕೊಳ್ಳಬೇಕೆಂಬುದನ್ನು ತಿಳಿಸುತ್ತಿವೆ ಎಂಬುದನ್ನು ನಾವು ನೋಡಬಹುದು. ಇದರಿಂದ ರೈತರು ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸುವುದರ ಮೂಲಕ ಅವರ ಶ್ರಮ ಮತ್ತು ಹಣ ಎರಡನ್ನು ಉಳಿಸಲು ಸಾಧ್ಯವಾಗುತ್ತದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ.

ಎಷ್ಟು ಡ್ರೋನ್ ಅಪ್ಲಿಕೇಶನ್ ಲಭ್ಯವಿದೆ ?

150 ಡ್ರೋನ್ ಅಪ್ಲಿಕೇಶನ್ ಲಭ್ಯವಿದೆ

ಎಷ್ಟು ಲಕ್ಷ ಸಬ್ಸಿಡಿ ಬರೆಯಲಿದೆ ?

5 ಲಕ್ಷ ಬರೆಯಲಿದೆ

ಡ್ರೋನ್ ತರಬೇತಿ ನೀಡಲಾಗುತ್ತಾ ?

ಹೌದು ನೀಡಲಾಗುತ್ತೆ

ಇದನ್ನು ಓದಿ : ರೈತರ ಸಾಲ ಮನ್ನಾ ರೈತರ ಪಟ್ಟಿ ಬಿಡುಗಡೆಯಾಗಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments