Friday, July 26, 2024
HomeTrending Newsಸರ್ಕಾರದಿಂದ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿಗೆ ಅಕ್ಕಿಗೆ ಹಣ ಕೊಡಲು ನಿರ್ಧಾರ

ಸರ್ಕಾರದಿಂದ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿಗೆ ಅಕ್ಕಿಗೆ ಹಣ ಕೊಡಲು ನಿರ್ಧಾರ

ನಮಸ್ಕಾರ ಸ್ನೇಹಿತರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಮೂಲಕ ಎಲ್ಲ ಬಡ ರೈತರಿಗೆ 10 ಕೆಜಿ ಅಕ್ಕಿ ನೀಡಲು ನಿರ್ಧರಿಸಿತ್ತು. ಆದರೆ ಈಗ ಐದು ಕೆಜಿ ಅಕ್ಕಿಯ ಬದಲು 5 ಕೆಜಿ ಹಣವನ್ನು ಹಾಗೂ ಐದು ಕೆಜಿ ಅಕ್ಕಿಯನ್ನು ಕೊಡುವುದಾಗಿ ಕಾಂಗ್ರೆಸ್ ಸರ್ಕಾರ ನಿರ್ಧಾರ ಮಾಡಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇದೀಗ ನೀವು ನೋಡಬಹುದು.

Money in exchange for rice
Money in exchange for rice
Join WhatsApp Group Join Telegram Group

5 ಕೆಜಿ ಅಕ್ಕಿಗೆ ಬದಲಾಗಿ ಹಣ :

ಕಾಂಗ್ರೆಸ್ ಸರ್ಕಾರವು 5 ಕೆಜಿ ಅಕ್ಕಿಯನ್ನು ಕೊಟ್ಟು ಉಳಿದ ಇನ್ನೂ ಐದು ಕೆಜಿ ಅಕ್ಕಿಯ ಬದಲಾಗಿ ಹಣವನ್ನು ನೀಡಲು ನಿರ್ಧರಿಸಿದೆ ಎಂದು ಕೆಎಚ್ ಮುನಿಯಪ್ಪ ಹಾಗೂ ಹೆಚ್ ಕೆ ಪಾಟೀಲ್ ರವರು ಕ್ಯಾಬಿನೆಟ್ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನು ನಡೆಸಿ ಹೇಳಿದರು. ಈ ಸುದ್ದಿಗೋಷ್ಠಿಯಲ್ಲಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಅಕ್ಕಿ ಹೊಂದಿಸುವ ಚರ್ಚೆ ನಡೆಸಲಾಯಿತು. ರಾಜ್ಯದ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದು ಹಾಗೂ ಇತರೆ ರಾಜ್ಯಗಳಿಂದ ಅಕ್ಕಿಯನ್ನು ಕೊಂಡುಕೊಳ್ಳುವ ಬಗ್ಗೆ ನಮ್ಮ ಮುಂದಿನ ನಡೆ ಇದೆ ಎಂದು ಚರ್ಚೆ ನಡೆಸಲಾಯಿತು ಎಂದು ಹೇಳಿದರು.

ಈ ಚರ್ಚೆಯಲ್ಲಿ 10 ಕೆಜಿ ಅಕ್ಕಿ ಬದಲಿಗೆ 2 ಕೆ.ಜಿ ರಾಗಿ ಅಥವಾ ಗೋಧಿ ಅಥವಾ ಜೋಳ ಮತ್ತು ಎಂಟು ಕೆಜಿ ಅಕ್ಕಿಯನ್ನು ಕೊಡುವ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಲಾಗಿದೆ. ಈ ವೇಳೆಯಲ್ಲಿಯೇ ಎಲ್ಲವನ್ನು ಬಿಟ್ಟು 5 ಕೆ.ಜಿ ಅಕ್ಕಿಯನ್ನು ಹಾಗೂ ಉಳಿದ 5 ಕೆಜಿ ಅಕ್ಕಿಗೆ ಬದಲಾಗಿ ಹಣವನ್ನು ಕೊಡುವುದರ ಬಗ್ಗೆ ನಿರ್ಧಾರ ಮಾಡಲಾಯಿತು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದನ್ನು ಓದಿ :ಮನೆ ಇಲ್ಲದವರು ಅರ್ಜಿ ಸಲ್ಲಿಸುವುದರ ಮೂಲಕ ಮನೆ ಪಡೆಯಿರಿ : ಮುಖ್ಯಮಂತ್ರಿ ವಸತಿ ಯೋಜನೆ 2023

ಕೇಂದ್ರ ಸಚಿವರಿಗೆ ಮನವಿ :

ಅಕ್ಕಿಯನ್ನು ಕೊಡುವುದಾಗಿ ರಾಜ್ಯ ಸರ್ಕಾರವು ಕೇಂದ್ರ ಸಚಿವರಿಗೆ ಮನವಿ ಮಾಡಿ ಒತ್ತಾಯ ಮಾಡಿದ್ದೆವು ಎಂದು ಹಾಗೂ ಕೇಂದ್ರದವರು 15 ಲಕ್ಷ ಟನ್ ಅನ್ನು ಓಪನ್ ಟೆಂಡರ್ ಕರೆದು ಕೊಟ್ಟಿದ್ದಾರೆ ಎಂದು ಹೇಳಿದರು. ಆದರೆ ಕೇಂದ್ರ ಸರ್ಕಾರವು ನಮಗೆ ಅಕ್ಕಿ ಕೊಡಲು ನಿರಾಕರಿಸುವುದರ ಮೂಲಕ ರಾಜಕೀಯ ಮಾಡಿದರು. ಅಕ್ಕಿ ದರದ ಮೇಲೆ 34 ರೂಪಾಯಿಗಳನ್ನು fci ಫಿಕ್ಸ್ ಮಾಡಿದ್ದಾರೆ. ಬೇರೆ ಸಂಸ್ಥೆಗಳು ಎಫ್‌ಸಿಐ ರೇಟ್ ಗೆ ಹಕ್ಕಿ ಕೊಡಲು ಮುಂದೆ ಬರಲಿಲ್ಲ. ಹಾಗಾಗಿ 34 ರೂಪಾಯಿ ಹಣವನ್ನ ಕೆಜಿಗೆ ಅಕ್ಕಿ ದಾಸ್ತಾನು ತಯಾರಾಗುವವರೆಗೆ ಕೊಡುತ್ತೇವೆ ಎಂದು ಸಚಿವಕ್ಕೆ ಕೆ ಹೆಚ್ ಮುನಿಯಪ್ಪ ಹೇಳಿದರು.

ಇದಕ್ಕೆ ಸಂಬಂಧಿಸಿದಂತೆ 750 ಕೋಟಿ ಅಥವಾ 800 ಕೋಟಿ ರೂಪಾಯಿಗಳು ಆಗಬಹುದೆಂದು ಅಂದಾಜು ಮಾಡಲಾಗಿದೆ. ಅಕ್ಕಿಗೆ ಬದಲಾಗಿ ಹಣವನ್ನು ಕೊಡಲು ನಿರ್ಧರಿಸಿದ್ದು ಹೇ ಹಣವನ್ನು ಹೆಡ್ ಆಫ್ ದಿ ಫ್ಯಾಮಿಲಿ ಸದಸ್ಯರ ಅಕೌಂಟಿಗೆ ಹಾಕಲಾಗುತ್ತದೆ. ಈ ಸದಸ್ಯರ ಅಕೌಂಟ್ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿರಬೇಕು ಆಗ ಮಾತ್ರ ಅವರ ಖಾತೆಗೆ ಹಣ ಜಮಾ ಆಗುತ್ತದೆ ಎಂದು ಹೇಳಿದರು.

ಹೀಗೆ ರಾಜ್ಯ ಸರ್ಕಾರವು 5 ಗ್ಯಾರಂಟಿಗಳನ್ನು ನೀಡಿದ್ದು ಆ ಗ್ಯಾರಂಟಿಗಳನ್ನ ಪೂರೈಸಲು ಹಲವಾರು ತಂತ್ರಗಳನ್ನು ನಡೆಸುತ್ತಿರುವುದನ್ನು ನಾವು ನೋಡಬಹುದು. ಅದರಂತೆ ಈ ಅನ್ನಭಾಗ್ಯ ಯೋಜನೆಗೂ ಸಹ ಯಶಸ್ವಿಯಾಗಿ ನಡೆಸಲು ಅಡ್ಡಿ ಆತಂಕಗಳು ಉಂಟಾಗುತ್ತಿರುವುದನ್ನು ನೋಡಬಹುದು.

ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡುವುದರ ಮೂಲಕ ಅವರಿಗೆ ಸರ್ಕಾರದ ಈ ಯೋಜನೆಯ ಬಗೆಗಿನ ಸಮಸ್ಯೆಗಳನ್ನು ತಿಳಿಸುವುದರ ಮೂಲಕ ಅವರು ಸಹ ಸರ್ಕಾರ ತನ್ನ ಗ್ಯಾರಂಟಿಗಳನ್ನು ಜಾರಿಗೊಳಿಸಲು ಯಾವುದಕ್ಕಾಗಿ ಮುಂದೂಡಲಾಗುತ್ತಿದೆ ಎಂಬುದನ್ನು ತಿಳಿಯಲಿ ಧನ್ಯವಾದಗಳು.

ಸರ್ಕಾರ ಎಷ್ಟು ಅಕ್ಕಿ ಕೊಡಲು ಘೋಷಣೆ ಮಾಡಿತ್ತು ?

10 ಕೆ.ಜಿ ಕೊಡಲು ಘೋಷಣೆ ಮಾಡಿದ್ದು

ಅಕ್ಕಿ ಬದಲಿಗೆ ಹಣ ನೀಡುತ್ತಿರುವ ಉದ್ದೇಶ ಏನು ?

ಅಕ್ಕಿ ಸಿಗದೇ ಇರದ ಕಾರಣ ಹಣ ನೀಡುತ್ತಿದ್ದಾರೆ

ಪ್ರತಿ ಕುಟುಂಬಕ್ಕೆ ಹೇಗೆ ಹಣ ನೀಡುತ್ತಾರೆ ?

ಡಿ ಬಿ ಟಿ ಮೂಲಕ ಹಣ ನೀಡುತ್ತಾರೆ

ಇದನ್ನು ಓದಿ :ಅರ್ಜಿ ಸಲ್ಲಿಸುವುದರ ಮೂಲಕ ದ್ವಿಚಕ್ರವಾಹನ ಖರೀದಿಗೆ ಸಹಾಯಧನ ಪಡೆಯಬಹುದು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments