Friday, June 14, 2024
HomeUpdatesಪಿಎಂ ಕಿಸಾನ್ ಯೋಜನೆಗೆ ಹೊಸ ನೊಂದಣಿ ಆರಂಭ: ಇಂದೇ ಅರ್ಜಿ ಸಲ್ಲಿಸಿ ..! ವರ್ಷಕ್ಕೆ 12,000...

ಪಿಎಂ ಕಿಸಾನ್ ಯೋಜನೆಗೆ ಹೊಸ ನೊಂದಣಿ ಆರಂಭ: ಇಂದೇ ಅರ್ಜಿ ಸಲ್ಲಿಸಿ ..! ವರ್ಷಕ್ಕೆ 12,000 ರೂ ಸಿಗುತ್ತೆ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಹೊಸ ನೋಂದಣಿಯ ಬಗ್ಗೆ. ಜುಲೈ 22ರಂದು ಕೇಂದ್ರ ಸರ್ಕಾರದ ಅಡಿಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 14ನೇ ಕಂತನ್ನು ರೈತರ ಖಾತೆಗೆ ವಿತರಿಸಲಾಗಿದೆ ಹಾಗೂ ಪಿಎಂ ಕಿಸಾನ್ ಯೋಜನೆಗೆ ರೈತರಿಗೆ ಹೊಸ ನೊಂದಣಿಯನ್ನು ಸಹ ಸರ್ಕಾರವು ಪ್ರಾರಂಭಿಸಿದೆ. ಹಾಗಾದರೆ ಈ ಹೊಸ ನೋಂದಣಿಯನ್ನು ಹೇಗೆ ಮಾಡಿಸುವುದು ಇದಕ್ಕೆ ಯಾವೆಲ್ಲ ಅರ್ಹತೆಗಳು ಇರಬೇಕು ಅಲ್ಲದೆ ಇದಕ್ಕೆ ಬೇಕಾದಂತಹ ದಾಖಲೆಗಳು ಯಾವುವು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

New Registration for PM Kisan Yojana
New Registration for PM Kisan Yojana
Join WhatsApp Group Join Telegram Group

ಪಿಎಂ ಕಿಸಾನ್ ಯೋಜನೆಯ ಹೊಸ ನೋಂದಣಿ :

ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಗೆ ಗರಿಷ್ಠ ರೈತರಿಂದ ನೋಂದಣಿ ನಡೆಯುತ್ತಿರುವುದು ಈಗಾಗಲೇ ನೋಡಿದ್ದೇವೆ. ಅದರಂತೆ ಈಗ ಹೊಸ ನೊಂದಣಿಯನ್ನು ಸಹ ರೈತರು ಮಾಡುತ್ತಿದ್ದರೆ, ಇನ್ನು ಕೆಲವು ರೈತರಿಗೆ ಈ ಹೊಸ ನೋಂದಣಿಯ ಬಗ್ಗೆ ತಿಳಿದಿಲ್ಲ. ಹಾಗಾಗಿ ಈ ಹೊಸ ನೊಂದಣಿಗೆ ಯಾವೆಲ್ಲ ರೈತರು ಅರ್ಹರು ಎಂದು ಈ ಲೇಖನದಲ್ಲಿ ತಿಳಿಸಲಾಗುತ್ತದೆ. ಕೇಂದ್ರ ಸರ್ಕಾರವು 14ನೇ ಕಂತನ್ನು ಪ್ರಧಾನಿ ಕಿಸಾನ್ ಯೋಜನೆಯ ಅಡಿಯಲ್ಲಿ ವಿತರಣೆ ಮಾಡಿದ ನಂತರ ರೈತರಿಗೆ ಹೊಸದಾಗಿ ನೊಂದಾಯಿಸಲು ಇದು ಒಂದು ರೀತಿಯ ಮನವಿಯಾಗಿದ್ದು ರೈತರು ಹೊಸ ನೋಂದಣಿ ಸಮಯದಲ್ಲಿ, ಪ್ರಧಾನಮಂತ್ರಿ ಕಿಸಾನ್ ಯೋಜನೆಗೆ ರೈತರು ನೋಂದಾಯಿಸಲು ಅರ್ಹರಾಗಿದ್ದಾರೆಯೇ ಇಲ್ಲವೇ ಎಂದು ತಮ್ಮ ತಲಾಥಿ ಅಧಿಕಾರಿಗಳೊಂದಿಗೆ ಪರಿಶೀಲಿಸಬೇಕು ಇದಾದ ನಂತರ ಹೊಸ ನೋಂದಣಿಯನ್ನು ಮಾಡಿಸಿಕೊಳ್ಳಬಹುದಾಗಿದೆ.

ರಾಜ್ಯದ ರೈತರು ಪ್ರಧಾನಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ ಅರ್ಹರಾಗಿದ್ದರೆ ಅವರು ನಮೋ ರೈತ ಯೋಜನೆಗೂ ಸಹ ಅರ್ಹರಾಗಿರುತ್ತಾರೆ. ಒಟ್ಟು 85 ಲಕ್ಷದ 66 ಸಾವಿರ ರೈತರು ಪ್ರಧಾನಮಂತ್ರಿ ಕಿಸಾನ್ ಯೋಜನೆಗೆ ಅರ್ಹರಾಗಿದ್ದು, ಈ ಯೋಜನೆಗೆ ಗರಿಷ್ಟ ಸಂಖ್ಯೆಯ ರೈತರನ್ನು ಸಹ ಕೋರಲಾಗಿದೆ. ಹಾಗಾಗಿ ರೈತರು ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಅಡಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

ಇದನ್ನು ಓದಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿತ ಚಿತ್ರ : ಲೀಡರ್ ರಾಮಯ್ಯ ಹೀರೋ ಯಾರು ಗೊತ್ತಾ ?

ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಹೊಸ ನೋಂದಣಿ ಗೆ ಅರ್ಜಿ ಸಲ್ಲಿಸುವ ವಿಧಾನ :

ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಹೊಸ ನೋಂದಣಿಗೆ ರೈತರು ಅರ್ಜಿಯನ್ನು ಸಲ್ಲಿಸಬೇಕಾದರೆ ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಧಿಕೃತ ಪೋರ್ಟಲ್ ಎಂದರೆ pmkisan.gov.in ಈ ಪೋರ್ಟಲ್ ಗೆ ಭೇಟಿ ನೀಡುವುದರ ಮೂಲಕ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಈ ಪೋರ್ಟಲ್ ಗೆ ಭೇಟಿ ನೀಡುವುದರ ಮೂಲಕ ರೈತರು ತಮ್ಮ ಹೊಸ ನೋಂದಣಿ ಆಯ್ಕೆಯನ್ನು ಕ್ಲಿಕ್ ಮಾಡಿ ಅದರಲ್ಲಿ ರೈತರು ಗ್ರಾಮೀಣ ಶತವರಾಗಿದ್ದರು ಅಥವಾ ನಗರ ಪ್ರದೇಶದ ರೈತ ರಾಗಿದ್ದರೆ ಆ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ಅದಾದ ನಂತರ ತಮ್ಮ ರಾಜ್ಯವನ್ನು ಆಯ್ಕೆ ಮಾಡಿ ಆಧಾರ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ನಮೂದಿಸಿದ ನಂತರ ಕ್ಯಾಪ್ಚರ್ ಕೋಡ್ ಅನ್ನು ನಮೂದಿಸಿ ಓಟಿಪಿ ಸೆಂಡಿಗೆ ಕ್ಲಿಕ್ ಮಾಡಬೇಕು.

ಓಟಿಪಿ ಬಂದ ನಂತರ ಬಾಕ್ಸ್ ನಲ್ಲಿ ಓಟಿಪಿ ನಂಬರ್ ಅನ್ನು ನಮೂದಿಸಿ ಆಧಾರ್ ಡೇಟಾ ನೊಂದಿಗೆ ಹೊಸ ಪುಟ ನಿಮ್ಮದು ತೆರೆಯುತ್ತದೆ. ಈ ಹೊಸ ಪುಟದಲ್ಲಿ ರೈತರು ತಮ್ಮ ತಾಲೂಕು ಜಿಲ್ಲೆ ಹಾಗೂ ಗ್ರಾಮವನ್ನು ಆಯ್ಕೆ ಮಾಡಿ ನಂತರ ವರ್ಗವನ್ನು ಆಯ್ಕೆ ಮಾಡಬೇಕು. ಇದಾದ ನಂತರ ರೈತರು ತಮ್ಮ ಜಮೀನು ನೊಂದಣಿಯ ಐಡಿಯನ್ನು ನಮೂದಿಸಿ ಅದರಲ್ಲಿ ಪಡಿತರ ಚೀಟಿಯ ಸಂಖ್ಯೆಯನ್ನು ನಮೂದಿಸಬೇಕು. ಹೀಗೆ ಕೆಲವೊಂದು ಹಂತಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಹೊಸ ನೋಂದಣಿಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಹೀಗೆ ರೈತರು ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಹೊಸ ನೋಂದಣಿಯನ್ನು ಮಾಡಿಕೊಳ್ಳುವುದರ ಮೂಲಕ ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದಾಗಿದೆ. ಹೀಗೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಬದಲಾವಣೆಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧ ಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು

ಇತರೆ ವಿಷಯಗಳು :

Breaking News: 2 ಲಕ್ಷದವರೆಗೆ ರೈತರ ಸಾಲ ಮನ್ನಾ! ಕೆಸಿಸಿ ಸಾಲ ಮನ್ನಾ ಮಾಡಲು ಸರ್ಕಾರದ ನಿರ್ಧಾರ, ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ ಕೂಡಲೇ ಚೆಕ್‌ ಮಾಡಿ

ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಇಳಿಕೆ: ಚಿನ್ನ ಖರೀದಿಸುವವರಿಗೆ ಇದೇ ಬೆಸ್ಟ್ ಟೈಮ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments