Friday, June 21, 2024
HomeTrending Newsಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿತ ಚಿತ್ರ : ಲೀಡರ್ ರಾಮಯ್ಯ ಹೀರೋ ಯಾರು ಗೊತ್ತಾ ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿತ ಚಿತ್ರ : ಲೀಡರ್ ರಾಮಯ್ಯ ಹೀರೋ ಯಾರು ಗೊತ್ತಾ ?

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಕನ್ನಡ ಚಿತ್ರರಂಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನ ಚರಿತ್ರೆಯನ್ನು ಸಿನಿಮಾದ ಮೂಲಕ ತೋರಿಸಲು ಸಜ್ಜಾಗಿದೆ. ಅದರಂತೆ ಈಗ ಲೀಡರ್ ರಾಮಯ್ಯ ಎನ್ನುವ ಶೀರ್ಷಿಕೆಯನ್ನು ಸಿದ್ದರಾಮಯ್ಯ ಅವರ ಬಯೋಪಿಕ್ ಗೆ ನೀಡಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಈ ಚಿತ್ರದಲ್ಲಿ ಯಾರು ಮುಖ್ಯಪಾತ್ರ ವಹಿಸಲಿದ್ದಾರೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವನ್ನು ಯಾವ ನಟ ವಹಿಸಲಿದ್ದಾನೆ ಹಾಗೂ ಈ ಸಿನಿಮಾ ಯಾವಾಗ ತೆರೆ ಕಾಣಲಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

A film based on the life of Siddaramaiah
A film based on the life of Siddaramaiah
Join WhatsApp Group Join Telegram Group

ಲೀಡರ್ ರಾಮಯ್ಯ :

ಕನ್ನಡ ಚಿತ್ರರಂಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನ ಚರಿತ್ರೆಯನ್ನು ಬೆಳ್ಳಿ ಪರದೆಯ ಮೇಲೆ ತರಲು ನಿರ್ಧರಿಸಿದೆ. ಅದರಂತೆ ಈಗ ಸಿದ್ದರಾಮಯ್ಯ ಅವರ ಬಯೋಪಿಕ್ ಗೆ ಲೀಡರ್ ರಾಮಯ್ಯ ಎಂಬ ಶೀರ್ಷಿಕೆಯನ್ನು ಇಡುವುದರ ಮೂಲಕ ಸತ್ಯ ರತ್ನಮ್ ಎಂಬುವ ಖ್ಯಾತ ನಿರ್ದೇಶಕ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಲೀಡರ್ ರಾಮಯ್ಯ ಎಂಬ ಚಿತ್ರದ ನಿರ್ದೇಶನವನ್ನು ಮಾಡುತ್ತಿದ್ದಾರೆ. ತೆಲುಗಿನ ಖ್ಯಾತ ನಟ ವಿಜಯ್ ಸೇತುಪತಿಯವರು ಇಷ್ಟು ದಿನ ಸಿದ್ದರಾಮಯ್ಯ ಅವರ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು ಆದರೆ ಈಗ ಸಿದ್ದರಾಮಯ್ಯ ಅವರ ಪಾತ್ರಕ್ಕೆ ನಿರೂಪ್ ಭಂಡಾರಿ ಅವರು ಬಣ್ಣ ಹಚ್ಚಲಿದ್ದಾರೆ ಎಂಬ ಮಾಹಿತಿ ತಿಳಿದು ಬರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಧಾರಿತ ಸಿನಿಮಾವು ಎರಡು ಚಾಪ್ಟರ್ ಗಳ ಮೂಲಕ ತೆರೆ ಕಾಣಲಿದ್ದು ಲೀಡರ್ ರಾಮಯ್ಯ ಚಾಪ್ಟರ್ ಒನ್ ಹಾಗೂ ಲೀಡರ್ ರಾಮಯ್ಯ ಚಾಪ್ಟರ್ ಟು ಮೂಲಕ ತೆರೆ ಕಾಣಲಿದೆ.

ಚಾಪ್ಟರ್ 1 ಭಾಗದಲ್ಲಿ ಸಿದ್ದರಾಮಯ್ಯ ಅವರ ಬಾಲ್ಯ ಕಾಲೇಜು ದಿನಗಳು ಹಾಗೂ ಲಾಯರಾಗಿದ್ದಾಗ ಇರುವಂತಹ ದಿನಗಳು ಹಾಗೂ ರಾಜಕೀಯಕ್ಕೆ ಸಂಬಂಧಿಸಿದಂತೆ ಅವರಿಗೆ ಸ್ಪೂರ್ತಿ ನೀಡಿದಂತಹ ವಿಚಾರಗಳ ಬಗ್ಗೆ ಇರಲಿವೆ. ನಿರುಪ್ ಭಂಡಾರಿ ಅವರು ಸಿದ್ದರಾಮಯ್ಯ ಅವರ ಲೀಡರ್ ರಾಮಯ್ಯ ಚಾಪ್ಟರ್ 1 ಸಿನಿಮಾದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಲಿದ್ದು, ವಿಜಯ್ ಸೇತುಪತಿಯವರು ಸಿದ್ದರಾಮಯ್ಯ ಅವರು ಲಾಯರಾದ ಬಳಿಕ ನಂತರ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬರುತ್ತಿದೆ.

ನಿರೂಪ್ ಭಂಡಾರಿ ಅವರು ಸಿದ್ದರಾಮಯ್ಯನವರ ಯವ್ವನದ ಪಾತ್ರದಲ್ಲಿ ನಟಿಸಲಿದ್ದು ವಿಜಯ್ ಸೇತುಪತಿಯವರು ಆನಂತರದ ದಿನಗಳಲ್ಲಿ ನಟಿಸಲಿದ್ದಾರೆ. ಈ ಚಿತ್ರವನ್ನು ಮಾಡಲು ಈಗಾಗಲೇ ಒಂದು ಸುತ್ತಿನ ಮಾತುಕತೆಯನ್ನು ಸಹ ಕುರಿತು ನಡೆಸಿದ್ದಾರೆ. ಈ ಮಾತಿಕತೆಯು ಮಾಜಿ ಸಚಿವ ಶಿವರಾಜ್ ತಂಗಡಗಿ ಮತ್ತು ಜಮೀರ್ ಅಹಮದ್ ರವರ ನೇತೃತ್ವದಲ್ಲಿ ನಡೆಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ತಮ್ಮ ಸಿನಿಮಾಗೆ ಗ್ರೀನ್ ಸಿಗ್ನಲ್ ಅನ್ನು ನೀಡಿದ್ದಾರೆ. ಲೀಡರ್ ರಾಮಯ್ಯ ಎಂಬ ಚಿತ್ರವು ಗಂಗಾವತಿ ಹಯಾತ್ ಪೀರ್ ಸಾಬ್ ಅವರ ನೇತೃತ್ವದ ಎಂ ಎಸ್ ಕ್ರಿಯೇಶನ್ಸ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು ಈ ಸಿನಿಮಾಗೆ ಸುಮಾರು 50 ಕೋಟಿಗೂ ಹೆಚ್ಚು ಅಧಿಕ ವೆಚ್ಚದಲ್ಲಿ ಹೈ ಬಜೆಟ್ ನಲ್ಲಿ ಈ ಚಿತ್ರಕ್ಕೆ ಬಂಡವಾಳವನ್ನು ಹೂಡಲಾಗುತ್ತಿದೆ ಎಂದು ಕೆಲವೊಂದು ಮಾಹಿತಿಗಳಿಂದ ತಿಳಿದು ಬಂದಿದೆ.

ಇದನ್ನು ಓದಿ : ಭದ್ರಾವತಿ ವಿಐಎಸ್ಎಲ್ ಕಾರ್ಖಾನೆ ಪುನರ್ ಆರಂಭ: ಸರ್ಕಾರದಿಂದ ವಿಐಎಸ್ಎಲ್ ಪುನರಾರಂಭಕ್ಕೆ ಚಾಲನೆ

ಹೀಗೆ ಕರ್ನಾಟಕದ ಮೇಧಾವಿ ಹಾಗೂ ಅರ್ಥಶಾಸ್ತ್ರಜ್ಞ ಎಂದು ಖ್ಯಾತಿ ಪಡೆದಿರುವಂತಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನದಾರಿತ ಚಿತ್ರವನ್ನು ಮಾಡಲು ಕನ್ನಡ ಚಿತ್ರರಂಗವು ನಿರ್ಧರಿಸಿದ್ದು ಈ ಬಗ್ಗೆ ಸಿದ್ದರಾಮಯ್ಯ ಅವರು ಸಹ ಈ ಚಿತ್ರವನ್ನು ಮಾಡಲು ಗ್ರೀನ್ ಸಿಗ್ನಲ್ ಅನ್ನು ಕೊಟ್ಟಿರುವುದು ಒಂದು ಸಂತೋಷದ ಸುದ್ದಿಯಾಗಿದೆ. ಹೀಗೆ ಕರ್ನಾಟಕದ ರಾಜಕಾರಣಿಯ ಸಿನಿಮಾ ಬರುತ್ತಿರುವುದು ಒಂದು ಆಶ್ಚರ್ಯ ಕೂಡ ಹಾಗೂ ಒಂದು ರೀತಿಯ ಕುತೂಹಲದ ಸಂಗತಿಯು ಎಂದು ಹೇಳಿದರು ತಪ್ಪಾಗಲಾರದು. ಹೀಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೀವನಾಧಾರಿತ ಚಿತ್ರವು ತೆರೆ ಕಾಣಲು ಇನ್ನು ಕೆಲವು ಸಮಯ ಕಾಯಬೇಕಾಗುತ್ತದೆ ಹಾಗಾಗಿ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿಗಳಿಗೂ ಸಹ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಇಳಿಕೆ: ಚಿನ್ನ ಖರೀದಿಸುವವರಿಗೆ ಇದೇ ಬೆಸ್ಟ್ ಟೈಮ್

Gruha Jyothi Breaking News: ಯಾರಿಗೆಲ್ಲಾ ಸಿಗಲಿದೆ ಜೀರೋ ವಿದ್ಯುತ್ ಬಿಲ್! ಸರ್ಕಾರದ ಹೊಸ ಅಪ್ಡೇಟ್‌, ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments