Friday, July 26, 2024
HomeTrending Newsಸರ್ಕಾರದ ನಿಯಮದ ಪ್ರಕಾರ ಬಸ್ ನಲ್ಲಿ ಡ್ರೈವರ್ ಈ ಕೆಲಸ ಮಾಡುವಂತಿಲ್ಲ : ಬಸ್ ಡಿಪೋದಲ್ಲಿ...

ಸರ್ಕಾರದ ನಿಯಮದ ಪ್ರಕಾರ ಬಸ್ ನಲ್ಲಿ ಡ್ರೈವರ್ ಈ ಕೆಲಸ ಮಾಡುವಂತಿಲ್ಲ : ಬಸ್ ಡಿಪೋದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ

ನಮಸ್ಕಾರ ಸ್ನೇಹಿತರೆ ಈಗ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಬಸ್ ಕಂಡಕ್ಟರ್ ನ ಬಗ್ಗೆ. ಹಲವಾರು ಜನರಿಗೆ ಟ್ರಾವೆಲ್ ಮಾಡುವುದು ಎಂದರೆ ಬಹಳ ಇಷ್ಟ. ಅವರಿಗೆ ಟ್ರಾವೆಲ್ ಮಾಡುವುದು ಇಷ್ಟವಾಗುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಅವರಿಗೆ ಆಗುವಂತಹ ವಾಕರಿಕೆ ಅಥವಾ ವಾಂತಿ ಬರುವ ಲಕ್ಷಣ. ಹಾಗಾಗಿ ಎಲ್ಲಾದರೂ ಹೊರಗಡೆ ಹೋಗಬೇಕು ಎಂದರೆ ಕೆಲವೊಂದಿಷ್ಟು ಜನ ಹಿಂದೇಟು ಹಾಕುವುದು ಸಹಜ. ಈ ಕಾರಣದಿಂದಾಗಿಯೇ ಬಸ್ನಲ್ಲಿ ಪ್ರಯಾಣಿಕರು ಹಾಗೂ ಡ್ರೈವರ್ ನ ನಡುವೆ ಘಟನೆ ಸಂಭವಿಸಿದ್ದು ಈ ಘಟನೆ ಈಗ ಬೆಳಕಿಗೆ ಬಂದಿದೆ.

New rules apply to drivers
New rules apply to drivers
Join WhatsApp Group Join Telegram Group

ಕೇರಳ ರಾಜ್ಯ ರಸ್ತೆ ನಿಗಮ :

ಅನೇಕರು ಬಸ್ ನಲ್ಲಿ ಪ್ರಯಾಣ ಮಾಡುವಾಗ ಮಾಡುವುದು ಸಹಜ ಆದರೆ ಇದೀಗ ಬಸ್ ಚಾಲಕರು ವಾಂತಿ ಮಾಡುವ ವಿಚಾರಕ್ಕೇ ತಕರಾರು ಮಾಡಿಕೊಂಡು ತಮ್ಮ ಕೆಲಸವನ್ನೇ ಕಳೆದುಕೊಂಡಿದ್ದಾರೆ. ಕೆಎಸ್ಆರ್ಟಿಸಿ ಎಂದರೆ ಕರ್ನಾಟಕ ಎಂದು ಭಾವಿಸಬೇಡಿ ಅದು ಕೇರಳದ ಸರ್ಕಾರಿ ಬಸ್ಸಾಗಿದೆ. ಕೇರಳ ರಾಜ್ಯದ ರಸ್ತೆ ನಿಗಮಕ್ಕೂ ಸಹ ಕೆಎಸ್ಆರ್ಟಿಸಿ ಎಂದು ಹೆಸರು ನೀಡಲಾಗಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಅಲ್ಲಿ ನಡೆದಿರುವಂತಹ ಒಂದು ಘಟನೆ ಎಲ್ಲಾ ಕಡೆ ವೈರಲ್ ಆಗುತ್ತಿದೆ.

ನೆಯ್ಯಟಿಂಕಾರ ಬಸ್ ಡಿಪೋ :

ಕೇರಳ ರಾಜ್ಯದಲ್ಲಿ ನೆಯ್ಯಟಿಂಕಾರ ಬಸ್ ಡಿಪೋದಲ್ಲಿ ಒಂದು ಘಟನೆ ನಡೆದಿದ್ದು ಈ ಘಟನೆ ಈಗ ಬೆಳಕಿಗೆ ಬಂದಿದೆ. ಬಸ್ನಲ್ಲಿ ಒಬ್ಬ ನರ್ಸಿಂಗ್ ಸ್ಟೂಡೆಂಟ್ ವಾಂತಿಮಾಡಿಕೊಂಡಿದ್ದು ಡ್ರೈವರ್ ಆಕೆಯ ಬಳಿ ಅದನ್ನು ಕ್ಲೀನ್ ಮಾಡಿಸಿದ ಎಂಬುದಾಗಿ ತಿಳಿದು ಬಂದಿದ್ದು ಡ್ರೈವರ್ ಹೆಸರು ಎಸ್ ಎನ್ ಶಿಜಿ ಎಂದು ಗುರುತಿಸಲಾಗಿದೆ. ಈ ಡ್ರೈವರ್ ಈಗಾಗಲೇ ಟೆಂಪ್ರವರಿ ಕೆಲಸದಲ್ಲಿದ್ದರೂ ಸಹ ಆತನನ್ನು ಕೂಡಲೇ ಕೆಲಸದಿಂದ ತೆಗೆದು ಹಾಕಲಾಗಿದೆ. ಮಧ್ಯಾಹ್ನ 3:00 ಮಂಗಳವಾರದಂದು ಆ ಸಂದರ್ಭದಲ್ಲಿ ಈ ಘಟನೆ ವೆಳ್ಳಡ ಸಮೀಪದಲ್ಲಿ ನಡೆದಿತ್ತು ಎಂದು ತಿಳಿದುಬಂದಿದೆ. ಆ ವೇಳೆಯಲ್ಲಿ ಒಬ್ಬ ನರ್ಸಿಂಗ್ ಸ್ಟೂಡೆಂಟ್ ಅನ್ನ ಸಹೋದರಿಯ ಜೊತೆಗೆ ಹಾಸ್ಟೆಲ್ ಗೆ ಹೋಗಿ ಬರುತ್ತಿದ್ದಳು ಆ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು ವೆಲ್ಲಾಡ ಬಸ್ ಡಿಪೋಗೆ ಬಂದ ನಂತರ ಡ್ರೈವರ್ ಆ ಹುಡುಗಿಯ ಬಳಿ ವಾಂತಿ ಮಾಡಿರುವ ಸ್ಥಳವನ್ನು ಕ್ಲೀನ್ ಮಾಡದೆಯೇ ಬಸ್ಸಿನಿಂದ ಇಳಿಸಲು ಬಿಡುವುದಿಲ್ಲ.

ಅಲ್ಲದೆ ಆ ಹುಡುಗಿಯ ಜೊತೆ ಕಠಿಣವಾಗಿ ನಡೆದುಕೊಂಡಿದ್ದಾನೆ ಎಂದು ಹೇಳಲಾಗುತ್ತಿದ್ದು, ಆ ಹುಡುಗಿ ಅಲ್ಲೇ ಇದ್ದ ಬಕೆಟ್ ಹಾಗೂ ನೀರಿನ ಪೈಪ್ ತೆಗೆದುಕೊಂಡು ತಾನು ಮಾಡಿದ ವಾಂತಿಯ ಸ್ಥಳವನ್ನು ಸಂಪೂರ್ಣ ವಾಗೀ ಸ್ವಚ್ಛ ಮಾಡಿದ ನಂತರವೇ ಆ ಹುಡುಗಿಯನ್ನು ಬಸ್ನಿಂದ ಕೆಳಗೆ ಇಳಿಸಲಾಗಿದೆ ಎಂದು ಹೇಳಲಾಗಿದೆ.

ಇದನ್ನು ಓದಿ : ಹೆಚ್ಚು ಬಡ್ಡಿ ಕಟ್ಟುತ್ತಿದ್ದವರಿಗೆ ಗುಡ್‌ ನ್ಯೂಸ್!‌ ದೇಶಾದ್ಯಂತ ಹೊಸ ರೂಲ್ಸ್‌ ಜಾರಿ, ಬಡ್ಡಿ ಕಡಿಮೆ ಮಾಡಿಕೊಳ್ಳಲು ಈ ಟ್ರಿಕ್ಸ್‌ ಬಳಸಿ

ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ದಿಂದ ಕಠಿಣ ಕ್ರಮ :

ಈ ಪ್ರಕರಣ ನಡೆದ ನಂತರ ಈ ಘಟನೆಯ ಸುದ್ದಿಯನ್ನು ತಿಳಿದಂತಹ ಕೆಎಸ್ಆರ್ಟಿಸಿ ಎಂದರೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ ನಂತರ ಹಿರಿಯ ಅಧಿಕಾರಿಗಳು ಕೆಲವೇ ಸಮಯದಲ್ಲಿ ಈ ಘಟನೆ ಕೇರಳದಾದ್ಯಂತ ವೈರಲ್ ಆಗಿದ್ದು, ಆ ವ್ಯಕ್ತಿಯ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ವಿರುದ್ಧ ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಇದಾದ ನಂತರ ಆ ವ್ಯಕ್ತಿಯ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮವನ್ನು ಕೈಗೊಂಡು ಆ ವ್ಯಕ್ತಿಯನ್ನು ಕೆಲಸದಿಂದ ತೆಗೆದಿದ್ದಾರೆ. ಈ ನಿರ್ಧಾರವನ್ನು ತೆಗೆದುಕೊಂಡ ನಂತರ ಈ ನಿರ್ಧಾರಕ್ಕೆ ಹೆಚ್ಚಿನ ಮೆಚ್ಚುಗೆ ವ್ಯಕ್ತವಾಗಿದೆ.

ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ನಡೆದಂತಹ ಈ ಘಟನೆಯು ಒಂದು ವಿದ್ರಾವಕ ವಿಷಯವಾಗಿದ್ದು ಇದು ಒಂದು ಅಮಾನವೀಯ ವರ್ತನೆಯನ್ನು ಡ್ರೈವರ್ ತೋರಿಸಿದಂತಾಗಿದೆ. ಅಲ್ಲದೆ ಆ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವುದು ಒಂದು ಒಳ್ಳೆಯ ಸುದ್ದಿಯಾಗಿದೆ ಎಂದು ಹೇಳಬಹುದಾಗಿದೆ.

ಇತರೆ ವಿಷಯಗಳು :

ಇದೀಗ ಬಂದ ಸುದ್ದಿ: ಡೀಸೆಲ್‌ ಈಗ ಅಗ್ಗದ ಬೆಲೆಯಲ್ಲಿ ಲಭ್ಯ! ಪ್ರತೀ ಲೀಟರ್‌ ಗೆ 75 ರೂ, ಇಂದೇ ಅರ್ಜಿ ಸಲ್ಲಿಸಿ

ಹಿರಿಯ ನಾಗರೀಕರಿಗೆ ಪ್ರತಿ ತಿಂಗಳು 20,500 ರೂ..! ಅರ್ಜಿ ಅಹ್ವಾನ ಪ್ರಾರಂಭ, ಈ ಕಾರ್ಡ್ ಕಡ್ಡಾಯ!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments