Saturday, July 27, 2024
HomeTechವಾಟ್ಸಪ್ ನಲ್ಲಿ ಸದ್ದಿಲ್ಲದೆ ಊಹಿಸದ ಹೊಸ ಫೀಚರ್ : ಅಬ್ಬಬ್ಬಾ ಏನಿದು ಟೆಕ್ನಾಲಜಿ...!

ವಾಟ್ಸಪ್ ನಲ್ಲಿ ಸದ್ದಿಲ್ಲದೆ ಊಹಿಸದ ಹೊಸ ಫೀಚರ್ : ಅಬ್ಬಬ್ಬಾ ಏನಿದು ಟೆಕ್ನಾಲಜಿ…!

ನಮಸ್ಕಾರ ಸ್ನೇಹಿತರೇ ,ವಾಟ್ಸಪ್ ವಿಶ್ವದಲ್ಲಿಯೇ ಪ್ರಸಿದ್ಧಿಯಾದ ಸಂದೇಶ ಕಳುಹಿಸುವ ಪ್ಲಾಟ್ ಫಾರ್ಮ್ ಆಗಿದೆ. ದಿನದಿಂದ ದಿನಕ್ಕೆ ಅನುಕೂಲವಾಗುವಂತಹ ಸಾಕಷ್ಟು ವೈಶಿಷ್ಟತೆಗಳನ್ನು ವಾಟ್ಸಾಪ್ ಬಳಕೆದಾರರಿಗೆ ಪರಿಚಯ ಮಾಡುತ್ತಲೇ ಬಂದಿದೆ. ಅದರಂತೆ ಈಗ ಮತ್ತೊಂದು ಹೊಸ ಫೀಚರ್ ಅನ್ನು ವಾಟ್ಸಾಪ್ ಬಿಡುಗಡೆ ಮಾಡಿದೆ ಹಾಗಾದರೆ ಆ ಫೀಚರ್ ಯಾವುದು ಎಂಬುದನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಿ.

quietly unexpected new feature in WhatsAp
quietly unexpected new feature in WhatsAp
Join WhatsApp Group Join Telegram Group

ವಾಟ್ಸಾಪ್ :

ವಿಶ್ವದಲ್ಲಿಯೇ ಸಂದೇಶವನ್ನು ಕಳುಹಿಸುವಂತಹ ಪ್ಲಾಟ್ ಫಾರ್ಮ್ ಗಳಲ್ಲಿ ಒಂದಾಗಿರುವ ವಾಟ್ಸಾಪ್ ತನ್ನ ಗ್ರಾಹಕರಿಗೆ ಸಾಕಷ್ಟು ವೈಶಿಷ್ಟತೆಗಳನ್ನು ಪರಿಚಯಿಸುತ್ತಲೇ ಇದೆ. ಅದರಂತೆ ಹೆಚ್ ಡಿ ಗುಣಮಟ್ಟದ ಫೋಟೋಗಳನ್ನು ಇತ್ತೀಚೆಗೆ ವಾಟ್ಸಾಪ್ ಡಾಕ್ಯುಮೆಂಟ್ ಮೂಲಕ ಕೂಡ ಪರಿಚಯಿಸುವಂತಹ ಫೀಚರ್ ಅನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ. ನಾವು ನಿತ್ಯವೂ ಬಳಸುವಂತಹ ಫೀಚರ್ ಗಳಿಂದ ವಾಟ್ಸಾಪ್ನಲ್ಲಿ ವಿಭಿನ್ನವಾದ ಹಾಗೂ ವಿಶೇಷವಾದ ಸಾಕಷ್ಟು ಫೀಚರ್ ಗಳು ಇರುತ್ತವೆ. ಅದರ ಬಗ್ಗೆ ನಮಗೆ ಯಾವುದೇ ಜ್ಞಾನ ಇರುವುದಿಲ್ಲ. ಹಾಗಾದರೆ ವಾಟ್ಸಪ್ ನ ಹೊಸ ಫೀಚರ್ ಯಾವುದು ಎಂಬುದನ್ನು ನೋಡುವುದಾದರೆ ,

ವಾಟ್ಸಪ್ ನಲ್ಲಿ ಹೆಸರಿಲ್ಲದೆ ಗ್ರೂಪ್ ರಚಿಸಬಹುದು :

ಈಗ ಮತ್ತೊಂದು ಹೊಸ ಫೀಚರ್ ವಾಟ್ಸಪ್ ನಲ್ಲಿ ಬಂದಿದೆ. ಒಂದು ಗ್ರೂಪನ್ನು ಯಾವುದೇ ಹೆಸರನ್ನು ಬಳಕೆದಾರರು ಕೊಡದೆ ರಚಿಸಬಹುದಾಗಿದೆ. ವಾಟ್ಸಪ್ ಫೀಚರ್ ಬಗ್ಗೆ ಮೇಟ ಸಿಇಓ ಮಾರ್ಕ್ ಜುಗರ್ ಬರ್ಗ್ ಮಾಹಿತಿಯನ್ನು ತನ್ನ ಗ್ರಾಹಕರಲ್ಲಿ ಹಂಚಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಏನೆಲ್ಲಾ ಉಪಯೋಗವಿದೆ ಎಂದು ಅನಾಮಧೇಯ ಗುಂಪಿನ ರಚನೆ ಮಾಡುವುದರಿಂದ ತಿಳಿದುಕೊಳ್ಳಬಹುದಾದರೆ.

ಅನಾಮಧೇಯ ಗುಂಪಿನ ರಚನೆ :

ವಾಟ್ಸಪ್ ನಲ್ಲಿ ಒಂದು ಉತ್ತಮವಾದಂತಹ ಫೀಚರ್ ಅನ್ನು ಇದೀಗ ನಾವು ಪಡೆಯಬಹುದಾಗಿದೆ. ಗುಂಪು ರಚನೆ ಅದೆಷ್ಟೋ ಬಾರಿ ಎಮರ್ಜೆನ್ಸಿ ಸಮಯದಲ್ಲಿ ಅಥವಾ ತರಾತುರಿಯಲ್ಲಿ ಗುಂಪುಗಳನ್ನು ರಚಿಸಬೇಕಾದರೆ ಸಹಾಯಕವಾಗುತ್ತದೆ. ಯಾವುದೇ ನಿರ್ದಿಷ್ಟ ಹೆಸರನ್ನು ನೀವು ರಚಿಸುವ ಗುಂಪಿಗೆ ಕೊಡಬೇಕಾಗಿರುವುದಿಲ್ಲ. ಆಂಡ್ರಾಯ್ಡ್ ಬಳಕೆದಾರರು ಹೆಸರಿಲ್ಲದ ಗುಂಪುಗಳು ಎನ್ನುವ ವೈಶಿಷ್ಟತೆ ಯನ್ನು ವಾಟ್ಸಪ್ ನಲ್ಲಿ ಇದೀಗ ನೋಡಬಹುದಾಗಿದೆ. ವಾಟ್ಸಪ್ ಹೊಸ ಫೀಚರ್ ಅನ್ನು ಆಂಡ್ರಾಯ್ಡ್ ಬಳಕೆದಾರರು ಪಡೆಯಬಹುದಾಗಿದೆ. ವಾಟ್ಸಪ್ ನಲ್ಲಿ ನೀವು ಹೆಸರಿಲ್ಲದ ಗುಂಪು ರಚನೆ ಮಾಡಬಹುದು ಹಾಗೂ ನಿಮಗೆ ಬೇಕಾಗಿರುವ ಅದರಲ್ಲಿ ಇದ್ದರೆ ಸೇರಿಸಿಕೊಳ್ಳಬಹುದು. ಗೌಪ್ಯತೆಗಳನ್ನು ಕಾಪಾಡಿಕೊಳ್ಳಲು ಗುಂಪುಗಳನ್ನು ರಚಿಸುವುದರಿಂದ ಸಹಾಯಕವಾಗುತ್ತದೆ ಎಂದು ಅಭಿಪ್ರಾಯ ಪಡಲಾಗಿದೆ. ಗುಂಪಿನ ಹೆಸರನ್ನು ವಿಭಿನ್ನವಾಗಿ ಇದರಲ್ಲಿ ಸೇರಿರುವ ಸದಸ್ಯರು ಸೇರಿಸಬಹುದು ಅಥವಾ ಸೇರಿಸದೆ ಇರಲು ಬರಬಹುದು ಇದು ಆ ಗುಂಪು ರಚಿಸಿದವರಿಗೆ ಹಾಗೂ ಅದರಲ್ಲಿ ಸೇರ್ಪಡೆಗೊಂಡಿದ್ದವರಿಗೆ ಬಿಟ್ಟಿರುತ್ತದೆ.

ಇದನ್ನು ಓದಿ : ರೈತರಿಗೆ ಬಂಪರ್‌ ಗುಡ್‌ ನ್ಯೂಸ್;‌ ರಾಸಾಯನಿಕ ಗೊಬ್ಬರದ ಬೆಲೆಯಲ್ಲಿ ಮತ್ತಷ್ಟು ಇಳಿಕೆ! ಹೊಸ ದರವನ್ನು ಬಿಡುಗಡೆ ಮಾಡಿದೆ ಸರ್ಕಾರ

ಯಾವ ರೀತಿಯ ಕಾಂಟ್ಯಾಕ್ಟ್ ಇರುತ್ತದೆಯೋ ಇದರಲ್ಲಿ ಅದರ ಆಧಾರದ ಮೇಲೆ ವಿಭಿನ್ನವಾಗಿ ಗುಂಪಿನ ಹೆಸರು ತೋರಿಸಲಾಗುತ್ತದೆ. ತಮ್ಮ ಮೊಬೈಲ್ ನಲ್ಲಿ ಬಳಕೆದಾರರು ಗುಂಪಿಗೆ ಸೇರಿಸಬಹುದಾದ ಸದಸ್ಯರ ಹೆಸರನ್ನು ಗುಂಪಿನಲ್ಲಿ ಸೇವ್ ಮಾಡಿದರೆ ಹೆಸರಿನ ಜೊತೆಗೆ ಫೋನ್ ನಂಬರ್ ಕೂಡ ಕಾಣಸಿಗುತ್ತದೆ. ಪ್ರಯೋಜನ : ಒಂದು ಗುಂಪನ್ನು ರಚಿಸಿ ನೀವು ಕೆಲವು ದಿನಗಳವರೆಗೆ ಅದನ್ನು ಡಿಲೀಟ್ ಮಾಡುವಂತಿದ್ದರೆ ಹೆಚ್ಚು ಪ್ರಯೋಜನಕಾರಿಯಾಗಿ ಈ ಹೊಸ ವಾಟ್ಸಪ್ ಫೀಚರ್ ನಿಮಗೆ ಸಿಗಲಿದೆ. ಇದರಿಂದ ಯಾರೂ ಗುಂಪನ್ನು ರಚಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಅವರ ಫೋನ್ ನಂಬರ್ ಅನ್ನು ನೀವು ಸೇವ್ ಮಾಡಿಕೊಂಡಿದ್ದಾಗ ಮಾತ್ರ ಅದರಲ್ಲಿ ಗುಂಪನ್ನು ಯಾರು ರಚಿಸಿದ್ದಾರೆ ಎಂಬುದು ನಿಮಗೆ ತಿಳಿದು ಬರುತ್ತದೆ.

ವಾಟ್ಸಪ್ ನಲ್ಲಿ ಹೊಸ ಹೊಸ ಫೀಚರ್ ಗಳು ಬಿಡುಗಡೆಯಾಗುತ್ತಿದ್ದು ಇದು ಗ್ರಾಹಕರಿಗೆ ಅನುಕೂಲವಾಗುವಂತೆ ಮಾಡಲಾಗುತ್ತಿದೆ. ಇದರಿಂದ ಗ್ರಾಹಕರು ಹೆಚ್ಚು ಹೆಚ್ಚು ವಾಟ್ಸಪ್ ಉಪಯೋಗಿಸಲು ಕುತೂಹಲ ರಾಗಿರುತ್ತಾರೆ.
ಹೀಗೆ ವಾಟ್ಸಪ್ ನ ಈ ಹೊಸ ಫೀಚರ್ ಬಗ್ಗೆ ನಿಮ್ಮ ಸ್ನೇಹಿತರು ಹೆಚ್ಚಾಗಿ ವಾಟ್ಸಪ್ ಬಳಸುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಅವರು ಸಹ ವಾಟ್ಸಪ್ ನ ಈ ಹೊಸ ಫೀಚರ್ ಅನ್ನು ತಿಳಿದುಕೊಂಡು ಒಂದು ಗುಂಪನ್ನು ರಚಿಸಲಿ ಧನ್ಯವಾದಗಳು.

ಇತರೆ ವಿಷಯಗಳು :

ಕರ್ನಾಟಕದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ : ಕೆಲವೇ ಗಂಟೆಗಳಲ್ಲಿ ಮಳೆ ಸಾಧ್ಯತೆ

ಸರ್ಕಾರದಿಂದ ಡೀಸೆಲ್‌ ಸಬ್ಸಿಡಿ ಯೋಜನೆ ಪ್ರಾರಂಭ! ಈ ಒಂದು ಕೆಲಸ‌ ಮಾಡಿದ್ರೆ ಸಿಗುತ್ತೆ ಅರ್ಧ ಬೆಲೆಗೆ ಡೀಸೆಲ್; ಅರ್ಜಿಸಲ್ಲಿಸಲು ದಾಖಲೆಗಳೇನು?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments