Saturday, July 27, 2024
HomeTrending Newsಆಗಸ್ಟ್ ನಿಂದ BPL ಕಾರ್ಡ್ ಹೊಂದಿದವರಿಗೆ ರೇಷನ್ ಸಿಗುವುದಿಲ್ಲ..! BPL ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರೂ ಈ...

ಆಗಸ್ಟ್ ನಿಂದ BPL ಕಾರ್ಡ್ ಹೊಂದಿದವರಿಗೆ ರೇಷನ್ ಸಿಗುವುದಿಲ್ಲ..! BPL ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರೂ ಈ ಮಾಹಿತಿಯನ್ನು ತಿಳಿದುಕೊಳ್ಳಬೇಕು

ನಮಸ್ಕಾರ ಸ್ನೇಹಿತರೇ ಈಗಾಗಲೇ ರೇಷನ್ ಕಾರ್ಡಿಗೆ ಸಂಬಂಧಿಸಿದಂತೆ ಹಲವಾರು ಮಾಹಿತಿಗಳನ್ನು ಈ ವೆಬ್ಸೈಟ್ನಲ್ಲಿ ನಿಮಗೆ ತಿಳಿಸಲಾಗಿದೆ. ಅದರಂತೆ ಈಗ ಸರ್ಕಾರವು ಬಿಪಿಎಲ್ ಕಾರ್ಡ್ ಅನ್ನು ಹೊಂದಿದಂತಹ ಪ್ರತಿಯೊಬ್ಬರು ಬಿಪಿಎಲ್ ನ ಕೆಲವೊಂದು ಬದಲಾವಣೆಗೆ ಸಂಬಂಧಿಸಿದಂತೆ ಈ ಮಾಹಿತಿಯನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಬಿಪಿಎಲ್ ಕಾರ್ಡ್ ಅನ್ನು ಹೊಂದಿದಂತಹ ಪ್ರತಿಯೊಬ್ಬರೂ ಸಹ ಹೊಸ ಮಾರ್ಗಸೂಚಿಯ ಅನುಸಾರವಾಗಿ ಈ ಕೆ ವೈ ಸಿ ಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಹಾಗಾದರೆ ಈ ಕೆ ವೈ ಸಿ ಎಂದರೇನು? ಈ ಕೆವೈಸಿ ಮಾಡಿಸಿಕೊಳ್ಳದೆ ಇದ್ದರೆ ಆಗುವಂತಹ ಪರಿಣಾಮಗಳೇನು ಜೊತೆಗೆ ಈ ಕೆ ವೈ ಸಿ ಯನ್ನು ಎಲ್ಲಿ ಮಾಡಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

Get BPL Card E-KYC done
Get BPL Card E-KYC done
Join WhatsApp Group Join Telegram Group

ಈ ಕೆ ವೈ ಸಿ ಕಡ್ಡಾಯ :

ಬಿಪಿಎಲ್ ಕಾರ್ಡ್ ಹೊಂದಿದಂತಹ ಪ್ರತಿಯೊಬ್ಬರೂ ಸಹ ಸರ್ಕಾರ ಹೊಸದಾಗಿ ಮಾರ್ಗಸೂಚಿಯನ್ನು ತಿಳಿಸಿರುವ ಈಕೆ ವೈಸಿಯನ್ನು ಮಾಡಿಸಬೇಕೆಂಬುದು ಕಡ್ಡಾಯವಾಗಿದೆ. ಈಕೆ ವೈಸಿ ಯನ್ನು ಮಾಡಿಸದೆ ಇದ್ದರೆ ಅಂತಹ ಬಿಪಿಎಲ್ ಕಾರ್ಡ್ಗಳಿಗೆ ಪಡಿತರ ಚೀಟಿಯಲ್ಲಿ ಬರುವಂತಹ ಆಹಾರ ಧಾನ್ಯಗಳನ್ನು ಆಗಸ್ಟ್ ತಿಂಗಳಿನಿಂದ ಸರ್ಕಾರವು ಸ್ಥಗಿತಗೊಳಿಸುವುದಾಗಿ ವರದಿಯನ್ನು ನೀಡಿದೆ. ಜೊತೆಗೆ ಈ ಕೆ ವೈ ಸಿ ಮಾಡಿಸದಿರುವ ಪಡಿತರ ಚೀಟಿಯನ್ನು ಹೊಂದಿದಂತವರು ಆಹಾರ ಧಾನ್ಯ ಮತ್ತು ಅನ್ನಭಾಗ್ಯ ಯೋಜನೆಯ ಹಣವನ್ನು ಆಗಸ್ಟ್ ತಿಂಗಳಿನಲ್ಲಿ ಅಂತಹ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ನೀಡಲಾಗುವುದಿಲ್ಲ ಅದನ್ನು ಸ್ಥಗಿತಗೊಳಿಸಲಾಗುತ್ತದೆ ಎಂಬ ಮಾಹಿತಿಯನ್ನು ರಾಜ್ಯ ಸರ್ಕಾರ ಹೇಳಿದೆ.

ಈಕೆ ವೈ ಸಿ ಯ ಪ್ರಯೋಜನಗಳು :

ಬಿಪಿಎಲ್ ಕಾರ್ಡನ್ನು ಹೊಂದಿದಂತಹ ಪ್ರತಿಯೊಬ್ಬರೂ ಸಹ ಈ ಕೆ ವೈ ಸಿ ಯನ್ನು ಮಾಡದೇ ಇದ್ದರೆ ಅವರಿಗೆ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಆಹಾರಧಾನ್ಯ ಹಾಗೂ ಹಣವು ದೊರೆಯುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿದಂತಹ ಪ್ರತಿಯೊಬ್ಬರಿಗೂ ಸಹ ಪ್ರತಿ ತಿಂಗಳು ತಲಾ ಹತ್ತು ಕೆಜಿ ಅಕ್ಕಿಯನ್ನು ನೀಡಲು ಸರ್ಕಾರ ಈ ಹಿಂದೆ ನಿರ್ಧರಿಸಿತ್ತು. ಆದರೆ ರಾಜ್ಯದಲ್ಲಿ ಅತಿಯ ಕೊರತೆ ಹೆಚ್ಚಾಗಿರುವುದರಿಂದ ರಾಜ್ಯ ಸರ್ಕಾರವು 5 ಕೆಜಿ ಅಕ್ಕಿಯ ಬದಲಾಗಿ ಹಣವನ್ನು ನೀಡಲು ನಿರ್ಧರಿಸಿತ್ತು. ಅದರಂತೆ ರಾಜ್ಯ ಸರ್ಕಾರವು ಪ್ರತಿ ಕೆಜಿಗೆ 34 ರೂಪಾಯಿಗಳಂತೆ ತಲಾ ಒಬ್ಬರಿಗೆ ಬಿಪಿಎಲ್ ಕಾರ್ಡ್ ಹೊಂದಿದಂತಹ ಸದಸ್ಯರುಗಳಿಗೆ 170 ರೂಪಾಯಿಗಳನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಹಣವು ಬಿಪಿಎಲ್ ಕಾರ್ಡ್ ನಲ್ಲಿ ಎಷ್ಟು ಸದಸ್ಯರಿದ್ದಾರೆ ಎಂಬುದರ ಆಧಾರದ ಮೇಲೆ ಪ್ರತಿಯೊಂದು ಕುಟುಂಬದಲ್ಲಿಯೂ ಸಹ ಹಣದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ರಾಜ್ಯ ಸರ್ಕಾರವು ಅನ್ನ ಭಾಗ್ಯ ಯೋಜನೆಯಲ್ಲಿ ಕೆಲವೊಂದಿಷ್ಟು ಮಾರ್ಗಸೂಚಿಗಳನ್ನು ಹೊರಡಿಸಿರುವುದರ ಮೂಲಕ ಅನ್ನಭಾಗ್ಯ ಯೋಜನೆಯ ಸಹ ಹಲವಾರು ಬದಲಾವಣೆಗಳನ್ನು ಕಂಡುಕೊಂಡಿದೆ.

ಇದನ್ನು ಓದಿ : Breaking News: BPL ಕಾರ್ಡ್‌ ಇದ್ದವರಿಗೆ ಮತ್ತೊಂದು ಹೊಸ ಕಾರ್ಡ್!‌ ಸರ್ಕಾರದಿಂದ ಹೊಸ ಯೋಜನೆ ಜಾರಿ.

ಹೊಸ ಮಾರ್ಗಸೂಚಿ :

ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹೊಸ ಮಾರ್ಗಸೂಚಿಯನ್ನು ಕಡ್ಡಾಯಗೊಳಿಸಿದ್ದು ಪಡಿತರ ಚೀಟಿಯನ್ನು ಹೊಂದಿದಂತಹ ಎಲ್ಲಾ ಕುಟುಂಬಗಳು ಈ ಮಾರ್ಗಸೂಚಿಯನ್ನು ಅನುಸರಿಸಬೇಕಾಗುತ್ತದೆ. ಪಡಿತರ ಸೀತೆಯ ಮೂಲಕ ಯಾರೆಲ್ಲ ತಮ್ಮ ಆಹಾರ ಧಾನ್ಯಗಳನ್ನು ಪಡೆದುಕೊಳ್ಳುತ್ತಾರೋ ಅವರು ಈ ಮಾರ್ಗಸೂಚಿಯ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ರಾಜ್ಯ ಸರ್ಕಾರದ ಈ ಹೊಸ ಮಾರ್ಗಸೂಚಿಯ ಪ್ರಕಾರ ಆಹಾರ ಧಾನ್ಯಗಳನ್ನು ಪಡೆಯುವ ಕುಟುಂಬಗಳಲ್ಲಿ ಆ ಕುಟುಂಬದ ಸದಸ್ಯರನ್ನು ಬಿಟ್ಟು ಹೆಚ್ಚು ಮುಖ್ಯಸ್ಥರು ಇದ್ದಾರೆ ರಾಜ್ಯ ಸರ್ಕಾರವು ಆ ಕುಟುಂಬಗಳಿಗೆ ಹಣವನ್ನು ನೀಡಲು ನಿರಾಕರಿಸಿದೆ. ಕುಟುಂಬದ ಮುಖ್ಯಸ್ಥರ ಆಯ್ಕೆ : ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಕುಟುಂಬದ ಮುಖ್ಯಸ್ಥರಿಗೆ 5 ಕೆಜಿ ಅಕ್ಕಿಗೆ ಬದಲಾಗಿ ಹಣವನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಅದರಂತೆ ಈಗ ಕುಟುಂಬದ ಮುಖ್ಯಸ್ಥರು ಯಾರು ಎಂಬ ಸಮಸ್ಯೆಯು ಬಗೆಹರಿಯದೆ ಇದ್ದರೆ ಅಕ್ಕಿ ಬದಲಿಗೆ ಹಣವನ್ನು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಕೊಡದಿರಲು ಸರ್ಕಾರವು ತೀರ್ಮಾನಿಸಿದೆ. ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರು ಇಲ್ಲದಿದ್ದರೆ ಅಥವಾ ಒಂದಕ್ಕಿಂತ ಹೆಚ್ಚಿನ ಮುಖ್ಯಸ್ಥರನ್ನು ಹೊಂದಿದ್ದರೆ ಆದಷ್ಟು ಬೇಗ ಒಬ್ಬ ಮುಖ್ಯಸ್ಥರನ್ನು ಪಡಿತರ ಚೀಟಿಯಲ್ಲಿ ಹೊಂದುವಂತೆ, ಸರಿಪಡಿಸಿಕೊಳ್ಳಿ ಹಾಗೂ ಆ ಮುಖ್ಯಸ್ಥರಲ್ಲಿ ಮಹಿಳಾ ಸದಸ್ಯರು ಇರುವಂತೆ ಮಾಡಿಕೊಳ್ಳಿ ಎಂಬುದರ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಹೊರಡಿಸಿದೆ.

ಹೀಗೆ ರಾಜ್ಯ ಸರ್ಕಾರವು ಹೊಸ ಮಾರ್ಗಸೂಚಿಗಳನ್ನು ಹೊರಡಿಸುವುದರ ಮೂಲಕ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಪಡಿತರ ಚೀಟಿಯನ್ನು ಹೊಂದಿದಂತಹ ಅಭ್ಯರ್ಥಿಗಳು ಈ ಕೆ ವೈ ಸಿ ಯನ್ನು ಮಾಡಿಸುವುದು ಕಡ್ಡಾಯಗೊಳಿಸಿರುವುದರಿಂದ, ಇದರಿಂದ ಪಡಿತರ ಚೀಟಿಯಲ್ಲಿ ಆಗುವಂತಹ ಅನ್ಯಾಯಗಳನ್ನು ತಪ್ಪಿಸಬಹುದೆಂಬುವ ಆಶಯ ರಾಜ್ಯ ಸರ್ಕಾರದ್ದಾಗಿದೆ. ಅಲ್ಲದೆ ಪಡಿತರ ಚೀಟಿಯಲ್ಲಿ ಪಡಿತರ ಚೀಟಿಯು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ನಂದಿಗೆ ಮ್ಯಾಪಿಂಗ್ ಆಗಿರುವುದನ್ನು ಸಹ ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಆದರೆ ರಾಜ್ಯ ಸರ್ಕಾರವು ಇವುಗಳನ್ನು ಮಾಡಿಸಿಕೊಳ್ಳದೆ ಇರುವಂತಹ ಪಡಿತರ ಸೀಟಿದಾರರಿಗೆ ತಾತ್ಕಾಲಿಕವಾಗಿ ಮಾತ್ರ ಹಣದ ವರ್ಗಾವಣೆಯನ್ನು ಸ್ಥಗಿತಗೊಳಿಸಲಾಗುವುದು ಎಂಬ ಸೂಚನೆಯನ್ನು ಸಹ ಹೊರಡಿಸಿದೆ. ಹೀಗೆ ಈ ಮಾಹಿತಿಯನ್ನು ಪಡಿತರ ಚೀಟಿಯನ್ನು ಹೊಂದಿದಂತಹ ನಿಮ್ಮ ಎಲ್ಲಾ ಸ್ನೇಹಿತರು ಹಾಗು ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು

ಇತರೆ ವಿಷಯಗಳು :

ಕುಟುಂಬದ ಮುಖ್ಯಸ್ಥರ ಹೆಸರು ಬದಲಾವಣೆಗೆ ಅವಕಾಶ! ಹೆಸರು ಬದಲಾವಣೆ ಹೇಗೆ ಮಾಡಿಕೊಳ್ಳುವುದು? ಇಲ್ಲಿದೆ ಸಂಪೂರ್ಣ ಮಾಹಿತಿ

ಮೋದಿಯಿಂದ ದೇಶದ ರೈತರಿಗೆ ಬಿಗ್ ಶಾಕ್..! ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಇನ್ನಿಲ್ಲ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments