Saturday, July 27, 2024
HomeTrending Newsಮಹಿಳೆಯರೇ ಸ್ಮಾರ್ಟ್ ಕಾರ್ಡ್ ಬಳಸಿ ಉಚಿತ ಪ್ರಯಾಣ ಮಾಡಿ, ಸರ್ಕಾರದ ಮಾರ್ಗಸೂಚಿಯಲ್ಲಿ ಏನಿದೆ ಎಂಬುದರ ಸಂಪೂರ್ಣ...

ಮಹಿಳೆಯರೇ ಸ್ಮಾರ್ಟ್ ಕಾರ್ಡ್ ಬಳಸಿ ಉಚಿತ ಪ್ರಯಾಣ ಮಾಡಿ, ಸರ್ಕಾರದ ಮಾರ್ಗಸೂಚಿಯಲ್ಲಿ ಏನಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ

ಸ್ಮಾರ್ಟ್ ಕಾರ್ಡ್ ಬಳಸಿ ಉಚಿತ ಪ್ರಯಾಣ : ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ಐದು ಗ್ಯಾರಂಟಿಗಳನ್ನು ನೀಡಿತ್ತು ಅದರಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವು ಸಹ ಯೋಜನೆಯಾಗಿದ್ದು ಸರ್ಕಾರ ರಚನೆಯಾದಾಗ  ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಇದರ ಬಗ್ಗೆ ಚರ್ಚೆ ನಡೆದು ಇದನ್ನು ಅನುಷ್ಠಾನಕ್ಕೆ ತರಲು ಸರ್ಕಾರವು ತಿಳಿಸಿದೆ

ಸ್ಮಾರ್ಟ್ ಕಾರ್ಡ್ ಬಳಸಿ ಉಚಿತ ಪ್ರಯಾಣ
Join WhatsApp Group Join Telegram Group

 ಮಹಿಳೆಯರು  ಉಚಿತ ಪ್ರಯಾಣವನ್ನು ಮಾಡುವಾಗ ಟಿಕೆಟ್ ಖರೀದಿಸಬೇಕಾ ಅಥವಾ ಹಾಗೆ ಕರೆದುಕೊಂಡು ಹೋಗುತ್ತಾರೆ ಎಂಬುದರ ಕುರಿತು ಅನೇಕ ಮಹಿಳೆಯರಲ್ಲಿ ಗೊಂದಲವೂ ಸಹ ಇದೆ ಈ ಗೊಂದಲಗಳಿಗೆಲ್ಲ ಈ ಲೇಖನದಲ್ಲಿ ಸಂಪೂರ್ಣವಾಗಿ ನಿಮಗೆ ಉತ್ತರ ದೊರೆಯಲಿದೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ

 ರಾಜ್ಯದೊಳಗೆ ಉಚಿತ ಪ್ರಯಾಣ ಮಾಡಬೇಕೆಂದಿರುವ ಮಹಿಳೆಯರು ಸೇವಾ ಸಿಂಧು ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅರ್ಜಿ ಸಲ್ಲಿಸಿದ ನಂತರ ನಿಮಗೆ ಶಕ್ತಿ ಸ್ಮಾರ್ಟ್ ಕಾರ್ಡ್ ದೊರೆಯಲಿದೆ ಆ ಶಕ್ತಿ ಸ್ಮಾರ್ಟ್ ಕಾರ್ಡ್ ದೊರೆಯಲು ಮುಂದಿನ ಮೂರು ತಿಂಗಳೊಳಗೆ ಪೂರ್ಣಗೊಳಿಸಲು ಸರ್ಕಾರ ಮಾಹಿತಿ ನೀಡಿದೆ ಹಾಗಿದ್ದರೆ ಮಹಿಳೆಯರು ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ ನಡೆಸಬಹುದು ಮಾಡಿಕೊಳ್ಳಿ ಬೇಕಾ ತಿಳಿಯೋಣ

ಉಚಿತ ಪ್ರಯಾಣ ಮಾರ್ಗಸೂಚಿಯಲ್ಲಿ ಏನಿದೆ

ರಾಜ್ಯದ ಯಾವುದೇ ಭಾಗದಲ್ಲಿ ಮಹಿಳೆಯರು ಸಂಚರಿಸಬಹುದು ಅದರಲ್ಲಿ ವಿದ್ಯಾರ್ಥಿನಿಯರು ಸಹ ಉಚಿತವಾಗಿ ಸಂಚಾರ ಮಾಡಬಹುದು ಹಾಗಂತ ಎಲ್ಲಾ ಬಸ್ಸಿಗಳಲ್ಲೂ ಸಹ ಸಂಚಾರ ಇರುವುದಿಲ್ಲ ಕೆಲವೊಂದು ಬಸ್ಸಿನಲ್ಲಿ ಸಂಚಾರ ಮಾಡಿದರೆ ಹಣವನ್ನು ನೀಡಬೇಕಾಗುತ್ತದೆ

ಯಾವ ಬಸ್ ಎಂದರೆ ರಾಜಹಂಸ .ಎಸಿ ಸ್ಲಿಪ್ಪರ್. ವಜ್ರ .ಅಂಬಾರಿ ಹಾಗೂ ಐರಾವತ ಪವರ್ ಪ್ಲೇಸ್ ಇಂತಹ ಬಸ್ಸುಗಳಲ್ಲಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅನ್ವಯಿಸುವುದಿಲ್ಲ ಈ ಬಸ್ಸಿನಲ್ಲಿ ಪ್ರಯಾಣ ಮಾಡಬೇಕಾದರೆ ಸಂಪೂರ್ಣವಾಗಿ ಹಣವನ್ನು ಪಾವತಿಸಿ ನೀವು ಸಂಚಾರ ಮಾಡಬೇಕಾಗುತ್ತದೆ ನೀವು ಉಚಿತ ಪ್ರಯಾಣವೆಂದು ಈ ಬಸ್ಸುಗಳಲ್ಲಿ ಪ್ರಯಾಣ ಮಾಡಿದರೆ ಹಣವನ್ನು ನೀಡಲೇಬೇಕು ಎಂದು ತಿಳಿಸಲಾಗಿದೆ ಉಚಿತ ಪ್ರಯಾಣಕ್ಕೆ ಈ ಬಸ್ಸುಗಳು ಅನ್ವಯಿಸುವುದಿಲ್ಲ ಎಲ್ಲಾ ಮಹಿಳೆಯರಿಗೂ ಮಾಹಿತಿ ನೀಡಿ

ಪುರುಷರಿಗೆ 50%ರಷ್ಟು ಮೀಸಲಾತಿ 

ಕರ್ನಾಟಕ ರಾಜ್ಯದಲ್ಲಿ ಪುರುಷರಿಗೆ 50ರಷ್ಟು ಮೀಸಲಾತಿ ಆಸನಗಳನ್ನು ಕಾಯ್ದಿರಿಸ ತಕ್ಕದ್ದು ಎಲ್ಲ ಬಸುಗಳಲ್ಲೂ ಈ ಸೌಲಭ್ಯ ಇರುವುದಿಲ್ಲ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ಸುಗಳನ್ನು ಹೊರತುಪಡಿಸಿ ಇನ್ನುಳಿದಂತಹ ರಸ್ತೆ ಸಾರಿಗೆ ಸಂಸ್ಥೆಗಳಾದಂತಹ ಬಸ್ಸುಗಳಲ್ಲಿ ಇದು ಅನ್ವಯವಾಗಲಿದೆ ಮತ್ತು ಅಂತರ್ ರಾಜ್ಯ ಎಸಿ ಮತ್ತು ಐಷಾರಾಮಿ ಲೆಗ್ಜರಿ ಬಸ್ಗಳಲ್ಲಿ ಮೀಸಲಾತಿ ಅನ್ವಯಿಸುವುದಿಲ್ಲ ವಾಯುವ್ಯ ಸಾರಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಇಂತಹ ಬಸ್ಸುಗಳಲ್ಲಿ ಮೀಸಲಾತಿಯನ್ನು ಪಡೆಯಬಹುದು

ಸ್ಮಾರ್ಟ್ ಕಾರ್ಡ್ ಅಥವಾ ಟಿಕೆಟ್

 ಮಾಹಿತಿ ಪ್ರಕಾರ ಈ ಯೋಜನೆಯಲ್ಲಿ ನಾಲ್ಕು ಸಾರಿಗೆ ಸಂಸ್ಥೆಗಳು ಸಹ ಶೂನ್ಯ ಟಿಕೆಟ್ ನೀಡುವ ಅಥವಾ ಸ್ಮಾರ್ಟ್ ಕಾರ್ಡ್ ಅನ್ನು ಬಳಸಿಕೊಂಡು ದತ್ತಾಂಶವನ್ನು ಸಂಗ್ರಹಿಸಲು ತೀರ್ಮಾನಿಸಲಾಗಿದ್ದು ಸರ್ಕಾರದಿಂದ  ಹಣವನ್ನು ಬರೆಸಿಕೊಳ್ಳಲು ಈ ದತ್ತಾಂಶ ಸಾರಿಗೆ ಇಲಾಖೆಗಳಿಗೆ ನೆರವಾಗಬಹುದು

ಆ ಕಾರಣದಿಂದ ಮಹಿಳೆಯರು ಪ್ರಯಾಣ ಮಾಡುವಾಗ ಸ್ಮಾರ್ಟ್ ಕಾರ್ಡ್ ಅಥವಾ ಟಿಕೆಟ್ ಅನ್ನು ಬಳಕೆ ಮಾಡಿಕೊಳ್ಳಬಹುದು. ಎಂದು ಮಾಹಿತಿ ಲಭ್ಯವಾಗುತ್ತಿದ್ದು ಈ ಸ್ಮಾರ್ಟ್ ಕಾರ್ಡ್ ಗಳು ಬೇಗನೆ ದೊರೆಯದಿದ್ದರೂ ಸಹ ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಈ ಸ್ಮಾರ್ಟ್ ಕಾರ್ಡ್ ಸೌಲಭ್ಯ ದೊರೆಯಲಿದೆ ಈ ಸ್ಮಾರ್ಟ್ ಕಾರ್ಡ್ ಸೌಲಭ್ಯವು ಪೂರ್ಣಗೊಳ್ಳಲು ಕೆಲವು ದಿನಗಳನ್ನು ತೆಗೆದುಕೊಳ್ಳಬಹುದು ಎನ್ನಲಾಗುತ್ತಿದೆ

 ಸ್ಮಾರ್ಟ್ ಕಾರ್ಡ್ ಬೇಕಾದರೆ ಏನು ಮಾಡಬೇಕು

 ನಿಮಗೆ ಸ್ಮಾರ್ಟ್ ಕಾರ್ಡ್ ಬೇಕೆಂದರೆ ನೀವು ಸೇವಾ ಸಿಂಧು ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅರ್ಜಿ ಸಲ್ಲಿಸಿದಾಗ ಶಕ್ತಿ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸುವಂತಹ ಪ್ರಕ್ರಿಯೆ ಆರಂಭವಾಗುತ್ತದೆ ಹೀಗೆ ಆರಂಭವಾಗಲು ಮುಂದಿನ ಮೂರು ತಿಂಗಳು ಸಮಯ ಬೇಕಾಗಬಹುದು ಎನ್ನಲಾಗುತ್ತಿದೆ ಮುಂದಿನ ಮೂರು ತಿಂಗಳಲ್ಲಿ ಶಕ್ತಿ ಸ್ಮಾರ್ಟ್ ಕಾರ್ಡ್ ಪೂರ್ಣವಾಗಿ ಪಡೆಯಬಹುದಾಗಿದೆ

ಇದನ್ನು ಓದಿ :ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಅರ್ಜಿ ಆಹ್ವಾನ ಸಂಪೂರ್ಣ ಮಾಹಿತಿ 

ದಿನಗಳಲ್ಲಿ ಜೂನ್ 11ರಿಂದ ಈ ಉಚಿತ ಪ್ರಯಾಣ ಯೋಜನೆ ಅನುಷ್ಠಾನಕ್ಕೆ ಬರಲಿದ್ದು ಯಾವ ರೀತಿಯ ಕ್ರಮಗಳನ್ನು ಅನುಸರಿಸುತ್ತಾರೆ ಎಂಬುದ ಕುರಿತು ಕಾದು ನೋಡಬೇಕಾಗಿದೆ

ಮಹಿಳೆಯರು ಉಚಿತ ಪ್ರಯಾಣ ಮಾಡಬೇಕೆಂದಿರುವವರು ಪೂರ್ವ ತಯಾರಿಯಾಗಿ ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ನಿಮ್ಮ ಗುರುತಿನ ಚೀಟಿ ಅಥವಾ ಆಧಾರ ಕಾರ್ಡ್ ಅಥವಾ ಇತರೆ ಯಾವುದೇ ದಾಖಲೆಗಳನ್ನು ನಿಮ್ಮ ಬಳಿ ಇರುವುದು ಉತ್ತಮ ಏಕೆಂದರೆ ಯೋಜನೆ ಕೇವಲ ಕರ್ನಾಟಕ ರಾಜ್ಯದ ಮಹಿಳೆಯರಿಗೆ ಮಾತ್ರ ಸೀಮಿತವಾಗಿದ್ದು ಅಂತರ್ ರಾಜ್ಯ ಮಹಿಳೆಯರು ಹಣವನ್ನು ನೀಡಿ ಸಂಚರಿಸುವ ಅವಕಾಶ ನೀಡಿದೆ ಹಾಗಾಗಿ ನಿಮಗೆ ದಾಖಲಾತಿ ಅವಶ್ಯಕತೆ

 ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬದವರಿಗೂ ಸಹ ತಿಳಿಸುವ ಮೂಲಕ ಸರ್ಕಾರದ ಯೋಜನೆಯ ಉಪಯೋಗ ಪಡೆದುಕೊಳ್ಳಲು ಅವರಿಗೆ ಈ ಮಾಹಿತಿ ನೆರವಾಗಲಿದೆ ಹಾಗಾಗಿ ಎಲ್ಲಾ ಮಹಿಳೆಯರಿಗೂ ಸಹ ಈ ವಿಷಯವನ್ನು ತಿಳಿಸಿ ಧನ್ಯವಾದಗಳು 

ಸ್ಮಾರ್ಟ್ ಕಾರ್ಡ್ ಯಲ್ಲಿ ಪಡೆಯಬೇಕು ?

ಸೇವಾ ಸಿಂಧು ನಲ್ಲಿ ಪಡೆಯಬೇಕು

ಟಿಕೆಟ್ ಪಡೆಯಬೇಕಾ ?

ಹೌದು ಪಡೆಯಬೇಕು ಫ್ರೀ ಆಗಿ

ಇಲ್ಲಿ ಕ್ಲಿಕ್ ಮಾಡಿ :ಯುವನಿಧಿ ಯೋಜನೆಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಅರ್ಜಿ ಸಲ್ಲಿಸಲು ಬೇಕಾದಂತಹ ದಾಖಲೆಗಳು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments