Thursday, June 13, 2024
HomeTrending Newsಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ EWS ಪ್ರಮಾಣ ಪತ್ರ : EWS ಪ್ರಮಾಣ ಪತ್ರ ಎಂದರೇನು? ಇಲ್ಲಿದೆ...

ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ EWS ಪ್ರಮಾಣ ಪತ್ರ : EWS ಪ್ರಮಾಣ ಪತ್ರ ಎಂದರೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಆರ್ಥಿಕವಾಗಿ ಹಿಂದುಳಿದಂತಹ ವರ್ಗಗಳಿಗೆ ಪ್ರಮಾಣ ಪತ್ರವನ್ನು ನೀಡಲು ಸರ್ಕಾರ ಒಂದು ಹೊಸ ಯೋಜನೆಯ ಬಗ್ಗೆ. ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದವರಿಗೆ ಇಡಬ್ಲ್ಯೂ ಎಸ್ ಪ್ರಮಾಣ ಪತ್ರವನ್ನು ಸರ್ಕಾರವು ನೀಡುತ್ತದೆ. 10% ಮೀಸಲಾತಿಗೆ ಸಾಮಾನ್ಯ ವರ್ಗದ ಅಡಿಯಲ್ಲಿ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಈ ವರ್ಗವನ್ನು ಅರ್ಹರನ್ನಾಗಿ ಮಾಡುವಂತಹ ಪ್ರಮಾಣ ಪತ್ರವು ಈ ದಾಖಲೆಯಾಗಿದೆ. ಹಾಗಾದರೆ ಈ ಪ್ರಮಾಣ ಪತ್ರಕ್ಕೆ ಹೇಗೆ ಅರ್ಜಿ ಸಲ್ಲಿಸುವುದು ಯಾವೆಲ್ಲ ದಾಖಲೆಗಳು ಈ ಪ್ರಮಾಣ ಪತ್ರಕ್ಕೆ ಬೇಕು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

EWS Certificate
EWS Certificate
Join WhatsApp Group Join Telegram Group

ಇಡಬ್ಲ್ಯೂ ಎಸ್ ಪ್ರಮಾಣ ಪತ್ರ :

ಸರ್ಕಾರವು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗಾಗಿ ಈ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಈ ಪ್ರಮಾಣ ಪತ್ರವೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಿ ಗಳಿಗಿಂತ ಭಿನ್ನವಾಗಿರುತ್ತದೆ. ಈ ಪ್ರಮಾಣ ಪತ್ರದಲ್ಲಿ ಸಾಮಾನ್ಯ ವರ್ಗದ ಅಡಿಯಲ್ಲಿ ಬರುವಂತಹ ಹೊಸ ರೀತಿಯ ಮೀಸಲಾತಿಯು ಇದಾಗಿರುತ್ತದೆ. 10% ಮೀಸಲಾತಿಯನ್ನು ಭಾರತ ಸರ್ಕಾರವು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳ ಅಭ್ಯರ್ಥಿಗೆ ನೀಡಲು ಜಾರಿಗೆ ತಂದಿರುವ ನೀತಿಯಾಗಿದೆ. ಈ ಪ್ರಮಾಣ ಪತ್ರವನ್ನು ನಿರ್ದಿಷ್ಟವಾಗಿ ಇತರೆ ಹಿಂದುಳಿದಂತಹ ವರ್ಗಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಶೇಷ ಚೇತನರು ಅಥವಾ ಮಾಜಿ ಸೈನಿಕರಿಗೆ ಯಾವುದೇ ಮೀಸಲಾತಿ ವರ್ಗದ ಅಡಿಯಲ್ಲಿ ಬರದ ವ್ಯಕ್ತಿಗಳಿಗೆ ಮಾತ್ರ ಈ ಪ್ರಮಾಣ ಪತ್ರದ ಮೀಸಲಾತಿಯು ಲಭ್ಯವಿರುತ್ತದೆ. ಇಡಬ್ಲ್ಯೂಎಸ್ ಪ್ರಮಾಣ ಪತ್ರವು ಆರ್ಥಿಕವಾಗಿ ಹಿಂದುಳಿದ ವರ್ಗಗಳು ಮೀಸಲಾತಿಯ ಪ್ರಯೋಜನಗಳನ್ನು ಪಡೆಯಲು ಸಹಾಯಕವಾಗಿದೆ. ಇ ಡಬ್ಲ್ಯೂ ಎಸ್ ಪ್ರಮಾಣ ಪತ್ರವನ್ನು ಹೊಂದಿದ್ದರೆ ಹಿಂದುಳಿದ ವರ್ಗದವರು ಯುಪಿಎಸ್ಸಿ ಪರೀಕ್ಷೆಗೆ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಅವರಿಗೆ 10% ರಷ್ಟು ಮೀಸಲಾತಿಯನ್ನು ಈ ಪ್ರಮಾಣ ಪತ್ರದ ಅಡಿಯಲ್ಲಿ ನೀಡಲಾಗುತ್ತದೆ.

ಈ ಡಬ್ಲ್ಯೂ ಎಸ್ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಬೇಕಾದಂತಹ ಅರ್ಹತೆಗಳು :

ಇ ಡಬ್ಲ್ಯೂ ಎಸ್ ಪ್ರಮಾಣ ಪತ್ರವನ್ನು ಪಡೆಯಬೇಕಾದರೆ ಅಭ್ಯರ್ಥಿಗಳು ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳಿಂದರೇ, ಸಾಮಾನ್ಯ ವರ್ಗಕ್ಕೆ ವ್ಯಕ್ತಿಯು ಸೇರಿರಬೇಕು. ಹಿಂದುಳಿದ ವರ್ಗಗಳಾದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಯಾವುದೇ ರೀತಿಯ ಮೀಸಲಾತಿ ಯೋಜನೆ ಅಡಿಯಲ್ಲಿ ವ್ಯಕ್ತಿಯು ಬರಬಾರದು. ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು 8 ಲಕ್ಷಕ್ಕಿಂತ ಹೆಚ್ಚಿರಬಾರದು. ಹೀಗೆ ಇವುಗಳಲ್ಲದೆ ಇನ್ನೂ ಅನೇಕ ಅರ್ಹತೆಗಳನ್ನು ಅಭ್ಯರ್ಥಿಗಳು ಹೊಂದಿರಬೇಕಾಗುತ್ತದೆ.

ಇದನ್ನು ಓದಿ : 2 ಲಕ್ಷದವರೆಗೆ ರೈತರ ಸಾಲ ಮನ್ನಾ! ಕೆಸಿಸಿ ಸಾಲ ಮನ್ನಾ ಮಾಡಲು ಸರ್ಕಾರದ ನಿರ್ಧಾರ, ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ಯಾ ಕೂಡಲೇ ಚೆಕ್‌ ಮಾಡಿ

ಇ ಡಬ್ಲ್ಯೂ ಎಸ್ ಪ್ರಮಾಣ ಪತ್ರಕ್ಕೆ ಅಗತ್ಯವಿರುವ ದಾಖಲೆಗಳು :

ಅಭ್ಯರ್ಥಿಗಳು ಇಡಬ್ಲ್ಯೂ ಎಸ್ ಪ್ರಮಾಣ ಪತ್ರವನ್ನು ಪಡೆಯಬೇಕಾದರೆ ಕೆಲವೊಂದು ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳಿಂದರೇ, ಆದಾಯ ಪ್ರಮಾಣ ಪತ್ರ ,ಜಾತಿ ಪ್ರಮಾಣ ಪತ್ರ ,ಬಡತನ ರೇಖೆಗಿಂತ ಕೆಳಗಿರುವ ಅಂದರೆ ಬಿಪಿಎಲ್ ಕಾರ್ಡ್ ,ಪ್ಯಾನ್ ಕಾರ್ಡ್ ,ಆಧಾರ್ ಕಾರ್ಡ್ ,ಬ್ಯಾಂಕ್ ಪಾಸ್ ಬುಕ್ ಪಾಸ್ಪೋರ್ಟ್ ಸೈಜ್ ಫೋಟೋ ಈ ಎಲ್ಲ ಅಗತ್ಯ ದಾಖಲೆಗಳನ್ನು ಹೊಂದುವುದರ ಮೂಲಕ ಈ ಡಬ್ಲ್ಯುಎಸ್ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ. ಈ ಡಬ್ಲ್ಯೂ ಎಸ್ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವ ವಿಧಾನ : ಇ ಡಬ್ಲ್ಯೂ ಎಸ್ ಪ್ರಮಾಣ ಪತ್ರಕ್ಕೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಆನ್ಲೈನ್ ಮೂಲಕ ಅಂದರೆ ಅಭ್ಯರ್ಥಿಗಳು ನಾಡಕಚೇರಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ಈ ಡಬ್ಲ್ಯೂ ಎಸ್ ಪ್ರಮಾಣ ಪತ್ರಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನಾಡಕಚೇರಿ ಅಧಿಕೃತ ವೆಬ್ಸೈಟ್ ಎಂದರೆ https://nadakacheri.karnataka.gov.in/ajsk ಈ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ಆರ್ಥಿಕವಾಗಿ ಹಿಂದುಳಿದಂತಹ ಅಭ್ಯರ್ಥಿಗಳು ಈ ಡಬ್ಲ್ಯೂ ಎಸ್ ಪ್ರಮಾಣ ಪತ್ರಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೀಗೆ ಆರ್ಥಿಕವಾಗಿ ಹಿಂದುಳಿದಂತಹ ವರ್ಗಗಳಿಗಾಗಿ ಆರ್ಥಿಕ ನೆರವನ್ನು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಅಭ್ಯರ್ಥಿಗಳಿಗೆ ಇಡಬ್ಲ್ಯೂ ಎಸ್ ಪ್ರಮಾಣ ಪತ್ರವನ್ನು ನೀಡಲು ಮುಂದಾಗಿದೆ. ಇದರಿಂದ ಅಭ್ಯರ್ಥಿಗಳು ಕಾಲಕಾಲಕ್ಕೆ ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಹಾಯಕವಾಗುತ್ತದೆ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ಶೇರ್ ಮಾಡುವುದರ ಮೂಲಕ ಅವರು ಸಹ ಆರ್ಥಿಕವಾಗಿ ಹಿಂದುಳಿದಿದ್ದರೆ ಅವರು ಸರ್ಕಾರದ ಈ ಪ್ರಮಾಣ ಪತ್ರವನ್ನು ಪಡೆದು ಈ ಪ್ರಮಾಣ ಪತ್ರದ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದಾಗಿದೆ ಧನ್ಯವಾದಗಳು

ಇತರೆ ವಿಷಯಗಳು :

ಲೇಬರ್ ಕಾರ್ಡ್ ನಿಂದ ಏನೆಲ್ಲಾ ಉಪಯೋಗ ಗೊತ್ತಾ? ಈ ಕೂಡಲೇ ಲೇಬರ್ ಕಾರ್ಡಿಗೆ ಅರ್ಜಿ ಹಾಕಿ, ಕಾರ್ಡ್‌ ಇದ್ದವರು ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

ಕಾಶಿಯಾತ್ರೆಗೆ ರಾಜ್ಯ ಸರ್ಕಾರದಿಂದ 7500 ರೂಗಳ ಸಹಾಯಧನ, ರಿಯಾಯಿತಿಯಲ್ಲಿ ಸಾಮಾನ್ಯ ಜನರೂ ಸಹ ಯಾತ್ರೆಯನ್ನು ಕೈಗೊಳ್ಳಲು ಸಹಕಾರಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments