Saturday, July 27, 2024
HomeTrending Newsನಿಮ್ಮ ಮನೆಗೆ ಉಚಿತ ವಿದ್ಯುತ್ ಬೇಕೇ ?ಸರ್ಕಾರದ ಷರತ್ತು ಓದಿ ನಂತರ ಅರ್ಜಿ ಸಲ್ಲಿಸಿ

ನಿಮ್ಮ ಮನೆಗೆ ಉಚಿತ ವಿದ್ಯುತ್ ಬೇಕೇ ?ಸರ್ಕಾರದ ಷರತ್ತು ಓದಿ ನಂತರ ಅರ್ಜಿ ಸಲ್ಲಿಸಿ

ಉಚಿತ ವಿದ್ಯುತ್: ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ಘೋಷಿಸಿದ ಉಚಿತ ವಿದ್ಯುತ್ ಗೃಹಲಕ್ಷ್ಮಿ ಯೋಜನೆಯನ್ನು   ಅನುಷ್ಠಾನಕ್ಕೆ ತರಲು ಸರ್ಕಾರದ ಕಡೆಯಿಂದ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಲಾಗಿದೆ

ನಿಮ್ಮ ಮನೆಗೆ ಉಚಿತ ವಿದ್ಯುತ್ ಬೇಕೇ ?ಸರ್ಕಾರದ ಷರತ್ತು ಓದಿ
Join WhatsApp Group Join Telegram Group

ಯಾವ ದಾಖಲೆಗಳು ಬೇಕು ಅರ್ಜಿ ಸಲ್ಲಿಸುವ ವಿಧಾನ ಹೇಗಿದೆ, ಬಾಡಿಗೆ ಮನೆಯವರಿಗೆ ನೀಡುತ್ತಾರಾ  ಇಂತಹ  ಹಲವು ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ದೊರೆಯಲಿದ್ದು ಸಂಪೂರ್ಣವಾಗಿ ಓದಿದ ನಂತರ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಸಹ ಉತ್ತರ ದೊರೆಯಲಿದೆ

 ಉಚಿತ ವಿದ್ಯುತ್ ಪಡೆಯಲು ಈಗಾಗಲೇ ಚಾಲ್ತಿಯಲ್ಲಿರುವಂತಹ ಕುಟೀರ ಜ್ಯೋತಿ ಯೋಜನೆ ಹಾಗೂ ಸೌಲಭ್ಯವನ್ನು ಪಡೆಯುತ್ತಿರುವ ಫಲಾನುಭವಿಗಳನ್ನು ಉಚಿತ ವಿದ್ಯುತ್ ನೀಡಲು ಇವರನ್ನು ಗೃಹಜೋತಿ ಯೋಜನೆ ಅಡಿಯಲ್ಲಿ ಸೇರ್ಪಡೆ ಮಾಡುವ ಮೂಲಕ ಸರ್ಕಾರ ಉಚಿತ ವಿದ್ಯುತ್ ನೀಡುವ ಕುಟೀರ  ಯೋಜನೆಯಲ್ಲಿ ಜ್ಯೋತಿ ಯೋಜನೆ ಹಾಗೂ ಭಾಗ್ಯಜ್ಯೋತಿ ಯೋಜನೆ ಅಡಿ ಒಂದೇ ಯೋಜನೆಯಲ್ಲಿ ಸೇರಿಸುವ ಮೂಲಕ ಗೃಹಜೋತಿ ಯೋಜನೆಯನ್ನು ಇವರು ಪಡೆದುಕೊಳ್ಳಬಹುದುಎಂದು ಸರ್ಕಾರ ತಿಳಿಸಿದೆ

ಗೃಹಜೋತಿ ಯೋಜನೆಯ ಸೌಲಭ್ಯದ ಬಗ್ಗೆ 

ಗೃಹಜೋತಿ ಯೋಜನೆಯೆಲ್ಲಿ ಕರ್ನಾಟಕದ ಪ್ರತಿಯೊಂದು ಮನೆಗೂ ಸಹ ಗರಿಷ್ಠವಾಗಿ 200 ಯೂನಿಟ್ ಗಳಷ್ಟು ಬಳಕೆ ಮಾಡಿಕೊಳ್ಳಬಹುದು. ಹಾಗೂ ಇದಕ್ಕೊಂದು ನಿಯಮವನ್ನು ಸಹ ಸೇರಿಸಿದೆ ಅದೇನೆಂದರೆ ಪ್ರತಿ ಗ್ರಾಹಕರು ಮಾಸಿಕವಾಗಿ ಬಳಸುವ ಯೂನಿಟ್ ಗಳ ಮೇಲೆ ಹತ್ತರಷ್ಟು ಶೇಕಡ ಹೆಚ್ಚಿನ ವಿದ್ಯುತ್ ಮಿತಿಯನ್ನು ಹಾಕಲಾಗಿದೆ  ಶೇಕಡ 10 ರಷ್ಟು ಮಿತಿ ದಾಟಿದರೆ ಅಷ್ಟು ಯೂನಿಟ್ ಗೆ ಬಿಲ್ ಪಾವತಿಸಬೇಕಾಗುತ್ತದೆ 

ಇದರೊಂದಿಗೆ 200 ಯೂನಿಟ್ ಬಳಕೆಯನ್ನು ಸಂಪೂರ್ಣವಾಗಿ ಬಳಸಿ ಅದರ ಮೇಲೆ ಮೀರಿದರೆ ಗ್ರಾಹಕರು ಸಂಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಬೇಕಾಗುತ್ತದೆ ಎಂದು ಸರ್ಕಾರ ತಿಳಿಸಿದೆ ಈ ಯೋಜನೆ ಜೂನ್ ತಿಂಗಳಲ್ಲಿ ದೊರೆಯುವುದಿಲ್ಲ ಜುಲೈ ತಿಂಗಳಲ್ಲಿ ವಿದ್ಯುತ್ ಬಳಕೆಗೆ ಅವಕಾಶವಿದ್ದು ಆಗಸ್ಟ್ ತಿಂಗಳಲ್ಲಿ ಜೂನ್ ತಿಂಗಳ ಬಿಲ್ಲನ್ನು ನೀಡುವಾಗ ಇದು ಅನ್ವಯವಾಗುವಂತೆ ಜಾರಿ ಮಾಡಲಾಗಿರುತ್ತದೆ

ಉಚಿತ ವಿದ್ಯುತ್ ಪಡೆಯಲು ಷರತ್ತುಗಳೇನು?

ನಾವು ಈಗ ಉಚಿತ ವಿದ್ಯುತ್ ಪಡೆಯಲು ಯಾವ್ಯಾವ ಮಾರ್ಗಸೂಚಿಗಳಿವೆ ಯಾವುದನ್ನು ಪಾಲಿಸಬೇಕು ಹಾಗೂ ಯೋಜನೆಯ ಫಲಾನುಭವಿಗಳ ಆಗಬೇಕಾದರೆ ನಮಗೆ ಯಾವೆಲ್ಲ ಶರತ್ತುಗಳು ಅನ್ವಯವಾಗುತ್ತವೆ ಎಂಬುದನ್ನು ತಿಳಿಯೋಣ ಈ ಕೆಳಕಂಡ ಷರತ್ತುಗಳನ್ನು ಪೂರ್ಣವಾಗಿ ಓದಿ

1.ಈ ಉಚಿತ ವಿದ್ಯುತ್ ಯೋಜನೆ ಅಡಿ ಉಚಿತ ವಿದ್ಯುತ್ ಬಳಕೆಯು ಕೇವಲ ಗೃಹಬಳಕೆ ಮಾಡಲು ಮಾತ್ರ ಅನ್ವಯವಾಗುತ್ತದೆ ವಾಣಿಜ್ಯ ಉದ್ದೇಶಗಳಿಗಾಗಿ ಉಪಯೋಗಿಸುತ್ತಿದ್ದರೆ ಅಂತಹ ವಿದ್ಯುತ್ ಬಿಲ್ಲನ್ನು ನೀವು ಪಾವತಿ ಮಾಡಬೇಕಾಗುತ್ತದೆ

2.ಎರಡನೇ ಷರತ್ತು  ನಾವು ಪ್ರತಿ ತಿಂಗಳು ಬಳಸುವ ವಿದ್ಯುತ್ ಮೀಟರ್ ರೀಡಿಂಗ್ ಮಾಡಿದಾಗ ನಾವು ವಿದ್ಯುತ್ ಬಳಕೆಯ ಪ್ರಮಾಣಕ್ಕೆ ಬಿಲ್ಲನ್ನು ನೀಡುತ್ತಾರೆ ಅಥವಾ ನಮೂದಿಸುತ್ತಾರೆ

3.ಉಚಿತವಿದ್ಯುತ್ ಬಳಕೆಗೆ ಬಳಕೆದಾರನ ಅರ್ಹ  ಮೊತ್ತವನ್ನು  ಬಿಲ್ಲನ್ನು ನೀಡುವಾಗ ಕಡಿತಗೊಳಿಸಿ ಉಳಿದ ಮತ್ತವನ್ನು ಗ್ರಾಹಕರಿಗೆ ನೀಡುವುದು ಹಾಗೂ ಬಿಲ್ಲನ್ನು ಪಾವತಿಸುವುದು ಆಗಿರುತ್ತದೆ

ಇದನ್ನು ಓದಿ :ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಯಾವ ದಾಖಲೆಗಳು ಬೇಕು ಎಲ್ಲಾ ಮಹಿಳೆಯರು ತಿಳಿದುಕೊಳ್ಳಿ

4.ನಿಮಗೆ ನೀಡಿರುವ ಉಚಿತ ವಿದ್ಯುತ್ ನಿಮ್ಮ ಮೊತ್ತಕ್ಕಿಂತ ಕಡಿಮೆ ಇದ್ದರೆ ಅಂದರೆ ಅರ್ಹ ಯೂನಿಟ್ ಅನ್ನು ಬಳಕೆ ಮಾಡಿ ಕೊಂಡಿದ್ದರೆ ನಿಮಗೆ ಶೂನ್ಯ ಬಿಲ್ ನೀಡಲಾಗುವುದು ಆಗ ನೀವು ಹಣವನ್ನು ಪಾವತಿ ಮಾಡಲು ಆಗುವುದಿಲ್ಲ ಅರ್ಹ ಯೂನಿಟ್ ಅನ್ನು ಬಳಕೆ ಮಾಡಿದರೆ ಮಾತ್ರ

5.ಅರ್ಜಿ ಸಲ್ಲಿಸಬೇಕಾ ಎಂಬುವ ಪ್ರಶ್ನೆ ಹಲವರಲ್ಲಿ ಕಾಡುತ್ತಿದ್ದು ಹೌದು ಅರ್ಜಿ ಸಲ್ಲಿಸಬೇಕಾಗುತ್ತದೆ ಅದೇನೆಂದರೆ ಸೇವಾ ಸಿಂಧು ಪೆಟ್ರೋಲ್ ನಲ್ಲಿ ನೀವು ಉಚಿತ ವಿದ್ಯುತ್ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ

6.ಅರ್ಜಿ ಸಲ್ಲಿಸುವಾಗ ಫಲಾನುಭವಿಯೋ ತನ್ನ ಆಧಾರ ಕಾರ್ಡಿಗೆ ಅಕೌಂಟ ಐಡಿ ಹಾಗೂ ಕಸ್ಟಮರ್ ಐಡಿಯನ್ನು ಜೋಡಣೆ ಮಾಡುವುದು ಕಡ್ಡಾಯವಾಗಿರುತ್ತದೆ

7.ಈ ಯೋಜನೆಯಲ್ಲಿ ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ಯೋಜನೆ ಪಡೆಯುತ್ತಿರುವಂತವರು ಹಾಗೂ ಇದರೊಂದಿಗೆ ಅಮೃತ ಜ್ಯೋತಿಯಲ್ಲಿ ಸರ್ಕಾರ ಗೃಹಜೋತಿ ಯೋಜನೆ ಅಡಿ ಸಲ್ಲಿಸುವ ಮೂಲಕ ಸೇರ್ಪಡಿಸಲಾಗಿದೆ ಈ ಯೋಜನೆಯ ಸೌಲಭ್ಯವನ್ನು ಪಡೆಯುವಂತಾಗಿದೆ

8.ಸರ್ಕಾರ ತಿಳಿಸಿದಾಗ ಜೂನ್ 30ರ ಒಳಗಡೆ ಬಾಕಿ ಇರುವ ಮೊತ್ತವನ್ನು ಗ್ರಾಹಕರು ಮೂರು ತಿಂಗಳ ಸಮಯದೊಳಗಾಗಿ ಹಣವನ್ನು ಪಾವತಿ ಮಾಡಬೇಕಾಗಿರುತ್ತದೆ ನೀವು ಪಾವತಿ ನಿಗದಿತ ಸಮಯದಲ್ಲಿ ಮಾಡದಿದ್ದಲ್ಲಿ  ಆಹಾರ ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ತಿಳಿಸಿದೆ

9.ನಂತರದಲ್ಲಿ ವಿದ್ಯುತ್ ಬಳಸುವವರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಇರುವ ಸ್ಥಾವರಗಳಲ್ಲಿ ಒಂದು ಸ್ಥಾವರಕ್ಕೆ ಮಾತ್ರ ಯೋಜನೆಯ ಸೌಲಭ್ಯವನ್ನು ಪಡೆಯಬಹುದು ಉಳಿದ ಸ್ಥಾವರಗಳಿಗೆ ಸೌಲಭ್ಯ ದೊರೆಯುವುದಿಲ್ಲ ಗ್ರಾಹಕರು ನೀಡಿದ ಉಚಿತ ಮೊತ್ತವನ್ನು ಸರ್ಕಾರವೇ ವಿದ್ಯುತ್ ಸರಬರಾಜು ಮಾಡುವಂತ ಕಂಪನಿಗೆ ಹಣವನ್ನು ಪಾವತಿ ಮಾಡಲಾಗುತ್ತದೆ ಎಂದು ತಿಳಿಸಿದೆ 

ಈ ಮೇಲ್ಕಂಡ ಮಾಹಿತಿ ನಿಮಗೆ ಸಹಕಾರಿಯಾಗಲಿದ್ದು ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಸಹ ತಿಳಿಸುವ ಮೂಲಕ ಸರ್ಕಾರದ ಯೋಜನೆಯನ್ನು ಅವರಿಗೂ ಸಹ ಉಪಯೋಗವಾಗುತ್ತದೆ ಹಾಗಾಗಿ ನಿಮ್ಮ ಆತ್ಮೀಯರಿಗೆ ಈ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು

ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ ಮುಖ್ಯ ಮಾಹಿತಿ ಇದನ್ನು ತಿಳಿದುಕೊಳ್ಳಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments