Thursday, July 25, 2024
HomeTrending Newsಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಏಕದಿನ ವಿಶ್ವ ಕಪ್ ನ ಕ್ರಿಕೆಟ್ ಹಬ್ಬ

ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಏಕದಿನ ವಿಶ್ವ ಕಪ್ ನ ಕ್ರಿಕೆಟ್ ಹಬ್ಬ

ನಮಸ್ಕಾರ ಸ್ನೇಹಿತರೆ ಈಗ ನಿಮಗೆ ತಿಳಿಸುತ್ತಿರುವ ವಿಷಯ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಆಗಲಿದೆ. ತುದಿಗಾಲಿನಲ್ಲಿ ನಿಂತು ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದ ದಿನಗಳು ಕೊನೆಗೂ ಬಂದಿದೆ. ಬಹು ನಿರೀಕ್ಷಿತ ಕ್ರಿಕೆಟ್ ಪಂದ್ಯವಾದ ಐಸಿಸಿ ಪುರುಷರ ಏಕದಿನ ವಿಶ್ವಕಪ್ 2023 ವೇಳಾಪಟ್ಟಿಯನ್ನು ಪ್ರಕಟಗೊಳಿಸಲಾಗಿದೆ. ಈ ವೇಳಾಪಟ್ಟಿಯನ್ನು ನೀವು ಸಂಪೂರ್ಣವಾಗಿ ನೋಡಬಹುದು.

ICC ODI World Cup
ICC ODI World Cup
Join WhatsApp Group Join Telegram Group

ಐಸಿಸಿ ಏಕದಿನ ವಿಶ್ವಕಪ್ 2023 ವೇಳಾಪಟ್ಟಿ :

ಕ್ರಿಕೆಟ್ ಅಭಿಮಾನಿಗಳಿಗೆ ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಮತ್ತು ಭಾರತೀಯ ಕ್ರಿಕೆಟ್ ಮಂಡಳಿ ನಡೆಸುವ 100 ದಿನಗಳ ವಿಶ್ವಕಪ್ ಸಮಾರಂಭದಲ್ಲಿ ಅಂದರೆ ಮುಂಬೈನಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್ 2023 ಇದರ ವೇಳಾಪಟ್ಟಿಯನ್ನು ಅನಾವರಣಗೊಳಿಸಲಾಗಿದೆ. ಅದರಂತೆ ಅಕ್ಟೋಬರ್ 5ರಿಂದ ನವೆಂಬರ್ 19 ರವರೆಗೆ ವಿಶ್ವಕಪ್ ಪಂದ್ಯ ನಡೆಯಲಿದೆ.

ಮುಂಬೈ ಮತ್ತು ಕೊಲ್ಕತ್ತಾದಲ್ಲಿ ಸೆಮಿ ಫೈನಲ್ ಪಂದ್ಯಗಳು ನವೆಂಬರ್ 15 ಮತ್ತು 16ರಂದು ಆಯೋಜಿಸಲಾಗಿದೆ. ನವೆಂಬರ್ 19 ರಂದು ಫೈನಲ್ ಪಂದ್ಯವು ನಡೆಯಲಿದೆ. ಅಕ್ಟೋಬರ್ 8ರಂದು ಚೆನ್ನೈನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ತನ್ನ ಪ್ರಾರಂಭವನ್ನು ಆರಂಭಿಸಲು ಮುಂದಾಗಿದೆ. ನಮ್ಮ ಭಾರತ ತಂಡವು ಒಟ್ಟು ಒಂಬತ್ತು ಪಂದ್ಯಗಳನ್ನು ಆಡಲಿದೆ.

ಇದನ್ನು ಓದಿ : ಇ ಶ್ರಮ್ ಕಾರ್ಡ್ ನಿಂದ ಹೊಸ ಸುದ್ದಿಇ ಶ್ರಮ್ ಕಾರ್ಡ್ ಮಾಡಿಸಲು ಕೊನೆಯ ದಿನಾಂಕ ನಿಗದಿಯಾಗಿದೆ

ಭಾರತ ತಂಡದ ಪಂದ್ಯದ ಸಂಪೂರ್ಣ ವೇಳಾಪಟ್ಟಿ :

  • ಅಕ್ಟೋಬರ್ 8ರಂದು ಎಂ ಎ ಚಿದಂಬರಂ ಸ್ಟೇಡಿಯಂ ಚೆನ್ನೈನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಆಡಲಿದೆ.
  • ಅಕ್ಟೋಬರ್ 11 ಅರುಣ್ ಜೇಟ್ಲಿ ಕ್ರೀಡಾಂಗಣ ದೆಹಲಿಯಲ್ಲಿ ಭಾರತ ಮತ್ತು ಆಫ್ಘಾನಿಸ್ತಾನ ಆಡಲಿದೆ.
  • ಅಕ್ಟೋಬರ್ 15 ನರೇಂದ್ರ ಮೋದಿ ಸ್ಟೇಡಿಯಂ ಅಹಮದಾಬಾದ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ಆಡಲಿದೆ.
  • ಅಕ್ಟೋಬರ್ 19 ಎಂಸಿಎ ಸ್ಟೇಡಿಯಂ ಪುಣೆ ಯಲ್ಲಿ ಭಾರತ ಮತ್ತು ಬಾಂಗ್ಲಾದೇಶ ಆಡಲಿದೆ.
  • ಅಕ್ಟೋಬರ್ 22 ಎಚ್ ಪಿ ಸಿ ಎಸ್ ಸ್ಟೇಡಿಯಂ ಧರ್ಮಶಾಲಾದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ಆಡಲಿದೆ.
  • ನವೆಂಬರ್ 2 ವಾಕಡೆ ಸ್ಟೇಡಿಯಂ ಮುಂಬೈನಲ್ಲಿ ಭಾರತ ಮತ್ತು ಕ್ವಾಲಿಫಿಯರ್ 2 ಆಡಲಿವೆ.
  • ನವೆಂಬರ್ 5 ಈಡನ್ ಗಾರ್ಡನ್ ಕೊಲ್ಕತ್ತಾದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಆಡಲಿದೆ.
  • ನವೆಂಬರ್ 11ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣ ಬೆಂಗಳೂರಿನಲ್ಲಿ ಭಾರತ ಹಾಗೂ ಕ್ವಾಲಿಫೈಯರ್ ವನ್ ಪಂದ್ಯಗಳು ನಡೆಯಲಿವೆ.

ಹೀಗೆ ಐಸಿಸಿ ಏಕದಿನ ವಿಶ್ವಕಪ್ ನ ವೇಳಾಪಟ್ಟಿಯು ತಯಾರಾಗಿದ್ದು, ಕ್ರಿಕೆಟ್ ಅನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿರುವುದಂತೂ ನಿಜ. ಹೀಗೆ ಈ ವೇಳಾಪಟ್ಟಿಯ ಬಗ್ಗೆ ನಿಮ್ಮಲ್ಲಿರುವ ಕ್ರಿಕೆಟ್ ಸ್ನೇಹಿತರಿಗೆ ತಿಳಿಸಿ ಧನ್ಯವಾದಗಳು,

ವಿಶ್ವ ಕಪ್ ಎಷ್ಟು ದಿನ ನಡೆಯಲಿದೆ ?

ಆಗಸ್ಟ್ 5 ರಿಂದ ನವೆಂಬರ್ 19

ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯ ಯಾವಾಗ ?

ಆಗಸ್ಟ್ 8ರಂದು ಪಂದ್ಯ ನಡೆಯಲಿದೆ

ಭಾರತ ಮತ್ತು ಪಾಕಿಸ್ತಾನ ಪಂದ್ಯ ಯಾವಾಗ ?

ಅಕ್ಟೋಬರ್ 15 ನರೇಂದ್ರ ಮೋದಿ ಸ್ಟೇಡಿಯಂನಲ್ಲಿ

ಇದನ್ನು ಓದಿ : ಮಹಿಳೆಯರು ಡಿಪಿ ಹಾಕುವಂತಿಲ್ಲ ಮಹಿಳಾ ಆಯೋಗ ಸೂಚನೆ, ಡಿಪಿ ಹಾಕುವ ಮುನ್ನ ಒಮ್ಮೆ ಗಮನಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments