Friday, July 26, 2024
HomeTrending Newsಕೇಂದ್ರ ಸರ್ಕಾರದಿಂದ ನಿರುದ್ಯೋಗಿಗಳಿಗೆ ಬಂಪರ್ ಕೊಡುಗೆ ಪ್ರಧಾನಮಂತ್ರಿ ದಕ್ಷ್ ಯೋಜನೆ

ಕೇಂದ್ರ ಸರ್ಕಾರದಿಂದ ನಿರುದ್ಯೋಗಿಗಳಿಗೆ ಬಂಪರ್ ಕೊಡುಗೆ ಪ್ರಧಾನಮಂತ್ರಿ ದಕ್ಷ್ ಯೋಜನೆ

ನಮಸ್ಕಾರ ಸ್ನೇಹಿತರೆ, ಇಂದು ನಿಮಗೆಲ್ಲರಿಗೂ ತಿಳಿಸುತ್ತಿರುವ ಒಂದು ಉಪಯುಕ್ತ ಮಾಹಿತಿ ಎಂದರೆ ಕೇಂದ್ರ ಸರ್ಕಾರದಿಂದ ನಿರುದ್ಯೋಗಿಗಳಿಗೆ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಯ ನಿರುದ್ಯೋಗಿ ಯುವಕ ಯುವತಿಯರಿಗೆ ತರಬೇತಿ ನೀಡುವುದರ ಮೂಲಕ ಕೆಲಸವನ್ನು ನೀಡುತ್ತಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಯಾವೆಲ್ಲ ಅಭ್ಯರ್ಥಿಗಳು ಯೋಜನೆಯ ಅರ್ಹತೆಯನ್ನು ಪಡೆಯಬಹುದು ಹಾಗೂ ಇದರ ಉದ್ದೇಶ, ಸೌಲಭ್ಯಗಳು, ಪ್ರಯೋಜನಗಳು ಮೊದಲಾದ ವಿಷಯಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ತಿಳಿಸಲಾಗುತ್ತದೆ.

Pradhan Mantri Daksha Yojana
Pradhan Mantri Daksha Yojana
Join WhatsApp Group Join Telegram Group

ಪ್ರಧಾನಮಂತ್ರಿ ದಕ್ಷ ಯೋಜನೆ :

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಅವರು ಪ್ರಧಾನಮಂತ್ರಿ ದಕ್ಷ್ ಯೋಜನೆಯ ಹೋಟೆಲ್ ಹಾಗೂ ಮೊಬೈಲ್ ಅಪ್ಲಿಕೇಶನ್ ಅನ್ನು ಆಗಸ್ಟ್ ಐದು 2021 ರಂದು ಪ್ರಾರಂಭಿಸಿದ್ದಾರೆ. ಪ್ರಧಾನಮಂತ್ರಿ ದಕ್ಷತೆ ಮತ್ತು ನುರಿತ ಫಲಾನುಭವಿ ಯೋಜನೆ ಎಂದು ಸಹ ಈ ಯೋಜನೆಯನ್ನು ಕರೆಯಲಾಗುತ್ತದೆ. ಈ ಪ್ರಧಾನ ಮಂತ್ರಿ ದಕ್ಷ್ ಯೋಜನೆಯು ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ಮತ್ತು ಸಫಾಯಿ ಕರ್ಮಚಾರಿಗಳ ಗುರಿ ಈ ಗುಂಪಿಗೆ ಮಾತ್ರ ಉಚಿತ ತರಬೇತಿಯನ್ನು ನೀಡಲಾಗುವುದು.

ಈ ಯೋಜನೆಗೆ ಕೇಂದ್ರ ಸರ್ಕಾರವು ನೀಡಿರುವ ಮೊತ್ತ :

ಸಾವಿರದಿಂದ 3 ಸಾವಿರದವರೆಗೆ 80 ಪರ್ಸೆಂಟ್ ಅಥವಾ ಅದಕ್ಕಿಂತ ಹೆಚ್ಚು ಹಾಜರಾತಿ ಪಡೆದ ಎಲ್ಲಾ ತರಬೇತಿದಾರರಿಗೆ ಸ್ಟೈಫಂಡ್ ಮತ್ತು ವೇತನ ಪರಿಹಾರವಾಗಿ ಈ ಯೋಜನೆಯು ಒದಗಿಸುತ್ತದೆ. ಈ ಯೋಜನೆ ಅಡಿಯಲ್ಲಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದಂತಹ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಜೊತೆಗೆ ಅಭ್ಯರ್ಥಿಗಳ ಪ್ರಮಾಣಿಕರಿಸಿದ ಮತ್ತು ಮೌಲ್ಯಮಾಪನದ ನಂತರ ಯೋಜನೆಯ ಸಹ ನೀಡಲಾಗುತ್ತದೆ.

ಈ ಯೋಜನೆಯ ಮುಖ್ಯ ಉದ್ದೇಶ :

ಯುವಕ ಯುವತಿಯರಿಗೆ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಕೌಶಲ್ಯಗಳನ್ನು ಒದಗಿಸುವುದು ಪ್ರಧಾನಮಂತ್ರಿ ದಕ್ಷ್ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದರ ಜೊತೆಗೆ ಸ್ವಯಂ ಉದ್ಯೋಗದ ನೆರವನ್ನು ಅವರಿಗೆ ಈ ಯೋಜನೆಯ ಮೂಲಕ ನೀಡಲಾಗುವುದು. ಅಭ್ಯರ್ಥಿಗಳಿಗೆ ಅಲ್ಪಾವಧಿಯ ತರಬೇತಿ ಕಾರ್ಯಕ್ರಮ ಹಾಗೂ ದೀರ್ಘಾವಧಿ ತರಬೇತಿ ಕಾರ್ಯಕ್ರಮದ ಜೊತೆಗೆ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ ಅಭ್ಯರ್ಥಿಗಳಿಗೂ ತರಬೇತಿಯನ್ನು ನೀಡಲಾಗುವುದು.ಈ ಯೋಜನೆಯ ಮೂಲಕ 50,000 ಯುವಕರು 2023 – 24ರಲ್ಲಿ ಇದರ ಉಪಯೋಗವನ್ನು ಪಡೆಯಲಿದ್ದಾರೆ.

ಪ್ರಧಾನ ಮಂತ್ರಿ ದಕ್ಷ್ ಯೋಜನೆಯ ಅಧಿಕೃತ ವೆಬ್ಸೈಟ್ :

ಕೇಂದ್ರ ಸರ್ಕಾರವು ಜಾರಿಗೆ ತಂದಂತಹ ಪ್ರಧಾನ ಮಂತ್ರಿ ದಕ್ಷ್ ಯೋಜನೆಯ ಪ್ರಯೋಜನವನ್ನು ಪಡೆಯಲು ಕೇಂದ್ರ ಸರ್ಕಾರವು ಒಂದು ಅಧಿಕೃತ ವೆಬ್ಸೈಟ್ ಅನ್ನು ಒದಗಿಸಿದೆ. ಈ ವೆಬ್ ಸೈಟ್ ನ ಮೂಲಕ ಯುವಕರು ಅರ್ಜಿಯನ್ನು ಸಲ್ಲಿಸಬಹುದು.ಪಾರದರ್ಶಕತೆಯೊಂದಿಗೆ ಆಯ್ಕೆಯಾದ ಎಲ್ಲಾ ಫಲಾನುಭವಿಗಳಿಗೆ ತರಬೇತಿ ನೀಡಲಾಗುತ್ತದೆ. ಈ ತರಬೇತಿಯು ಉಚಿತವಾಗಿರುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಅಧಿಕೃತ ವೆಬ್ಸೈಟ್ ಎಂದರೆ https://pmdaksh.dosje.gov.in,

ಇದನ್ನು ಓದಿ : ಜಿಯೋ ಕಂಪನಿ ಎರಡು ವಾರ್ಷಿಕ ರಿಚಾರ್ಜ್ ಘೋಷಿಸಿದೆ : ಪ್ರತಿನಿತ್ಯ 2GB ಡೇಟಾ ಜೊತೆಗೆ 365 ದಿನ ಉಚಿತ ಕರೆ

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳೆಂದರೆ :

ಜಾತಿ ಪ್ರಮಾಣ ಪತ್ರ, ವಾಸ ಸ್ಥಳದ ಪ್ರಮಾಣ ಪತ್ರ, ಸರ್ಕಾರ, ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಮೊಬೈಲ್ ನಂಬರ್, ಪ್ರಮಾಣ ಪತ್ರ ಹಾಗೂ ಮೊದಲಾದವು. ಹೀಗೆ ಈ ಎಲ್ಲಾ ದಾಖಲೆಗಳನ್ನು ಸಲ್ಲಿಸುವುದರ ಮೂಲಕ ಪ್ರಧಾನ ಮಂತ್ರಿ ದಕ್ಷ್ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.

ಒಟ್ಟಾರೆ ಹೇಳುವುದಾದರೆ ಕೇಂದ್ರ ಸರ್ಕಾರವು ನಿರುದ್ಯೋಗ ಯುವಕರಿಗೆ ನೀಡಿರುವ ಈ ಯೋಜನೆಯು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವುದರ ಮೂಲಕ ಹಿಂದುಳಿದ ವರ್ಗಗಳಿಗೆ ಒಂದು ಆಶಾಕಿರಣವಾಗಿ ಕಾರ್ಯನಿರ್ವಹಿಸಬೇಕು ಎಂಬುದು ನಮ್ಮ ಅಭಿಪ್ರಾಯವಾಗಿದೆ.

ಯೋಜನೆಯ ಹೆಸರು ಯಾವುದು ?

ಪ್ರಧಾನ ಮಂತ್ರಿ ದಕ್ಷ್ ಯೋಜನೆ

ಯಾರಿಗೆ ಉಪಯೋಗವಾಗಲಿದೆ ಈ ಯೋಜನೆ ?

ನಿರುದ್ಯೋಗಿ ಯುವಕ ಯುವತಿಯರಿಗೆ

ಅಧಿಕೃತ ವೆಬ್ಸೈಟ್ ಯಾವುದು ?

https://pmdaksh.dosje.gov.in

ಇದನ್ನು ಓದಿ : ಕೇಂದ್ರ ಸರ್ಕಾರದಿಂದ ಪ್ರತಿ ಮಹಿಳೆಯರಿಗೂ 5000ರೂಪಾಯಿಗಳು ಸಿಗಲಿದೆ :ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments