Saturday, July 27, 2024
HomeTrending NewsBreaking News: ಮಹಿಳೆಯರಿಗೆ ಉಚಿತ ಬಸ್‌ ಖುಷಿಯ ಬೆನ್ನಲ್ಲೇ ಡ್ರೈವರ್ ಹಾಗೂ ಕಂಡಕ್ಟರ್ ಗಳಿಗೆ ಸಂಬಳ...

Breaking News: ಮಹಿಳೆಯರಿಗೆ ಉಚಿತ ಬಸ್‌ ಖುಷಿಯ ಬೆನ್ನಲ್ಲೇ ಡ್ರೈವರ್ ಹಾಗೂ ಕಂಡಕ್ಟರ್ ಗಳಿಗೆ ಸಂಬಳ ಏರಿಕೆಯ ಬಿಸಿ

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರವು ಘೋಷಣೆ ಮಾಡಿದಂತಹ 5 ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣವನ್ನು ಮಾಡಿದೆ. ಅದರಂತೆ ಈಗ ಫ್ರೀ ಬಸ್ ಪ್ರಯಾಣದ ಬೆನ್ನಲ್ಲೇ ಕೆಎಸ್ಆರ್ಟಿಸಿ ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಗಳಿಗೆ ರಾಜ್ಯ ಸರ್ಕಾರದಿಂದ ಇನ್ನೊಂದು ಸಿಹಿ ಸುದ್ದಿ ಸಿಗಲಿದೆ. ಈ ಸಹಿಸುದ್ದಿ ಏನು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ.

salary-of-transport-employees
salary-of-transport-employees
Join WhatsApp Group Join Telegram Group

ವೇತನ ಹೆಚ್ಚಳ :

ಬಿಜೆಪಿ ಸರ್ಕಾರ ಇರುವಾಗಲೇ ಸಾರಿಗೆ ನೌಕರರು 25% ರಷ್ಟು ತಮ್ಮ ವೇತನವನ್ನು ಹೆಚ್ಚಿಸಬೇಕು ಎಂಬುದರ ಬೇಡಿಕೆಯನ್ನು ಮುಂದಿಟ್ಟಿದ್ದರು. ಆದರೆ ಬಿಜೆಪಿ ಸರ್ಕಾರವು 25% ರಷ್ಟು ವೇತನ ಹೆಚ್ಚಳ ಮಾಡದೆ 14% ರಷ್ಟು ವೇತನ ಹೆಚ್ಚಿಸುವುದಾಗಿ ಸಾರಿಗೆ ನೌಕರರಿಗೆ ಭರವಸೆ ನೀಡಿತ್ತು. ಆದರೆ ಸಾರಿಗೆ ನೌಕರರು ತಿರಸ್ಕರಿಸಿದ್ದರು. ಸಾರಿಗೆ ನೌಕರರು ನಮ್ಮ ವೇತನ 25ರಷ್ಟು ಹೆಚ್ಚಳ ಮಾಡಬೇಕೆಂದು ಪಟ್ಟು ಹಿಡಿದಿದ್ದರು ಆದರೆ ಆಗ ಸಾರಿಗೆ ನೌಕರರ ವೇತನ ಹೆಚ್ಚಳ ಆಗಿರಲಿಲ್ಲ. ಆದರೆ ಈಗ ಕಾಂಗ್ರೆಸ್ ಪಕ್ಷ ಬಂದ ನಂತರ ಸ್ಥಾಪಿತವಾದ ರಾಜ್ಯ ಸರ್ಕಾರವು ಸಾರಿಗೆ ನೌಕರರ ವೇತನವನ್ನು ಹೆಚ್ಚಳ ಮಾಡಲು ಸಚಿವ ಸಂಪುಟದ ಸಭೆಯಲ್ಲಿ ಚರ್ಚೆ ಮಾಡಿರುವುದರ ಮೂಲಕ ವೇತನ ಹೆಚ್ಚಳಕ್ಕೆ ನಿರ್ಧಾರ ಕೈಗೊಂಡಿದೆ.

ವೇತನ ಹೆಚ್ಚಳವನ್ನು ಮುಂಬರುವ ದಿನಗಳಲ್ಲಿ ಮಾತ್ರವಲ್ಲದೆ ಏಪ್ರಿಲ್ ತಿಂಗಳಿಗೆ ಪೂರ್ವನ್ವಯ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ. ಸಾರಿಗೆ ನೌಕರರು ಒಪ್ಪಿಗೆ ಇದೆಯೇ ಎಂಬುದರ ಮಾಹಿತಿ : ಬಿಜೆಪಿ ಸರ್ಕಾರವು ಸಾರಿಗೆ ನೌಕರರ ವೇತನವನ್ನು ಹದಿನಾಲ್ಕು ಪರ್ಸೆಂಟ್ ಅಥವಾ 17% ರಷ್ಟು ವೇತನ ಹೆಚ್ಚಿಸುವುದಾಗಿ ಹೇಳಿದ್ದರು ಸಹ ಈ ಭರವಸೆಯನ್ನು ಸಾರಿಗೆ ನೌಕರರ ಸಂಘ ನಿರಾಕರಿಸಿತ್ತು. ತಮಗೆ ವೇತನ ಹೆಚ್ಚಿಗೆ ಕೊಡುವುದಾದರೆ ಶೇಕಡ 25ರಷ್ಟು ಹೆಚ್ಚಿಗೆ ಕೊಡಿ ಎಂದು ಪಟ್ಟು ಹಿಡಿದಿದ್ದರು. ಹಾಗಾಗಿ ಸರ್ಕಾರವು ಈಗ 15% ರಷ್ಟು ವೇತನ ಹೆಚ್ಚಳಕ್ಕೆ ಸಾರಿಗೆ ನೌಕರರು ಒಪ್ಪುತ್ತಾರೆ ಎನ್ನುವ ಪ್ರಶ್ನೆ ಉದ್ಭವಿಸಿದೆ ಎಂದು ಹೇಳಬಹುದಾಗಿದೆ.

ಸಾರಿಗೆ ನೌಕರರ ಬೇಡಿಕೆ :

ಸಾರಿಗೆ ನೌಕರರು ತಮ್ಮ ವೇತನವನ್ನು ಶೇಕಡ 25 ರಷ್ಟು ಹೆಚ್ಚಳ ಮಾಡುವುದು ಹಾಗೂ ವಜಾ ಮಾಡಲಾಗಿರುವ ಸಿಬ್ಬಂದಿಗಳನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವುದು, ಇನ್ಸೆಂಟಿವ್ ಹೆಚ್ಚು ಮಾಡುವುದು, ಬಾಟಾ ಹೆಚ್ಚು ಮಾಡುವುದು ಹೀಗೆ ಕೆಲವೊಂದು ಬೇಡಿಕೆಗಳನ್ನು ಸಾರಿಗೆ ನೌಕರರು ಸರ್ಕಾರದ ಮುಂದೆ ಇಟ್ಟಿದ್ದಾರೆ. ಇವುಗಳಲ್ಲಿ ಸದ್ಯ ಈಗಿರುವ ಬೇಡಿಕೆ ಏನೆಂದರೆ ಶೇಕಡ 15ರಷ್ಟು ವೇತನ ಹೆಚ್ಚಿಸುವುದಾಗಿ ಮಾತ್ರ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟವು ನಿರ್ಧರಿಸಿದೆ.

ಇದನ್ನು ಓದಿ : ಹೆಚ್ಚು ಬಡ್ಡಿ ಕಟ್ಟುತ್ತಿದ್ದವರಿಗೆ ಗುಡ್‌ ನ್ಯೂಸ್!‌ ದೇಶಾದ್ಯಂತ ಹೊಸ ರೂಲ್ಸ್‌ ಜಾರಿ, ಬಡ್ಡಿ ಕಡಿಮೆ ಮಾಡಿಕೊಳ್ಳಲು ಈ ಟ್ರಿಕ್ಸ್‌ ಬಳಸಿ

ಸಾರಿಗೆ ನೌಕರರ ವಿರೋಧ :

ಕೆಪಿಟಿಸಿಎಲ್ ನೌಕರರಿಗೆ ಶೇಕಡ 20ರಷ್ಟು ಸರ್ಕಾರಿ ನೌಕರರಿಗೆ 17ರಷ್ಟು ವೇತನವನ್ನು ಹೆಚ್ಚಿಗೆ ಮಾಡಿದ್ದ ರಾಜ್ಯ ಸರ್ಕಾರವು ಈಗ ನಮಗೆ ಏಕೆ ಕೇವಲ 14% ರಷ್ಟು ಮಾತ್ರ ಸಂಬಳ ಹೆಚ್ಚು ಮಾಡುವುದು ಸರಿ ಎಂದು ಸುಬ್ಬರಾವ್ ಅವರು ಈ ಹಿಂದೆಯೇ ಬಿಜೆಪಿ ಸರ್ಕಾರದ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅದರಂತೆ ಈಗ ಕರ್ನಾಟಕ ರಾಜ್ಯ ಸರ್ಕಾರದ ಎದುರು ಬೇಡಿಕೆ ಇಟ್ಟಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ತಮ್ಮ ವೇತನ ಹೆಚ್ಚಳ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆಗಳನ್ನು ಸಹ ಈ ಹಿಂದೆ ಮಾಡಿದ್ದರು. ಸಾರಿಗೆ ನೌಕರರ ಮನವೊಲಿಸುವ ಪ್ರಯತ್ನ ಬಿಜೆಪಿ ಹಿಂದೆ ಮಾಡಿತ್ತು ಆದರೆ ಒಮ್ಮತಂದ್ರ ನಿರ್ಧಾರ ಮಾತ್ರ ತಿಳಿಸಿರಲಿಲ್ಲ. ಹೀಗೆ 14 ಹಾಗೂ 17% ರಷ್ಟು ವೇತನ ಹೆಚ್ಚಿಸಿ ಎಂಬುವ ಆದೇಶವನ್ನು ತಿರಸ್ಕರಿಸಿದ ಸಾರಿಗೆ ನೌಕರರು ಇದೀಗ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಸಾರಿಗೆ ನೌಕರರ ವೇತನವನ್ನು ಹದಿನೈದು ಪರ್ಸೆಂಟ್ ರಷ್ಟು ಹೆಚ್ಚಳ ಮಾಡುತ್ತೇವೆ ಎಂಬುದರ ನಿರ್ಧಾರವನ್ನು ಸಾರಿಗೆ ನೌಕರರ ಸಂಘವು ಸ್ವೀಕರಿಸುತ್ತದೆಯಾ ಅಥವಾ ವಿರೋಧಿಸುತ್ತದೆಯಾ ಎಂಬುದನ್ನು ಕಾದು ನೋಡಬೇಕಾಗಿದೆ.

ಹೀಗೆ ರಾಜ್ಯ ಸರ್ಕಾರವು ಸಾರಿಗೆ ನೌಕರರ ವೇತನವನ್ನು 15 ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿದ್ದು, ಈ ಹೆಚ್ಚಳವು ಸಾರಿಗೆ ನೌಕರರಲ್ಲಿ ಖುಷಿ ತರುತ್ತದೆಯೋ ಎಂಬುದನ್ನು ಕಾದು ನೋಡಬೇಕಾಗಿದೆ. ಆದರೂ ಸಹ ಸರ್ಕಾರವು ಇವರ ಬೇಡಿಕೆಯನ್ನು ಈಡೇರಿಸಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ಹೇಳಬಹುದಾಗಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರು ಯಾರಾದರೂ ಕೆ ಎಸ್ ಆರ್ ಟಿ ಸಿ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಅವರಿಗೆ ರಾಜ್ಯ ಸರ್ಕಾರದ ಈ ನಿರ್ಧಾರದ ಬಗ್ಗೆ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಇದೀಗ ಬಂದ ಸುದ್ದಿ: ಡೀಸೆಲ್‌ ಈಗ ಅಗ್ಗದ ಬೆಲೆಯಲ್ಲಿ ಲಭ್ಯ! ಪ್ರತೀ ಲೀಟರ್‌ ಗೆ 75 ರೂ, ಇಂದೇ ಅರ್ಜಿ ಸಲ್ಲಿಸಿ

ಹಿರಿಯ ನಾಗರೀಕರಿಗೆ ಪ್ರತಿ ತಿಂಗಳು 20,500 ರೂ..! ಅರ್ಜಿ ಅಹ್ವಾನ ಪ್ರಾರಂಭ, ಈ ಕಾರ್ಡ್ ಕಡ್ಡಾಯ!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments